ಉನ್ನತಿ
4 ನೇ ತ್ರೈಮಾಸಿಕ, ಸಂಚಿಕೆ 1
ಜನವರಿ - ಮಾರ್ಚ್ 2022 - ತ್ರೈಮಾಸಿಕ 4
4 ನೇ ತ್ರೈಮಾಸಿಕ, ಸಂಚಿಕೆ 1
ಜನವರಿ - ಮಾರ್ಚ್ 2022 - ತ್ರೈಮಾಸಿಕ 4
ಆತ್ಮೀಯ ಚೈತನ್ಯ ಟೀಮ್,
2021-22 ರಲ್ಲಿನ ನಿಮ್ಮ ಅಮೂಲ್ಯ ಕೊಡುಗೆಗಾಗಿ ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನು ಮೊದಲು ಅಭಿನಂದಿಸುತ್ತೇನೆ. ಕೋವಿಡ್ನ ಎರಡನೇ ಅಲೆಯ ಹೊರತಾಗಿಯೂ ನಾವು ಬಂಡವಾಳ ಉತ್ತಮತೆಯ 2600 ಕೋಟಿ ದಾಟಿದ್ದೇವೆ ಮತ್ತು ಹೊಸ LMS ಗೆ ಬದಲಾಯಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ, ನಾವು ಒಂದು ಸಂಸ್ಥೆಯಾಗಿ ನಮ್ಮ ಸಾಮರ್ಥ್ಯದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳುವ ಚಾಣಾಕ್ಷತೆಯನ್ನು ಸಾಬೀತುಪಡಿಸಿದ್ದೇವೆ. ಈ ವರ್ಷವು ಹೊಸ RBI ಮಾರ್ಗಸೂಚಿಯೊಂದಿಗೆ ಪ್ರಾರಂಭವಾಗಿದ್ದು, ಅದು ಮೈಕ್ರೋಫೈನಾನ್ಸ್ ಅನ್ನು ಹೇಗೆ ಮಾಡಲಾಗುತ್ತದೆ ಮತ್ತು ಗ್ರಹಿಸಲಾಗುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ ಮತ್ತು ನಾವು ಈಗಾಗಲೇ ಹೊಸ ವಾಸ್ತವಗಳಿಗೆ ಹೊಂದಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ.
ಈಗ ಪ್ರಾರಂಭವಾಗುವ ಹೊಸ ಹಣಕಾಸು ವರ್ಷದಲ್ಲಿ ಕಂಪನಿಯಲ್ಲಿರುವ ಪ್ರತಿಯೊಬ್ಬರೂ ಬದಲಾವಣೆಗಳಿಗೆ ಹೆಚ್ಚು ಚುರುಕಾಗಿ ಮುಂದುವರಿಯುತ್ತಿರುವಾಗ ಎರಡು ವಿಷಯಗಳಿಂದ ಸವಾಲನ್ನು ಎದುರಿಸಬೇಕಾಗುತ್ತದೆ-
1)ಉತ್ತಮ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ತಂಡವನ್ನು ಹೇಗೆ ನಿರ್ಮಿಸುವುದು,
2)ನಾವು ಮಾಡುವ ಯಾವುದೇ ಪ್ರಕ್ರಿಯೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು.
ಇವೆರಡೂ ಈ ವರ್ಷ ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಬೆಳವಣಿಗೆಗೆ ಅಡಿಪಾಯ ಹಾಕುತ್ತವೆ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯ ಸಮಯವನ್ನು ನಾನು ಬಯಸುತ್ತೇನೆ !!
ದೀಪಕ್ ಝಾ
ವ್ಯವಹಾರ ಮುಖ್ಯಸ್ಥರು
ಈ ತ್ರೈಮಾಸಿಕದಲ್ಲಿ ಚೈತನ್ಯದಲ್ಲಿ 5 ವರ್ಷಗಳಿಗಿಂತ ಹೆಚ್ಚು ಸಮಯವನ್ನು ಪೂರೈಸಿದ ಉದ್ಯೋಗಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು. ಬಂಡವಾಳದಲ್ಲಿನ ತ್ವರಿತ ಬೆಳವಣಿಗೆಯು ತಂಡವು ತೋರಿದ ಸಮರ್ಪಣೆ, ಪ್ರಯತ್ನಗಳು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ನಮ್ಮ ಉದ್ಯೋಗಿಗಳೊಂದಿಗೆ ದೀರ್ಘಾವಧಿಯ ಮತ್ತು ಆರೋಗ್ಯಕರ ಸಂಬಂಧವನ್ನು ಎದುರುನೋಡುತ್ತಿದ್ದೇವೆ.
