in Kannada
ಉಡುಪಿಯ ಕೃಷ್ಣನ ಆಸುಪಾಸುಗಳಲ್ಲಿ ನಾಲ್ಕು ದುರ್ಗಾಲಯಗಳಿವೆ. ಒಂದು: ಕಡಿಯಾಳಿಯ ಮಹಿಷಮರ್ದಿನಿಯ ಗುಡಿ, ಎರಡು: ಬ್ಯೆಲೂರಿನ ಮಹಿಷಾಸುರ ಮರ್ದಿನಿ ಯ ಗುಡಿ, ಮೂರು: ಕನ್ನರ್ಪಾಡಿಯ ಜಯದುರ್ಗೆಯ ಗುಡಿ, ನಾಲ್ಕು: ಪುತ್ತೂರಿನ ಲಿಂಗರೂಪಿ ದುರ್ಗೆಯ ಗುಡಿ. ಈ ದೇವಾಲಯಗಳಲ್ಲಿ ಕಡಿಯಾಳಿಯ ದೇವಾಲಯ ಅತ್ಯಂತ ಪುರಾತನವಾದ ಇತಿಹಾಸವನ್ನು ಪಡೆದಿದೆ. ಆ ದೇವಾಲಯದ ಮೂರ್ತಿ ಮತ್ತು ವಾಸ್ತು ಶಿಲ್ಪವನ್ನು ಪರಿಶೀಲಿಸಿದಾಗಲೂ ಈ ಸಂಗತಿ ವೇದ್ಯವಾಗುತ್ತದೆ.
ಕಡಿಯಾಳಿಯ ಮಹಿಷಮರ್ದಿನಿಯ ವಿಗ್ರಹಕ್ಕೆ ಸುಮಾರಾಗಿ ಹೊಲುವ ಇನ್ನೊಂದು ವಿಗ್ರಹದ ಮಾದರಿಯನ್ನು ನಾವು ಪೊಳಲಿಯ ಹೊರ ಪೌಳಿಯಲ್ಲಿರುವ ದುರ್ಗಾವಿಗ್ರಹದಲ್ಲಿ ಕಾಣಬಹುದು. ಇದೂ ಇದರ ಪ್ರಾಚೀನತೆಗೆ ಇನ್ನೊಂದು ಸಾಕ್ಷಿ ಎನ್ನಬಹುದು.
ಸುಮಾರು ೩೦ ಇಂಚು ಎತ್ತರದ ಈ ವಿಗ್ರಹದ ಮುಖದಲ್ಲಿ ಪ್ರಸನ್ನತೆಯ, ವಿಜಯದ ಮಂದಹಾಸವಿದೆ. ಮೇಲಿನ ಎರಡು ಕೈಗಳಲ್ಲಿ ಚಕ್ರ-ಶಂಖ, ಕೆಳಗಿನ ಬಲಗೈಯಲ್ಲಿ ತ್ರಿಶೂಲ, ಅದರ ತುದಿಯ ಚೂಪು ಮೇಲುಮುಖವಾಗಿ ತಲೆಯ ಎತ್ತರಕ್ಕೆ ಸಮನಾಗಿ ನೇರವಾಗಿದ್ದು ಶಿಲ್ಪದ ಒತ್ತಿಂದಕ್ಕೆ ಒಂದು ಸವಂತೋಲವನ್ನು ತಂದಿದೆ. ಶೂಲದ ಕೆಳಬದಿ ದೇವಿಯ ಕಾಲಬುಡದಲ್ಲಿ ಸತ್ತುಬಿದ್ದಿರಿವ ಮಹಿಷನ ತಲೆಯನ್ನು ಒತ್ತಿ ಹಿದಿದಿದೆ. ಹಿಮ್ಗಾಲು ಎತ್ತಿ ಮುಗ್ಗರಿಸಿ ಬಿದ್ದ ಮಹಿಶನ ಬಾಲ ದೇವಿಯ ಎಡಗೈಯಲ್ಲಿದೆ.
ಇಲ್ಲಿ ಮಹಿಷಾಸುರನೂ ರಾಕ್ಶಸನ ಆಕಾರದಲ್ಲಿರದೆ ಸಹಜವಾದ ಕೋಣನಂತೆಯೇ ಆಅತಿಯನ್ನು ಆಕೃತಿಯನ್ನು ಚಿತ್ರಿಸಲಾಗಿದೆ. ಮಹಿಷ ನಮ್ಮ ಅಜ್ಞ್ನಾನ , ಆಲಸ್ಯ ಮಾಂದ್ಯಗಳ ಸಂಕೇತವಾದರೆ ದೇವಿ ಜ್ಞ್ನಾನಶಕ್ತಿಯ ಪ್ರತೀಕ, ತ್ರಿಶೂಲದ ಮೂರು ಮೊನೆಗಳೇ ಜ್ಞ್ನಾನಶಕ್ತಿ, ಇಚ್ಚಾಶಕ್ತಿ, ಕ್ತಿಯಾಶಕ್ತಿಗಳು. ಬಲಗೈಯ ಚಕ್ರವೇ ಸೃಷ್ತಿ ಚಕ್ರವೂ ಹೌದು, ಧರ್ಮ ಚಕ್ರವೂ ಹೌದು. ಶಂಖ ಸಂಪತ್ತಿನ ಸಮೃದ್ದಿಯ ಪ್ರತೀಕವೂ ಹೌದು; ಓಂಕಾರದ ನಾದದ ಪ್ರತೀಕವೂ ಹೌದು. ಶಂಖ ಸಂಪತ್ತಿನ ಸಮೃದ್ದಿಯ ಪ್ರತೀಕವೂ ಹೌದು.
ನಿಂತ ಬಂಗಿ, ಮುಖದ ಚಹರೆ, ಆಯುಧಗಳನ್ನು ಹಿಡಿದ ಭಾತಿಯಲ್ಲಿ ಕಾಣುವ ಅನಾಶಕ್ತಿ ಇವುಗಳಿಂದ ದೇವಿಗೆ ಇಂಥ ಶತ್ರುನಿಗ್ರಹ ಒಂದು ಲೀಲಾವಿನೋದ ಎನ್ನುವ ಭಾವವನ್ನು ದ್ವನಿಸುವ ಅಪೂರ್ವ ಶಕ್ತಿ ಈ ಶಿಲ್ಪಕ್ಕೆ ಬಂದಿದೆ ಎಂತಲೇ ಇದೊಂದು ಅಪೂರ್ವ ಶಿಲ್ಪ.
