ಫಲಾನುಭವಿಯ ಅನಿಸಿಕೆ : ಮೊದಲು ನಮ್ಮ ಜಮೀನಿನಲ್ಲಿ ಟಮೋಟ, ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದು, ಒಮ್ಮೊಮ್ಮೆ ಉತ್ತಮವಾಗಿ ಮಾರಾಟವಾದರೂ ಸಹ ಬಂಡವಾಳ ಹೂಡಿಕೆ ಜಾಸ್ತಿ ಮಾಡಬೇಕಾಗಿತ್ತು. ಹಾಗೂ ಒಂದೊಮ್ಮೆ ಬೆಲೆ ತೀರಾ ಕೆಳಮಟ್ಟಕ್ಕೆ ಕುಸಿದು ನಷ್ಟ ಉಂಟಾಗುತ್ತಿತ್ತು. ಇದರಿಂದ ಬೇಸತ್ತು ನಾನು ವಾಣಿಜ್ಯ ಬೆಳೆಯನ್ನು ಬೆಳೆದರೆ ಬಂಡವಾಳ ಕಡಿಮೆ ಹೂಡಿಕೆ ಮಾಡಿ ಅಧಿಕ ಲಾಭವನ್ನು ಗಳಿಸಬಹುದು ಎಂಬ ಉದ್ದೇಶದಿಂದ ಡ್ರ್ಯಾಗನ್ ಫ್ರೂಟ್ ಬೆಳೆದೆ. ಡ್ರ್ಯಾಗನ್ ಫ್ರೂಟ್ ಹಣ್ಣು ಒಂದು ಋತುವಿನಲ್ಲಿ ಕನಿಷ್ಠ ಮೂರು ಬಾರಿ ಹಣ್ಣುಗಳನ್ನು ನೀಡುತ್ತದೆ. ಒಂದು ಹಣ್ಣು ಸಾಮಾನ್ಯವಾಗಿ 400 ಗ್ರಾಂ ವರೆಗೆ ತೂಗುತ್ತದೆ. ಒಂದು ಮರವು ಕನಿಷ್ಠ 50-60 ಹಣ್ಣುಗಳನ್ನು ನೀಡುತ್ತದೆ. ಈಗ ಬೆಳೆ ಕೈಗೆ ಬಂದಿದ್ದು 100000 ದಿಂದ 200000/- ರೂ ಗಳಿಗೆ ಮಾರಾಟ ಮಾಡಬಹುದು. ಮೊದಲು ತುಮಕೂರುನಿಂದ 220 ಕಲ್ಲು ಕಂಬಗಳನ್ನು 380 ರೂ. ಗಳಿಗೆ ತರಿಸಲಾಯಿತು. ನಂತರ ಮಹಾರಾಷ್ಟ್ರದಿಂದ ಡ್ರ್ಯಾಗನ್ ಸಸಿಗಳನ್ನು ತಂದು, ಒಂದು ಕಂಬಕ್ಕೆ ನಾಲ್ಕು ಸಸಿಗಳಂತೆ ಅರ್ಧ ಎಕರೆಯಲ್ಲಿ ಒಟ್ಟು 200 ಸಸಿಗಳನ್ನ ನೇಡಲಾಯಿತು.ಸಸಿಗಳಿಗೆ ನೀರು ಉಣಿಸಲು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಯಿತು. ಕಲ್ಲು ಕಂಬ,ಸಸಿ, ಡ್ರಿಪ್ ಎಕ್ರೆಗೆ 2.5 ರಿಂದ 3ಲಕ್ಷ ಖರ್ಚಾಗುತ್ತದೆ.
ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ಅಕ್ಟೋಬರ್ ನಿಂದ ನವಂಬರ್ ನಲ್ಲಿ ನೆಡಲಾಗುತ್ತದೆ. ಮೇ ಜೂನ್ ವೇಳೆಗೆ ಹಣ್ಣುಗಳು ಬಿಡಲು ಪ್ರಾರಂಭವಾಗುತ್ತವೆ. ಒಂದು ಗಿಡಕ್ಕೆ ಸರಾಸರಿ 30ರಿಂದ 40 ಕೆಜಿ ಅಷ್ಟು ಹಣ್ಣು ಸಿಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಹಣ್ಣಿಗೆ 100 ರಿಂದ 120 ರೂಪಾಯಿ ಬೆಲೆ ಇದೆ. ಇದರಿಂದ ಎಕರೆಗೆ ಸರಾಸರಿ 10 ಲಕ್ಷ ಲಾಭವಾಗುತ್ತದೆ. ಇದರಿಂದ ಹಣದ ಕೊರತೆ ನೀಗಿಸಿ ಕುಟುಂಬ ನಿರ್ವಹಣೆಗೆ ಅನುಕೂಲವಾಗಿ ಸ್ವಾಭಿಮಾನದಿಂದ ಜೀವನ ನಡೆಸಬಹುದು ಎಂದು ರೈತ ಅಹಮದ್ ಜಾನ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು
ಡ್ರ್ಯಾಗನ್ ಪ್ರೂಟ್ ಅಭಿವೃದ್ದಿ ಕಾಮಗಾರಿ
ಸಣಭಘಟ್ಟ ಗ್ರಾಮದ ಚಿಕ್ಕತಾಯಮ್ಮ ಕೋಂ ಬಿಳಿಯಪ್ಪ ರವರ ಜಮೀನಿನಲ್ಲಿ ಡ್ರ್ಯಾಗನ್ ಪ್ರೂಟ್ ಅಭಿವೃದ್ದಿ ಕಾಮಗಾರಿ
ಕೋ ಕೋ ವಾಣಿಜ್ಯ ಬೆಳೆ ಬೆಳೆಯಲು ಸಹಕಾರಿಯಾದ ನರೇಗಾ
ಕುಣಿಗಲ್ ತಾಲೂಕು ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ಗ್ರಾಮ ನಿವಾಸಿಯಾದ ನರಸಿಂಹಯ್ಯ ರವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಕೋಕೋ ಬೆಳೆ ಅಭಿವೃದ್ಧಿ ಪಡಿಸಿದ್ದು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕಾ ಇಲಾಖೆಯಿಂದ 40,000 ಸಹಾಯಧನವನ್ನು ಪಡೆದುಕೊಂಡು
ಸುಮಾರು 600 ಗಿಡಗಳು ಈಗಾಗಲೇ ಒಂದು ವರ್ಷ ತುಂಬಿದ್ದು ಆದಾಯ ನಿರೀಕ್ಷೆಯಲ್ಲಿದ್ದಾರೆ
ತರಿಕೆರೆ ಗ್ರಾಮದ ಅಹಮದ್ ಜಾನ್ ಬಿನ್ ಇಸ್ಮಾಯಲ್ ರವರ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಸ್ ಅಭಿವೃದ್ದಿ
