Books to Study
ಸ್ವಾಧ್ಯಾಯ ಗ್ರಂಥಗಳು
Soon we will let you know the Advaita Sadhana Shibira dates
ಸ್ವಾಧ್ಯಾಯ ಗ್ರಂಥಗಳು
|| ಅಹಂ ಬ್ರಹ್ಮಾಸ್ಮಿ ||
|| Aham Brahmãsmi ||
ಹತ್ತು ಹೊತ್ತಿಗೆಯೋದಿ
ಚಿತ್ತವಿಭ್ರಮವೊಂದಿ
ಇತ್ತಿಲ್ಲ ಅತ್ತಿಲ್ಲ
ಕತ್ತಲೆಯು ಹರಿದಿಲ್ಲ
ಮತ್ತಾವುದನ್ನೋದಲೆಂದೊರಲಬೇಡ |
ಉತ್ತಮೋತ್ತಮ ಗ್ರಂಥವೊಂದನೇ ಎತ್ತಿಕೋ
ಹತ್ತಾರು ಸಲವೋದು
ಮತ್ತೆ ಮನನಂಗೈದು
ಉತ್ತಮನ ಗುರುವೊಂದಿ
ಶಾಂತಿಯೊಂದು ||
ಸದ್ಗುರುವಿನ ಆಜ್ಞೆ
ಜನ್ಮವನ್ನು ಕ್ಷಣಮಾತ್ರದಲ್ಲಿ ಸಾರ್ಥಕಗೊಳಿಸಬಲ್ಲ ಈ ಪುಸ್ತಕವನ್ನು, ಮನದ ಕುತೂಹಲಕ್ಕಾಗಿ, ಬುದ್ಧಿಯ ಸಮಾಧಾನಕ್ಕಾಗಿ, ಕಾಲಕಳೆಯುವ ಹವ್ಯಾಸಕ್ಕಾಗಿ ಕಾದಂಬರಿಯಂತೆ ಒಂದೇ ಸಲ ಅಥವಾ ಹಗುರವಾಗಿ ಓದದೆ, ಸದ್ಗುರುವಿನ ಸಂದೇಶದ ಪ್ರತಿ ವಾಕ್ಯದ ಪ್ರತಿ ಪದವನ್ನು ನಿಧಾನವಾಗಿ, ಸಾವಕಾಶವಾಗಿ, ಚೆನ್ನಾಗಿ ಅರ್ಥೈಸಿಕೊಂಡು, ಮನನ ಮಾಡಿಕೊಳ್ಳುತ್ತಾ, ಅನಂತ ಪರಮ ಇರವಿನ [ತತ್ ಸತ್] ಪರಿಶುದ್ಧ ಅರಿವು - ಇರುವೆನೆಂಬ ಪಾವನ ಅಸ್ತಿತ್ವದ ಅನನ್ಯ ಭಾವ - ಮೂಡುವವರೆಗೂ, ಪ್ರತಿದಿನವೂ ಕೇವಲ ಒಂದೊಂದೇ ಅಧ್ಯಾಯದಂತೆ ಓದಿ, ಮನನ ಮಾಡಿಕೊಳ್ಳಿ. ಸದ್ಗುರುವಿನ ಸಂದೇಶದ ಸಾರವನ್ನೆಲ್ಲಾ ಹೀರಿ ಅರಗಿಸಿಕೊಂಡ ಅನಂತರ ತೇಗಿ, ತಿಳಿದುದೆಲ್ಲವನ್ನೂ ಸಂಪೂರ್ಣವಾಗಿ ಮರೆತು, ಸಮಾಧಾನದಿಂದ ಸುಮ್ಮನಾಗಿಬಿಡಿ. ನಿಶ್ಯಬ್ಧದಿಂದ ನಿಮ್ಮೊಳಗೇ ನೀವಿದ್ದುಬಿಡಿ. ಆಗಲೇ ಎಲ್ಲಾ ಅನುಭವಗಳನ್ನು ಮೀರಿದ ಸ್ವಾನಂದಾಮೃತ ತೃಪ್ತಿ ನಿಮ್ಮದಾಗುವುದು.
ಮಹೋತ್ತಮವಾದ ಅದ್ವೈತ ಸಾಧನೆಯ ಗ್ರಂಥಗಳು
ತತ್ ತ್ವಂ ಅಸಿ - ಆಧ್ಯಾತ್ಮದ ವಿಚಾರವಾಗಿ ಪ್ರತಿಯೊಬ್ಬರಲ್ಲಿಯೂ ಹಲವಾರು ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದರಲ್ಲೇ ಸಂಪೂರ್ಣ ಮಾನವ ಜೀವನ ಕಳೆದುಹೋಗುತ್ತದೆ. ಆ ಎಲ್ಲಾ ಪ್ರಶ್ನೆಗಳಿಗೆ ಒಂದೇ ಕಡೆ ಉತ್ತರ ಸಿಕ್ಕಿದರೆ ?? ಉಳಿದ ಜೀವನ ಸಾಧನೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ, ಜೀವನ ಸಾರ್ಥಕವಾಗುತ್ತದೆ. ತತ್ ತ್ವಂ ಅಸಿ ಗ್ರಂಥದಲ್ಲಿ ನಮ್ಮಲ್ಲಿ ಏಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಈ ಉತ್ತರಗಳನ್ನು ಸರಿಯಾಗಿ ಓದಿ, ಮನನ ಮಾಡಿಕೊಂಡಾಗ ಮುಂದೆ ಹೇಳಲಾಗುವ ಸಾಧನೆ ನಿಸ್ಸಂಶಯವಾಗಿ ಸಿದ್ಧಿಸುತ್ತದೆ.
