"ಕಡಲಿನಾಳವು ಹಿರಿದು,
ಕಡಲಿಗಿಂತಲು ಮಿಗಿಲು
ಮನಸಿನಾಳ
ಬಾನಿನಗಲವು ಹಿರಿದು,
ಬಾನಿಗಿಂತಲು ಮಿಗಿಲು
ಮನುಜನೆಡೆಯು
ಕಡಲಿನಾಳವು ಹಿರಿದು
ಬಾನಿನಗಲವು ಹಿರಿದು
ತುಹಿನ ಗಿರಿಯದು ಹಿರಿದು,
ತುಹಿನ ಗಿರಿಗಿಮ್ಮಡಿಯು ನರನ ಬಲವು
ಮಳೆಯಬಿಲ್ಲದು ಚೆಲುವು,
ಮಲೆಯ ಬಿಲ್ಲನು ಮೀರಿ ಮನುಜನೊಲವು
ಕಡಲಿನಾಳವು ಹಿರಿದು
ಬಾನಿನಗಲವು ಹಿರಿದು
ಮಳೆಯ ಬಿಲ್ಲನು ಮೀರಿ
ಮನುಜನೊಲವು"
- ಕುವೆಂಪು (Kuvempu)