ಉನ್ನತಿ
ಸುದ್ದಿಪತ್ರ
Volume 3, Issue 1
ಜನವರಿ - ಮಾರ್ಚ್ 2021 Q4
ಸುದ್ದಿಪತ್ರ
Volume 3, Issue 1
ಜನವರಿ - ಮಾರ್ಚ್ 2021 Q4
ಅಧ್ಯಕ್ಷರು ಮತ್ತು ದಕ್ಷಿಣ ವಲಯದ ವ್ಯಾಪಾರ ಮುಖ್ಯಸ್ಥರಿಂದ ಸಂದೇಶ
ಎಲ್ಲರಿಗೂ ವಂದನೆಗಳು. ವೈಯಕ್ತಿಕ ಮತ್ತು ವ್ಯಾವಹಾರಿಕ ಮಟ್ಟದಲ್ಲಿ ನಾವು ಸಂಭ್ರಮದ ಒಂದು ವರ್ಷವನ್ನು ಪೂರ್ಣಗೊಳಿಸಿದ್ದೇವೆ. ಕಠಿಣವಾದ ಹಂತಗಳನ್ನು ದಾಟಿಕೊಂಡು ಪ್ರಬಲರಾಗಿ ಹೊರಹೊಮ್ಮಲು ನಮಗೆ ನೆರವಾದ ಚೈತನ್ಯ ತಂಡದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾವು 1390 ಕೋಟಿಯ ಪೋರ್ಟ್ಫೋಲಿಯೋದೊಂದಿಗೆ ಈ ವರ್ಷವನ್ನು ಪೂರ್ಣಗೊಳಿಸಿದ್ದೇವೆ. ಈ ಅವಧಿಯಲ್ಲಿ 7 ರಾಜ್ಯಗಳಲ್ಲಿರುವ ಅರ್ಧ ಮಿಲಿಯನ್ ಗ್ರಾಹಕರಿಗೆ ಸೇವೆಗಳನ್ನು ಸಲ್ಲಿಸಿದ್ದೇವೆ. 4 ನೇ ತ್ರೈಮಾಸಿಕದಲ್ಲಿ ನಾವು ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದೆವು ಹಾಗೂ ತಮಿಳುನಾಡಿನಲ್ಲಿ ಆರಂಭಿಕ ಕೆಲಸಗಳನ್ನು ಆರಂಭಿಸಿದೆವು.
ಮುಂಬರುವ ಆರ್ಥಿಕ ವರ್ಷದಲ್ಲಿ, ನಾವು ಕೆಲವು ಅತಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹೊಂದಿದ್ದೇವೆ ಹಾಗೂ ತಮಿಳುನಾಡಿನ ಹೊರತಾಗಿ ಇನ್ನೆರಡು ರಾಜ್ಯಗಳಾದ ಗುಜರಾತ್ ಮತ್ತು ರಾಜಸ್ಥಾನದಲ್ಲಿ ನಾವು ಪ್ರವೇಶಿಸಲಿದ್ದೇವೆ. ಭಾರತದ ಅಗ್ರ ಸ್ಥಾನದಲ್ಲಿರುವ MFIಗಳಲ್ಲಿ ಒಂದಾಗುವ ನಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ನಾವು ಹೆಚ್ಚಿನ ಗುಣಮಟ್ಟದ ಪೋರ್ಟ್ಫೋಲಿಯೋ ಮತ್ತು ಸಾಮರ್ಥ್ಯವನ್ನು ನಿರ್ವಹಿಸುವ ಮೂಲಕ ಕಾರ್ಯಾಚರಣೆಗಳ ಉತ್ಕೃಷ್ಟತೆಗಾಗಿ ಶ್ರಮಪಡಬೇಕಾಗಿದೆ.
ಆರ್ಥಿಕ ವರ್ಷ 2021-2022 ಉಜ್ವಲವಾಗಿರುವುದೆಂದು ನಮ್ಮ ಅಪೇಕ್ಷೆ.