C3139 - ಸಂತೋಷ್ ರಾಮಚಂದ್ರಗೌಡ
C2699 - ಸುನಿಲ್ ಇಳಿಗೇರ್
C2553 - ಮಲ್ಲಪ್ಪ ಪಲ್ಲೇದ್
C2549 - ಉಮಾಪತಿ C
C2498 - ಮಾರುತಿ ಫಕೀರಪ್ಪ ದನದಮನಿ
C2610 - ಶಿವಾನಂದ ಚಂದ್ರಪ್ಪ ಹುಕ್ಕೇರಿ
C2591- ಪೀರೇಶ್
C2590 - ಸಾಗರ್
C2442 - ಕಮಲಾಕರ್
C2513 - ರಾಜೀವ್ ರಂಜನ್
C2508 - ಅಟಲ್ ಬಿಹಾರಿ
C2506 - ಸಂಜೀವ್ ಕುಮಾರ್
C2507 - ನಿರಂಜನ್ ಕುಮಾರ್
C2698 - ಸುನಿಲ್ ಕಾಂಬಳೆ
C2536 - ವಿಜಯ ಕಲ್ಲಪ್ಪ ಅಮ್ಮಿನಭಾವಿ
C2420 - ಮಧು B P
C3384 - ಲೋಕೇಶ್ M
C2564 - ಅಡಿವೆಪ್ಪ C ಸೊಬರದ್
C2436 - ದುರುಗಪ್ಪ
C2428 - ಸಣ್ಣ ಕಂಪ್ಲೆಪ್ಪ
C2409 - ಸುಂದರರಾಜ್ ಕೃಷ್ಣಮೂರ್ತಿ
C2694 - ರೋಶನ್ ರಣವೀರ್ ಸಿಂಗ್
C2711 - ಮಾಧವ ಪ್ರಕಾಶರಾವ್ ಹಗಡ್ಲೆ
C2520 - ಅವಿನಾಶ ಭಾಗವತ ಅವಳೆ
C2469 - ಸುನಿಲ್ ಪ್ರಹ್ಲಾದ್ ಶಿಂಧೆ
C2377 - ಪ್ರದೀಪ ಪೂಜಾರಿ
ಚೈತನ್ಯ ತರಬೇತಿ ಕಾರ್ಯಕ್ರಮಗಳನ್ನು ಮೌಲ್ಯಮಾಪನ ಮಾಡುವಲ್ಲಿ ನಿರಂತರವಾಗಿದೆ ಮತ್ತು ಪ್ರತಿ ತ್ರೈಮಾಸಿಕದಲ್ಲಿ ಅವುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹೊಸದಾಗಿ ಪ್ರಾರಂಭಿಸಿದ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದ ಮೂಲಭೂತ ಸ್ಥಾಪನಾ ಕಾರ್ಯಕ್ರಮಗಳ ಕೆಲವು ನೋಟಗಳು ಇಲ್ಲಿವೆ. ಸಿನರ್ಜಿ ಟ್ರೇನಿಂಗ/ತರಬೇತಿಯನ್ನು ಮುಖ್ಯ ಕಛೇರಿಯಲ್ಲಿ ವ್ಯವಸ್ಥಾಪಕರ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಆಯೋಜಿಸಲಾಗಿದೆ.