ಪೋಳಲಿಯ ವಿಗ್ರಹವೂ ಈ ಎಲ್ಲ ಲಕ್ಷಣ ಗಳನ್ನೂ ಸುಮಾರಾಗಿ ಒಳಗೊಂಡಿದೆ. ಈಷ್ಟೇ ವ್ಯತ್ಯಾಸ: ಪೋಳಲಿಯ ವಿಗ್ರಹದ ತುಂಬ ಅಭರಣಗಳ ಸಮೋಜನೆಯಿದ್ದರೆ ಕಡಿಯಾಳಿಯ ದುರ್ಗೆ ನಿರಾಭರಣ ಸುಂದರಿ. ಕಿರೀಟ, ಕುಂಡಲ, ಕೋರಳಲ್ಲಿ ಒಂದು ಹಾರ, ಸೊಂಟದಲ್ಲಿ ಒಂದು ಉಡ್ಯಾಣ ಏಷ್ಠೋ ಅಷ್ಠೇ. ಸ್ತ್ರೀಯರಿಗೆ ಅನಿವಾರ್ಯವಾದ ಆಭರಣವನ್ನಷ್ಟೇ ಮತ್ತು ದೇವತ್ವದ ಪ್ರತೀಕವಾದ ಕಿರೀಟ ತೊಟ್ಟು ಯುದ್ಧಕ್ಕೆ ನಿಂತ, ಯುದ್ಧದಲ್ಲಿ ಶತ್ರುವನ್ನು ಗೆದ್ದ ದಿಟ್ಟ ನಿಲುವು. ಹಿಂದುಗಡೆ ಪ್ರಭಾವಳಿಯೂ ಇಲ್ಲ. ಇದರಿಂದ ಪೋಳಲಿಯ ವಿಗ್ರಹಕ್ಕೆ ಇದಕ್ಕೆ ಸ್ವಲ್ಪ ಕಾಲದ ಅಂತರವಿದ್ದರೂ ಎರಡೂ ಅತ್ಯಂತ ಪ್ರಾಚೀನ ವಿಗ್ರಹಗಳು ಏನುವುದಕ್ಕೆ ಸಂದೇಹವಿಲ್ಲ. ಸಂಶೋಧಕರು ಇದನ್ನು ಒಂದು ಸಾವಿರ ವರ್ಷಗಳಿಂದಲೂ ಪ್ರಾಚೀನ ಎಂದು ಹೇಳುತ್ತಾರೆ. ಇದರ ಇತಿಹಾಸ ಅಥವಾ ಐತಿಹ್ಯಗಳನ್ನು ಪರಿಶೀಲಿಸಿದರೆ ಇನ್ನೂ ಒಂದು ಸಾವಿರ ವರ್ಷಗಳಷ್ಟು ಪ್ರಾಚೀನವಿದ್ದರೂ ಇದ್ದೀತು ಎನ್ನಿಸುತ್ತದೆ.
ಕುಡುಹಳ್ಳಿ ಎಂದೊ, ಕಡೆಯ ಹಳ್ಳಿ ಎಂದೊ ಇದದ್ದು ಕಡಿಯಾಳಿ ಎಂದಾಗಿರಬೇಕು ಎಂದು ಹೇಳುತ್ತಾರೆ. ಕಡೆಯ ಹಳ್ಳಿ ಎನ್ನುವ ನಿಷ್ಟತ್ತಿ ಹೆಚ್ಚು ಅರ್ಥವತ್ತಾಗಿ ಕಾಣುತ್ತದೆ. ಕಡಿಯಾಳಿಯಿಂದ ಉತ್ತರಕ್ಕೆ ಕಲ್ಯಾಣಪುರದಿಂದ ದಕ್ಷಿಣಕ್ಕೆ ಚಾಚಿಕೊಂಡಿರುವ ಭೂಭಾಗದಲ್ಲಿ ಶಿವಳ್ಳಿಯವರು ಮೂಲತಃ ನೆಲಸಿದ್ದಿರುವರು. ಪರಂಪಳ್ಳಿಯೇ ಶಿವಳ್ಳಿಯ ಪ್ರಾಚೀನ ಗ್ರಾಮವಾಗಿತ್ತು ಎಂದು ಕಾಣುತ್ತದೆ. ಅಲ್ಲಿಂದ ದಕ್ಷಿಣಕ್ಕೆ ಕಡಿಯಾಳಿಯ ತನಕ ಕ್ರಮಶಃ ವಾಸ್ತವ್ಯ ಬೆಳೆಯಿತು. ಈ ಬೆಳಬೆಳೆದು ಬಂದ ಕಥೆಯಿರಬೇಕು ಮೂಲತಃ ಇದ್ದದ್ದು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ನಾಗಾಲಗಳಲ್ಲಿ; ಪಾಣಿಪೀಠದ ನಾಲ್ಕು ಬದಿಗಳಲ್ಲಿ ನಾಲ್ಕು ನಾಗ ಪ್ರತಿಮೆಗಳು.
ಇದೇ ಸಮಯದಲ್ಲಿ ಅವನು ತನ್ನ ಯಾಗಭೂಮಿಯ ನಾಲ್ಕೂ ಕಡೆಗಳಲ್ಲಿ ನಾಲ್ಕು ದುರ್ಗಾಲಯಗಳನ್ನೂ ಕಟ್ಟಿಸಿದನಂತೆ. ಆದರಲ್ಲಿ ಈ ಕಡಿಯಾಳಿಯ ಗುಡಿಯೂ ಒಂದು. (ಉಳಿದ ಮೂರು ದೇವಾಲಯಗಳ ಹೆಸರು ಈ ಲೇಖನದ ಆರಂಭದಲ್ಲಿ ಬಂದಿದೆ). ಇದು ಕಿವಿಯಿಂದ ಕಿವಿಗೆ ಹರಿದು ಒಂದು ಗ್ರಾಮಪದ್ಧತಿಯಲ್ಲಿ ಧಾಕಲೆಗೊಂಡ ಐತಿಹ್ಯ. ಇದರಲ್ಲಿ ಎಷ್ಟು ಪಾಲು ಇತಿಹಾಸ ಮತ್ತು ಎಷ್ಟು ಪಾಲು ಕಲ್ಪಕತೆ ಬೆರೆತಿದೆ ಎಂದು ನಿರ್ಧರಿಸುವುದು ಕಷ್ಟದ ಕೆಲಸ.
ಯಾವ ಗ್ರಾಂಥಿಕ ಆದಾರವೂ ಇಲ್ಲದ ಕಿವಿಯಿಂದ ಕಿವಿಗೆ ಬಂದ ಇನ್ನೊಂದು ಐತಿಹ್ಯದಂತೆ ಈ ವಿಗ್ರಹವನ್ನು ಪ್ರತಿಷ್ಠೆ ಮಾಡಿದವರು ಕಣ್ವರು ಮುನಿಗಳು. ಕಣ್ವರು ದಕ್ಷಿಣ ಭಾರತದ ಈ ಸಾಗರ ತೀರಕ್ಕೆ ಬಂದಿದ್ದರು ಎನ್ನುವುದಕ್ಕೆ ಮಹಾಭಾರತದಲ್ಲಿ ಸೂಚನೆಗಳುಂಟು. ಆದರೆ ಯಾವ ಐತಿಹ್ಯದ ಬಗ್ಗೆಯೂ ಕರಾರುವಾಕ್ಕಾಗಿ ಹೇಳುವಂತಿಲ್ಲ, ಒಟ್ಟಿನಲ್ಲಿ ಈ ಯಾವ ಐತಿಹ್ಯವನ್ನು ನೋಡೆದರೂ ಈ ವಿಗ್ರಹ ಎರಡು ಸಾವಿರ ವರ್ಷಗಳಿಗಿಂತ ಈಚಿನದಲ್ಲ ಎಂಬ ಮಾತು ಸ್ಪಷ್ಟವಾಗುತ್ತದೆ. ದೇವಾಲಯದ ವಾಸ್ತುಶಿಲ್ಪವೂ ಈ ಮಾತನ್ನೇ ಸಮರ್ಥಿಸುವಂತಿದೆ.