ವಾಣಿಜ್ಯ ಬೆಳೆಯನ್ನು ಬೆಳೆದರೆ ಬಂಡವಾಳ ಕಡಿಮೆ ಹೂಡಿಕೆ ಮಾಡಿ ಅಧಿಕ ಲಾಭವನ್ನು ಗಳಿಸಬಹುದು ಎಂಬ ಉದ್ದೇಶದಿಂದ ಡ್ರ್ಯಾಗನ್ ಫ್ರೂಟ್ ಬೆಳೆದೆ. ಡ್ರ್ಯಾಗನ್ ಫ್ರೂಟ್ ಹಣ್ಣು ಒಂದು ಋತುವಿನಲ್ಲಿ ಕನಿಷ್ಠ ಮೂರು ಬಾರಿ ಹಣ್ಣುಗಳನ್ನು ನೀಡುತ್ತದೆ. ಒಂದು ಹಣ್ಣು ಸಾಮಾನ್ಯವಾಗಿ 400 ಗ್ರಾಂ ವರೆಗೆ ತೂಗುತ್ತದೆ. ಒಂದು ಮರವು ಕನಿಷ್ಠ 50-60 ಹಣ್ಣುಗಳನ್ನು ನೀಡುತ್ತದೆ. ಈಗ ಬೆಳೆ ಕೈಗೆ ಬಂದಿದ್ದು 100000 ದಿಂದ 200000/- ರೂ ಗಳಿಗೆ ಮಾರಾಟ ಮಾಡಬಹುದು. ಮೊದಲು ತುಮಕೂರುನಿಂದ 220 ಕಲ್ಲು ಕಂಬಗಳನ್ನು 380 ರೂ. ಗಳಿಗೆ ತರಿಸಲಾಯಿತು. ನಂತರ ಮಹಾರಾಷ್ಟ್ರದಿಂದ ಡ್ರ್ಯಾಗನ್ ಸಸಿಗಳನ್ನು ತಂದು, ಒಂದು ಕಂಬಕ್ಕೆ ನಾಲ್ಕು ಸಸಿಗಳಂತೆ ಅರ್ಧ ಎಕರೆಯಲ್ಲಿ ಒಟ್ಟು 200 ಸಸಿಗಳನ್ನ ನೇಡಲಾಯಿತು.ಸಸಿಗಳಿಗೆ ನೀರು ಉಣಿಸಲು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಯಿತು. ಕಲ್ಲು ಕಂಬ,ಸಸಿ, ಡ್ರಿಪ್ ಎಕ್ರೆಗೆ 2.5 ರಿಂದ 3ಲಕ್ಷ ಖರ್ಚಾಗುತ್ತದೆ.
ಕಾಮಗಾರಿ ಅನುಷ್ಟಾನದಿಂದ ಫಲಾನುಭವಿಗೆ ಆದ ಪ್ರಯೊಜನ :ತೊಟಗಾರಿಕೆ ಇಲಾಖೆಯ ತಾಂತ್ರಿಕ ಸಹಯಕರಿಂದ 92,632/- ರೂಗಳ ಅಂದಾಜು ಪ್ರತಿ ಪಡೆದು ಅಂದ್ರಪ್ರದೇಶದ ರಾಜಮಂಡ್ರಿಯಿಂದ 600 ತೈವಾನ್ ಪಿಂಕ್ ಸೀಬೆ ಸಸಿಗಳನ್ನು ತಂದು ತನ್ನ 2 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ದತಿಯನ್ನು ಅಳವದಡಿಸಿ 8*8 ಅಂತರ ಸಾಲು ಪದ್ದತಿಯಲ್ಲಿ,1ಅಡಿ ಆಳ 1ಅಡಿ ಅಗಲದ 600 ಗುಂಡಿಗಳನ್ನ ತೆಗೆದು ಆ ಗುಂಡಿಗಳಲ್ಲಿ 2ಟನ್ ಕುರಿ ಗೊಬ್ಬರವನ್ನಾಕಿ,2ರಿಂದ 3ತಿಂಗಳು ಬಿಟ್ಟು ಮುಂಗಾರು ಪ್ರಾರಂಬದಲ್ಲಿ ಸಸಿಗಳನ್ನು ನೆಡಲಾಗಿದೆ. ಸುಮಾರು ಆರು ತಿಂಗಳಿಗೊಮ್ಮೆ ಬೆಳೆ ಬರುತ್ತದೆ,ತೈವಾನ್ನ ಸೀಬೆಗೆ ಮಾರುಕಟ್ಟೆಯಲ್ಲಿ ಬಹು ಬೆಡಿಕೆಯಿದ್ದು ಸುಮಾರು 70 ಸಾವಿರದಿಂದ 80 ಸಾವಿರದವರೆಗೂ ಗಳಿಸಬಹುದು.ಅಷ್ಟೆಅಲ್ಲದೆ ಕಾಮಗಾರಿಯನ್ನು ನರೇಗಾ ಯೊಜನೆಯಡಿ ಅನುಷ್ಟಾನ ಮಾಡಿಕೊಂಡಿದ್ದರಿಂದ ಸುಮಾರು 15 ಜನ ಕುಟುಂಬ ಸದಸ್ಯರಿಗೆ ಉದ್ಯೋಗ ದೊರೆಯುವುದರ ಜೊತೆಗೆ ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಿ ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ.
ಫಲಾನುಭವಿಯ ಅನಿಸಿಕೆ : ಸ್ವಯಂ ಕಾರ್ಯದ ಮೇಲೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಸೀಬೆ ಹಣ್ಣಿನ ವ್ಯಾಪಾರಿ ಬುಟ್ಟಿಯಲ್ಲಿಟ್ಟುಕೊಂಡು ಮಾರುತ್ತಿದ್ದಾಗ ಅವನ ಬಳಿ 20/- ರೊಗಳಿಗೆ ಒಂದು ಹಣ್ನನ್ನು ಖರೀದಿಸಿ ತಿಂದಾಗ ಅದು ಪಿಂಕ್ ಕಲರ್ ನಲ್ಲಿ ತುಂಬಾ ರುಚಿಕರವಾಗಿತ್ತು.ಹಾಗಾಗಿ ತೈವಾನ್ ಸೀಬೆಯನ್ನು ಬೆಳೆದರರೆ ಒಂದು ಬಾರಿ ಬಂಡವಾಳ ಹೂಡಿದರೆ ಸಾಕು ಖರ್ಚ ಕಡಿಮೆ ಅಧಿಕ ಲಾಭ ಎಂದು ತಿಳಿದು ಪೆರಲ ಬೆಳೆಯನ್ನು ಬೆಳೆದೆ.ತೈವಾನ್ ಸೀಬೆಯನ್ನು ಮಾರುಕಟ್ಟೆಗೆ ತೆಗೆದುಕೊಂದು ಹೊದರೆ ಹಣಕ್ಕೆ ಕೊರತೆ ಇರುವುದಿಲ್ಲ ದೈರ್ಯವಾಗಿ ಸ್ವಾಭಿಮಾನದಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆಂದು ರೈತ ಮಹಿಳೆ ಪುಟ್ಟತಾಯಮ್ಮ ಅಭಿಪ್ರಾಯ ವ್ಯಕ್ತ ಪಟಡಿಸಿದರು.
