News

"Take this opportunity to present and share any community activity/celebration with the extended families in your area or outside including India by submitting the web link of the photo album. It would be informative to the viewers if you can send your photo (JEPG format), a brief note about yourself, family and few lines about the activity/ celebration / attendees (word format). For example, each chapter of Havyaka Association of Americas/such groups in other countries including India can share about the special get together conducted recently during festivals (eg: Sankranthi/ Ugadi/ Ganesha Chaurthi/ NavaRathri/ Dasara/ Deepavali etc.) and summer picnic. Let us share and keep connected!"

Freedom from activity is never achieved by abstaining from action. Nobody can become perfect by merely ceasing to act".

- Shreemad Bhagavad Geetha

"Unity, to be real, must stand the severest strain without breaking"

- Mahatma Gandhi

Diwali’s Recognition as a Holiday in Schools

By Sana Barige

For many years, there has been a controversy of whether Diwali should have representation as a school holiday. Over time, more and more schools have been adding a day off for students on Diwali. Petitions were made by communities requesting that a day off should be given off for Diwali for the Hindu community, as well as make schools more culturally inclusive. The change has spread to many companies too, as the Indian Festival of Lights gains more awareness across the country. People will learn about the rich culture behind the customs, purpose, food, and more of this day.

It is only fair that the freedom to celebrate a festival such as Diwali is equivalent to a holiday such as Christmas or Thanksgiving. This day is meant to be spent lighting diyas around the house, worshipping gods, exchanging gifts, spending time with friends and family, and eating a grand feast. Diwali is as important to the Hindus as Christmas is to Christians, so why must one community happily enjoy their holiday while the other must do schoolwork on theirs?

US Congresswoman Carolyn Maloney even introduced a bill attempting to make Diwali a federal holiday. The growing recognition of Diwali is a wonderful thing, and paves the way for a more diverse and welcoming country. For now, hopefully some schools which have yet to give a day off for Diwali will follow the examples of other schools and allow Hindus to celebrate this holiday as it should be celebrated.



ದೀಪಾವಳಿ ಗಮ್ಮತ್ತು

ದೀಪಾವಳಿ ಹಬ್ಬ ಎಂದರೆ ನಮಗೆಲ್ಲ ಮನದಲ್ಲಿ ನೆನಪಿಗೆ ಬರುವ ಶ್ಲೋಕವೆಂದರೆ “ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ” ಅಂದರೆ ನಮ್ಮ ಜೀವನವನ್ನ ಅಸತ್ಯದಿಂದ ಸತ್ಯದ ಮಾರ್ಗದಡೆ ನೆಡೆಸುವಂತೆ, ಅಂಧಕಾರದಿಂದ ಜ್ಯೋತಿರ್ಮಯ ಬೆಳಕಿನ ಕಡೆಗೆ ಸಾಗಲಿ ಎಂದು.

ನವೆಂಬರ್ 7 ರಂದು ಟೊರೊಂಟೋದಲ್ಲಿ ಕೆನೆಡಿಯನ್ ಹವ್ಯಕ ಅಸೋಸಿಯೇಷನ್ ಒಫ್ ಅಮೆರಿಕಾಸ್ ಸಂಘದವರು, ಶೃಂಗೇರಿ ವಿದ್ಯಾ ಭಾರತಿ ಸಮುದಾಯ ಭವನದಲ್ಲಿ ದೀಪಾವಳಿ ಹಬ್ಬವನ್ನ ಆಯೋಜಿಸಿದ್ದರು. ಎರಡು ವರ್ಷಗಳ ನಂತರ ಮೊದಲ ಬಾರಿಗೆ ಮುಖತಃ ಭೇಟಿಯಾಗುವ ಕಾರ್ಯಕ್ರಮವಾದ್ದರಿಂದ ಎಲ್ಲರಲ್ಲೂ ಬಹಳ ಉತ್ಸುಕತೆಯನ್ನು ಕಾಣಬಹುದಾಗಿತ್ತು ಹಾಗೆಯೇ ಸಾಕಷ್ಟು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಸಹ ಪರಿಗಣಿಸಲಾಗಿತ್ತು.

