ಇಲ್ಲ: ಧ್ಯಾನವು ಒಂದು ಕ್ರಿಯಾವಿಧಾನ, ಬೌದ್ಧಿಕ ಚಿಂತನೆ, ರಜಾ ಅಥವಾ ಜೀವನದ ಸಮಸ್ಯೆಗಳಿಂದ ಪಲಾಯನವಲ್ಲ.
ಹೌದು: ದುಃಖವನ್ನು ಮುಕ್ತಗೊಳಿಸುವ, ಮನಸ್ಸನ್ನು ಶುದ್ಧೀಕರಿಸುವ, ಸಮತೋಲನಯುತ ಮತ್ತು ಸಂತೋಷಕರ ಜೀವನವನ್ನು ನಡೆಸುವ ಉಪಾಯ.
ಇದು ಸ್ವಂತೊಳಗಿನ ತೃಷ್ಟಿ, ದ್ವೇಷ, ಮತ್ತು ಅಜ್ಞಾನವನ್ನು ನಿವಾರಿಸಲು ಯತ್ನಿಸುತ್ತದೆ.
ಎಲ್ಲಾ ಧರ್ಮದ ವ್ಯಕ್ತಿಗಳಿಗೆ ಧ್ಯಾನ ಅಭ್ಯಾಸ ಮಾಡಲು ಅವಕಾಶವಿದೆ, ಧರ್ಮಾಂತರಣ ಉದ್ದೇಶವಿಲ್ಲ.
ಇದು ವೈದ್ಯಕೀಯ ಚಿಕಿತ್ಸೆ ಅಲ್ಲ ಮತ್ತು ಗಂಭೀರ ಮಾನಸಿಕ ಕಾಯಿಲೆ ಇರುವವರಿಗೆ ಸೂಕ್ತವಲ್ಲ.
ಪೂರ್ಣ ಲಾಭ ಪಡೆಯಲು, ಧ್ಯಾನಾರ್ಥಿಗಳು ಕಡ್ಡಾಯ ನಿಯಮಗಳನ್ನು ಅನುಸರಿಸಬೇಕು, ಇದರಿಂದ ಅಭ್ಯಾಸಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ:
ಶೀಲ (ನೈತಿಕ ಶಿಸ್ತು): ಹಿಂಸೆಯಿಂದ ದೂರವಿರಲು, ಕಳವು ಮಾಡದೆ ಇರಲು, ಲೈಂಗಿಕ ಕ್ರಿಯೆಗಳಿಂದ ದೂರವಿರಲು, ಸುಳ್ಳು ಮಾತು ಹೇಳದೆ ಇರಲು, ಹಾಗೂ ಮಾದಕ ಪದಾರ್ಥಗಳನ್ನು ತ್ಯಜಿಸಲು. ಈ ಶಿಷ್ಟುಗಳನ್ನ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ
ಸಮಾಧಿ (ಎಕಾಗ್ರತೆ): ಧ್ಯಾನದ ಮೂಲಕ ಮನಸ್ಸನ್ನು ಏಕಾಗ್ರಗೊಳಿಸುವುದು.
ಪ್ರಜ್ಞಾ (ಜ್ಞಾನ): ನೇರ ಅನುಭವದ ಮೂಲಕ ಜ್ಞಾನವನ್ನು ಅಭಿವೃದ್ಧಿಪಡಿಸುವುದು.
ಹೊಸ ವಿದ್ಯಾರ್ಥಿಗಳ ನಿಯಮಗಳು:
ಐದು ಶೀಲಗಳನ್ನು ಅನುಸರಿಸಬೇಕು.
1. ಪಾಣಾತಿಪಾತಾ ವೇರಮಣಿ ಸಿಕ್ಕಾಪದಂ ಸಮಾದಿಯಾಮಿ – ನಾನು ಯಾವುದೇ ಸಜೀವ ಪ್ರಾಣಿಯನ್ನು ಹಿಂಸಿಸದಿರಲು ಪ್ರತಿಜ್ಞೆ ಮಾಡುತ್ತೇನೆ.