ನರೇಗಾ ಎಂದರೆ ಮಧ್ಯಮ ವರ್ಗದ ಜನರಿಗೆ ಜೀವನೋಪಾಯ ಕಲ್ಪಿಸುವ ಅನ್ನದಾತ. 2022-23ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸ್ವಸಹಾಯ ಸಂಘದ ಮಹಿಳೆಯರ ಪಾಲಿಗೆ ವರದಾನ ವಾಗಿದೆ.
ಹೆಣ್ಮಕ್ಕಳು ಮೂಲತಃ ಆರ್ಥಿಕವಾಗಿ ದುರ್ಬಲರೋ ಅನ್ನುವ ಹೊತ್ತಲ್ಲಿ , ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿ ಮಹಿಳೆಯರನ್ನ ಆರ್ಥಿಕವಾಗಿ ಸದೃಡರಾಗುವಂತೆ ಮಾಡಲು.. ಹೆಣ್ಮಕ್ಕಳಿಗೆ ವರದಾನವಾಗಿದ್ದು ಸ್ವಸಹಾಯ ಸಂಘಗಳು..ಈ ಪೈಕಿ ಸ್ವಸಾಹಯ ಮಹಿಳೆಯರೂ ಕೂಡ ಉದ್ಯೋಗ ಪಡೆಯಲು, ಇವರಿಂದ ರೈತರು ಕೂಡ ಮುಂದುವರೆಯಲು ಸಹಕಾರಿಯಾಗಿದ್ದು,
ಕುಣಿಗಲ್ ತಾಲೂಕು ಪಂಚಾಯ್ತಿ.
ಯಡಿಯೂರು ಗ್ರಾಮ ಪಂಚಾಯಿತಿಯ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಎನ್ಆರ್ಎಲ್ಎಮ್, ಶ್ರೀಮಾರಮ್ಮಸ್ವ- ಸಹಾಯ ಸಂಘದ ಮಹಿಳೆಯರು ತಾವು ಬೆಳೆಸಿದ ನರ್ಸರಿಯಿಂದ ರೈತರಿಗೆ ಸಸಿಗಳನ್ನ ವಿತರಿಸಲಾಗುವ ಮಹೋನ್ನತ ಕಾರ್ಯ ನಡೆಯುತ್ತಿದೆ.
ಅವಶ್ಯವಿರುವ ವಿವಿಧ ಇಲಾಖೆಗಳಿಗೆ, ಸಾರ್ವಜನಿಕರಿಗೆ ಸಸಿಗಳನ್ನ ವಿತರಿಸುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಜಿಪಿಎಲ್ ಎಫ್ ಸದಸ್ಯರಿಗೆ ಸ್ಥಳೀಯ ನಿರಂತರ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಕುಣಿಗಲ್ ತಾಲೂಕಿನ ಯಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2.5 ಲಕ್ಷ ವೆಚ್ಚದಲ್ಲಿ ನರ್ಸರಿ ನಿರ್ಮಿಸಲಾಗುತ್ತಿದ್ದು, ಮಾರಮ್ಮ ಸ್ತ್ರೀ ಶಕ್ತಿ ಸಂಘ ಹಾಗೂ ಮಹಾಮಾಯಿ ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಜೀವನ ಕಲ್ಪಿಸಿಕೊಂಡಿದ್ದಾರೆ.
ನರ್ಸರಿ ನಿರ್ಮಾಣದಲ್ಲಿ ವಿವಿಧ ಜಾತಿಯ ಸಸ್ಯೋತ್ಪಾದನೆ ಕೈಗೊಳ್ಳಲಾಗಿದ್ದು, ಬಿದ್ರಕಾನ ಗ್ರಾಮ ಪಂಚಾಯತಿಯಲ್ಲಿ ಮಾವು (2700), ಹಲಸು (2700), (800), ಅಡಿಕೆ (800), ಶ್ರೀಗಂಧ (1000), ಗಿಡಗಳನ್ನುಬೆಳೆಸಲಾಗುತ್ತಿದೆ.
ಇನ್ನು ಪ್ರತಿ ಮಾವಿನಗಿಡಕ್ಕೆ 24.51 ರೂ., ಹಲಸಿನಗಿಡಕ್ಕೆ 34.31 ರೂ., ಅಡಿಕೆ 14.35 ರೂ., ಶ್ರೀಗಂಧತಲಾ 11.73 ರೂ. ತಗಲುತ್ತಿದೆ. ಸುಮಾರು 394 ಚ.ಮೀ. ವ್ಯಾಪ್ತಿಯಲ್ಲಿ 300 ಚ.ಮೀ. ನೆರಳು ಪರದೆ ಹಾಗೂ ನೀರಾವರಿ ಸೌಲಭ್ಯ ಹಾಗೂ ನಾಮಫಲಕಗಳನ್ನ ಅಳವಡಿಸಿ ಸುಸ್ಸಜಿತವಾಗಿ ನರ್ಸರಿ ನಿರ್ಮಾಣವಾಗುತ್ತಿದೆ.
ನರೇಗಾ ಯೋಜನೆಯಡಿ ತಾಲೂಕು ಪಂಚಾಯತಿ ಎನ್ಆರ್ಎಲ್ಎಮ್, ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಸಹಯೋಗದಡಿ 2022-23ನೇಸಾಲಿನ ಸ್ವಸಹಾಯ ಸಂಘಗಳ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ನರೇಗಾ ಯೋಜನೆಯಡಿ ನರ್ಸರಿ ಮೂಲಕ ಸಸಿ ಬೆಳೆಸುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.
