ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅನುಷ್ಠಾನವು ಒಂದು ಉದ್ದಿಷ್ಟ ಕಾರ್ಯವಾಗಿದ್ದು, ಈ ಕೆಳಗಿನ ಅಂಶಗಳನ್ನು ಅದು ಶಕ್ತಗೊಳಿಸುತ್ತದೆ:
(ಎ) ಪ್ರಸ್ತುತ ಹಂಚಿಕೆ ಆಧಾರಿತ ಕಾರ್ಯತಂತ್ರದಿಂದ ಬೇಡಿಕೆ ಆಧಾರಿತ ತಂತ್ರಕ್ಕೆ ಬದಲಾಗಿ ರಾಜ್ಯಗಳು ತಮ್ಮ ಜೀವನೋಪಾಯ ಆಧಾರಿತ ಬಡತನ ಕಡಿತ ಕ್ರಿಯಾ ಯೋಜನೆಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ,
(ಬಿ) ಗುರಿಗಳು, ಫಲಿತಾಂಶಗಳು ಮತ್ತು ಕಾಲಮೀತಿಗೆ ಅನುಗುಣವಾದ ವಿತರಣೆಯ ಮೇಲೆ ಕೇಂದ್ರೀಕರಣ.
(ಸಿ) ನಿರಂತರ ಸಾಮರ್ಥ್ಯ ವೃದ್ಧಿ, ಅಗತ್ಯ ಕೌಶಲ್ಯಗಳನ್ನು ನೀಡುವುದು ಮತ್ತು ಸಂಘಟಿತ ವಲಯದಲ್ಲಿ ಉದಯಿಸುತ್ತಿರುವವರು ಸೇರಿದಂತೆ ಬಡವರಿಗೆ ಜೀವನೋಪಾಯದ ಅವಕಾಶಗಳೊಂದಿಗೆ ಸಂಪರ್ಕಗಳನ್ನು ಸೃಷ್ಟಿಸುವುದು, ಮತ್ತು
(ಡಿ) ಬಡತನದ ಪರಿಣಾಮಗಳ ವಿರುದ್ಧ ಮೇಲ್ವಿಚಾರಣೆ.
ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಜೀವನೋಪಾಯ ಆಧಾರಿತ ದೃಷ್ಟಿಕೋನ ಯೋಜನೆಗಳು ಮತ್ತು ಬಡತನ ಕಡಿತಕ್ಕಾಗಿ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಅಭಿವೃದ್ಧಿಪಡಿಸುವ ನಮ್ಯತೆಯನ್ನು ಹೊಂದಿವೆ. ಆದರೆ ಯೋಜನೆಗಳು, ಬಡತನ ಅನುಪಾತಕ್ಕೆ ತಕ್ಕ ಹಂಚಿಕೆಯೊಳಗೆ ಇರಬೇಕು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಗುರಿ
“ಬಡ ಕುಟುಂಬಗಳು ಲಾಭದಾಯಕ ಸ್ವ-ಉದ್ಯೋಗ ಮತ್ತು ಕೌಶಲ್ಯ ವೇತನ ಉದ್ಯೋಗ ಅವಕಾಶಗಳನ್ನು ಪಡೆಯುವ ಮೂಲಕ ಬಡತನವನ್ನು ಕಡಿಮೆ ಮಾಡುವುದು, ಬಡವರಿಗಾಗಿ ಬಲಿಷ್ಠ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಸುಸ್ಥಿರ ಆಧಾರದ ಮೇಲೆ ಅವರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮಾರ್ಗದರ್ಶಿ ತತ್ವಗಳು
ಬಡವರಿಗೆ ಬಡತನದಿಂದ ಹೊರಬರಲು ಬಲವಾದ ಬಯಕೆ ಇರುತ್ತದೆ ಮತ್ತು ಅವರಿಗೆ ಅದರತ್ತ ಸಾಗುವ ಸಹಜ ಸಾಮರ್ಥ್ಯಗಳಿವೆ
ಬಡವರ ಸಹಜ ಸಾಮರ್ಥ್ಯಗಳನ್ನು ಹೊರಹಾಕಲು ಸಾಮಾಜಿಕ ಸಜ್ಜುಗೊಳಿಸುವಿಕೆ ಮತ್ತು ಬಡವರಿಗೆ ಬಲಿಷ್ಠ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸುವುದು ನಿರ್ಣಾಯಕವಾಗಿದೆ.
ಸಾಮಾಜಿಕ ಸಜ್ಜುಗೊಳಿಸುವಿಕೆ, ಸಂಸ್ಥೆ ನಿರ್ಮಾಣ ಮತ್ತು ಸಬಲೀಕರಣ ಪ್ರಕ್ರಿಯೆಯನ್ನು ಪ್ರೇರೇಪಿಸಲು ಬಾಹ್ಯ ಮತ್ತು ಸೂಕ್ಷ್ಮ ಬೆಂಬಲ ರಚನೆಯ ಅಗತ್ಯವಿದೆ.
ಜ್ಞಾನ ಪ್ರಸರಣ, ಕೌಶಲ್ಯ ನಿರ್ಮಾಣ, ಸಾಲದ ಬಳಕೆ, ಮಾರುಕಟ್ಟೆ ತ್ತು ಇತರ ಜೀವನೋಪಾಯ ಸೇವೆಗಳ ಬಳಕೆಯನ್ನು ಸುಗಮ ಗಮಗೊಳಿಸುವುದು ಈ ಮೇಲ್ಮುಖ ಚಲನಶೀಲತೆಗೆ ಆಧಾರವಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮೌಲ್ಯಗಳು
ಎನ್ಆರ್ಎಲ್ಎಂ ಅಡಿಯಲ್ಲಿ ಎಲ್ಲಾ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವ ಮುಖ್ಯ ಮೌಲ್ಯಗಳು ಹೀಗಿವೆ:
ಎಲ್ಲ ಪ್ರಕ್ರಿಯೆಗಳಲ್ಲೂ ಬಡವರ ಅರ್ಥಪೂರ್ಣ ಪಾತ್ರವನ್ನು ಹೊಂದುವುದು.
ಎಲ್ಲಾ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳ ಪಾರದರ್ಶಕತೆ ಮತ್ತು ಹೊಣೆಗಾರಕೆಯ ಅಗತ್ಯತೆ
ಎಲ್ಲಾ ಹಂತಗಳಲ್ಲಿ ಬಡವರ ಮತ್ತು ಅವರ ಸಂಸ್ಥೆಗಳ ಮಾಲೀಕತ್ವ ಮತ್ತು ಪ್ರಮುಖ ಪಾತ್ರ – ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ
ಸಮುದಾಯದ ಸ್ವಾವಲಂಬನೆ ಮತ್ತು ಸ್ವಾಯಂ ರಕ್ಷಣೆ