Dear Richmond Kannadigas,

We are excited to invite you and your family members to participate in RKS  Deepavali and  Kannada Rajyotsava 2024 celebrations. We look forward to your support in making it yet another grand successful event for Richmond Kannada community.


ಆತ್ಮೀಯ ರಿಚ್ಮಂಡ್ ಕನ್ನಡಿಗರೇ ,

ಪ್ರೀತಿಯ ದೀಪವ ಬೆಳಗಿಸುವ,

ಕನ್ನಡ ಬಾವುಟವ ಹಾರಿಸುವ,

RKS ಪತಾಕೆಯ ಮತ್ತೊಮ್ಮೆ ಏರಿಸುವ,

ಅಕ್ಕ ಸಮ್ಮೇಳನದ ಸವಿ ನೆನಪ ಸ್ಮರಿಸುವ,

ಬನ್ನಿ ಕನ್ನಡಾಭಿಮಾನಿಗಳೇ ಬನ್ನಿ,

ನಮ್ಮ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಹಬ್ಬವ ಸಂಭ್ರಮದಿ ಆಚರಿಸುವ.

ಸ್ನೇಹಿತರೆ, ನಮ್ಮ RKS  ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಈ ಮೂಲಕ ಆಹ್ವಾನಿಸಲು ನಮಗೆಲ್ಲ ಅತ್ಯಂತ ಸಂತಸವಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಆತ್ಮೀಯತೆ, ಸಡಗರಗಳಿಂದ, RKS ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮದಲ್ಲಿ ಒಟ್ಟಾಗಿ ಸೇರಿ ರುಚಿಯಾದ ಭೋಜನ, ಸೊಗಸಾದ ಕಾರ್ಯಕ್ರಮಗಳು ಹಾಗೂ ಸ್ನೇಹ-ಮಿಲನಗಳಿಂದ ಸವಿನೆನಪಿನ ಕ್ಷಣಗಳನ್ನು ಸೃಷ್ಟಿಸೋಣ. ಖಂಡಿತ ಬರುತ್ತೀರಲ್ಲಾ?