ಗ್ರಾಮಪಂಚಾಯತ್ ಒಕ್ಕೂಟಗಳ ಮೂಲಕ ಸಸಿಗಳನ್ನು ಬೆಳೆಸಿ ಮಹಿಳೆಯರಿಗೆ ಉದ್ಯೋಗ ಒದಗಿಸುವುದರೊಂದಿಗೆ ಅರಣ್ಯೀಕರಣ, ತೋಟಗಾರಿಕಾ ಪ್ರದೇಶ ವಿಸ್ತರಣೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಇನ್ನು ಈ ನರ್ಸರಿಯಲ್ಲಿ 20ಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳೆಯರಿಗೆ ಜೀವನೋಪಾಯ ಒದಗಿಸಲಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ನಿಡಸಾಲೆ ಗ್ರಾಮ ಪಂಚಾಯಿತಿ ಚಲಮಸಂದ್ರ ಗ್ರಾಮದ ಪುಟ್ಟಸ್ವಾಮಯ್ಯ ಬಿನ್ ಲೇ.ಕರಿಯಪ್ಪ ರವರವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಮ್ಮ 2.ಎಕರೆ ಜಮೀನಿನಲ್ಲಿ ಬಾಳೆ ಅಭಿವೃದ್ದಿ ಮಾಡಿಕೊಂಡು ಬಂಗಾರದ ಬೆಳೆ ಬೆಳೆದಿದ್ದಾರೆ
ಪುಟ್ಟಸ್ವಾಮಯ್ಯ ಬಿನ್ ಲೇ.ಕರಿಯಪ್ಪ ರೈತ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ ಎರಡು ಎಕರೆ ಭೂಮಿಯನ್ನು ಅಂಗಾಂಶ ಬಾಳೆಯ ಹೊಸ ತೋಟವಾಗಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮೂಲಕ 2022-23 ನೇ ಸಾಲಿನಲ್ಲಿ ಕೂಲಿವೆಚ್ಚವಾಗಿ 39243 ಸಾವಿರ ರೂ ಪಡೆದು ಪಡೆದು,127 ಮಾನವ ದಿನಗಳನ್ನು ಸೃಜಿಸಿದ್ದರು. ತಮ್ಮ ಜಮೀನಿನಲ್ಲಿ ತಾವೇ ಕೆಲಸ ನಿರ್ವಹಿಸಿ ನರೇಗಾ ಯೋಜನೆಯಡಿ ಸಹಾಯಧನವನ್ನು ಪಡೆದುಕೊಂಡು ಸ್ವವಲಂಬನೆಯಿಂದ ಇಗಾಗಲೇ ಬೆಳೆಯು ಒಂದಿದು ಉತ್ತಮ ಆದಾಯಗಳಿಸು ನಿರೀಕ್ಷೆಯಲ್ಲಿದ್ದಾರೆ
ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವುದು ತುಂಬಾ ಸಂತೋವ ವಿಷಯವಾಗಿದೆ ಪಂಚಾಯಿತಿಗೆ ಹೋಗಿ ಪಂಚಾಯಿತ ಅಭಿವೃದ್ಧಿ ಅಧಿಕಾರಿಯನ್ನು ಬೇಟಿ ಮಾಡಿದ ಮೇಲೆ ಪಂಚಾಯಿತಿವರು ಕಾಮಗಾರಿ ಪಟ್ಟಿಗೆ ಸೇರಿಸಿಕೊಂಡರು ನಂತರ ಒಂದು ತಿಂಗಳ ನಂತರ ಪೋನ್ ಕರೆ ಮಾಡಿ ನೀವು ಕಾಮಗಾರಿಯನ್ನು ಆರಂಭ ಮಾಡಬಹುದು ನೀವು ತೋಟಗಾರಿಕೆ ಅಧಿಕಾರಿಯನ್ನು ಭೇಟಿಮಾಡುವಂತೆ ತಿಳಿಸಿ ನಂತರ ಅದಾಂಜು ಪತ್ರಿಕೆ ತಯಾರಿಸಿ ಕಾರ್ಯಾದೇಶನೀಡಿ ಕೆಲಸ ಆರಂಭಿಸಲು ಸೂಚಿಸಿದರು ನಂತರ ಬಾಳೆ ಸಸಿಗಳನ್ನು ರಾಮನಗರದಿಂದ ಒಂದು ಸಸಿಗೆ 10ರೂಪಾಯಿಗಳಂತೆ 1200ಗಿಡಗಳನ್ನು ತಂದು ಜಮೀನಿನಲ್ಲಿ ಗಿಡವನ್ನು 4*5ಅಡಿಗಳ ಅಂತರ ನವಂಬರ್ ತಿಂಗಳಲ್ಲಿ ಹಾಕಿ ವ್ಯವಸಾಯ ಮಾಡಿ 10 ತಿಂಗಳಲ್ಲೇ ಬಾಳೆಗೊನೆ ಬಿಟ್ಟಿದ್ದು ನರೇಗಾ ಯೋಜನೆಯಡಿ ಸಹಾಯಧನ ಪಡೆದುಕೊಂಡು ನಾನು ನನ್ನ ಕುಂಟುಂಬವು ಸ್ವವಲಂಬನೆಯಿಂದ ಜೀವನ ನೆಡೆಸಲು ಸಹಾಯದಾಯಕವಾಗಿದೆ ನಮ್ಮಗೆ ಇಲ್ಲಿಯವರೆಗೆ ನರೇಗಾ ಯೋಜನೆಯಿಂದ ಒಟ್ಟು ಮೊತ್ತ ಒಂದು ಎಕರೆಗೆ ಐವತ್ತು ಸಾವಿರಗಳು ಇದ್ದು 39243 ಸಾವಿರ ರೂಗಳು ಸಹಾಯಧನವಾಗಿ ಪಡೆದುಕೊಂಡಿರುತ್ತೇನೆ, ಬಾಳೆಗೊನೆ ಬಿಟ್ಟಿದ್ದು ಮೊದಲಬಾರಿಗೆ ಸುಮಾರು 10 ಟನ್ ಫಸಲು ಬರುವ ನಿರೀಕ್ಷೆ ಇದೆ ಇದರಿಂದ ಸುಮಾರು 1ಲಕ್ಷ 20 ಸಾವಿರ ರೂ.ಆದಾಯ ಗಳಿಸು ನಿರೀಕ್ಷೆಯಲ್ಲಿದ್ದೇನೆ ಎಂದು ರೈತ ಪುಟ್ಟಸ್ವಾಮಯ್ಯ ವರು ಖುಷಿವ್ಯಕ್ತ ಪಡಿಸಿದರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ನಿಡಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಲಮಸಂದ್ರ ಗ್ರಾಮದ ರೈತ ಜಯರಾಮಯ್ಯ ಸ/೦ ಮರಿಯಪ್ಪರವರವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಮ್ಮ ಜಮೀನಿನಲ್ಲಿ ಎರಡು ವಿಧದ ತಳಿ ಪಪಾಯಿ ಬೆಳೆದು ಸ್ವಾವಲಂಬನೆ ಜೀವನವನ್ನು ನಡೆಸುತ್ತಿದ್ದಾರೆ ೨ ಎಕರೆಯಲ್ಲಿ ೧೨೦೦ ಪಪಾಯಿ ಎಂಟು ತಿಂಗಳಲ್ಲಿ ಉತ್ತಮ ಫಲಸು ಅವರ ಕೈಯಲ್ಲಿ ಸಿಕ್ಕಿದ್ದು ಎರಡರಿಂದ ಮೂರು ಲಕ್ಷದವರೆಗೂ ಆದಾಯವನ್ನು ಗಳಿಸಿದ್ದಾರೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಿಂದ ತಮ್ಮ ಜಮೀನಿನಲ್ಲಿ ಪಪಾಯಿ ಅಭಿವೃದ್ಧಿ ತಾವು ಬೆಳೆದು ಇತರರಿಗೂ ಮಾದರಿಯಾಗಿ ಪಪಾಯಿ ಗಿಡಗಳನ್ನು ಬೇರೆಯವರಿಗೂ ನೀಡಿ ಆದಾಯವನ್ನುಗಳಿಸುತ್ತಿದ್ದಾರೆ.
