On this auspicious day of Ramanavami , Please extend your support for our Temple In Canada , Let us Spread our glorious Sanatana Dharma Everywhere !
ವ್ಯಾಸರಾಜವಿರಚಿತ
ಭಾಗವದ್ಗೀತಾಸಾರ
’ಪಾಲಿಸು ಪಂಡರಿಪುರಿರಾಯ’ ಎಂಬಂತೆ - ಛಾಪುತಾಳ
ಕೇಳಯ್ಯ ಎನ್ನ ಮಾತ ಪಾರ್ಥನೇ | ಗೀತಾದರ್ಥನೇ - ಪ.
ಶ್ಲೋ: ಕುರೂಕ್ಷೇತ್ರದೀ | ಎನ್ನವರು ಪಾಂಡವರೂ ||
ಪೇಳೊ ಸಂಜಯ | ಏನು ಮಾಡುವರು ಕೂಡೀ |
ಕೇಳೈ ಅರಸನೇ | ನೋಡು ಪಾಂಡವರ ಸೇನಾ |
ಮಾತಾಡಿದ ನಿನ್ನ ಸುತಗೆ | ದ್ರೋಣ ನಿಂತು || ೧ ||
ಪದ: ಕೇಳಿ ತಾ ಪಾರ್ಥನು ಕುರುದಂಡ | ರಣದಲಿ ಚಂಡ | ಗಾಂಡೀವ ಕರದಂಡ |
ಅಚ್ಯುತ ಪಿಡಿ ರಥ ನಡೆಮುಂದಾ | ಬಹುತ್ವರದಿಂದ | ನೋಡುವೆ | ನೇತ್ರದಿಂದಾ ||
ಗುರುಹಿರಿಯರ ಕೂಡಾ ಯಾಕೆಂದಾ | ಯುದ್ಧ ಸಾಕೆಂದ | ಭಿಕ್ಷವೇ ಸುಖವೆಂದಾ
ಕುಂತಿಸುತ ಈ ಮಾತು ಉಚಿತಲ್ಲ | ನಿನಗಿದು ಸಲ್ಲ | ಪಿಡಿ ಗಾಂಡೀವ ಬಿಲ್ಲ || ೧ ||
ಶ್ಲೋ: ಬಾಲ ಯೌವನ ಮುಪ್ಪುತನ ದೇಹದಲ್ಲೀ |
ಇಂಥಾ ದೇಹಕೆ ಮೋಹ ಮತ್ಯಾತಕಿಲ್ಲಿ |
ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲೀ |
ಬಿಲ್ಲು ಪಿಡಿದು ಕೀರ್ತ್ಪಡೆ ಲೋಕದಲ್ಲಿ || ೨ ||
ಪದ: ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ | ಈ ದೇಹಕ್ಕೆ | ಪಾವಕನ ದಾಹಕ್ಕೆ |
ಉದಕಗಳಿಂದ ವೇದನೆಯಾಕೆ | ಈ ಜೀವಕ್ಕೆ | ಮಾರುತದ ಶೋಷಕ್ಕೆ |
ನಿತ್ಯ ಅಭೇದ್ಯ ತಾ ಜೀವನ | ಸನಾತನ | ವಸ್ತ್ರದ್ ಹಾಂಗೆ ಈ ತನುವು |
ಆದಾವು ಪೋದಾವು ನಿನಗಯ್ಯಾ | ಅದ ನಾ ಬಲ್ಲೆನಯ್ಯಾ || ೨ ||
ಶ್ಲೋ: ಜ್ಞಾನ ದೊಡ್ಡದು ಕರ್ಮಬಂಧವ ಬಿಟ್ಟು |
ಕರ್ಮ ಬಿಟ್ಟರೇ ವ್ರತ್ಯವಾಯವೆಷ್ಟು |
ಫಲ ಬಿಟ್ಟು ನೀ ಮಾಡು ಕರ್ಮಗಳ |
ಸಮದೇಹಕೆ ಫಲ ಕರ್ಮ ಕಾರಣಲ್ಲ || ೩ ||
ಪದ: ಕರ್ಮದಲ್ಲೇ ನಿನಗಧಿಕಾರ | ಫಲ ತಾ ದೂರ | ಧನಂಜಯಗೋಸ್ಕರ |
ಜ್ಞಾನ ದೊಡ್ಡದು ಕರ್ಮ ದೂರಯ್ಯಾ | ಇತ್ತಬಾರಯ್ಯ | ಯೋಗಬುದ್ಧಿ ಮಾಡಯ್ಯಾ |
ಜಿತಬುದ್ಧಿ ಯಾವದೈ ಕೇಶವ | ಜಗತ್ಪಾಶವ | ನೋಡದೆ ಪರಮೇಶ |
ಗೋವಿಂದನಲ್ಲಿ ಮನವಿಟ್ಟವ | ಕಾಮಬಿಟ್ಟವ | ಜಿತದೇಹತಾನವ ||೩||
ಶ್ಲೊ: ಜ್ಞಾನ ದೊಡ್ಡದು ಕರ್ಮದಲ್ಯಾಕೆ ಎನ್ನ |
ಬುದ್ಧೀ ಮೋಹಿನೀ ಕೃಷ್ಣ ಕೇಳಯ್ಯ ಬಿನ್ನ |
ಕರ್ಮವಿಲ್ಲದೆ ಮೋಕ್ಷಫಲವುಂಟೆ ಇನ್ನಾ |