- ಗಣೇಶ್ ಕೆ ವಿ
ಅಧ್ಯಕ್ಷರು - ದಕ್ಷಿಣ ವಲಯದ ವ್ಯಾಪಾರ ಮುಖ್ಯಸ್ಥರು
ಚೈತನ್ಯದಲ್ಲಿ ನಾವು, ಕಲಿಕೆ, ವಿಕಸನ ಮತ್ತು ಅನ್ವೇಷಣೆಯ ಹುರುಪನ್ನು ಎತ್ತಿಹಿಡಿಯುತ್ತೇವೆ. ಈ ತ್ರೈಮಾಸಿಕದಲ್ಲಿ ನಡೆಸಲಾದ ತರಬೇತಿ ಕಾರ್ಯಕ್ರಮಗಳ ಒಂದು ಕಿರು ನೋಟ ಇಲ್ಲಿದೆ.
ಕರ್ನಾಟಕ - ಪ್ರವೇಶನ ತರಬೇತಿ
ಮಹಾರಾಷ್ಟ್ರ - ಪ್ರವೇಶನ ತರಬೇತಿ ಮತ್ತು BM ಪುನಶ್ಚೇತಕ ತರಬೇತಿ
ಉತ್ತರ - ಪ್ರವೇಶನ ತರಬೇತಿ , ಮೆಡಿಕ್ಲೇಮ್ ತರಬೇತಿ, ಸಿಬ್ಬಂದಿಗಳ ವೈಯಕ್ತಿಕ ಸಾಲ ಅಧಿವೇಶನ, CRE ಪುನಶ್ಚೇತಕ ತರಬೇತಿ, BM ಪುನಶ್ಚೇತಕ ತರಬೇತಿ, RM ತರಬೇತಿ
ಮುಖ್ಯಸ್ಥರು - HR
ಗೌರವ್ ಮಾನವ ಸಂಪನ್ಮೂಲದ ಮುಖ್ಯಸ್ಥರಾಗಿ ಚೈತನ್ಯದ ಭಾಗವಾಗಿದ್ದಾರೆ. ಇವರು ವಿವಿಧ ಉದ್ಯಮಗಳಲ್ಲಿ ಒಟ್ಟಾರೆ 14ಕ್ಕೂ ಹೆಚ್ಚಿನ ವರ್ಷಗಳ ಅನುಭವವಿರುವ ಒಬ್ಬ ಅನುಭವೀ ವೃತ್ತಿಪರರು. ಇವರು ಇತ್ತೀಚಿನವರೆಗೆ DTDC ಎಕ್ಸ್ಪ್ರೆಸ್ ಲಿಮಿಟೆಡ್ ನಲ್ಲಿ ಮುಖ್ಯಸ್ಥ DGM HR (ದಕ್ಷಿಣ & ಪೂರ್ವ) ಆಗಿದ್ದರು. ಇವರು IIMM, ಪುಣೆಯಿಂದ ಮಾನವ ಸಂಪನ್ಮೂಲದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.
ರಾಹುಲ್ ಕುಮಾರ್
ಕಾರ್ಯನಿರ್ವಾಹಕರು - IT
ರಾಹುಲ್ ಚೈತನ್ಯದ IT ತಂಡವನ್ನು ಕಾರ್ಯನಿರ್ವಾಹಕರಾಗಿ ಸೇರಿದ್ದಾರೆ. ಇವರು ಹಿಂದೆ Au ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರು ರಾಧಾರಮಣ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಭೋಪಾಲ್ ನಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ BE ಪದವಿಯನ್ನು ಹೊಂದಿದ್ದಾರೆ.
ವಿಷ್ಣು ಚೈತನ್ಯ
ಸಹಾಯಕ ವ್ಯವಸ್ಥಾಪಕರು- HR
ವಿಷ್ಣು ಇತ್ತೀಚೆಗೆ ಚೈತನ್ಯದ HR ತಂಡಕ್ಕೆ ಯೋಜನೆಗಳ ಸಹಾಯಕ ವ್ಯವಸ್ಥಾಪಕರಾಗಿ ಸೇರಿಕೊಂಡಿದ್ದಾರೆ. ಇವರು ಬಾಲಾಜಿ ಇನ್ಸ್ಟಿಟ್ಯೂಟ್ ನಿಂದ PGDM ಮುಗಿಸಿದ ನಂತರ DTDC ಎಕ್ಸ್ಪ್ರೆಸ್ ಲಿಮಿಟೆಡ್ ನಲ್ಲಿ HR ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.