ಫಲಾನುಭವಿಯ ಅನಿಸಿಕೆ : ಮೊದಲು ನಮ್ಮ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದು, ಒಮ್ಮೊಮ್ಮೆ ಉತ್ತಮವಾಗಿ ಮಾರಾಟವಾದರೂ ಸಹ ಬಂಡವಾಳ ಹೂಡಿಕೆ ಜಾಸ್ತಿ ಮಾಡಬೇಕಾಗಿತ್ತು. ಹಾಗೂ ಒಂದೊಮ್ಮೆ ಬೆಲೆ ತೀರಾ ಕೆಳಮಟ್ಟಕ್ಕೆ ಕುಸಿದು ನಷ್ಟ ಉಂಟಾಗುತ್ತಿತ್ತು. ಇದರಿಂದ ಬೇಸತ್ತು ನಾನು ವಾಣಿಜ್ಯ ಬೆಳೆಯನ್ನು ಬೆಳೆದರೆ ಬಂಡವಾಳ ಕಡಿಮೆ ಹೂಡಿಕೆ ಮಾಡಿ ಅಧಿಕ ಲಾಭವನ್ನು ಗಳಿಸಬಹುದು ಎಂಬ ಉದ್ದೇಶದಿಂದ ಪಪಾಯಿ ಬೆಳೆದೆ. ರಾಮನಗರದಿಂದ ೧೩ ರೂಪಾಯಿಗೆ ಒಂದರಂತೆ ೧೫ಸಾವಿರ ರೂಪಾಯಿ ವ್ಯಯಿಸಿ ೧೨೦೦ ಸಾವಿರ ಸಸಿ ತಂದು ನಾಟಿ ಮಾಡಿದ್ದಾರೆ. ೨*೨ ಗುಂಡಿ ತೋಡಿ ಒಂದು ಸಾಲಿನಲ್ಲಿ ೧೦ ಅಡಿಗೆ ಒಂದರಂತೆ ನಾಟಿ ಮಾಡಿದ್ದಾರೆ. ಪ್ರತಿ ಗಿಡವು ತನ್ನ ಜೀವಿತಾವಧಿಯ ೨ ರ್ಷಗಳಲ್ಲಿ ೩೦ ರಿಂದ ೪೦ ಕೆಜಿ ಹಣ್ಣು ನೀಡುತ್ತಿದೆ ನೆಟ್ಟು ಉತ್ತಮ ಬೇಸಾಯ ಮಾಡಿ ಎಂಟು ತಿಂಗಳಲ್ಲಿ ಪಪ್ಪಾಯಿ ಗಿಡಗಳನ್ನು ಬೆಳೆಸಿ ಗಿಡಗಳು ಕಾಯಿ ಬಿಟ್ಟ ನಂತರ ಎರಡು ವಾರಗಳ ನಂತರ ಬಿಡಿಸಿ ಬಿಡಿಸಿ ನಂತರ ಬೆಂಗಳೂರು ಮಾರುಕಟ್ಟೆಯ ಲಾಲ್ ಬಾಗ್ ನಲ್ಲಿ ಮಾರುಕಟ್ಟೆಯಲ್ಲಿ ಮಾರುತ್ತೆವೇ ಸದ್ಯಕ್ಕೆ ವ್ಯಾಪಾರಸ್ಥರು, ಖರೀದಿದಾರರು ತೋಟಕ್ಕೆ ಆಗಮಿಸಿ ಕೆಜಿಗೆ ೮ ರೂಪಾಯಿಯಂತೆ ಖರೀದಿಸುತ್ತಾರೆ ಅದೇ ರೀತಿ ೨ ನೇ ಮತ್ತು ೩ನೇ ಕಟಾವು ಬಂದರೆ ಹೆಚ್ಚು ಆದಾಯ ಒರಲಿದೆ ಇದರಿಂದ ಹಣದ ಕೊರತೆ ನೀಗಿಸಿ ಕುಟುಂಬ ನರ್ವಹಣೆಗೆ ಅನುಕೂಲವಾಗಿ ಸ್ವಾಭಿಮಾನದಿಂದ ಜೀವನ ನಡೆಸಬಹುದು ಎಂದು ರೈತ ಜಯರಾಮಯ್ಯ ಎಂದು ಖುಷಿವ್ಯಕ್ತಪಡಿಸಿದರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೆ ಹೆಚ್ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಿರುಮಲಪಾಳ್ಯ ಗ್ರಾಮ ರಸ್ತೆಯಿಂದ ಗಜನಪಾಳ್ಯ ಗ್ರಾಮದ ಬಾಳೇ ಕಟ್ಟೆ ರಸ್ತೆಯವರೆಗೆ ವರೆಗೆ ಜಲ್ಲಿ ರೋಡ್ ನಿರ್ಮಾಣ ಎರಡು ಹಳ್ಳಿಗ ಸಂಪರ್ಕ ವ್ಯವಸ್ಥೆ ಜನರು ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಹಾಗೂ ತಮ್ಮ ಜಲ್ಲಿ ರಸ್ತೆ ನಿರ್ಮಾಣವು ತೋಟಗಳಿಗೆ ಹೋಗುವುದಕ್ಕೆ ಸಹಾಯದಾಯಕವಾಗಿದೆ.