ಕರ್ಮ ಮೋಕ್ಷದ ಬುದ್ಧಿಗೇ ಬೀಜವಲ್ಲವೆ || ೪ ||
ಪದ: ಯುದ್ಧಕರ್ಮವ ಮಾಡೊ ಪಾಂಡವ | ರಣತಾಂಡವ | ವೈರಿ ಷಂಡನೆಂಬುವಾ |
ಜನರೆಲ್ಲ ಮಾಳ್ಪರೊ ನಿನನೋಡಿ |ಮತ್ತೇನನೋಡಿ ನೋಡಿದರ ನೀ ಬೇಡೀ |
ಎನಗ್ಯಾಕೆ ಪೇಳಯ್ಯ ಜನಕರ್ಮ | ಕ್ಷತ್ರಿಯಧರ್ಮ | ನಷ್ಟವಾಗುವುದು ಧರ್ಮ |
ಅರ್ಪಿಸು ಎನ್ನಲಿ ಸರ್ವವು | ಬಿಟ್ಟು ಗರ್ವವು | ತಿಳಿ ಎನ್ನೊಳು ಸರ್ವವು || ೪ ||
ಶ್ಲೊ: ಯೋಗ ಸನ್ಯಾಸವೆರಡು ಮುಕ್ತಿಗೆ ದೃಢವು |
ಭೋಗ ವರ್ಜಿತ ಕೇಳು ಸನ್ಯಾಸಿಯಿರವು |
ಹ್ಯಾಗೆ ಪದ್ಮಕ ಪಾಣಿಯ ಲೇಪವಿಲ್ಲ
ಹಾಗೆ ಭಕ್ತಿಗೆ ಸಂಸ್ಕೃತಿಯು ಇಲ್ಲ || ೫ ||
ಪದ: ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ | ಸಮನಾನಲ್ಲಿ | ಭಜಿಪರ ಮನದಲ್ಲಿ |
ಮನಸು ಯಾವ ಜೀವಕೆ ಬಂದು | ಇತ್ತ ಬಾರೆಂದು | ಮತ್ತೆ ವೈರಿದಾರೆಂದೂ ||
ಲೋಷ್ಟಕಾಂಚನ ನೋಡು ಸಮಮಾಡಿ | ಆಸನ ಹೂಡಿ | ನಾಸಿಕತುದಿ ನೋಡಿ |
ಧ್ಯಾನಮಾಡು ಹರಿ ಅಲ್ಲಿಹ | ಅವನಲ್ಲಿಹ | ಯೋಗ ಸನ್ನಿಹಿತನವನೇ || ೫ ||
ಶ್ಲೋ: ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲೀ
ಘೋರ ಸಂಸಾರಯಾತನೆ ಅವರಿಗಿಲ್ಲ |
ಶರೀರವೇ ಕ್ಷೇತ್ರವೆಂತೆಂದು ತಿಳಿಯೋ
ಮರೆಯದೇ ಕ್ಷೇತ್ರಜ್ಞನೆಂದೆನ್ನ ತಿಳಿಯೊ || ೬ ||
ಪದ: ಶರೀರದೊಳಗಿದ್ದು ಪಾಪಿಲ್ಲ | ದುಃಖ ಲೇಪಿಲ್ಲ | ಆಕಾಶವು ಎಲ್ಲಾ |
ಯಾತರಿಂದುಟ್ಟಿತು ಈ ಗುಣ | ಮೂರು ಸದ್ಗುಣ ಕೆಳಯ್ಯ ಫಲ್ಗುಣ |
ಸುಖದುಃಖಸಮಮಾಡಿಕೊಂಡು ನೀ | ಈಡ್ಯಾಡು ನೀ | ಬ್ರಹ್ಮಾನನೋಡೊ ನೀ |
ಚಂದ್ರಸೂರ್ಯರ ತೇಜ ನನದಯ್ಯ | ಗುಡಾಕೇಶಯ್ಯ ಅನ್ನಪಚನವೆನದಯ್ಯಾ || ೬ ||
ಶ್ಲೋ: ನಾನೆ ಊತ್ತಮ ಮನಸು ಎನ್ನಲ್ಲಿ ಮಾಡೋ |
ಜ್ಞಾನ ಆಜ್ಞಾನ ಪೇಳುವೆ ತಿಳಿದುನೋಡೋ |
ಜ್ಞಾನ ದುರ್ಲಭ ಅವರ ಭಕ್ತಿಗಳಂತೆ |
ನಾನು ಕೊಡುವೆನು ಫಲವ ಮನಸು ಬಂದಂತೆ || ೭ ||
ಪದ: ಸ್ಮರಣೆ ಮಾಡುತ ದೇಹ ಬಿಡುವರೋ | ಎನ್ನ ಪಡೆವರೋ | ಬಲುಭಕ್ತಿ ಮಾಡುವರೋ |
ಅನಂತಚೇತನ ಸುಳಿವೆನು | ಹರಿಸುಲಭನು | ಮತ್ತೆ ಜನನವಿಲ್ಲವಗೇ |
ಎನ್ನ ಭಕ್ತರಿಗಿಲ್ಲ ನಾಶವು | ಸ್ವರ್ಗದಾಶವು | ಬಿತ್ತು ಚರಣಭಕುತೀಯೂ || ೭ ||
ಶ್ಲೋ: ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ |
ಇಷ್ಟುಪೂರುತಿಯಾಗಲೋ ಎನಗೆ ಶ್ರೀಪ |
ರಾಮನಾನಯ್ಯ ರಾಜರ ಗುಂಪಿನಲ್ಲೀ |