ಜಯ್ ಪ್ರಕಾಶ್ ಜಿ ಜೆ
ವ್ಯವಸ್ಥಾಪಕರು - ಆಡಳಿತ
ಜಯ್ ಪ್ರಕಾಶ್ ಚೈತನ್ಯದಲ್ಲಿ ಆಡಳಿತದ ಸಹಾಯಕ ವ್ಯವಸ್ಥಾಪಕರಾಗಿ ಸೇರಿಕೊಂಡಿದ್ದಾರೆ. ಇವರು 8ಕ್ಕೂ ಹೆಚ್ಚಿನ ವರ್ಷಗಳ ಕಾರ್ಯಾನುಭವವನ್ನು ಹೊಂದಿದ್ದಾರೆ. ಇವರು ಈ ಹಿಂದೆ SBM ನೌವಾಟದಲ್ಲಿ ಆಡಳಿತ ಸಹಾಯಕರಾಗಿ ಅನುಭವ ಗಳಿಸಿದ್ದಾರೆ. ಇವರು ಫುಟ್ಬಾಲ್ ಮತ್ತು ಕ್ರಿಕೆಟ್ ಆಡುವುದರಲ್ಲೂ ಆಸಕ್ತಿ ಹೊಂದಿದ್ದಾರೆ.
ಜಗದೀಶ್ ಕುಮಾರ್
ವ್ಯವಸ್ಥಾಪಕರು - ಲೆಕ್ಕಪತ್ರ
ಜಗದೀಶ್ ಕುಮಾರ್ ಇತ್ತೀಚೆಗೆ ನಮ್ಮ ಲೆಕ್ಕಪತ್ರ ತಂಡದ ಭಾಗವಾದರು. ಇವರು ಲೆಕ್ಕಪತ್ರ ವಿಭಾಗದಲ್ಲಿ ಒಟ್ಟಾರೆ 8ಕ್ಕೂ ಹೆಚ್ಚಿನ ವರ್ಷಗಳ ಪರಿಣತಿಯನ್ನು ಹೊಂದಿದ್ದಾರೆ. ಇದಕ್ಕೂ ಮುಂಚೆ ಅವರು ANI ಟೆಕ್ನಾಲಜೀಸ್ (ಓಲಾ ಕ್ಯಾಬ್ಸ್)ನೊಂದಿಗೆ ಕೆಲಸ ಮಾಡಿದ್ದರು. ಇವರು CB ಡಿಗ್ರಿ ಕಾಲೇಜು, ಭಾಲ್ಕಿ ಯಿಂದ B.Com ಪದವಿಯನ್ನು ಗಳಿಸಿದ್ದಾರೆ.
ಯಜ್ಞೇಶ್ವರ್ ಸೋಮ
ಸಹಾಯಕ ವ್ಯವಸ್ಥಾಪಕರು - HR
DTDC ಎಕ್ಸ್ಪ್ರೆಸ್ ಲಿಮಿಟೆಡ್ ನಲ್ಲಿ ಹಿರಿಯ HR ಕಾರ್ಯನಿರ್ವಾಹಕರಾಗಿ 3ಕ್ಕೂ ಹೆಚ್ಚಿನ ವರ್ಷಗಳ ಅನುಭವವನ್ನು ಹೊಂದಿರುವ ಯಜ್ಞೇಶ್ವರ್ ಚೈತನ್ಯದ ತಂಡವನ್ನು ಸೇರಿಕೊಂಡಿದ್ದಾರೆ. IBMR – IBS ನಿಂದ HRನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಇವರು ಮಿಂತ್ರಾ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಕೂಡ ಮುಗಿಸಿದ್ದಾರೆ.