ಕೆ ಹೆಚ್ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಿರುಮಲಪಾಳ್ಯ ರಸ್ತೆಯಿಂದ ಗಜನಪಾಳ್ಯ ಗ್ರಾಮದ ಬಾಳೇ ಕಟ್ಟೆ ರಸ್ತೆ ವರೆಗೆ ರಸ್ತೆ ಅಭಿವೃದ್ಧಿಯಾಗುತ್ತೀರುವುದು ಎರಡು ಹಳ್ಳಿಯ ಜನರಿಗೆ ಒಂದು ಊರಿನಿಂದ ಇನ್ನೋಂದು ಊರಿಗೆ ಹೋಗುವುಕ್ಕೂ ಹಾಗೂ ಮಳೆಕಾಲದಲ್ಲಿ ಜಮೀನಿನಲ್ಲಿ ವ್ಯವಸಾಯ ಜಮೀನಿಗೆ ಹೋಗುವುದಕ್ಕೆ ತುಂಬಾ ಅನುಕೂಲವಾಗಿದೆ
2023-24ಆರ್ಥಿಕ ವರ್ಷದಲ್ಲಿ ಕೆ ಹೆಚ್ ಹಳ್ಳಿ ವಾರ್ಡ ಸಭೆಯಲ್ಲಿ ರಸ್ತೆ ದುರಸ್ಥಿಯ ಬಗ್ಗೆ ಜನರು ದೂರಿನ ಆಧಾರದ ಮೇಲೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಮೊದಲ ಅಧ್ಯತೆಯಲ್ಲಿ ಮೇರೆಗೆ ಕ್ರಿಯಾ ಯೋಜನೆ ತಯಾರು ಮಾಡಿ ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಿದ ನಂತರ ಜಿಲ್ಲಾಪಂಚಾಯಿತಿ ಯಿಂದ ಅನುಮತಿ ಪಡೆದು ತಾಂತ್ರಿಕ ಸಹಾಯಕರಿಂದ ಅದಾಂಜು ಪತ್ರಿಕೆ ಮತ್ತು ಗ್ರಾಮ ಪಂಚಾಯಿತಿಯಿಂದ ಆಡಳಿತ್ಮಕ ಮಂಜುರಾತಿಯನ್ನು ಪಡೆದು ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಲಾಯಿತು. ಅದೇ ಊರಿನ ಜಾಬ್ ಕಾರ್ಡ್ ಕೂಲಿ ಕಾರ್ಮಿಕರು ಕೆಲಸ ಕೇಳಿ ಪಂಚಾಯಿತಿ ನಮೂನೆ 6 ರಲ್ಲಿ ಅರ್ಜಿಸಲ್ಲಿಸಿದ್ದು ಅದರ ಆಧಾರದಮೇಲೆ ಅವರನ್ನು ಕೆಲಕ್ಕೆ ನಿಯೋಜನೆ ಮಾಡಲಾಯಿತ್ತು
ಕಾಮಗಾರಿ ವಿವರ ತಿರುಮಲಪಾಳ್ಯ ಗ್ರಾಮದ ಪಾನೀ ಸೇವೆ ಮಂಟಪದಿಂದ ತಿರುಮಲಯ್ಯನ ಜಮೀನಿನವರೆಗೆ ಜಲ್ಲಿ ರಸ್ತೆ ಅಭಿವೃದ್ಧಿ ಅದಾಂಜು ಮೊತ್ತ :800000 (ಲಕ್ಷ) (ಕೂಲಿಮೊತ್ತ:336600 ಮತ್ತು ಸಾಮಗ್ರಿ ಮೊತ್ತ;463400ಹಾಗಲೇ ಕೆಲಸ ಆರಂಭವಾಗಿ ಕೂಲಿಗಾರರಿಗೆ 223352 ರೂಗಳು ಸಂದಾಯವಾಗಿರುತ್ತದೆ ತಮ್ಮ ಊರಿನ ರಸ್ತೆ ಸಮಸ್ಯೆಯನ್ನು ತಾವೇ ಸರಿಪಡಿಸಿಕೊಳ್ಳದಲ್ಲದೆ ದಿನನಿತ್ಯದ ಜೀವನಕ್ಕೆ ತಮ್ಮವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಧಾರವಾಗಿದೆ ಎಂದು ಕೆಲಸ ಮಾಡಿದ ಕೂಲಿ ಕಾರ್ಮಿಕರ ಅಭಿಪ್ರಾಯವಾಗಿದೆ.
ಜಿಲ್ಲೆ: ತುಮಕೂರು
ತಾಲ್ಲೂಕು: ಕುಣಿಗಲ್
ಗ್ರಾಮ ಪಂಚಾಯಿತಿ : ಡಿ ಹೊಸಹಳ್ಳಿ
ಗ್ರಾಮ : ಮಾದಪ್ಪನಹಳ್ಳಿ
ಕಾಮಗಾರಿಯ ಕೋಡ್ : 1525004020/WH/93393042892194479
ಕಾಮಗಾರಿಯ ಹೆಸರು :ಡಿ ಹೊಸಹಳ್ಳಿ ಗ್ರಾ.ಪಂ ನ ಮಾದಪ್ಪನಹಳ್ಳಿ ಗ್ರಾಮದ ಬಸವಣ್ಣನ ದೇವಸ್ಥಾನದ ಮುಂದೆ ಕಲ್ಯಾಣಿ ಅಭಿವೃದ್ದಿ ಕಾಮಗಾರಿ
ಪ್ರದೇಶ ವಿಸ್ತರಣೆ :
ಅಂದಾಜು ವೆಚ್ಚ: 18
ಕೂಲಿ : 313055
ಸಾಮಾಗ್ರಿ ವೆಚ್ಚ: 941268
ಸೃಜಿಸಿದ ಮಾನವ ದಿನಗಳು : 328
ಅನುಷ್ಟಾನ ಇಲಾಖೆ: ಗ್ರಾಮ ಪಂಚಾಯತಿ
ಕಲ್ಯಾಣಿಯ ಒಟ್ಟು ನೀರಿನ ಸಾಮಾರ್ಥ್ಯ: ಸುಮಾರು 1 ಲಕ್ಷ ಲೀಟರ್
ಕಾಮಗಾರಿಯ ಪರಿಚಯ : ಡಿ ಹೊಸಹಳ್ಳಿ ಗ್ರಾ.ಪಂ ನ ಮಾದಪ್ಪನಹಳ್ಳಿ ಗ್ರಾಮದ ಬಸವಣ್ಣನ ದೇವಸ್ಥಾನದ ಮುಂದೆ ಕಲ್ಯಾಣಿ ಅಭಿವೃದ್ದಿ ಕಾಮಗಾರಿ
ಕಾಮಗಾರಿಯ ಅನುಷ್ಠಾನ ಪ್ರಕ್ರಿಯೆ : ನರೇಗಾ ಯೋಜನೆಯಡಿ ಕಾಮಗಾರಿ ಪ್ರಾರಂಭ ಮಾಡುವ ಮುನ್ನ ಬಿ. ಗೊಲ್ಲರಹಟ್ಟಿ ಗ್ರಾಮದ ಕಲ್ಯಾಣಿಯು ಪಾಳು ಬಿದ್ದಿತ್ತು. ಗ್ರಾಮದಲ್ಲಿ ಪೌಳಿ ಮಠ ಇದ್ದು ಕಲ್ಯಾಣಿಯ ನೀರು ಮಠದ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಕಲ್ಯಾಣಿಯು ಪಾಳು ಬಿದ್ದ ನಂತರ ನೀರು ಬತ್ತಿ ಹೋಗಿತ್ತು. ಕಲ್ಯಾಣಿ ಶಿಥಿಲಾವಸ್ಥೆಗೆ ತಲುಪಿದ ನಂತರ ಇಲ್ಲಿನ ಅಂತರ್ಜಲ ಮಟ್ಟ ಕುಸಿಯಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಹೊಸಕೆರೆ ಗ್ರಾಮ ಪಂಚಾಯಿತಿಯು ಕಲ್ಯಾಣಿ ಅಭಿವೃದ್ಧಿಗೆ ಮುಂದಾಯಿತು.