ಸೋಮನಾನಯ್ಯಾ ತಾರಕ ಮಂಡಲದಲ್ಲಿ || ೮ ||
ಪದ: ಅಕ್ಷರದೊಳಗೆ ಅಕಾರನು | ಗುಣಸಾರನು | ಪಕ್ಷಿಗಳಲ್ಲಿ ನಾನು |
ಗರುಡನು ಸಕಲ ಜಾತಿಗಳಲ್ಲಿ | ಶ್ರೇಷ್ಠತನದಲ್ಲಿ | ಎನ್ನ ರೂಪ ತಿಳಿಯಲ್ಲೀ |
ತೋರಿಸೋ ಶ್ರೀ ಕೃಷ್ಣ ನಿನ್ನ ರೂಪ | ನಾನಾ ರೂಪ | ಆರ್ಜುನನೋಡೋ ರೂಪ |
ಕಂಡನು ತನ್ನನು ಸಹಿತಾದಿ | ಹರಿದೇಹದಿ ಬ್ರಹ್ಮಾಂಡಗಳಲ್ಲಿ || ೮ ||
ಶ್ಲೋ: ಕ್ಷರ ಅಕ್ಷರ ಎರಡಕ್ಕು ಉತ್ತಮನು |
ಘೋರ ನರಕಕೆ ಲೋಭಕಾಮನು ನಾನು |
ಸಾರದಾನವು ಸಜ್ಜನರ ಹಸ್ತದಲ್ಲೀ |
ಭೂರಿದಕ್ಷಿಣೆ ನೀಡೋ ಸತ್ಪಾತ್ರದಲ್ಲಿ || ೯ ||
ಪದ: ಸರ್ವದಾನಕಿಂತ ಎನ್ನ ಭಕ್ತಿ | ಕೇಳೊ ಭೂಶಕ್ತಿ | ಮಾಡಯ್ಯ ವಿರಕ್ತಿ |
ಕೃಷ್ಣಾ ಹರಣವಾಯ್ತು ನಿನ್ನಿಂದಾ | ಮೋಹ ಎನ್ನಿಂದ | ಬಹು ಸುವಾಕ್ಯದಿಂದಾ |
ಕೃಷ್ಣ ಭೀಮಾನುಜರ ಸಂವಾದ | ಮಹಸುಖಪ್ರದ | ಧೃತರಾಷ್ಟ್ರ ಕೇಳೀದ
ಬಲ್ಲೆನು ವ್ಯಾಸರ ದಯದಿಂದಾ | ಮನಸೀನಿಂದಾ ಕೃಷ್ಣನಲ್ಲೇ ಜಯವೆಂದ || ೯ ||
vyAsarAjavirachita
bhAgavadgItAsAra
'pAlisu paMDaripurirAya' eMbaMte - CAputALa
kELayya enna mAta pArthanE | gItAdarthanE - pa.
shlO: kurUkShEtradI | ennavaru pAMDavarU ||
pELo saMjaya | Enu mADuvaru kUDI |
kELai arasanE | nODu pAMDavara sEnA |
mAtADida ninna sutage | drONa niMtu || 1 ||
pada: kELi tA pArthanu kurudaMDa | raNadali caMDa | gAMDIva karadaMDa |
acyuta piDi ratha naDemuMdA | bahutwaradiMda | nODuve | nEtradiMdA ||
guruhiriyara kUDA yAkeMdA | yuddha sAkeMda | bhikShavE suKaveMdA
kuMtisuta I mAtu ucitalla | ninagidu salla | piDi gAMDIva billa || 1 ||
shlO: bAla yauvana mupputana dEhadallI |
iMthA dEhake mOha matyAtakilli |
kAydu kolluva nAnu irutiralu illI |
billu piDidu kIrtpaDe lOkadalli || 2 ||
pada: shastradaMjikeyilla jIvakke | I dEhakke | pAvakana dAhakke |
udakagaLiMda vEdaneyAke | I jIvakke | mArutada shOShakke |