ಸುಮಾರು ಎಂಟು ಗಜ ಚಚ್ಚೋಕದ ಗರ್ಭಗೃಹ ಒಳಗಡೆ ಮೂರಡಿ ಅಗಲದ ಒಂದು ಪೌಳಿ, ಹೊರಗೋಡೆಯ, ಪುಟ್ಟ ಬೆಳಕಿಂಡಿಗಳಿಂದ ಮಾತ್ರವೇ ಇದಕ್ಕೆ ಬೆಳಕು ಹರಿಯುತ್ತದೆ. ಇದರ ಒಳಗಡೆ ಹಾಸುಗಳು ನಿಲ್ಲಿಸಿ ಮಾಡಿದ ಗೋಡೆಗಳಾಚೆ ಇನ್ನೊಂದು ಕತ್ತಲೆ ಪೌಳಿ ಇದೆ. ಇದಕ್ಕೆ ಒಳಗೆ ವಿಗ್ರಹದ ಪಾಣಿಪೀಠವಿರುವ ಅಂತರಂಗದ ಗರ್ಭಗೃಹ ಈ ರೀತಿಯ ವಾಸ್ತು ಆಗಮಗಳಲ್ಲಿ ಬಂದಿದೆ.
ವಣಿಗೆಯ ಒಂದು ಹಂತದಲ್ಲಿ ಕಡಿಯಾಳಿ ಕಡೇಯ ಹಳ್ಳಿಯಾಗಿದ್ದಿರಬೇಕು. ಅನಂತರ ಇಲ್ಲಿಂದ ಈಶಾನ್ಯದಲ್ಲಿ, ಪೇರಂಪಳ್ಳಿಯ ಪಶ್ಚಿಮ ಭಾಗದಲ್ಲಿ ಒಂದು ಹೊಸತು ಊರಾಯಿತು. ಈ ಊರೇ ಪುಸತ್ + ಊರು = ಪುಸ್ತೂರು = ಪುತ್ತೂರಾಯಿತು ಎಂದು ಊಹಿಸುವುದಕ್ಕೆ ಎಡೆಯಿದೆ.
ಊರಿನ ಹೆಸರು ಹೇಗೆಯೇ ಬಂದಿರಲಿ, ನಮಗೆ ಅದು ಮುಖ್ಯವಲ್ಲ. ಕಡಿಯಾಳಿಯಲ್ಲಿ ಈ ಮಹಿಷಮರ್ದಿನಿ ಹೇಗೆ ಬಂದು ನಿಂತಳು ಅನ್ನುವುದು ನಮಗೆ ಮುಖ್ಯ. ಇದರ ಸ್ಥಳ ಪುರಾಣ ಏನು ಹೇಳುತ್ತದೆ? ಐತಿಹ್ಯ ಏನು ಹೇಳುತ್ತದೆ? ಇತಿಹಾಸದ ಪುಟಗಳಲ್ಲಿ ಇದರ ಬಗ್ಗೆ ಏನಾದರೂ ಸುಳುವು ಸಿಗುತ್ತದೆಯೇ ಎನ್ನುವುದು ಗಮನಿಸಬೇಕಾದ ಸಂಗತಿ.
ತುಳುನಾಡಿನ ಕರ್ಣಾ ಕರ್ಣೇಶಿಯ ಇತಿಹಾಸವನ್ನು ಹಿಂದೆ ಯಾರೋ ಬರೆದಿಟ್ಟಿದ್ದು "ಗ್ರಾಮ ಪದ್ದತಿ" ಎನ್ನುವ ಹೆಸರಿನಿಂದ ಅದು ಇಂದಿಗೂ ಪ್ರಚಾರವಿದೆ. ಇದು ಇನ್ನೂ ಪ್ರಕಟವಾಗದಿದ್ದರೂ ತಾಳೆಗರಿಯ ರೂಪದಲ್ಲಿ, ಹಸ್ತ ಪ್ರತಿಯ ರೂಪದಲ್ಲಿ ಅಲ್ಲಲ್ಲಿ ಇದೆ. ಈ ಗ್ರಂಥ ವೇದವ್ಯಾಸರು ಬರೆದ ಸ್ಕಾಂದ ಪುರಾಣದ ಒಂದು ಭಾಗ ಎಂದು ನಂಬಿದವರು ಉಂಟು.
ತುಳುನಾಡಿನ ಕರ್ಣಾ ಕಣಿಕೆಯ ಇತಿಹಾಸವನ್ನು ಹಿಂದೆ ಯಾರೋ ಬರೆದಿಟ್ಟಿದ್ದು “ಗ್ರಾಮ ಪದ್ಧತಿ" ಎನ್ನುವ ಹೆಸರಿನಿಂದ ಅದು ಇಂದಿಗೂ ಪ್ರಚಾರವಿದೆ. ಇದು ಇನ್ನೂ ಪ್ರಕಟವಾಗದಿದ್ದರೂ ತಾಳೆ ಗರಿಯ ರೂಪದಲ್ಲಿ, ಹಸ್ತ ಪ್ರತಿಯ ರೂಪದಲ್ಲಿ ಅಲ್ಲಲ್ಲಿ ಇದೆ. ಈ ಗ್ರಂಥ ವೇದವ್ಯಾಸರು ಬರೆದ ಸ್ಕಾಂದ ಪುರಾಣದ ಒಂದು ಭಾಗ ಎಂದು ನಂಬಿದವರೂ ಉಂಟು. ವಾಸ್ತವವಾಗಿ ಇದು ಸ್ಕಾಂದಪುರಾಣದ ಮೂಲದಲ್ಲಿ ಸೇರಿಲ್ಲವಾದರೂ ಈ ನಂಬಿಕೆ ಇದರ ಪ್ರಾಚೀನತೆಗೆ ಒಂದು ಸಾಕ್ಷಿ, ಕನಿಷ್ಠ ಮೂರು ಶತಮಾನಗಳಷ್ಟು ಹಿಂದೆ ಈ ಗ್ರಂಥದ ನಿರ್ಮಾಣವಾಗಿರಬೇಕು. ಪುರಾಣದ ಧಾಟಿಯಲ್ಲೇ “ಸೂತ ಉವಾಚ"ದ ಪರಿಭಾಷೆಯಲ್ಲಿ ಇದನ್ನು ಬರೆಯಲಾಗಿದೆ. ಈ ಗ್ರಂಥ ಕಡಿಯಾಳಿಯ ಬಗ್ಗೆ ಹೀಗೆ ಹೇಳುತ್ತದೆ.
