(Library Rules & Regulations)
ಗ್ರಂಥಾಲಯ ಕಾರ್ಯನಿರ್ವಹಣೆಯ ವೇಳೆ:
* ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 10.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ
* ಶನಿವಾರ; ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ
* ಪರೀಕ್ಷಾ ಸಂದರ್ಭದಲ್ಲಿ ಸಾಯಂಕಾಲ 6.00 ಗಂಟೆಯವರೆಗೆ (ವಿದ್ಯಾರ್ಥಿಗಳು ಪಾಲಕರ ಒಪ್ಪಿಗೆ ಪಡೆಯಬೇಕು).
ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಪ್ರವೇಶಿಸುವ ಮೊದಲು ತಮ್ಮ ಬ್ಯಾಗ್ ಗಳನ್ನು Property Counter ನಲ್ಲಿಯೇ ಇಡಬೇಕು & ತಪ್ಪದೇ ಸಂದರ್ಶನ ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡಬೇಕು.
ಪ್ರತಿ ವಿದ್ಯಾರ್ಥಿಗೆ 2 ಪುಸ್ತಕಗಳನ್ನು 15 ದಿನಗಳ ಅವಧಿಗೆ ಎರವಲು ಪಡೆಯಲು ಅವಕಾಶವಿರುತ್ತದೆ. 15 ದಿನಗಳ ನಂತರ ಹಿಂತಿರುಗಿಸುವ ಪುಸ್ತಕಗಳ ಮೇಲೆ ದಿನ ಒಂದಕ್ಕೆ 2 ರೂಪಾಯಿ ದಂಡವನ್ನು ವಿಧಿಸಲಾಗುವುದು.
ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು ಮತ್ತು ಇನ್ನಿತರ ಗ್ರಂಥಾಲಯ ಪರಿಕರ ಎರವಲು ಪಡೆಯಲು ಗ್ರಂಥಾಲಯ ಸದಸ್ಯತ್ವ ಕಾರ್ಡ್ನ್ನು ತೆಗೆದುಕೊಂಡು ಬರುವುದು ಕಡ್ಡಾಯ.
ಎರವಲು ಪಡೆದ ಗ್ರಂಥವು ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಎರವಲು ಪಡೆಯವ ಮುನ್ನ ಮನದಟ್ಟು ಮಾಡಿಕೊಳ್ಳತಕ್ಕದ್ದು. ಒಂದು ವೇಳೆ ಸುಸ್ಥಿತಿಯಲ್ಲಿರದಿದ್ದಲ್ಲಿ, ಅದನ್ನು ಕೂಡಲೇ ಗ್ರಂಥಪಾಲಕರ ಗಮನಕ್ಕೆ ತರತಕ್ಕದ್ದು.
ಗ್ರಂಥಾಲಯದ ಪುಸ್ತಕಗಳ ಮೇಲೆ ಯಾವುದೇ ರೀತಿಯ ಗುರುತುಗಳನ್ನಾಗಲಿ, ಇನ್ನಿತರ ಯಾವುದೇ ಹಾನಿಯನ್ನು ಮಾಡುವಂತಿಲ್ಲ. ಯಾವುದೇ ಹಾನಿ ಮಾಡಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.
ಎರವಲು ಪಡೆದ ಪುಸ್ತಕವನ್ನು ಕಳೆದರೆ ಅಥವಾ ಹಾಳು ಮಾಡಿದರೆ ಪುಸ್ತಕದ ಬೆಲೆಯ ಎರಡು ಪಟ್ಟು ಪಾವತಿಸಬೇಕಾಗುತ್ತದೆ.
ವೃತ್ತಪತ್ರಿಕೆಗಳನ್ನು (NEWS PAPERS) ಗ್ರಂಥಾಲಯದಲ್ಲಿ ಮಾತ್ರ ಓದಬೇಕು, ರೀಡಿಂಗ್ ರೂಮ್ ಗೆ ತೆಗೆದುಕೊಂಡು ಹೋಗಬಾರದು.
ಗ್ರಂಥಾಲಯ ಸದಸ್ಯತ್ವ ಕಾರ್ಡ್ನ್ನು ಯಾವುದೇ ಕಾರಣಕ್ಕೂ ವರ್ಗಾಹಿಸುವಂತಿಲ್ಲ.
ಗ್ರಂಥಾಲಯದಲ್ಲಿ ಬೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಮತ್ತು ವೈಯಕ್ತಿಕ ಪುಸ್ತಕಗಳನ್ನು ಗ್ರಂಥಾಲಯದ ಒಳಗಡೆ ತೆಗೆದುಕೊಂಡು ಹೋಗುವುದನ್ನು ನಿರ್ಭಂಧಿಸಲಾಗಿದೆ.
ವಿದ್ಯಾರ್ಥಿಗಳು ಕೇವಲ ನೋಟ ಪುಸ್ತಕ ಅಥವಾ ಬಿಳಿ ಹಾಳೆಗಳನ್ನು ಮಾತ್ರ ಗ್ರಂಥಾಲಯದೊಳಗೆ ತೆಗೆದುಕೊಂಡು ಹೋಗಬಹುದು.
ಗ್ರಂಥಾಲಯದಲ್ಲಿ ಶಾಂತತೆ ಕಾಪಾಡುವುದು ಕಡ್ಡಾಯವಾಗಿದೆ. ಒಂದುವೇಳೆ ಶಾಂತತೆಗೆ ಭಂಗ ಬರುವಂತೆ ವರ್ತಿಸಿದರೆ ಅಂತಹ ವಿದ್ಯಾರ್ಥಿಗೆ ಗ್ರಂಥಾಲಯ ಪ್ರವೇಶವನ್ನು ನಿಷೇಧಿಸಲಾಗುತ್ತದೆ.
ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದ ಕೊನೆಯಲ್ಲಿ/ಅನಿವಾರ್ಯ ಕಾರಣಗಳಿಂದ ಮಧ್ಯದಲ್ಲಿ ಕಾಲೇಜು ಬಿಟ್ಟಲ್ಲಿ ಕಡ್ಡಾಯವಾಗಿ ಗ್ರಂಥಾಲಯದ ಸದಸ್ಯತ್ವ ಕಾರ್ಡನ್ನು ಹಿಂತಿರುಗಿಸಿ ಗ್ರಂಥಾಲಯದಿಂದ ಬೇ-ಬಾಕಿ ಪ್ರಮಾಣ ಪತ್ರವನ್ನು (No-Due Certificate) ಪಡೆಯತಕ್ಕದ್ದು.
ಪುಸ್ತಕಗಳನ್ನು ವಿವಿಧ ವರ್ಗಗಳಿಗೆ ಕೊಡುವ ವಾರದ (ದಿನಗಳ) ವಿವರಗಳು
Class Day Time
B.A. V Sem. Monday 10.30 am to 4.30 pm
B.Com V Sem. Tuesday 10.30 am to 4.30 pm
B.A. III Sem. Wednesday 10.30 am to 4.30 pm
B.Com III Sem. Thursday 10.30 am to 4.30 pm
B.A. I Sem. Friday 10.30 am to 4.30 pm
B.Com I Sem. Saturday 10.30 am to 2.00 pm