ಸಂಪ್ರದಾಯದಂತೆ ಸಮುದಾಯದ ಸುಮಂಗಲಿಯರೆಲ್ಲಾ ಕೂಡಿ ಶಾರದಾಂಬೆಯ ಸನ್ನಿಧಿಯ ಮುಂದೆ ಕುಂಕುಮಾರ್ಚನೆ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾ ದೀಪಾವಳಿ ಸಮಾರಂಭವನ್ನ ಆರಂಭಿಸಿದರು. ಈ ಬಾರಿಯ ವಿಶೇಷತೆಯಂದರೆ ತಂಡದ ಯುವ ಸದಸ್ಯರು ತಮ್ಮ ವಾಕ್ ಚಾತುರ್ಯಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ನಿರೂಪಣೆ ಮಾಡಿದ್ದು.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಎಂದು ಮಹಿಳೆಯರ ಆವಾಹನೆಯ ಭಜನೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ಉಪಾಧ್ಯಕ್ಷ, ಶ್ರೀ ಕೃಷ್ಣ ಪ್ರಸಾದ್ ಬಾಳಿಕೆಯವರು ಪ್ರೇಕ್ಷಕರನ್ನು ಉದ್ದೇಶಿಸಿ ಸ್ವಾಗತ ಭಾಷಣವನ್ನು ಮಾಡಿದರು. ನಂತರ ಡಾ। ರಾಮ ಭಟ್ ಬಾಳಿಕೆ ಅವರು ಬರೆದ, 'ಬಾಳಿಕೆಯಿಂದ ಕೆನಡಾಕ್ಕೆ' ಶೀರ್ಷಿಕೆಯ ಪುಸ್ತಕವನ್ನು ಸಂಘದ ಅಧ್ಯಕ್ಷರಾದ ಶ್ರೀ ಪರಮೇಶ್ವರ ಭಟ್ಟರು ಹಾಗೂ ಅವರ ಪತ್ನಿ ಶ್ರೀಮತಿ ಶಾರದಾ ಭಟ್ ಅವರು ಬಿಡುಗಡೆ ಮಾಡಿದರು. ನಂತರ ಭಾರತದ ವಿವಿಧ ಪ್ರಾಂತ್ಯಗಳ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಪುಟಾಣಿ ಮಕ್ಕಳ ಫ್ಯಾಷನ್ ಶೋ ದೃಶ್ಯವು ನೋಡುವವರ ಕಣ್ಣಿಗೆ ಹಬ್ಬವಾಗಿತ್ತು. ಮುಂದೆ ಎಲ್ಲಾ ವಯಸ್ಸಿನವರಿಂದ ಸಮ್ಮಿಳನದ ನೃತ್ಯಗಳು, ಶ್ರೀಮತಿ ಮುಕ್ತಾ ಹೆಗ್ದೆ ತಂಡದವರಿಂದ ಭರತ ನಾಟ್ಯ, ಹಿಂದೂಸ್ತಾನಿ ಗಾಯನ, ಸಂಸಾರದಲ್ಲಿ ಸನಿದಪ ನಾಟಕ, ನರಕಾಸುರ ವಧೆಯ ನೆರಳಿನ ಗೊಂಬೆಗಳ ಪ್ರದರ್ಶನ ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿತ್ತು. ನಂತರ ಹೊಸದಾಗಿ ಆಗಮಿಸಿದ ಹವ್ಯಕ ಕುಟುಂಬಗಳ ಪರಿಚಯ, ಲಕ್ಕಿಡ್ರಾ, ವಿದ್ಯಾರ್ಥಿವೇತನ ಪ್ರಶಸ್ತಿ ವಿತರಣೆ, ಕೊನೆಯದಾಗಿ ವಂದನಾರ್ಪಣೆಯೊಂದಿಗೆ ಸಾಂಕೃತಿಕ ಕಾರ್ಯಕ್ರಮ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಇನ್ನೊಂದು ಕಣ್ಮನ ಸೆಳೆದದ್ದು ಅಂದರೆ, ದೀಪಾವಳಿ ಪ್ರದರ್ಶನ. ಮಕ್ಕಳು ಮತ್ತು ಮಹಿಳೆಯರು ಬಹಳ ಸೃಜನಶೀಲತೆಯಿಂದ ತಮ್ಮ ಕೈ ಚಳಕವನ್ನು ರಂಗೋಲಿ, ಚಿತ್ರ ಬಿಡಿಸುವುದು ಹಾಗೂ ವಿವಿಧ ದೀಪಗಳನ್ನು ಸುಂದರವಾಗಿ ಅಲಂಕರಿಸುವುದರ ಮೂಲಕ ತಮ್ಮ ನಿಪುಣತೆಯನ್ನು ತೋರಿಸಿದರು. ಸ್ನೇಹಿತರೊಡನೆ ಕೂಡಿ ಹಬ್ಬದ ಊಟಮಾಡುವುದು , ಪಟಾಕಿ ಹೊಡೆಯುವುದು, ಸಂತೋಷದಿಂದ ಕಳೆದ ಸಮಯ ನಿಜವಾಗಲೂ ಸ್ಮರಣೀಯವಾಗಿತ್ತು.