“It doesn’t matter how slowly you go as long as you do not stop” (ನೀವು ಎಷ್ಟು ನಿಧಾನವಾಗಿ ಹೋಗುತ್ತೀರಿ ಎಂಬುದು ಮುಖ್ಯವಲ್ಲ, ನೀವು ನಿಲ್ಲದಿರುವುದು ಮುಖ್ಯ) ಎಂಬ ಕನ್ಫ್ಯೂಷಿಯಸ್ ನ ಈ ಮಾತನ್ನು ಅನುಸರಿಸಿಕೊಂಡು ಚೈತನ್ಯ ತಂಡದ ಸದಸ್ಯರು ತಮ್ಮಲ್ಲಿ ತಾವು ವಿಶ್ವಾಸವಿರಿಸುವುದನ್ನು, ಶ್ರಮ ವಹಿಸುವುದನ್ನು ಮತ್ತು ಜೀವನದಲ್ಲಿ ಪ್ರಗತಿ ಹೊಂದುವುದನ್ನು ನಿಲ್ಲಿಸಲೇ ಇಲ್ಲ. ಸಹಕಾರಿ ಕಲಿಕೆ, ವಿಕಸನ ಹಾಗೂ ಅನ್ವೇಷಣಾ ಸಾಮರ್ಥ್ಯದೆಡೆಗೆ ತಮ್ಮ ಅಮೂಲ್ಯ 5 ವರ್ಷಗಳನ್ನು ವಿನಿಯೋಗಿಸಿದ್ದಕ್ಕಾಗಿ ತಂಡದ ಕುಶಲ ವೃತ್ತಿಪರರೆಡೆಗೆ ಚೈತನ್ಯ ಅತಿಯಾದ ಆನಂದವನ್ನು ವ್ಯಕ್ತಪಡಿಸುತ್ತದೆ. ಇವರೆಲ್ಲರ ಇರುವಿಕೆಯು ಈ ಉದ್ಯಮದ ಏರಿಳಿತಗಳನ್ನು ಎದುರಿಸಿ ಮುಂದಾಗಲು ಸಹಾಯ ಮಾಡಿದೆ. ನಿಮಗೆಲ್ಲರಿಗೂ ಉಜ್ವಲ, ಸಂತುಷ್ಟ ಮತ್ತು ಸಮೃದ್ಧ ಭವಿಷ್ಯದ ಹಾರೈಕೆಗಳು.
ಅಶೋಕ್ ಪೂಜಾರ್ - ತರಬೇತಿ ವ್ಯವಸ್ಥಾಪಕರು, ಧಾರವಾಡ
ಶ್ರೀನಿವಾಸನ್ ಸಿ ವಿ – CFO, ಬೆಂಗಳೂರು
ಶ್ರೀಕೃಷ್ಣ - BM, ಹುನಗುಂದ, ಹೊಸಪೇಟೆ
ಪ್ರಸನ್ನ ಎಂ - BM, ಹಗರಿಬೊಮ್ಮನಹಳ್ಳಿ, ಹೊಸಪೇಟೆ
ವೀರೇಶ ಪಿ - ಸಂಗ್ರಹ ವ್ಯವಸ್ಥಾಪಕ, ಬೆಂಗಳೂರು
ಮಂಜುನಾಥ ಟಿ - ABM , ಹಗರಿಬೊಮ್ಮನಹಳ್ಳಿ, ಹೊಸಪೇಟೆ
ಆನಂದ್ ಕುರೋಡಿ - CRE, ಬ್ಯಾಡಗಿ, ಧಾರವಾಡ
ವೆಂಕಟೇಶ್ ಎ - ಪ್ರಾದೇಶಿಕ ಕ್ರೆಡಿಟ್ ವ್ಯವಸ್ಥಾಪಕರು, ಹೊಸಪೇಟೆ
ಸಿದ್ದು ಜನಕರ್ - BM, ಕಿತ್ತೂರು, ಧಾರವಾಡ
ಕಲ್ಲಪ್ಪ ಬಳ್ಳಿಗರ್ - ಆಡಿಟ್ ಸಹಾಯಕ ವ್ಯವಸ್ಥಾಪಕರು, ಜಮಖಂಡಿ, ಧಾರವಾಡ
ಕೀರ್ತಿವಂತ್ - BM, ಹಮ್ನಾಬಾದ್, ಕಲಬುರ್ಗಿ
ಹನುಮಂತರಾಯ ಕೆ - RM, ಶಾಹಪುರ್, ಕಲಬುರ್ಗಿ