ಹಿಂದೆ ತಾಳಮಮಂಡಳದ ರಾಜನಾಗಿದ್ದ ರಾಮಭೋಜ ಸಂತಾನವಾಗಬೇಕೆಂದು ಪುತ್ರಕಾಮೇಷ್ಟಿ ಮಾಡಿದ. ಅದಕ್ಕಾಗಿ ಯಾಗೆಭೂಮಿಯನ್ನು ನೇಗಿಲಿನಿಂದ ಉಳುವಾಗ ಒಂದು ಸರ್ಪ ನೇಗಿಲಿಗೆ ಸಿಕ್ಕು ಸತ್ತುಹೋಯಿತು. ಈ ಸರ್ಪ ಪತ್ತೆಯ ಪ್ರಾಯಶ್ಚಿತ್ತಕ್ಕಾಗಿ ಅವನು ಬೆಳ್ಳಿಯ ಪೀಠದಲ್ಲಿ ಶೇಷಶಾಯಿಯಾದ ನಾರಾಯಣನ ವಿಶೇಷ ಸನ್ನಿಧಾನವುಳ್ಳ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದೆ. ಇದೇ ಈಗಣ ಅನಂತೇಶ್ವರ, ಪ್ರಾಚೀನ ದಾಖಲೆಗಳಂತೆ ಮಹಾದೇವರ ದೇವಾ ಲಯ, ಇಲ್ಲಿನ ಪಾಣಿಪೀಠದ ಬುಡದಲ್ಲಿ ನಾಲ್ಕೂ ಮೂಲೆಗಳಲ್ಲಿ ನಾಲ್ಕು ಸರ್ಪಗಳ ಚಿತ್ರವನ್ನು ಕೆತ್ತಿರುವದು ಈ ಐಡಿ ದ್ಯಕ್ಕೆ ಪೋಷಣೆ ಕೊಡುತ್ತದೆ. (ನಾಲ್ಕುದಿಕ್ಕುಗಳಲ್ಲಿ ನಾಲ್ಕು ನಾಗಾಲಯ ಪ್ರತಿಜ್ಞೆ ಮಾಡಿದ ಎನ್ನುವುದು ಅನಂತರ
ಚತುರಸ್ರಂ ಚಾಷ್ಟಕೋಣಂ
ವಿಮಾನ ಪರಿಕೀರ್ತಿತಮ್ |
ಸದ್ ವೃತ್ತಂ ಕಿಷ್ಟುಮಾತ್ರಂ
ಬಹಿರ್ವಾ ಚತುರಸ್ರಕಮಮ್ ||
(ತಂತ್ರಸಾರ ಸಂಗ್ರಹ)
ಸುಮಾರು ಗರ್ಭಗೃಹದ ಗೋಡೆಯ ಎತ್ತರದಷ್ಟೆ ಅಂತರದಲ್ಲಿ (ಹನ್ನೊಂದೂವರೆ ಅಡಿ) ಕಲ್ಲಿನ ಮಂಟಪ. ಮಂಟಪದ ಮೇಲುಗಡೆ ಮುಚ್ಚಿಕೆಯಲ್ಲಿ ಮರದ ಕೊನಯ ಅಷ್ಟಪಟ್ಟಿ ಮತ್ತು ಕಮಲದ ಮೊಗ್ಗೆ, ನಾಲ್ಕು ಕಂಬಗಳಲ್ಲಿ ಗರ್ಭಗೃಹಕ್ಕೆ ಮುಖಮಾಡಿ ವೇಣುಗೋಪಾಲ ಮತ್ತು ಗಣಪತಿ, ಪಕ್ಕಗಳಲ್ಲಿ ಕಲಾತ್ಮಕವಾದ ಭಂಗಿಯ ಆನೆ ಮತ್ತು ಸಿಂಹ; ದೇವಾಲಯದ ಪ್ರವೇಶದ್ವಾರಕ್ಕೆ ಮುಖಮಾಡಿ ಮುಖ್ಯಪ್ರಾಣ ಮತ್ತು ಗರುಡ; ಅದರ ಇಕ್ಕೆಲಗಳಲ್ಲಿ ಕಾಳಿಯ ಮಥನ ಕೃಷ್ಣ ಮತ್ತು ಗಜ.
ಗರ್ಭಗೃಹದ ಒಳಕ್ಕೆ ಪ್ರವೇಶಿಸಲು ಪ್ರತಿಮೆಯ ಆಯಕ್ಕೆ ತಕ್ಕುದಾದ ಸುಮಾರು 50 ಇಂಚು ಎತ್ತರದ ಅದರ ಅರ್ಧದಷ್ಟು ಅಗಲದ ಪ್ರವೇಶದ್ವಾರ, ಅಷ್ಟೇ ಪ್ರಮಾಣದ ಆನೆಕಲ್ಲು, ಇವಿಷ್ಟು ಈ ದೇವಾಲಯದ ವಾಸ್ತುವಿನ ಸ್ತೂಲ ರೂಪ. ಇತ್ತೀಚಿನ ಕೆಲವು ವರ್ಷಗಳಲ್ಲಿ ದೇವಾಲಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದರೂ ಮೂಲ ವಾಸ್ತುವನ್ನು ಕೆಡಿಸಲಾಗಿಲ್ಲ. ಈ ವಾಸ್ತು ಕಲೇಯೂ ಇದು ಬಹಳ ಪುರಾತನ ದೇವಾಲಯ ಎನ್ನುವುದನ್ನು ಸೂಚಿಸುತ್ತದೆ.
ಕುಂಜಿಬೆಟ್ಟು ಹಿಂದಿನ ಕಾಲದಲ್ಲಿ ಕುಂಜಂತ ಬೊಟ್ಟು, ಕುಂಜದ ಬೆಟ್ಟು, ಇಲ್ಲಿ ವಾಸವಾಗಿದ್ದವರು ಕುಂಜತ್ತಾಯ ಕುಲದವರು. ಇದು ಶ್ರೀ ಕೃಷ್ಣನಿಗೆ ಹೂ-ತುಳಸಿ ಬೆಳೆಸುವ ಕುಂಜ (ಹೂದೋಟ) ವಾಗಿತ್ತು ಎಂದು ಹೇಳುತ್ತಾರೆ. ಕುಂಜಿಬೆಟ್ಟು ಕುಂಜಿಬೆಟ್ಟು ಆದಾಗ ಕುಂಜತ್ತಾಯರು ಕುಂಜಿತ್ತಾಯರಾದರು. ಈ ಕುಂಜಿತ್ತಾಯರ ಕುಲದೇವತೆಯೇ ಕಡಿಯಾಳಿಯ ಈ ಮಹಿಷಮರ್ದಿನಿ.
ಶ್ರೀ ಕೃಷ್ಣ ಮಠಕ್ಕು ಈ ದೇವಾಲಯಕ್ಕು ಮೊದಲಿನಿಂದಲು ನಿಕಟವಾದ, ಅನ್ಯೋನ್ಯವಾದ ಸಂಬಂಧವಿತ್ತು. ಪರ್ಯಾಯ ಶ್ರೀ ಪಾದರು ತಾವು ಪರ್ಯಾಯ ಪೀಠವೇರುವ ಮುನ್ನ ಇಲ್ಲಿಗೆ ಬಂದು ತಾಯಿ ದುರ್ಗೆಯ ಬಳಿ ಪ್ರಾರ್ಥನೆ ಸಲ್ಲಿಸುವುದು ಅನೂಚಾನವಾಗಿ ನಡೆದು ಬಂದ ಸಂಪ್ರದಾಯ, ಪರ್ಯಾಯ ಕಾಲದ ಎರಡು ವರ್ಷಗಳಲ್ಲಿ ಪ್ರತಿ ಪರ್ಯಾಯ ಶ್ರೀಪಾದರೂ ಪ್ರತಿ ಶುಕ್ರವಾರದ ದಿನವೂ 12 ಸುವಾಸಿನಿಯರ ಸಮಾರಾಧನೆಯನ್ನು ಈ ದೇವಾಲಯದಲ್ಲಿ ನಡೆಸಿಕೊಂಡು ಬರುತ್ತಿರುವುದೂ ಇನ್ನೊಂದು ಮಹತ್ತ್ವದ ಸಂಗತಿ. ಹಿಂದೊಮ್ಮೆ ಸುಮಾರು ಮೂರು-ನಾಲ್ಕು ದಶಕಗಳ ಮೊದಲು ಆಗಣ ಪರ್ಯಾಯ ಶ್ರೀ ಪಾದರು ಐದು ವಾರಗಳ ಕಾಲ ಈ ಆರಾಧನೆಯ ಕಟ್ಟಳೆಯನ್ನು ನಿಲ್ಲಿಸಿದ್ದರು. ಅನಂತರ ಶ್ರೀ ಪಾದರಿಗೆ ಅದನ್ನು ಮುಂದುವರಿಸಿಕೊಂಡು ಬರುವಂತೆ ಸ್ವಪ್ನ ನಿರ್ದೇಶವಾಯಿತಂತೆ, ತಾಯಿಯ ಆದೇಶದಂತೆ ಮತ್ತೆ ಆರಂಭವಾದ ಆ ಪದ್ಧತಿ ಇಂದಿಗೂ ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿದೆ.
ಈಗ ಕೃಷ್ಣ ಮಠದ ರಾಜಾಂಗಣ ಇರುವ ಸ್ಥಳ ಮೊದಲು ಕುಂಜಿತ್ತಾಯ ಕುಲದವರಿಗೆ ಸೇರಿಸಂತೆ. ಅವರು ಅದನ್ನು ತಮ್ಮ ಭಕ್ತಿಯ ಕಾಣಿಕೆಯಾಗಿ ಶ್ರೀ ಕೃಷ್ಣ ಮಠಕ್ಕೆ ಬಿಟ್ಟು ಕೊಟ್ಟರು. ಈ ತ್ಯಾಗದ ಸವಿನೆನಪಿಗಾಗಿ ಪರ್ಯಾಯ ಮಠದ ಕಡೆಯಿಂದ ಕುಂಜಿತ್ತಾಯರ ಕುಲದೇವಿಗೆ ವಾರಕ್ಕೊಮ್ಮೆ ಆರಾಧನೆ ಮಾಡಿಸುವ ಸಂಪ್ರದಾಯ ಬಂತು ಎಂದು ಐತಿಹ್ಯ ಬಲ್ಲವರು ಹೇಳುತ್ತಾರೆ.
ವಿಜಯ ದಶಮಿಯ ದಿನ ಕೃಷ್ಣ ಮಠದಿಂದ ವಿಜಯ ಯಾತ್ರೆ ಹೊರಟು ಬಿರುದಾವಳಿಯೊಡನೆ ಕಡಿಯಾಳಿಯ ದೇವಿಯ ಸನ್ನಿಧಿಗೆ ಬಂದು ಇಲ್ಲಿಯೇ ದಶಮೀ ಪೂಜೆ ನಡೆಸಿ ಪ್ರಸಾದ ಪಡೆದು ಹಿಂತೆರಳುವ ಸಂಪ್ರದಾಯವೂ ಈ ದೇವಾಲಯದ ಮತ್ತು ಶ್ರೀ ಕೃಷ್ಣ ಮಠದ ನಡುವಣ ಅನನ್ಯ ಸಂಬಂಧದ ನಿಕಟತೆಯನ್ನು ಸ್ಪುಟಗೊಳಿಸುತ್ತದೆ.
ಉಡುಪಿಯ ಸೋದೇಮಠದ ಪರಂಪರೆಯಲ್ಲಿ ಮಹಾತಪಸ್ವಿಗಳೆಂದು ಪ್ರಖ್ಯಾತರಾದ ವೃಂದಾವನಾಚಾರ್ಯರಿಗೆ ಈ ದೇವಿ ಕನಸಿನಲ್ಲಿ ಉಣಿಸಿಕೊಂಡು ಅವರ ಮಠದ ಭಂಡಾರದಲ್ಲಿದ್ದ ಚಿನ್ನದ ಗುಂಡುಸರವನ್ನು ಕೇಳಿದ್ದಳಂತೆ. ಈ ಸರ ಈಗಲೂ ಆಕೆಯ ಕೊರಳನ್ನು ಅಲಂಕರಿಸುತ್ತಿದೆ. ನೆಲ್ಲಿಯ ಗಾತ್ರದ 79 ಚಿನ್ನದ ಗುಂಡುಗಳು; ತುಡಿಯಲ್ಲಿ ಭಾರೀ ಗಾತ್ರದ ಬಟ್ಟದ ಕಾಳು. ಇದೊಂದು ವಿಶಿಷ್ಟವಾದ ಸರ. ಹರಿಕೇಯಿಂದ ಬಂದ ಇಂಥ ಆಭರಣಗಳು ಈಗಲೂ ದೇವಿಯ ವಿಗ್ರಹವನ್ನು ಅಲಂಕರಿಸುತ್ತಿದೆ.
ಸುಮಾರು ಎರಡು ಶತಕಗಳ ಹಿಂದೆ ಶಾಂತ್ಯರು ಸುಬ್ರಾಯ ಉಪಾಧ್ಯಾಯರನ್ನು ಮೊದಲುಗೊಂಡು ಈ ದೇವಾಲಯದ ಅರ್ಚಕರ ಪೀಳಿಗೆ ದೊರಕುತ್ತದೆ. ಸುಬ್ರಾಯ ಉಪಾಧ್ಯಾಯರ ಅನಂತರ ಅವರ ಮಕ್ಕಳು ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಪದ್ಮನಾಭ ಉಪಾಧ್ಯಾಯರು ಪೂಜಾಧಿಕಾರವನ್ನು ವಹಿಸಿಕೊಂಡರು. ಹೀಗೆ ಈ ಮನತನಕ್ಕೆಂದು ಅನುಚಾನವಾಗಿ ಪೂಜೆಯ ಹಕ್ಕು ನಡೆದುಕೊಂಡು ಬಂದಿಗೆ.
ಸುಬ್ರಾಯ ಉಪಾಧ್ಯಾಯರ ಮಕ್ಕಳ ಪ್ರಯತ್ನದ ಫಲವಾಗಿಯೇ ದೇವಸ್ಥಾನಕ್ಕೆ ಸ್ವಲ್ಪ ಸ್ಥಿರ-ಆಸ್ತಿ ಇರುವಂತಾಯಿತು. ಇವರ ಕಾಲದಲ್ಲಿ ಇಲ್ಲಿ ರಥೋತ್ಸವದ ಕಾರ್ಯವೂ ಪ್ರಾರಂಭಗೊಂಡದ್ದು. ಈಗ್ಗೆ ಎಂಟು ದಶಕಗಳ ಹಿಂದೆ ಸರಿಯಾದ ಬೃಹತ್ ರಥವೊಂದನ್ನು ಕಟ್ಟಿಸಿ ಉತ್ಸವಕ್ಕೆ ಒಂದು ವ್ಯವಸ್ಥಿತ ರೂಪವನ್ನು ಕೊಡಲಾಯಿತು.