2. ಅದಿನ್ನಾದಾನಾ ವೇರಮಣಿ ಸಿಕ್ಕಾಪದಂ ಸಮಾದಿಯಾಮಿ – ನಾನು ಕೊಳ್ಳೆ ಹೊಡೆಯದಿರಲು ಅಥವಾ ಏನನ್ನೂ ಕಳವು ಮಾಡದಿರಲು ಪ್ರತಿಜ್ಞೆ ಮಾಡುತ್ತೇನೆ.
3. ಕಾಮೆಸು ಮಿಚ್ಚಾಚಾರಾ ವೇರಮಣಿ ಸಿಕ್ಕಾಪದಂ ಸಮಾದಿಯಾಮಿ – ನಾನು ಲೈಂಗಿಕ ಅಸಭ್ಯ ವರ್ತನೆಯಿಂದ ದೂರವಿರಲು ಪ್ರತಿಜ್ಞೆ ಮಾಡುತ್ತೇನೆ.
4. ಮೂಸಾವಾದಾ ವೇರಮಣಿ ಸಿಕ್ಕಾಪದಂ ಸಮಾದಿಯಾಮಿ – ನಾನು ಸುಳ್ಳು ಹೇಳದಿರಲು ಅಥವಾ ವಂಚನೆಯ ಮಾತುಗಳನ್ನಾಡದಿರಲು ಪ್ರತಿಜ್ಞೆ ಮಾಡುತ್ತೇನೆ.
5. ಸುರಾದಿ ಮೆರಯ್ಯ ಮಜ್ಜಪಮಾದಟ್ಟಾನಾ ವೇರಮಣಿ ಸಿಕ್ಕಾಪದಂ ಸಮಾದಿಯಾಮಿ – ನಾನು ಮಾದಕ ವಸ್ತುಗಳ ಸೇವನೆ ಮತ್ತು ಮನಸ್ಸನ್ನು ಅಸ್ವಚ್ಛಗೊಳಿಸುವ ಪದಾರ್ಥಗಳಿಂದ ದೂರವಿರಲು ಪ್ರತಿಜ್ಞೆ ಮಾಡುತ್ತೇನೆ.
ಹಳೆಯ ವಿದ್ಯಾರ್ಥಿಗಳ (ಮುಂಚೆ ಧ್ಯಾನಕ್ಕೆ ಬಂದಿರುವವರು) ನಿಯಮಗಳು:
ಮೇಲಿನ ಐದು ಶೀಲಗಳ ಜೊತೆ
ಮಧ್ಯಾಹ್ನದ ನಂತರ ಊಟ ಸೇವನೆ ತಪ್ಪಿಸಬೇಕು ಬದಲಿಗೆ, ಜ್ಯೂಸು ಸೇವಿಸಬಹುದು (ಕಡ್ಡಾಯವಲ್ಲ, ಆದರೆ ಶಿಫಾರಸು).
ಕಾಮಾನುಭವ ಹಾಗೂ ಐಷಾರಾಮಿ ವಸ್ತುಗಳ ಬಳಕೆಯನ್ನು ತ್ಯಜಿಸಬೇಕು.
ಆರ್ಯ ಮೌನ ಪಾಲನೆ:
ಅನಾವಶ್ಯಕ ಮಾತುಕತೆ ಬೇಡ, ಅಗತ್ಯ ಸಂದರ್ಭಗಳಲ್ಲಷ್ಟೇ ಗುರುಜಿ ಅಥವಾ ನಿರ್ವಹಣೆ ತಂಡದೊಂದಿಗೆ ಸಂವಹನ ಮಾಡಬಹುದು.
ಲಿಂಗ ವಿಭಜನೆ:
ಪುರುಷರು ಮತ್ತು ಮಹಿಳೆಯರು ಶಿಬಿರ ಅವಧಿಯಲ್ಲಿ ಸಂಪೂರ್ಣ ಪ್ರತ್ಯೇಕವಾಗಿರಬೇಕು.
ಯಾವುದೇ ಶಾರೀರಿಕ ಸ್ಪರ್ಶವಿಲ್ಲ:
ಇತರರನ್ನು ಸ್ಪರ್ಶಿಸಬಾರದು.