ನೇತಿ.... ನೇತಿ - ನಮ್ಮೆಲ್ಲಾ ಪ್ರಶ್ನೆಗಳು, ಸಂಶಯಗಳು ಅಳಿದ ನಂತರ, ನಮ್ಮ ನಿಜಸ್ವರೂಪದ ಅನುಭವವಾಗಬೇಕು. ಆಗ ಮಾತ್ರವೇ ಜನನ - ಮರಣಗಳ ಭವಚಕ್ರದಿಂದ ಪಾರಾಗಲು ಸಾಧ್ಯ. ಈ ಅನುಭವವನ್ನು ಪಡೆಯಲು ನಿದಿಧ್ಯಾಸನ - ಸಾಧನೆ ಮಾಡಬೇಕು. ಈ ಸಾಧನೆಯ ತಂತ್ರವನ್ನು ತಿಳಿಸಿಕೊಡುವ ಗ್ರಂಥವೇ ನೇತಿ... ನೇತಿ. ಇದರಲ್ಲಿ ಸಾಧಕರೆಲ್ಲರೂ ಅನ್ಯಾಶ್ರಯವಿಲ್ಲದೇ ಸಾಧನೆಯ ಅಭ್ಯಾಸವನ್ನು ಸ್ವಂತವಾಗಿ ಮಾಡಿ ಹುಟ್ಟನ್ನು ಸಾರ್ಥಕಪಡಿಸಿಕೊಳ್ಳಲು ಅನುಕೂಲವಾಗುವಂತೆ 136 ಗಂಟೆಗಳ ಸಾಧನೆಯ ಮಾರ್ಗದರ್ಶನವನ್ನು ಕೊಡಲಾಗಿದೆ.
ತುರೀಯಾತೀತ - ತಥಾಗತ - ಮಹೋತ್ತಮ ಅದ್ವೈತ ತಪೋಧ್ಯಾನದ ಅಂತಿಮ ಅವಸ್ಥೆ - ಮೊದಲು, ತತ್ ತ್ವಂ ಅಸಿ ಪುಸ್ತಕವನ್ನು ಚೆನ್ನಾಗಿ ಓದಿ, ಮನನ ಮಾಡಿಕೊಂಡು, ನೀವು ಯಾರೆಂಬುದನ್ನು ಸ್ಪಷ್ಟವಾಗಿ ತಿಳಿದು, ನಂತರ 136 ಗಂಟೆಗಳ ನಿರ್ದೇಶಿತ ಧ್ಯಾನ ಸಾಧನೆಯನ್ನು (guided meditation) ಕನಿಷ್ಠ 5 ಮಂಡಲ (5 ಬಾರಿ) ಮಾಡಿ, ಅಂತಃಸಾಕ್ಷಿಯಿಂದ ಸೂಕ್ತ ನಿರ್ದೇಶನ ಪ್ರಕಟವಾದ ಅನಂತರವಷ್ಟೇ, ತುರೀಯಾತೀತ ಗ್ರಂಥವನ್ನು ಓದಿ ಮನನ ಮಾಡಿಕೊಂಡು ತಪೋಧ್ಯಾನವನ್ನು ಪ್ರಾರಂಭಿಸುವುದು.
ಮೃತ್ಯೋರ್ಮಾ ಅಮೃತಂಗಮಯ [ಬುದ್ಧ ತಂತ್ರ ಮತ್ತು ಅದ್ವೈತ ತತ್ತ್ವಗಳ ಸಾಮರಸ್ಯ] - ಅದ್ವೈತ ತತ್ತ್ವವನ್ನು ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ, ಭಗವಾನ್ ಆದಿಗುರು ಶಂಕರಾಚಾರ್ಯರ ಪ್ರಕರಣ ಗ್ರಂಥಗಳಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಅದ್ವೈತ ತತ್ತ್ವದ ಅನುಭೂತಿಯನ್ನು ಪಡೆಯಲು ನಮಗೆ ತಂತ್ರದ ಅವಶ್ಯಕತೆಯೂ ಇದೆ. ಈ ತಂತ್ರವನ್ನು ಭಗವಾನ್ ಬುದ್ಧನು ಮಾನವನ ಕಲ್ಯಾಣಕ್ಕಾಗಿ ನಮಗೆ ನೀಡಿರುತ್ತಾರೆ. ಅದ್ವೈತ ತತ್ತ್ವದಲ್ಲಿ ಮತ್ತು ಭಗವಾನ್ ಬುದ್ಧರ ತಂತ್ರದಲ್ಲಿ ಇರುವ ಸಮರಸತೆಯನ್ನು ಈ ಗ್ರಂಥವು ನಮಗೆ ತಿಳಿಸಿಕೊಡುತ್ತದೆ.
I THE SUPREME TRUTH ABSOLUTE AND ULTIMATE - In SELF ENQUIRY WHO AM I, the instant WHO plunges into SILENCE, AM excels as INFINITE IMPERSONAL EXISTENCE and, I shines ETERNALLY with BEAUTY AND BRILLIANCE. This book answers all our questions related to SPIRITUALITY, SELF and SUPREME TRUTH.
"I AM" THE SECRET OF COSMIC HEART REVEALED - After getting answers to all our questions, NOW its time to experience the SELF, THE SUPREME TRUTH through intense Sadhana (Meditation). In this book SADGURU guides us 18 days of intense Sadhana Meditation.