ಇಂಡಕ್ಷನ್ ಟ್ರೇನಿಂಗ/ ತರಬೇತಿ - ಜೈಪುರ, RJ
ಇಂಡಕ್ಷನ್ ಟ್ರೇನಿಂಗ/ ತರಬೇತಿ - ಮಧುರೈ, TN
ಇಂಡಕ್ಷನ್ ಟ್ರೇನಿಂಗ/ ತರಬೇತಿ - ಜೈಪುರ, RJ
ಸಿನರ್ಜಿ ಟ್ರೇನಿಂಗ/ತರಬೇತಿ - ಬೆಂಗಳೂರು, HO
ಇಂಡಕ್ಷನ್ ಟ್ರೇನಿಂಗ/ ತರಬೇತಿ - ರಾಯಗಢ್, CG
ಇಂಡಕ್ಷನ್ ಟ್ರೇನಿಂಗ/ ತರಬೇತಿ - ಸತಾರಾ, MH
ನಾನು ಸಂಜಯ್ ಹೆರ್ಕಲ್, ಪ್ರಾದೇಶಿಕ ವ್ಯವಸ್ಥಾಪಕ, ಶಿವಮೊಗ್ಗ, ಕರ್ನಾಟಕ. ನಾನು 2018 ರಲ್ಲಿ ಚೈತನ್ಯ ಶಾಖೆಯ ವ್ಯವಸ್ಥಾಪಕನಾಗಿ ಸೇರಿಕೊಂಡೆ ಮತ್ತು ಲೋಕಾಪುರ ಶಾಖೆಯಲ್ಲಿ 2 ವರ್ಷಗಳ ಅನುಭವವನ್ನು ಗಳಿಸಿದೆ. ಯೂನಿಟ್ ಮ್ಯಾನೇಜರ್ ಆಗಿ ಬಡ್ತಿ ಪಡೆದು 8 ತಿಂಗಳ ಅವಧಿಗೆ ಬೈಲಹೊಂಗಲ ಯೂನಿಟ್ಗೆ ನೇಮಕಗೊಂಡೆ. ಈಗ ಶಿವಮೊಗ್ಗದಲ್ಲಿ ಪ್ರಾದೇಶಿಕ ವ್ಯವಸ್ಥಾಪಕನಾಗಿ ಕೆಲಸ ಮಾಡುವಾಗ ನಾನು ಸಾಕಷ್ಟು ವೃತ್ತಿಪರ ಬೆಳವಣಿಗೆಯನ್ನು ಹೊಂದಿದೆ. ಚೈತನ್ಯದಲ್ಲಿ, ಕಲಿಯಲು ಮತ್ತು ಸುಧಾರಿಸಲು ನಮಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ.
ನಮ್ಮ ಕುಟುಂಬವನ್ನು ಬೆಂಬಲಿಸಲು ಮತ್ತು ಅವರಿಗೆ ಉತ್ತಮ ಜೀವನವನ್ನು ಒದಗಿಸಲು ನಾವು ನಮ್ಮ ಹೆಚ್ಚಿನ ಸಮಯವನ್ನು ನಮ್ಮ ಹುಟ್ಟೂರಿನಿಂದ ದೂರದ ಊರಿನಲ್ಲಿ ಕಾಲ ಕಳೆಯುತ್ತೇವೆ. ಅವರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನನ್ನ ಕುಟುಂಬವನ್ನು ಉದ್ದೇಶಿಸಿ ಮೆಚ್ಚುಗೆಯ ಪತ್ರವನ್ನು ನಾವು ಸ್ವೀಕರಿಸಿದಾಗ ನಾನು ಮತ್ತು ನನ್ನ ಕುಟುಂಬವು ಮೌಲ್ಯಯುತವಾಗಿದೆ ಎಂದು ಭಾವಿಸಿದೆ. ಚೈತನ್ಯದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ ಮತ್ತು ಸಂಸ್ಥೆಯಲ್ಲಿ ಇನ್ನಷ್ಟು ಬೆಳೆಯಲು ಎದುರು ನೋಡುತ್ತಿದ್ದೇನೆ.
