Advaita Sãdhanã
ಅದ್ವೈತ ಸಾಧನಾ
Soon we will let you know the Advaita Sadhana Shibira dates
ಅದ್ವೈತ ಸಾಧನಾ
|| ಅಯಂ ಆತ್ಮಾ ಬ್ರಹ್ಮ ||
|| Ayam Ãtmã Brahma ||
ನೂರಾರು ಕಡೆವೋಗಿ ಹತ್ತಾರು ಸಾಧನೆ ಮಾಡಿ
ಹಾಗಿಲ್ಲ ಹೀಗಿಲ್ಲ ಚಿತ್ತ ವಿಭ್ರಮೆ ಹರಿದಿಲ್ಲ
ಮತ್ತೇನು ಮಾಡಲೆಂದು ಕೊರಗಬೇಡ |
ಉತ್ತಮೋತ್ತಮ ಸಾಧನೆಯೊಂದನೇ ಎತ್ತಿಕೋ
ಹತ್ತಾರು ಸಲ ಮಾಡಿ ಅರಿವಿನ ದೃಢತೆಯನ್ನು ಹೊಂದಿ
ನಿನ್ನೊಳಗೆ ನೀನಾಗಿ ಸ್ವಾನಂದಾಮೃತ ತೃಪ್ತಿಯೊಂದು ||
ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮಿಗಳ ಆದೇಶದಂತೆ ಈ ಜನ್ಮದಲ್ಲೇ ಪ್ರತಿಯೊಬ್ಬ ಮಾನವನು ತನ್ನ ನಿಜಸ್ವರೂಪವನ್ನು ತಿಳಿದು ಜನನ - ಮರಣಗಳ ಭವಚಕ್ರದಿಂದ ಪಾರಾಗಿ ಜೀವನ್ಮುಕ್ತನಾಗಲು ಬೇಕಾದ ಅದ್ವೈತ ಸಾಧನಾ ಶಿಬಿರವು ಪ್ರತೀ ಎರಡು ತಿಂಗಳಿಗೊಮ್ಮೆ ನಡೆಯುತ್ತದೆ.
ಈ ಸುವರ್ಣಾವಕಾಶವನ್ನು ನಾವೆಲ್ಲರೂ ಸದುಪಯೋಗಪಡಿಸಿಕೊಂಡು ಈ ಜನ್ಮದಲ್ಲೇ ಜೀವನ್ಮುಕ್ತರಾಗೋಣ.
ಆಸಕ್ತ ಮುಮುಕ್ಷುಗಳು (ಮೋಕ್ಷಾಪೇಕ್ಷೆ ಇರುವವರು) ಶಿಬಿರದ ನಿಯಮ, ಸೂಚನೆಗಳನ್ನು ಸರಿಯಾಗಿ ಓದಿ, ತಿಳಿದು, ನಂತರ ನೋಂದಣಿ ಮಾಡುವುದು.