ಮಹಾದೇವಪ್ಪ - ಕಾರ್ಯಾಚರಣೆಗಳ ಕ್ರೆಡಿಟ್ ವ್ಯವಸ್ಥಾಪಕರು, ಹೊಸಪೇಟೆ
ದಾದಾವಲಿ ಎಚ್ - ಆಡಿಟ್ ಸಹಾಯಕ ವ್ಯವಸ್ಥಾಪಕರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ
ಚೈತನ್ಯ ಅವರೊಂದಿಗೆ ಅದ್ಭುತ ದಶಕ
ಜಯಸೀಲನ್. ಎಲ್ - ಮುಖ್ಯಸ್ಥರು, ಆಡಿಟ್
ಚೈತನ್ಯದೊಂದಿಗಿನ ನನ್ನ ಪಯಣ ಶುರುವಾದದ್ದು ಜಗಳೂರು ಪ್ರದೇಶದ ಮೊದಲ ಪ್ರಾದೇಶಿಕ ವ್ಯವಸ್ಥಾಪಕನಾಗಿ ನೇಮಕಗೊಂಡಾಗ, ಹಾಗೂ ಪ್ರಸ್ತುತ ನಾನು ಆಡಿಟ್ ತಂಡದ ನೇತೃತ್ವ ವಹಿಸುತ್ತಿದ್ದೇನೆ. ಕಳೆದ 11 ವರ್ಷಗಳನ್ನು ನೆನೆಸಿಕೊಂಡಾಗ, ಈ ಸಂಸ್ಥೆಯನ್ನು ಸೇರಿಕೊಂಡದ್ದು ಮತ್ತು ನನ್ನ NBFC ಪಯಣವನ್ನು ಪ್ರಾರಂಭಿಸಿದ್ದು ಸರಿಯಾದ ತೀರ್ಮಾನವಾಗಿತ್ತು ಎಂದು ನಾನು ಗ್ರಹಿಸುತ್ತೇನೆ. ನೀವು ಪ್ರಾಮಾಣಿಕರಾಗಿದ್ದರೆ, ಕೆಲಸದಲ್ಲಿ ತೊಡಗಿಸಿಕೊಳ್ಳುವವರಾಗಿದ್ದರೆ ಮತ್ತು ಬದ್ಧರಾಗಿದ್ದರೆ ಕೆಲಸ ಮಾಡಲು ಮತ್ತು ವೃತ್ತಿ ಜೀವನವನ್ನು ಬೆಳೆಸಲು ಚೈತನ್ಯ ಅತುತ್ತಮ ಸ್ಥಳಗಳಲ್ಲಿ ಒಂದು- ಈ ಸಂಸ್ಥೆಯೊಂದಿಗಿನ ನನ್ನ ಅನುಭವಗಳ ಆಧಾರದ ಮೇಲೆ ಇದನ್ನು ನಾನು ಖಚಿತವಾಗಿ ಹೇಳಬಲ್ಲೆ.
ಚೈತನ್ಯಕ್ಕೆ ಸೇರಿಕೊಳ್ಳುವ ಮುನ್ನ ನಾನು NGO ವಲಯದಲ್ಲಿ ಸ್ವ- ಸಹಾಯ ಗುಂಪುಗಳಿಗೆ ಸಂಬಂಧಿತ ಮೈಕ್ರೋ ಕ್ರೆಡಿಟ್ ಕಾರ್ಯಕ್ರಮಗಳಲ್ಲಿ 13 ವರ್ಷಗಳ ಅನುಭವವನ್ನು ಪಡೆದುಕೊಂಡೆ. ಈ ಎಲ್ಲಾ ವರ್ಷಗಳಲ್ಲಿ ನಾನು ವ್ಯಾಪಾರದ ಬೆಳವಣಿಗೆ, ರನ್ ರೇಟ್, ಗ್ರಾಹಕ ಉಳಿಸಿಕೊಳ್ಳುವಿಕೆ, ಸಿಬ್ಬಂದಿ ಕಳೆತ, KRA , ಅಪಾಯ, PAR, OCR ಮತ್ತು ಇನ್ನೂ ಹಲವಾರು ಪದಗಳು ಎದುರಾದವು, ಅವುಗಳನ್ನು ನಾನು ಕಲಿತುಕೊಂಡೆ ಹಾಗೂ ನನ್ನ ವೃತ್ತಿ ಜೀವನದಲ್ಲಿ ಕಾರ್ಯಗತಗೊಳಿಸಿಕೊಂಡೆ.