ಸಂಜಯ್ ಹೆರ್ಕಲ್, ಪ್ರಾದೇಶಿಕ ವ್ಯವಸ್ಥಾಪಕರು
ಶಿವಮೊಗ್ಗ, ಕರ್ನಾಟಕ
ನನ್ನ ಹೆಸರು ಗೀತಾ ರಂಜಿತ್ ಪಾಟೀಲ್ ಮತ್ತು ನಾನು ಮಹಾರಾಷ್ಟ್ರದ ಕೊಲ್ಲಾಪುರದ ಮುರಗುಡ್ ಗ್ರಾಮದ ಸುರುಪಾಲಿ ಗ್ರಾಮದವಳು. ನಾನು ಕಳೆದ 4 ವರ್ಷಗಳಿಂದ ಚೈತನ್ಯ ಗ್ರಾಹಕಳಾಗಿದ್ದು, ಇಲ್ಲಿಯವರೆಗೆ 2 ಲಕ್ಷದವರೆಗೆ ಸಾಲವನ್ನು ತೆಗೆದುಕೊಂಡಿದ್ದೇನೆ. ಚೈತನ್ಯದೊಂದಿಗಿನ ನನ್ನ ಪ್ರಯಾಣವು 2017 ರಲ್ಲಿ ಪ್ರಾರಂಭವಾಯಿತು, ಆಗ ನನ್ನ ಕುಟುಂಬದ ಆರ್ಥಿಕ ಸ್ಥಿತಿ ಕೆಟ್ಟದಾಗಿತ್ತು. ನನ್ನ ಮೊದಲ ಸಾಲದಿಂದ, ನಾನು ಹಸುವನ್ನು ಖರೀದಿಸಿದೆ ತದನಂತರ ಜಾನುವಾರು ಸಾಕಣೆಯನ್ನು ಪ್ರಾರಂಭಿಸಿದೆ, ನಾನು ಸಣ್ಣ ಅಂಗಡಿಯನ್ನು ಸ್ಥಾಪಿಸಿದ್ದೇನೆ. ಈಗ, 4 ವರ್ಷಗಳ ನಂತರ, ನಾನು 3 ಹಸುಗಳನ್ನು ಮತ್ತು ದೊಡ್ಡ ಅಂಗಡಿಯನ್ನು ಹೊಂದಿದ್ದೇನೆ. ನನ್ನ ಕುಟುಂಬದ ಆರ್ಥಿಕ ಸ್ಥಿತಿಯೂ ಸಾಕಷ್ಟು ಸುಧಾರಿಸಿದೆ. ನನ್ನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಾಗಿ ಚೈತನ್ಯ ಸೇವೆಗಳಿಗೆ ನಾನು ಮನ್ನಣೆಯನ್ನು ನೀಡಲು ಬಯಸುತ್ತೇನೆ.
ಚೈತನ್ಯ ಸಮುದಾಯ ನಿರ್ಮಾಣ ಚಟುವಟಿಕೆಗಳಲ್ಲಿ ಸತತವಾಗಿ ತೊಡಗಿಸಿಕೊಂಡಿರುವುದರಿಂದ, ಈ ತ್ರೈಮಾಸಿಕದಲ್ಲಿನ CSR ಚಟುವಟಿಕೆಗಳು ನಮ್ಮ ಸ್ಥಳೀಯ ಭದ್ರತಾ ಪಡೆಗಳನ್ನು ಕೋವಿಡ್ ಸುರಕ್ಷತೆ-ಸಂಬಂಧಿತ ಸಾಧನಗಳೊಂದಿಗೆ ಸುಸಜ್ಜಿತಗೊಳಿಸಲು ಗುರಿಯನ್ನು ಹೊಂದಿವೆ. ನಮ್ಮ ಮುಂಚೂಣಿಯ ಭದ್ರತಾ ಯೋಧರು ಪ್ರತಿಯೊಂದು ಸಂದರ್ಭದಲ್ಲೂ ನಮಗೆ 24*7 ಸೇವೆ ಸಲ್ಲಿಸಿದ್ದಾರೆ, ಆದ್ದರಿಂದ ಕೃತಜ್ಞತೆಯ ಸಂಕೇತವಾಗಿ ವಿವಿಧ ಪೊಲೀಸ್ ಠಾಣೆಗಳಿಗೆ ಕೋವಿಡ್ ಸುರಕ್ಷತಾ ಕಿಟ್ಗಳನ್ನು ವಿತರಿಸಲಾಗಿದೆ. ಪ್ರತಿಯೊಂದು ಕೋವಿಡ್ ಸುರಕ್ಷತಾ ಕಿಟ್ ಮಾಸ್ಕ್ಗಳು, ಮಷೀನ್ ಸ್ಯಾನಿಟೈಸರ್, ಹ್ಯಾಂಡ್ ಸ್ಯಾನಿಟೈಸರ್, ಲಿಕ್ವಿಡ್ ಹ್ಯಾಂಡ್ವಾಶ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಒಟ್ಟಾರೆಯಾಗಿ, ಉತ್ತರ ಪ್ರದೇಶದಲ್ಲಿ 83, ಜಾರ್ಖಂಡ್ನಲ್ಲಿ 31 ಮತ್ತು ಮಹಾರಾಷ್ಟ್ರದಲ್ಲಿ 60 ಕಿಟ್ಗಳನ್ನು ವಿತರಿಸಲಾಗಿದೆ.