30ನೆಯ ದಶಕದ ತರುಣದಲ್ಲಿ ಕಡಿಯಾಳಿ ವೆಂಕಟಕೃಷ್ಣ ಉಪಾಧ್ಯಾಯರು ಮತ್ತು ಅವರ ಸಹೋದರರ ಪರಿಶ್ರಮದ ಫಲವಾಗಿ ದೇವಸ್ಥಾನ ಹಲವು ಸುಧಾರಣೆಗಳನ್ನು ಕಂಡಿತು. ಈ ಸಮಯದಲ್ಲಿ ದೇವಸ್ಥಾನದ ಮುಂಭಾಗದ ಉಪ್ಪರಿಗೆ ಮತ್ತು ಮಾಳಿಯ ನಿರ್ಮಾಣವಾಯಿತು, ಈ ಶತಕದ ಉತ್ತರಾರ್ಧದಲ್ಲಿ ದೇವಾಲಯ ವಿದ್ಯುತ್ತಿನ ಬೆಳಕು ಕಂಡಿತು; ಹೊಸ ಧ್ವಜಸ್ತಂಭವನ್ನು ಪಡೆಯಿತು. 72 ಅಡಿ ಎತ್ತರದ, ತಾಮ್ರ ಹೊದಿಸಿದ ಈ ಸ್ತಂಭ ಶಿಖರದಲ್ಲಿ ಬೆಳ್ಳಿಯ ಬೆಡಗಿನಿಂದ ಕಂಗೊಳಿಸುತ್ತಿದೆ. ಈ ಸಮಯದಲ್ಲಿ ಬೆಳ್ಳಿಯ ಪಾಣಿಪೀಠ ಮತ್ತು ಪ್ರಭಾ ವಳಿಯನೂ, ದೇವಿಗೆ ಅರ್ಪಿಸಲಾಯಿತು.
1968ರಲ್ಲಿ ಪುನಃ ಭಕ್ತರ ನೆರವಿನಿಂದ ದೇವಾಲಯದ ಒಳ ಅಂಗಳ ಶಿಲಾಮಯವಾಯಿತು. ಇದೇ ಸಂದರ್ಭ ದಲ್ಲಿ ಭಕ್ತರೊಬ್ಬರು ದೇವಿಯ ರಥಕ್ಕೆ ಹೊಸ ಗಾಲಿಗಳನ್ನು ಜೋಡಿಸಿ ಭದ್ರಗೊಳಿಸಿದರು. ಹೀಗೆ ಹಂತ ಹಂತವಾಗಿ ಉನ್ನತಿಯ ಪಥವನ್ನೇರಿ ಬೆಳೆದು ನಿಂತಿದ ಈ ದೇವಾಲಯ.
ಇತ್ತೀಚಿನ ದಿನಗಳಲ್ಲಂತು ಈ ದೇವಾಲಯ ಅಭೂತಪೂರ್ವವಾಗಿ ಬೆಳೆಯುತ್ತಿದೆ. ದಕ್ಷ ಆಡಳಿತ, ಪುಕರು ಸ್ವಚ್ಛತೆ, ಸೇವೆ-ಸಮಾರಂಭಗಳ ವ್ಯವಸ್ಥಿತತೆಯಿಂದಾಗಿ ದೇವಾಲಯದ ಭಕ್ತವರ್ಗದ, ಸಂದರ್ಶಕರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.
ಚಿನ್ನದ ಕಿಟ, 108 ತಳಿಯ ಚಿನ್ನದ ಸರ ಮುಂತಾದ ಹಲವು ಅಪೂರ್ವ ಆಭರಣಗಳು ದೇವಿಯ ವಿಗ್ರ ವನ್ನಲಂಕರಿಸಿದ್ದು ಈ ಹೊಸ ಆಡಳಿತದ ಅವದಿಯಲ್ಲೆ.
ಬೆಳ್ಳಿ ತೊಟ್ಟ ಗಣಪತಿ
ಮುಖ ಮಂಟಪದ ಕಂಬದಲ್ಲಿ ಕೊರೆದು ನಿಂತ ಗಣಪತಿ ಈಗ ಜಲಯ ಅಲಂಕಾರದ ಕೆತ್ತನೆಯಾಗಿ ಮಾತ್ರವ ಉಳಿದಿಲ್ಲ. ಹಿಂದಿನಿಂದಲೂ ದೇವಸ್ಥಾನದಲ್ಲಿ ಗಣಪತಿ ಪ್ರಾರ್ಥನೆಗೆ ಅವನೇ ಪ್ರತೀಕವಾಗಿದ್ದ. ಈಗಂತು ಭಕ್ತರೊಬ್ಬರು ಈ ಗಣಪತಿಗೆ ಬೆಳ್ಳಿಯ ಕವಚ ತೊಡಿಸಿ ಸುಂದರಗೊಳಿಸಿದ್ದಾರೆ. ಈಗ ಗಣಪತಿಯ ದೇವಿಯ ಜತೆಗೆ ಗುಡಿಯ ಪರಿವಾರ ದೇವತೆಯಾಗಿ ಸೇವೆ ಕೊಳ್ಳುತ್ತಿದ್ದಾನೆ, ದೇವಿಯಂತೆ ಗಣಪತಿಯ ಭಕ್ತ ವರ್ಗವನ್ನು ಆಕರ್ಷಿಸುತ್ತಿದ್ದಾನೆ.
ದೇವಿಯ ಗರ್ಭಗೃಹದ ದ್ವಾರದಲ್ಲಿ ಹಳೆಯ ಮರದ ದ್ವಾರಪಾಲಿಕೆಯರ ಬದಲಾಗಿ ಹೊಸ ಶಿಲಾಮಯ ದ್ವಾರ ಪಾಲಿಕೆಯರು ಬಂದಿದ್ದಾರೆ. ಮುಖಮಂಟಪದಲ್ಲಿ ದೇವಿಯ ವಾಹನ ಶಿಲಾಮಯವೂ ಕಲಾಮಯವೂ ಅದ ಸಂಘ ಒಳ ಹೊಕ್ಕೊಡನೆ ದರ್ಶಕರ ಗಮನ ಸೆಳೆಯುತ್ತದೆ. ಇವೆಲ್ಲ ಪ್ರಸಿದ್ಧ ಶಿಲ್ಪಿ ರಂಜಾಳ ಶೆಣೈ ಅವರ ಕಲಾಕೃತಿಗಳು.
ಇತ್ತೀಚಿಗೆ ಸಂಭ್ರಮದಲ್ಲಿ ನಡೆದ ಶತ ಚಂಡಿಕಾಯಾಗ ಮತ್ತು ಬ್ರಹ್ಮ ಕಲಶಗಳಿಂದ ಸನ್ನಿಧಿ ಇನ್ನಷ್ಟು ಕಳೆಗೊಂಡಂತಾಗಿದೆ. ಜತೆಗೆ ದೇವಾಲಯದ ಪಕ್ಕದಲ್ಲಿರುವ ನಂದಿಗುಡಿ-ಹೊರಪೌಳಿಯ ಹಿಂಬದಿಯಲ್ಲಿರುವ ನಾಗನ ಗುಡಿ: ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ದೇವಸ್ಥಾನದ ಆಡಳಿತಕ್ಕೊಳಪಟ್ಟಿರುವ ವ್ಯಾಘ್ರ ಚಾಮುಂಡಿ (ಪಿಲಿಚಂಡಿ) ಇವುಗಳ ಮೂಲ ಬಿಂಬದ ಸಹಿತ ಗುಡಿಯ ಜೀರ್ಣೋದ್ಧಾರ ಕಾರ್ಯದಿಂದಾಗಿ ಗುಡಿಯ ಒಟ್ಟಂದಕ್ಕೆಯ ಒಂದು ಹೊಸ ಕಳೆ ಬಂದಂತಾಗಿದೆ.