nitya abhEdya tA jIvana | sanAtana | vastrad haaMge I tanuvu |
AdAvu pOdAvu ninagayyaa | ada nA ballenayyA || 2 ||
shlO: j~jAna doDDadu karmabaMdhava biTTu |
karma biTTarE vratyavAyaveShTu |
phala biTTu nI mADu karmagaLa |
samadEhake phala karma kAraNalla || 3 ||
pada: karmadallE ninagadhikAra | phala tA dUra | dhanaMjayagOskara |
j~jAna doDDadu karma dUrayyA | ittabArayya | yOgabuddhi mADayyA |
jitabuddhi yAvadai kEshava | jagatpAshava | nODade paramEsha |
gOviMdanalli manaviTTava | kAmabiTTava | jitadEhatAnava ||3||
shlo: j~jaana doDDadu karmadalyaake enna |
buddhI mOhinI kRuShNa kELayya binna |
karmavillade mOkShaphalavuMTe innaa |
karma mOkShada buddhigE beejavallave || 4 ||
pada: yuddhakarmava mADo pAMDava | raNatAMDava | vairi ShaMDaneMbuvA |
janarella mALparo ninanODi |mattEnanODi nODidara nee bEDI |
enagyaake pELayya janakarma | kShatriyadharma | naShTavaaguvudu dharma |
arpisu ennali sarvavu | biTTu garvavu | tiLi ennoLu sarvavu || 4 ||
shlo: yOga sanyAsaveraDu muktige dRuDhavu |
bhOga varjita kELu sanyaasiyiravu |
hyAge padmaka pANiya lEpavilla
hAge Baktige saMskRutiyu illa || 5 ||
pada: ajanalli dwijanalli gajadalli | samanAnalli | bhajipara manadalli |
manasu yAva jIvake baMdu | itta bAreMdu | matte vairidAreMdU ||
lOShTakAMcana nODu samamADi | Asana hUDi | nAsikatudi nODi |
dhyAnamADu hari alliha | avanalliha | yOga sannihitanavanE || 5 ||
shlO: yAra Baktiyu enna pAdAbjadallI
GOra saMsArayAtane avarigilla |
SarIravE kShEtraveMteMdu tiLiyO
mareyadE kShEtraj~janeMdenna tiLiyo || 6 ||
