E-LIBRARY
Smt. Lalitadevi Gurusiddappa Sindhur
Government First Grade College, Savanur.
Smt. Lalitadevi Gurusiddappa Sindhur
Government First Grade College, Savanur.
Five Laws of Library Science
ಗ್ರಂಥಾಲಯವು ಕಾಲೇಜಿನ ಪ್ರಮುಖ ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಮಾಹಿತಿ ಅಗತ್ಯತೆಯನ್ನು ಪೂರೈಸುವುದರಲ್ಲಿ ನಿರತವಾಗಿದೆ. 1984-85 ನೇ ಸಾಲಿನಲ್ಲಿ ಕಾಲೇಜಿನ ಆರಂಭದೊಂದಿಗೆ ಪ್ರಾರಂಭವಾದ ಗ್ರಂಥಾಲಯವು ಹಂತ ಹಂತವಾಗಿ ಬೆಳೆಯುತ್ತಿದ್ದೆ. ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಒಳಗೊಂಡಿರುವ ನಮ್ಮ ಕಾಲೇಜಿನಲ್ಲಿ ಅವರ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ. ಗ್ರಂಥಾಲಯವು ಮಹಾವಿದ್ಯಾಲಯದ ಹೃದಯಭಾಗವಾಗಿದೆ, ಇದರಲ್ಲಿ ಉತ್ತಮ ಬೆಳಕು ಹೊಂದಿರುವ ಸುಸಜ್ಜಿತ ಸ್ವತಂತ್ರ ಕಟ್ಟಡವಿದೆ.
ನಮ್ಮ ಮಹಾವಿದ್ಯಾಲಯದ ಗ್ರಂಥಾಲಯವು ಪಠ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸಂಬಂಧಿತ ಮತ್ತು ಸಂದರ್ಭ ಪುಸ್ತಕಗಳನ್ನು ಹೊಂದಿದೆ. ಈಗ ಗ್ರಂಥಾಲಯವು 25,289 ಕ್ಕೂ ಹೆಚ್ಚು ಪಠ್ಯಪುಸ್ತಕಗಳು, 2318 ಸಂದರ್ಭ ಪುಸ್ತಕಗಳು, 3135427 ಇ-ಪುಸ್ತಕಗಳು, 6237 ಇ-ನಿಯತಕಾಲಿಕೆಗಳನ್ನು ನಮ್ಮ ಗ್ರಂಥಾಲಯವು ಹೊಂದಿದೆ. ಈ ಎಲ್ಲ ಗ್ರಂಥಾಲಯ ಪುಸ್ತಕಗಳನ್ನ NewGenLib ಎಂಬ ಒಂದು Open source software ಮುಖಾಂತರ ನಾವು ಗಣಿತೀಕರಣವನ್ನಾಗಿ ಅಂದರೆ computerized ಅನ್ನಾಗಿ ಗ್ರಂಥಾಲಯವನ್ನು ಮಾಡಲಾಗಿದೆ.
ಗ್ರಂಥಾಲಯವು ತನ್ನದೇ ಆದ ವೆಬ್ಸೈಟ್ (gfgclibrarysavanur) ಅನ್ನು ಹೊಂದಿದ್ದು, ಇ-ಜರ್ನಲ್ಗಳು, ಇ-ಪುಸ್ತಕಗಳು, N-LIST ಮತ್ತು ಕೆಲವು ಸ್ಪೂರ್ತಿದಾಯಕ ವೀಡಿಯೊಗಳ ಬಗ್ಗೆ ಅಪಾರ ಮಾಹಿತಿಯನ್ನು ಹೊಂದಿದೆ. ಗ್ರಂಥಾಲಯವು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು, ನಿಯತಕಾಲಿಕೆಗಳು, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಹೊಂದಿದೆ. ಗ್ರಂಥಾಲಯವು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಯ ಉತ್ತಮ ಮೂಲವಾಗಿದೆ.