ಸೊಲ್ಲಾಪುರ - MH
ಅಯೋಧ್ಯೆ - UP
ಮೀರತ್ - RJ
ಕೊಲ್ಲಾಪುರ - MH
ಕೋಡಿಂಗ್ ಪ್ರಪಂಚವನ್ನು ಅನ್ವೇಷಿಸಿ
W3 - ಶಾಲೆ ಜೊತೆಗೆ Python, Java, HTML ಮತ್ತು ಮುಂತಾದ ಕಂಪ್ಯೂಟರ್ ಭಾಷೆಗಳನ್ನು ಕಲಿಯಿರಿ
ತಜ್ಞರಿಂದ ಕಲಿಯಿರಿ
ವೀಡಿಯೊ ವಿಷಯದೊಂದಿಗೆ ನಿಮ್ಮನ್ನು ತೊಡಗಿಸಿಕೊಳ್ಳಲು ನೀವು ಹೆಚ್ಚು ಆಸಕ್ತಿಯನ್ನು ಹೊಂದಿದ್ದರೆ ಮತ್ತು ಸಮಾನ ಮನಸ್ಕ ಜನರ ಗುಂಪಿನೊಂದಿಗೆ ಕಲಿಯಲು ಬಯಸಿದರೆ, HubSpot ಮತ್ತು Career Contessa ವೆಬಿನಾರ್ಗಳು ನಿಮಗೆ ಸಹಾಯ ಮಾಡಬಹುದು. ಅಲ್ಲದೆ, Ted talks, You Are Not So Smart, and Google Podcasts.
Upskill Yourself
ಉಚಿತ ಆನ್ಲೈನ್ ಕಲಿಕಾ ವೇದಿಕೆಗಳನ್ನು ಬಳಸಿಕೊಳ್ಳಿ ಮತ್ತು ಹೊಸ ಕೌಶಲ್ಯವನ್ನು ಕಲಿಯಿರಿ. Coursera, Linkedin ಲರ್ನಿಂಗ್, edX ನಿಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಈ ಕೋರ್ಸುಗಳು ಸಹಾಯ ಮಾಡುತ್ತದೆ.
Google ನಿಂದ ಪ್ರಮಾಣೀಕರಿಸಿ (get certified by google)
Google ನೊಂದಿಗೆ ಡಿಜಿಟಲ್ ಕಲಿಯುವಿಕೆಯು ಭವಿಷ್ಯಕ್ಕಾಗಿ ಕೌಶಲ್ಯವನ್ನು ಕಲಿಯುವುದಕ್ಕೆ ನಿಮಗೆ ಸಹಾಯ ಮಾಡಲು ಸಂವಾದಾತ್ಮಕ ಕಲಿಕೆಯ ಮಾಡ್ಯೂಲ್ಗಳೊಂದಿಗೆ ಬರುತ್ತದೆ.
ಹವ್ಯಾಸವನ್ನು ರೂಢಿಸಿಕೊಳ್ಳಿ
ಹವ್ಯಾಸವನ್ನು ಬೆಳೆಸಿಕೊಳ್ಳುವುದು ಮತ್ತು ನಿಮಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವುದು ಯಾವಾಗಲೂ ಒಳ್ಳೆಯದು. Get growing, Duolingo, Future Learn ನಂತಹ ವೆಬ್ಸೈಟ್ಗಳು ನಮಗೆ ಸಹಾಯ ಮಾಡುತ್ತವೆ.
ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ರೂಢಿಸಿಕೊಳ್ಳಿ
ಉನ್ನತಿಯ ಈ ಆವೃತ್ತಿಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಯಲು ನಮಗೆ ಸಹಾಯ ಮಾಡಿ ಮತ್ತು ಮುಂದಿನ ನ್ಯೂಸ್ ಲೆಟರ್ನಲ್ಲಿ ನಾವು ಕಾರ್ಯಗತಗೊಳಿಸಬಹುದಾದ/ ಅನುಷ್ಠಾನಗೊಳಿಸಬಹುದಾದ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. Communication@chaitanyaindia.in ನಲ್ಲಿ ನಮಗೆ ಬರೆಯಿರಿ.
ಅಲ್ಲದೆ, Facebook, Instagram, Linkedin ಮತ್ತು Twitter ನಲ್ಲಿ ನಮ್ಮನ್ನು ಅನುಸರಿಸಿ