ಒಟ್ಟಿನಲ್ಲಿ ದೀಪಾವಳಿಯ ಗಮ್ಮತು ಜೋರಿತ್ತು, ಎಲ್ಲಡೆ ಸಂತಸದ ಅಲೆ ಹರಡಿತ್ತು.

ವರದಿ : ಶೋಭಾ ಹೆಗ್ಡೆ

ಬಾಳಿಕೆಯಿಂದ ಕೆನಡಾಕ್ಕೆ’ ಪುಸ್ತಕ ಬಿಡುಗಡೆ

ಕೆನಡಾದ ಟೊರೊಂಟೊ ನಗರ ನಿವಾಸಿ ಡಾ। ರಾಮ ಭಟ್ ಬಾಳಿಕೆ ಅವರು ಬರೆದ, 'ಬಾಳಿಕೆಯಿಂದ ಕೆನಡಾಕ್ಕೆ' ಶೀರ್ಷಿಕೆಯ ಪುಸ್ತಕ ನವೆಂಬರ್ 7 ರಂದು ಟೊರೊಂಟೋದ ಶೃಂಗೇರಿ ವಿದ್ಯಾ ಭಾರತಿ ಸಮುದಾಯ ಭವನದಲ್ಲಿ ನಡೆದ ಕೆನೆಡಿಯನ್ ಹವ್ಯಕ ಅಸೋಸಿಯೇಷನ್ ಓಫ್ ಅಮೆರಿಕಾಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ಡಾ| ರಾಮ ಭಟ್ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದ ಬಾಳಿಕೆಯಲ್ಲಿ ಹುಟ್ಟಿ ಬೆಳೆದು, ಪಿ.ಹೆಚ್.ಡಿ ವ್ಯಾಸಂಗದ ನಂತರ ವಿದೇಶದಲ್ಲಿ ಸುಮಾರು ನಾಲ್ಕು ದಶಕಗಳ ಹಿಂದೆಯೇ ನೆಲೆಸಿದ್ದರು. ಕೆನಡಾದ ಪ್ರಸಿದ್ಧ ಕಾಂಕಾರ್ಡಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ವೃತ್ತಿಯಲ್ಲಿರುವ ಶ್ರೀ ರಾಮ ಭಟ್, ಕನ್ನಡ ಸಾಹಿತ್ಯದಲ್ಲಿ ಮೊದಲಿನಿಂದಲೂ ತೊಡಗಿಸಿ ಕೊಂಡಿದ್ದು ಈಗಾಗಲೇ ಕನ್ನಡಲ್ಲಿ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆರಂಭದಲ್ಲಿ ವಾಟರ್ಲೂ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಡಾ| ನವೀನ ಹೆಗಡೆ ಅವರು ಶ್ರೀ ರಾಮ ಭಟ್ ಅವರ ಕಿರು ಪರಿಚಯವನ್ನು ಮಾಡಿಕೊಟ್ಟರು. ಈ ಹಿಂದೆ ಪ್ರಕಟವಾದ 'ನಾದ' ಎನ್ನುವ ಶೀರ್ಷಿಕೆಯ ಪುಸ್ತಕದ ಬಗ್ಗೆ ಉಲ್ಲೇಖಿಸಿದ ಶ್ರೀ ಹೆಗಡೆ ಅವರು ಕನ್ನಡದಲ್ಲಿ ವಿಜ್ಞಾನ ವಿಷಯವನ್ನು ಪರಿಣಾಮಕಾರಿಯಾಗಿ ವಿವರಿಸಿ ಬರೆಯಲು ಸಾಧ್ಯವಿರುವ ಕೆಲವೇ ಲೇಖಕರಲ್ಲಿ ಶ್ರೀ ರಾಮ ಭಟ್ ಒಬ್ಬರು ಎಂದು ವಿವರಿಸಿದರು. ತಾವು ಬರೆದ 'ಬಾಳಿಕೆಯಿಂದ ಕೆನಡಾಕ್ಕೆ' ಪುಸ್ತಕದ ಬಗ್ಗೆ ಮಾತನಾಡಿದ ಶ್ರೀ ಭಟ್ ಅವರು ಈ ಪುಸ್ತಕ ತಮ್ಮ ಜೀವನದ ಬೇರೆ ಬೇರೆ ಘಟ್ಟಗಳಲ್ಲಿ ಆದ ಅನುಭವ ಕಥನವಾಗಿದೆ ಪುಸ್ತಕದ ಹಿನ್ನೆಲೆಯ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಪುಸ್ತಕ ಪ್ರಕಟ ಪಡಿಸಿದ ‘ಜನ ಪ್ರತಿನಿಧಿ’ ಪ್ರಕಾಶನಕ್ಕೂ, ಮುನ್ನುಡಿ ಬರೆದ ಹಿರಿಯ ಸಾಹಿತಿ ಶ್ರೀ ಎನ್ ತಿರುಮಲೇಶ್ವರ ಭಟ್ ಅವರಿಗೂ, ಮುಖಪುಟ ವಿನ್ಯಾಸ ಮಾಡಿದ ಡಾ| ಹರ್ಷಿತ್ ಕ್ರಮಧಾರಿ ಅವರಿಗೂ, ಎಲ್ಲ ರೀತಿಯಲ್ಲಿ ಸಹಾಯ ಮಾಡಿದ ತಂಗಿ ಡಾ| ಪಾರ್ವತಿ ಐತಾಳ್ ಅವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಕೆನೆಡಿಯನ್ ಹವ್ಯಕ ಅಸೋಸಿಯೇಷನ್ ನ ಅಧ್ಯಕ್ಷರಾದ ಡಾ| ಪರಮೇಶ್ವರ್ ಭಟ್ ಅವರು ಭಾಗವಹಿಸಿದ್ದರು. ಶ್ರೀಯುತ ಪರಮೇಶ್ವರ ಭಟ್ ಮತ್ತು ಶ್ರೀಮತಿ ಶಾರದಾ ಭಟ್ ದಂಪತಿಗಳು ಪುಸ್ತಕವನ್ನು ಬಿಡುಗಡೆಗೊಳಿಸಿದರು. ಆನಂತರ ಮಾತನಾಡಿದ ಪರಮೇಶ್ವರ ಭಟ್ ಅವರು 'ಬಾಳಿಕೆಯಿಂದ ಕೆನಡಾಕ್ಕೆ' ಶೀರ್ಷಿಕೆಯ ಈ ಪುಸ್ತಕ ಕೇವಲ ರಾಮ ಭಟ್ ಅವರ ಅನುಭವ ಕಥನ ಮಾತ್ರವಲ್ಲ ನಮ್ಮಂತಹ ಎಷ್ಟೋ ಮಂದಿ ಹಳ್ಳಿಯಲ್ಲಿ ಹುಟ್ಟಿ ಬೆಳೆದು ವಿದೇಶಕ್ಕೆ ಬಂದ ಎಲ್ಲರ ಅನುಭವ ಕಥನ ಕೂಡಾ ಆಗಿದೆ ಎಂದರು. ಇಂತಹ ಅನುಭವ ಕೃತಿಗಳು ಇನ್ನಷ್ಟು ಬರಬೇಕು ಹಾಗೂ ಮುಂದಿನ ಪೀಳಿಗೆಯ ಮಕ್ಕಳಿಗೂ ಓದಿ ತಿಳಿಸುವುದರ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಕೊನೆಗೆ ಹವ್ಯಕ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ್ ಬಾಳಿಕೆ ಲೇಖಕರನ್ನು ಅಭಿನಂದಿಸಿ ಅಸೋಸಿಯೇಷನ್ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಯುವ ಸಮಿತಿ ಸದಸ್ಯರಾದ ಮಾ. ಪ್ರಣವ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದ್ದರು. ಶ್ರೀ ರಾಮ ಭಟ್ ಅವರ ಮಡದಿ ಶ್ರೀಮತಿ ಪಾರ್ವತಿ ಭಟ್ ಕೂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬರಹ: ಕೃಷ್ಣ ಪ್ರಸಾದ್ ಬಾಳಿಕೆ

ಛಾಯಾಚಿತ್ರ ಕೃಪೆ: ಸುಧೀರ್ ಹೆಗಡೆ