ಹೊರಗಿನ ವ್ಯತ್ಯಯಗಳಿಂದ ದೂರವಿರಿ:
ಪುಸ್ತಕ, ಸಂಗೀತ, ಬರವಣಿಗೆ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಬಾರದು.
(ಗಮನಿಸಿ: ಶಿಬಿರದ ಅವಧಿಯಲ್ಲಿ ಪ್ರಮುಖ ಅಂಶಗಳನ್ನು ಬರೆಯಲು ಹೊಸ ಮತ್ತು ಸಣ್ಣ ನೋಟು ಪುಸ್ತಕವನ್ನು ತರಬೇಕು)
ಸರಳ ಜೀವನ ಶೈಲಿ:
ಸರಳ ಮತ್ತು ಶಿಷ್ಟ ವಸ್ತ್ರ ಧರಿಸಬೇಕು (ಅತ್ಯಂತ ಲಘು, ಪಾರದರ್ಶಕ ಅಥವಾ ಹ್ರಸ್ವ (ಸಣ್ಣ) ಬಟ್ಟೆ ಬೇಡ).
ಶುದ್ಧ ಶಾಕಾಹಾರಿ ಆಹಾರ ಸೇವಿಸಬೇಕು.
ಧ್ಯಾನ ಕೇಂದ್ರದ ಪ್ರದೇಶದ ಮಿತಿಯೊಳಗೆ ಇರುವುದು ಕಡ್ಡಾಯ.
ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನವನ್ನು ಸಂಪೂರ್ಣವಾಗಿ ಅನುಸರಿಸಬೇಕು, ಯಾವುದೇ ಅಭ್ಯಾಸವನ್ನು ಸೇರಿಸಬಾರದು ಅಥವಾ ಕೈಬಿಡಬಾರದು.
ಧ್ಯಾನಾವಧಿಯಲ್ಲಿ ಬೇರೆ ವಿಧಾನಗಳು ಅಥವಾ ಕ್ರಿಯಾವಿಧಾನಗಳನ್ನು ಮಿಶ್ರಗೊಳಿಸಬಾರದು.
ಶಿಬಿರಗಳನ್ನು ಹಿಂದಿನ ವಿದ್ಯಾರ್ಥಿಗಳ ದಾನದಿಂದ ನಡೆಸಲಾಗುತ್ತದೆ, ಇದರಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲ.
ನೀವು ಬಯಸಿದರೆ ಶಿಬಿರದ ಕೊನೆಯ ದಿನದಂದು ದಾನ ನೀಡಬಹುದು.
ದಾನವನ್ನು ಕಚೇರಿಯಲ್ಲಿ ನೀಡಬಹುದು.
ಆನ್ಲೈನ್ UPI, ನಗದು, ಚೆಕ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ದಾನ ನೀಡಬಹುದು (80G ತೆರಿಗೆ ವಿನಾಯಿತಿಯ ಲಭ್ಯವಿದೆ).
ದಾನ ನೀಡಿದ ನಂತರ ರಸೀತಿ ಪಡೆಯಲು ಮರೆಯಬೇಡಿ.
ಧ್ಯಾನದಲ್ಲಿ ಯಶಸ್ಸು ಪಡೆಯಲು ಶಿಸ್ತು, ಪರಿಶ್ರಮ, ಸಹನೆ ಮತ್ತು ನಿಯಮ ಪಾಲನೆ ಅಗತ್ಯ.
ಏಕಾಗ್ರತೆಯಿಂದ ಧ್ಯಾನ ಮಾಡಿ, ಅಲಸತೆಯಿಂದ ದೂರವಿರಿ, ಮತ್ತು ಪ್ರಕ್ರಿಯೆಯ ಮೇಲೆ ವಿಶ್ವಾಸ ಇಟ್ಟು ಮನಸ್ಸನ್ನು ಶುದ್ಧೀಕರಿಸಿ, ಶಾಂತಿಯನ್ನು ಅನುಭವಿಸಿ.
ಎಲ್ಲಾ ಜೀವಿಗಳು ಸಂತೋಷದಿಂದ ಮತ್ತು ಚೆನ್ನಾಗಿರಲಿ.