ಹೊಸದಾಗಿ ಮರದಲ್ಲಿ ಕೆತ್ತಿಸಿ ಪ್ರತಿಷ್ಠಾಪಿಸಿದ ವ್ಯಾಘ್ರ ಚಾಮುಂಡಿ ನೋಡಬೇಕಾದ ಕಲಾಕೃತಿ. ಹಿಂದೆ ನಾಗನ ಗುಡಿಯಲ್ಲಿ ರಾಶಿಯಾಗಿ ಸೇರಿದ್ದ ನಾಗನ ಕಲ್ಲುಗಳೆಲ್ಲ ಈಗ ಬೇರ ವೇದಿಕೆಯನ್ನೆರಿ ಹೊಸಗುಡಿಯಲ್ಲಿ ನಾಗನ ಸುಂದರ ಶಿಲ್ಪದ ಪ್ರತೀಕ ಕಂಗೊಳಿಸುತ್ತಿದೆ. ಜಿಲ್ಲೆಯ ವೃದ್ಯ ಶಿಲ್ಪಿ ರಂಜಾಳ ಗೋಪಾಲ ಶೆಣೈ ಅವರು ಕೆತ್ತಿದ ನಾಗನ ಶಿಲ್ಪಗಳಲ್ಲಿ ಇದು ವೈಶಿಷ್ಟ್ಯಪೂರ್ಣವಾದದ್ದು ಎಂದರೆ ತಪ್ಪಲ್ಲ.
ತಂತ್ರಾಗಮದ ಪ್ರಕಾರ ಹೊಸದಾಗಿ ಕಟ್ಟಿಸಿದ ನಾಗನ ಗುಡಿಯ ಹಿಂದಿಗಿಂತ ವಿಶಾಲವಾದ ಜಾಗದಲ್ಲಿ ಹರವಾಗಿ ನಿಂತಿದೆ. ಹೊಸ ಗುಡಿಯನ್ನು ಕಟ್ಟಿಸಬೇಕು ಎಂದು ಆಡಳಿತ ವರ್ಗದವರು ಯೋಚಿಸಿದಾಗ ಎದುರಾದ ಸಮಸ್ಯೆ ಜಾಗದ ಪ್ರಮುಷ್ಟತೆ, ಇದ್ದ ಜಾಗದಲ್ಲಿ ಸಾಕಷ್ಟು ವಿಶಾಲವಾಗಿ ಕಟ್ಟುವಂತಿಲ್ಲ, ಅದರ ಒತ್ತಿನ ಜಾಗ ಬೇರೊಬ್ಬರ ಸ್ವಾಧೀನ ಇರುವಂಥದು; ಅದರಿಂದ ಅದನ್ನು ಉಪಯೋಗಿಸುವಂತೆಯೂ ಇಲ್ಲ, ಇಂಥ ಸಂದರ್ಭದಲ್ಲಿ ಆ ಜಾಗದ ಯಜ ಮಾನರೇ ಸ್ವಚ್ಛೆಯಿಂದ ಮುಂದೆ ಬಂದು ಆ ಜಾಗವನ್ನು ದೇವಾಲಯಕ್ಕೆ ಬಿಟ್ಟುಕೊಟ್ಟು ನಾಗನ ಗುಡಿಯ ನಿರ್ಮಾಣದ ಕಾರ್ಯಕ್ಕೆ ಸಹಕರಿಸಿದ್ದು ಒಂದು ಭಗವತ್ಕೃಪೆಯ ಶುಭಸೂಚನೆಯೆ ಸರಿ.
ಹೀಗೆಯ ದೇವಾಲಯದ ಪಕ್ಕದಲ್ಲಿ ಸುಂದರವಾದ ಒಂದು ಕಲ್ಯಾಣ ಮಂಟಪವನ್ನೂ ಕಟ್ಟುವ ಯೋಜನೆ ಅಡ ಳಿತ ವರ್ಗದ ಮುಂದಿದೆ. ಆಸ್ತಿಕ ವರ್ಗದ ನೆರವಿನಿಂದ ಈ ಕೆಲಸವೂ ಅನತಿ ದೂರದಲ್ಲಿ ನಡೆದೀತು ಎಂದು ನಿರೀಕ್ಷಿಸ ಬಹುದು, ಈ ದೇವಸ್ಥಾನದಲ್ಲಿ ದೇವಿಯ ಸನ್ನಿಧಿಯಲ್ಲಿ ಮದುವೆ ಮಾಡಿಸಿಕೊಂಡು ಹೋಗುವ ಸಂಸಾರಗಳು ಹಲವು. ಈಗ ಈ ವಿವಾಹ ಸಮಾರಂಭಗಳೆಲ್ಲ ದೇವಾಲಯದ ಒಳಗೆ ನಡೆಯುತ್ತಿದೆ. ಪ್ರತ್ಯೇಕ ಕಲ್ಯಾಣ ಮಂಟಪವೊಂದಾಯಿ ತಂದರೆ ಈಗಿರುವ ಸೌಕರ್ಯಕ್ಕೆ ಇನ್ನಷ್ಟು ಕಳೆ ಬರುತ್ತದೆ.
ಜೀರ್ಣೋದಾ ರ ಎನ್ನುವುದು ಮುಗಿಯದ ಪ್ರಕ್ರಿಯೆ, ದೇವಿಯ ಅವಕೃತ ಸ್ನಾನದ ಕೆರೆ ಇನ್ನೂ ಅಲಕ್ಷಿತವಾ ಗಿಯ ಉಳಿದಿದ. ಇದು ಊರ್ಜಿತಗೊಳ್ಳಬೇಕು. ದೇವಾಲಯದ ಎದುರುಗಡೆಯ ಹಳೆಯ ಹರಳು- ಮುರುಕುಗಳು ಸ್ವಚ್ಛ ವಾಗಬೇಕು.
ಉಡುಪಿ ಬಿಟ್ಟು ಇಲ್ಲಿಗೇಕೆ ಬಂದೆ?
ಸದ್ದು ಗದ್ದಲವಿಲ್ಲದ ಪೂಜೆಕೊಳ್ಳುತ್ತಿರುವ ಈ ತಾಯಿಯ ಮಹಿಮೆ, ಕರುಣೆ ಎಂಥ ಅಪಾರ ಎನ್ನುವುದನ್ನು ತಿಳಿಯಲು ಒಂದರಡು ಪ್ರಸಂಗಗಳನ್ನು ಇಲ್ಲಿ ಉಲ್ಲೇಖಿಸಬೇಕು; ಒಬ್ಬರು ವಿದ್ವಾಂಸರು ಕೆಲವು ವರ್ಷಗಳ ಕೆಳಗೆ ದೇವಿ ಯನ್ನು ಒಲಿಸಿಕೊಳ್ಳಬೇಕೆಂದು ಕೊಲ್ಲೂರಿನಲ್ಲಿ ಸೇವೆಗೆ ನಿಂತರು. ಅಲ್ಲಿ ಅವರಿಗೆ ಕನಸಾಯಿತಂತೆ; “ನಿನ್ನೂರಾದ ಉಡುಪಿ ಯನ್ನು ಬಿಟ್ಟು ಇಲ್ಲಿಗೇಕೆ ಬಂದೆ? ಮಗು, ಹೋಗು, ನಾನು ಕಡಿಯಾಳಿಯಲ್ಲಿ ಇದ್ದೇನೆ." ಅವರು ಮತ್ತೆ ಕಡಿಯಾಳಿಯ ತಾಯಿಯನ್ನ ಆರಾದಿಸಿ ತಮ್ಮ ಇಷ್ಟಾರ್ಥವನ್ನು ಪಡೆದರು. ಈತ ಈಗ ಮದರಸಿನಲ್ಲಿದ್ದಾರೆ.