ಕಾಮಗಾರಿ ಪರಿಣಾಮ : ಕಾಮಗಾರಿ ಅನುಷ್ಠಾನದಿಂದ ಮಳೆಗಾಲದಲ್ಲಿ ಮಳೆ ನೀರು ಕಲ್ಯಾಣಿಯಲ್ಲಿ ಶೇಖರಣೆಯಾಗಿ ಹಿಂಗುವುದರಿಂದ ತೇವಾಂಶ ಹೆಚ್ಚಿ ಅಂತರ್ಜಲ ವೃದ್ಧಿಯಾಗಿ ಸುತ್ತ ಮುತ್ತಲಿನ ಜಮೀನಿನ ಬೋರ್ ವೆಲ್ ಮರುಪೂರ್ಣ ಹೊಂದುವುದರ ಜೊತೆಗೆ, ಸಾರ್ವಜನಿಕರಿಗೂ ಹಾಗೂ ಮಠದ ಬಳಕೆಗೆ ನೀರು ಉಪಯೋಗವಾಯಿತು.
ಜಿಲ್ಲೆ : ತುಮಕೂರು
ತಾಲ್ಲೂಕು : ಕುಣಿಗಲ್
ಗ್ರಾಮ ಪಂಚಾಯತಿ : ಕೆಂಪನಹಳ್ಳಿ
ಗ್ರಾಮ : ದೊಡ್ಡಪಾಳ್ಯ
ಕಾಮಗಾರಿಯ ಕೋಡ್ : 1525004014/WC/93393042892474077
ಕಾಮಗಾರಿಯ ಹೆಸರು : ದೊಡ್ಡಪಾಳ್ಯದ ಗ್ರಾಮದ ಬನ್ನಿ ಕಲ್ಯಾಣಿ ಅಭಿವೃದ್ಧಿ
ಪ್ರದೇಶ ವಿಸ್ತರಣೆ : 25 ಮೀಟರ್ ಉದ್ದ 25 ಮೀಟರ್ ಅಗಲ
ಅಂದಾಜು ವೆಚ್ಚ : 9.90 ಲಕ್ಷ
ಕೂಲಿ : 4.0
ಸಾಮಗ್ರಿ ವೆಚ್ಚ : 5.9
ಸೃಜಿಸಿದ ಮಾನವ ದಿನಗಳು : 1294
ಅನುಷ್ಠಾನ ಇಲಾಖೆ : ಗ್ರಾಮ ಪಂಚಾಯಿತಿ
ಕಲ್ಯಾಣಿಯ ಒಟ್ಟು ನೀರಿನ ಸಾಮಾರ್ಥ್ಯ : ಸುಮಾರು 1.5 ಲಕ್ಷ ಲೀಟರ್
ಕಾಮಗಾರಿಯ ಪರಿಚಯ : ದೊಡ್ಡಪಾಳ್ಯದ ಗ್ರಾಮದ ಬನ್ನಿ ಕಲ್ಯಾಣಿ ಅಭಿವೃದ್ಧಿ
ಕಾಮಗಾರಿಯ ಅನುಷ್ಠಾನ ಪ್ರಕ್ರಿಯೆ : ನರೇಗಾ ಯೋಜನೆಯಡಿ ಕಾಮಗಾರಿ ಪ್ರಾರಂಭ ಮಾಡುವ ಮುನ್ನ ದೊಡ್ಡಪಾಳ್ಯದ ಗ್ರಾಮದ ಕಲ್ಯಾಣಿಯು ಪಾಳು ಬಿದ್ದಿತ್ತು. ಗ್ರಾಮದಲ್ಲಿ ಮಾರಮ್ಮ ದೇವಾಲಯ ಇದ್ದು ಕಲ್ಯಾಣಿಯ ನೀರು ದೇವಸ್ಥಾನದ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಕಲ್ಯಾಣಿಯು ಪಾಳು ಬಿದ್ದ ನಂತರ ನೀರು ಬತ್ತಿ ಹೋಗಿತ್ತು. ಕಲ್ಯಾಣಿ ಶಿಥಿಲಾವಸ್ಥೆಗೆ ತಲುಪಿದ ನಂತರ ಇಲ್ಲಿನ ಅಂತರ್ಜಲ ಮಟ್ಟ ಕುಸಿಯಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಕೆಂಪನಹಳ್ಳಿ ಗ್ರಾಮ ಪಂಚಾಯಿತಿಯು ಕಲ್ಯಾಣಿ ಅಭಿವೃದ್ಧಿಗೆ ಮುಂದಾಯಿತು.
ಕಾಮಗಾರಿ ಪರಿಣಾಮ : ಕಾಮಗಾರಿ ಅನುಷ್ಠಾನದಿಂದ ಮಳೆಗಾಲದಲ್ಲಿ ಮಳೆ ನೀರು ಕಲ್ಯಾಣಿಯಲ್ಲಿ ಶೇಖರಣೆಯಾಗಿ ಹಿಂಗುವುದರಿಂದ ತೇವಾಂಶ ಹೆಚ್ಚಿ ಅಂತರ್ಜಲ ವೃದ್ಧಿಯಾಗಿ ಸುತ್ತ ಮುತ್ತಲಿನ ಜಮೀನಿನ ಬೋರ್ ವೆಲ್ ಮರುಪೂರ್ಣ ಹೊಂದುವುದರ ಜೊತೆಗೆ, ಸಾರ್ವಜನಿಕರಿಗೂ ಹಾಗೂ ದೇವಸ್ತಾನದ ಬಳಕೆಗೆ ನೀರು ಉಪಯೋಗವಾಯಿತು ಮತ್ತು ಕಲ್ಯಾಣಿ ನೀರನ್ನು ಮನೆ ಕೆಲಸಕ್ಕೆ ಉಪಯೋಗಿಸುವಂತೆ ಆಯೀತು
ಜಿಲ್ಲೆ: ತುಮಕೂರು
ತಾಲ್ಲೂಕು: ಕುಣ ಗಲ್
ಗ್ರಾಮ ಪಂಚಾಯಿತಿ : ಬಿಳಿದೇವಾಲಯ
ಗ್ರಾಮ : ಮುತ್ತುಗದಹಳ್ಳಿ
ಕಾಮಗಾರಿ ಸಂಕೇತ : 1525004008/ಂಗಿ/9339042892257951
ಕಾಮಗಾರಿ ಹೆಸರು : ಮುತ್ತುಗದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಕಾಂಪೌAಡ್ ನಿರ್ಮಾಣ.
ಪ್ರದೇಶ ವಿಸ್ತರಣೆ : 150 ಮೀಟರ್ ಅಗಲ, 150 ಮೀಟರ್ ಉದ್ದ
ಅಂದಾಜು ಮೊತ್ತ : 2.00 ಲಕ್ಷ
ಕೂಲಿ ವೆಚ್ಚ : 37323
ಸಾಮಗ್ರಿ ವೆಚ್ಚ : 129488
ಸೃಜಿಸಿದ ಮಾನವ ದಿನಗಳು : 129
ಅನುಷ್ಠಾನ ಇಲಾಖೆ : ಗ್ರಾಮ ಪಂಚಾಯಿತಿ
ಕಾಮಗಾರಿ ಪರಿಚಯ : ಮುತ್ತುಗದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಕಾಂಪೌAಡ್ ನಿರ್ಮಾಣ.