pada: sharIradoLagiddu paapilla | duHkha lEpilla | AkAshavu ellA |
yAtariMduTTitu ee guNa | mooru sadguNa keLayya phalguNa |
sukhaduHkhasamamADikoMDu nee | eeDyaaDu nee | brahmaananODo nee |
chaMdrasUryara tEja nanadayya | guDAkEshayya annapachanavenadayyaa || 6 ||
shlO: nAne Uttama manasu ennalli mADO |
j~jAna Aj~jAna pELuve tiLidunODO |
j~jaana durlabha avara bhaktigaLaMte |
nAnu koDuvenu phalava manasu baMdaMte || 7 ||
pada: smaraNe mADuta dEha biDuvarO | enna paDevarO | balubhakti maaDuvarO |
anaMtachEtana suLivenu | harisulabhanu | matte jananavillavagE |
enna bhaktarigilla nAshavu | svargadaashavu | bittu charaNabhakutIyoo || 7 ||
shlO: kRuShNa tOrisu ninna vibhooti roopa |
iShTupUrutiyAgalO enage shreepa |
rAmanAnayya rAjara guMpinallI |
sOmanAnayyaa tAraka maMDaladalli || 8 ||
pada: akSharadoLage akAranu | guNasAranu | pakShigaLalli naanu |
garuDanu sakala jAtigaLalli | shrEShThatanadalli | enna roopa tiLiyallee |
tOrisO shrI kRuShNa ninna rUpa | nAnaa rUpa | ArjunanODO roopa |
kaMDanu tannanu sahitAdi | haridEhadi brahmAMDagaLalli || 8 ||
shlO: kShara akShara eraDakku uttamanu |
ghOra narakake lObhakaamanu nAnu |
saaradaanavu sajjanara hastadallI |
bhUridakShiNe neeDO satpaatradalli || 9 ||
pada: sarvadaanakiMta enna bhakti | kELo bhUshakti | mADayya virakti |
kRuShNA haraNavaaytu ninniMdA | mOha enniMda | bahu suvAkyadiMdaa |
kRuShNa bhImAnujara saMvAda | mahasukhaprada | dhRutarAShTra kELIda
ballenu vyAsara dayadiMdaa | manaseeniMdaa kRuShNanallE jayaveMda || 9 ||