ಅಣ್ಣನಲ್ಲಿಗೆ ಹೋಗು ಹುಟ್ಟೂರಾದ ದಕ್ಷಿಣ ಕನ್ನಡವನ್ನು ಬಿಟ್ಟು ಬಹಳ ಕಾಲ ದೇಶದ ಹತ್ತು ಹಲವು ಕಡೆಗಳಲ್ಲಿ ಸುತ್ತಾಡಿ ದೇವಿಯ ಉಪಾಸನೆ ಮಾಡುತ್ತಿದ್ದ ಶ್ರೀರಂಗಾಚಾರ್ಯ ಎಂಬವರಿಗೆ ವಿಂಧ್ಯಾಚಲದಲ್ಲಿದ್ದಾಗೊಮ್ಮೆ ತಮ್ಮ ಪುನಶ್ಚರಣೆಯ ಕಾಲದಲ್ಲಿ “ಶತಚಂಡೀ ಯಾಗ ಮಾಡಿಸಬೇಕೆಂದು ಬಯಕೆಯಾಯಿತಂತೆ ಆದರೆ ಎಲ್ಲಿ ಮಾಡಿಸುವುದು? ಅಂದು ರಾತ್ರಿ ದೇವಿ ಅವ ರಿಗೆ ಕನಸಿನಲ್ಲಿ ನಿರ್ದೇಶವಿತ್ತಳು. ನನ್ನ ಅಣ್ಣನ ಬಳಿಗೆ ಹೋಗು” ಸರಿ. ಅಚಾರ್ಯರು ಕೃಷ್ಣನ ಉಡುಪಿಗೆ ಬಂದು ಕಡಿ ಯಾಳಿಯ ದುರ್ಗಾಂಬಿಕೆಯ ಸನ್ನಿಧಿಯಲ್ಲಿ ಶತಚಂಡಿ ಮಾಡಿಸಿದರು, ಇದು ನಡೆದದ್ದು 1963ರಲ್ಲಿ; ಉಡುಪಿಯ ಇತಿಹಾ ಸದಲ್ಲಿ ಮೊದಲ ಬಾರಿ, ಮತ್ತೆ ಈಗ ನಡೆದ ಶತಚಂಡಿಯ ಉಡುಪಿಯಲ್ಲಿ ನಡೆದ ಎರಡನೆಯ ಶತಚಂಡಿಯಾಗ.
ಉತ್ಸವದ ಸಂಭ್ರಮ
ಸೌರ ಮಾನದ ಹಳೆಯ ವರ್ಷ ಕಳೆದು ಹೊಸ ವರ್ಷ ಕಾಲಿಡುವ ಹೊಸತಿಲಲ್ಲಿ ಇಲ್ಲಿ ಉತ್ಸವದ ಸಂಭ್ರಮ, ಮೇಷ ಸಂಕ್ರಮಣದ ದಿನ ಧ್ವಜಾರೋಹಣವಾಯಿತೆಂದರ ಅದರ ಮೂರನೆಯ ದಿನವೆ ವಾರ್ಷಿಕ ರಥೋತ್ಸವ.
ನವರಾತ್ರಿಯ ಒಂಭತ್ತು ದಿನಗಳಲ್ಲು ಕಟ್ಟೋಕ್ತ ಪೂಜೆ, ಚಂಡಿಕಾಹವನ, ಉತ್ಸವ, ಸಂತರ್ಪಣೆ ನಡೆಯುವುದು ಪ್ರಾಯಃ ಈ ಪರಿಸರದಲ್ಲಿ ಈ ದೇವಾಲಯದಲ್ಲಿ ಮಾತ್ರ.
ಕಾರ್ತಿಕ ಬಹುಳ ದ್ವಾದಶಿಯಂದು ಹಣತೆಯ ಸಾಲುದೀಪ ಹಚ್ಚಿ ನಡೆಯುವ ಪೋತ್ಸವ ಇಲ್ಲಿಯ ಪ್ರೇಕ್ಷ ಣೀಯ ಉತ್ಸವಗಳಲ್ಲಿ ಒಂದು.
ಪರಿವಾರ ದೇವತೆಗಳು
ದೇವಾಲಯದ ಒಳಗಡೆಯ ಒಂದು ಧೂಮಾವತಿ (ಜುಮಾದಿ) ದೈವದ ಮಣೆಯಿದೆ. ಇದು ಕುಂಜಿತ ಮನೆತನದವರು ನಂಬಿಕೊಂಡು ಬಂದ ಮನೆ ದೈವವಂತೆ; ಹೊರಬದಿಯ ತೇರು ಬೀದಿಯ ಸುತ್ತಿನಲ್ಲಿ ಮರದ ನಂದಿಯ ಕಾಲಿನಲಿ ಗಾಲಿ ಇದೆ.
ತೇರು ಬೀದಿಯ ವಾಯವ್ಯ ಮೂಲೆಯಲ್ಲಿ ಸುಬ್ರಹ್ಮಣ್ಣನ ಗುಡಿ, ಈ ಗುಡಿ ಹೊಸರೂಪ ಹೊತ್ತು ಜೀರ್ಣೋದ್ಧಾರಗೊಂಡ ಮಾತು ಈ ಮೊದಲೆ ಬಂದಿದೆ. ಒಂದು ಮೂಲೆಯಲ್ಲಿ ದೇವಸ್ಥಾನದ ಸಮೀಪದಲ್ಲಿ ರಕ್ತೇಶ್ವರಿಯ ಪ್ರತಿನಿಧಿ ಶಿಲೆ.
ಸ್ವಲ್ಪ ದೂರದಲ್ಲಿ ದೇವಾಲಯದ ಐಶಾನ್ಯ ಮೂಲೆಯಲ್ಲಿ ವ್ಯಾಘ್ರ ಚಾಮುಂಡಿಯ ಗುಡಿಯಿರುವ ಮತೂ ಈ ಮೊದಲು ಬಂದಿದೆ.
ಇಲ್ಲಿಯ ಉಪದೇವತೆ ಸುಬ್ರಹ್ಮಣ್ಯನಿಗೆ ವಿಶೇಷ ಪ್ರಸಿದ್ಧಿಯಿದೆ, ಸುಬ್ರಹ್ಮಣ್ಯ ಷಷ್ಠಿಯ ದಿನ ಈ ಸುಬ್ರಹ್ಮಣ್ಯನಿಗೆ ಮಹೋತ್ಸವ, ಸಮಾರಾಧನೆ, ಉತ್ಕೃಷ್ಟ ಪ್ರದಕ್ಷಿಣೆಗಳನ್ನು ನಡೆಸುವ ಸಂಪ್ರದಾಯವೂ ಉಂಟು, ಹೀಗೆ ವೈಷ್ಣವ ಸಂಪ್ರದಾಯದ ಚೌಕಟ್ಟಿನೊಳಗೆ ಹಳೆಯದೆಲ್ಲವನ್ನೂ ಉಳಿಸಿಕೊಂಡು, ಅಳವಡಿಸಿಕೊಂಡು ಬಂದ ಅತ್ಯಂತ ಪ್ರಾಚೀನ ದೇವಾಲಯ 'ಕಡಿಯಾಳಿ' ಉಡುಪಿಯ ಇತಿಹಾಸದಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
-- o O o --