ಕಾಮಗಾರಿಯ ಅನುಷ್ಠಾನ ಪ್ರಕ್ರಿಯೆ : ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿ ಪ್ರಾರಂಭ ಮಾಡುವ ಮುನ್ನ ಮುತ್ತುಗದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಕಾಂಪೌAಡ್ ಪಾಳು ಬಿದ್ದಿದ್ದು, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಬಿಳಿದೇವಾಲಯ ಗ್ರಾಮ ಪಂಚಾಯಿತಿಯು ಮುತ್ತುಗದಹಳ್ಳಿ ಶಾಲೆಗೆ ಕಾಂಪೌAಡ್ ಅಭಿವೃದ್ದಿ ಪಡಿಸಲು ಮುಂದಾಯಿತು.
ಕಾಮಗಾರಿ ಪರಿಣಾಮ: ಮುತ್ತುಗದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಕಂಪೌAಡ್ ನಿರ್ಮಾಣವಾದ ಬಳಿಕ ಶಾಲಾ ಮಕ್ಕಳಿಗೆ ಶಾಲಾ ಆವರಣದಲ್ಲೇ ಆಟವಾಡಲು ಅನುಕೂಲವಾಗಿದೆ. ಗಿಡಗಳನ್ನು ಬೆಳೆಸಲು ಅನುಕೂಲಕರವಾಗಿದೆ. ಹಾಗೂ ಶಾಲಾ ಮಕ್ಕಳ ಸೈಕಲ್ ಗಳನ್ನು ನಿಲ್ಲಿಸಲು ಅನುಕೂಲವಾಗಿದೆ. ನೆರೆಹೊರೆಯವರ ಸದ್ದು ಗದ್ದಲಗಳಿಲ್ಲದೆ ಶಾಂತಿಯುತವಾಗಿ ಪಾಠ ಕೇಳಲು ತುಂಬಾ ಅನುಕೂಲಕರವಾಗಿದೆ.
ಮ-ನರೇಗಾ ಯೋಜನೆಯಡಿ ಅಭಿವೃದ್ಧಿಗೊಂಡಿರುವ ಉದ್ಯಾನವನ
ಶೀರ್ಷಿಕೆ: ನಡೆಮಾವಿನಪುರ ಗ್ರಾಮ ಪಂಚಾಯಿತಿ ಕಾಂಪೌಡ್ ಆವರಣದಲ್ಲಿ ಉದ್ಯಾನವನ ನಿರ್ಮಾಣ
ಜಿಲ್ಲೆ: ತುಮಕೂರು
ತಾಲ್ಲೂಕು(ಬ್ಲಾಕ್): ಕುಣಿಗಲ್
ಗ್ರಾಮ ಪಂಚಾಯತಿ:ನಡೆಮಾವಿನಪುರ
ಗ್ರಾಮ: ನಡೆಮಾವಿನಪುರ
ಕೆಲಸದ ಹೆಸರು: ನಡೆಮಾವಿನಪುರ ಗ್ರಾಮ ಪಂಚಾಯಿತಿ ಕಾಂಪೌAಡ್ ಆವರಣದಲ್ಲಿ ಉದ್ಯಾನವನ ನಿರ್ಮಾಣ
ಅನುಷ್ಠಾನ ಪ್ರಕ್ರಿಯೆ:
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ನಡೆಮಾವಿನಪುರ ಗ್ರಾಮ ಪಂಚಾಯಿತಿ ಕಾಂಪೌAಡ್ ಆವರಣದಲ್ಲಿ ಉದ್ಯಾನವನ ನಿರ್ಮಾಣ ೦೧-೦೪-೨೦೨3ರಂದು ಪ್ರಾರಂಭವಾಗಿದ್ದು, ೩೦-೧೧-೨೦೨3 ರಂದು ಮುಕ್ತಾಯಗೊಂಡಿರುತ್ತದೆ. ಅಂತೆಯೇ ಇದರ ಕಾಮಗಾರಿ ೧೫೨೨೦೦೨೦೦೮/ಎಲ್ಡಿ/೯೩೩೯೩೦೪೨೮೯೨೨೦೩೪೭ ಎಂಬ ಸಂಕೇತದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ಅಂದಾಜು ೪.೦೦ ಲಕ್ಷ ರೂ. ಮೊತ್ತವನ್ನು ವ್ಯಯಿಸಿದ್ದು, ೨.೪೦ಲಕ್ಷ ರೂ.ನ್ನು ಕೂಲಿ ವೆಚ್ಚಕ್ಕಾಗಿ ಮತ್ತು ೧.೬೦ಲಕ್ಷ ರೂ.ನ್ನು ಸಾಮಾಗ್ರಿ ವೆಚ್ಚಕ್ಕಾಗಿ ಖರ್ಚು ಮಾಡಲಾಗಿದೆ. ಒಟ್ಟು ೨೦೪ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ.
ಉದ್ಯಾನವನ ನಿರ್ಮಾಣಕ್ಕೂ ಮುನ್ನ:
ನಡೆಮಾವಿನಪುರ ಪಂಚಾಯಿತಿ ಆವರಣದಲ್ಲಿ ಈ ಮೊದಲು ಉದ್ಯಾನವನ ನಿರ್ಮಾಣಕ್ಕೂ ಮೊದಲು ಖಾಲಿ ಜಾಗದಿಂದ ಕೂಡಿತ್ತು. ಹೆಚ್ಚು ಬೇಡದೇ ಇರುವ ಗಿಡಗಳು ಬೆಳೆದಿದ್ದರಿಂದ ಕಳೆರಹಿತವಾಗಿ ಕಾಣುತ್ತಿತ್ತು. ತಾಲ್ಲೂಕಿನ ಹೆಚ್ಚು ಅಭಿವೃದ್ದಿಯಾಗಿರುವ ಜನವಸತಿ ಪ್ರದೇಶಗಳಲ್ಲಿ ನಡೆಮಾವಿನಪುರ ಗ್ರಾಮ ಪಂಚಾಯಿತಿ ಮೊದಲ ಸ್ಥಾನದಲ್ಲಿದೆ. ಜೊತೆಗೆ ಹೋಬಳಿಯೂ ಆಗಿರುವುದರಿಂದ ಬಸ್ ನಿಲ್ದಾಣವಿದ್ದು, ಹೆಚ್ಚು ಜನ ಸಂಚಾರವನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿಯೂ ಸಹ ಪಂಚಾಯಿತಿಯ ಆವರಣವನ್ನು ಸ್ವಚ್ಛ, ನೈರ್ಮಲ್ಯ, ಸುಂದರ ಹಾಗೂ ಆಕರ್ಷಣೀಯವಾಗಿ ಕಂಗೊಳಿಸುವAತೆ ಮಾಡಲು ಉದ್ಯಾನವನದ ಕಾಮಗಾರಿಯನ್ನು ಕೈಗೊಳ್ಳಲಾಯಿತು.