ಸಂಸ್ಥಾಪಕರಾದ ಶ್ರೀ ಆನಂದ್ ರಾವ್ ಮತ್ತು ಶ್ರೀ ಸಮಿತ್ ಶೆಟ್ಟಿ ಹಾಗೂ ಉತ್ಸಾಹಭರಿತರಾದ ಜನರನ್ನುಳ್ಳ ಆರಂಭಿಕ ಗುಂಪು- ಇವರೆಲ್ಲರ ಸಾಮೂಹಿಕ ಪ್ರಯತ್ನಗಳು ಈ ಸಂಸ್ಥೆಯನ್ನು ಮೇಲೇರಿಸಿವೆ. ತಳ ಮಟ್ಟದ ತಂಡಕ್ಕೆ ತರಬೇತಿ ನೀಡುವಲ್ಲಿ ಹಾಗೂ ಕಂಪನಿಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಂಸ್ಥಾಪಕರು ಬಹಳಷ್ಟು ತಾಳ್ಮೆ, ಬದ್ಧತೆ ಹಾಗೂ ನಂಬಿಕೆಯನ್ನು ಹೊಂದಿದ್ದರು.
ನನಗೆ ವಹಿಸಲಾದ ಕೆಲಸವನ್ನು ಸಾಧಿಸಲು ಮತ್ತು ನನ್ನ ಕೆಲಸದಲ್ಲಿ ಅತ್ಯಧಿಕ ಪರಿಪೂರ್ಣತೆ ಗಳಿಸಲು ನಾನು ನನ್ನ ಸಂಪೂರ್ಣ ಪ್ರಯತ್ನವನ್ನು ಹಾಕಬೇಕೆಂದು ಸದಾ ನಂಬಿದ್ದೇನೆ. ನನ್ನ ಶ್ರಮಕ್ಕಾಗಿ ಅರ್ಹವಾದ ಪ್ರಶಂಸೆ ಹಾಗೂ ಸಮಯೋಚಿತ ಅಂಗೀಕಾರವನ್ನು ನಾನು ಪಡೆದಿದ್ದೇನೆ. ನಾನು ಪ್ರಾದೇಶಿಕ ವ್ಯವಸ್ಥಾಪಕ ಮತ್ತು ವಿಭಾಗೀಯ ವ್ಯವಸ್ಥಾಪಕನಾಗಿ ವ್ಯಾಪಾರ ತಂಡದ ಭಾಗವಾಗಿದ್ದುದರಿಂದ ಸಂಸ್ಥೆಯ ಕಾರ್ಯಕಾರಿ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಯಿತು. ನಾನು ವಸೂಲಿಗಳ ಮುಖ್ಯಸ್ಥನಾಗಿದ್ದ 2.5 ವರ್ಷಗಳ ಕಾಲಾವಧಿಯಲ್ಲಿ ನಾವು ಅನಾಣ್ಯೀಕರಣ ಪರಿಸ್ಥಿತಿಯನ್ನು ಎದುರಿಸಿ ಆ ಪರಿಸ್ಥಿತಿಯಿಂದ ಬಹಳಷ್ಟು ಕಲಿತುಕೊಂಡೆವು. ನಾನು ಸುತ್ತಲೂ ನೋಡಿದಾಗ, ದೀರ್ಘ ಕಾಲ ಈ ಕಂಪನಿಯೊಂದಿಗೆ ಇದ್ದ ವ್ಯಕ್ತಿಗಳು ಕೂಡ ಗಮನಾರ್ಹ ಬೆಳವಣಿಗೆಯನ್ನು ಗಳಿಸಿದ್ದಾರೆ ಎಂಬುವುದನ್ನು ನಾನು ತಿಳಿದುಬರುತ್ತದೆ.
ಸೇವೆಗಳು, ಉದ್ಯೋಗಾವಕಾಶಗಳು ಮತ್ತು CSR ಚಟುವಟಿಕೆಗಳ ಮೂಲಕ ದೇಶದ ಗ್ರಾಮೀಣ ಭಾಗವನ್ನು ಉನ್ನತಿಗೇರಿಸುವುದರೆಡೆಗೆ ಚೈತನ್ಯದ ಗಮನವು ಸದಾ ಕೇಂದ್ರೀಕೃತವಾಗಿದೆ. ನಮ್ಮ ಸೇವೆಗಳು ಗ್ರಾಹಕರ ಕುಟುಂಬದಲ್ಲಿ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತಿದ್ದಲ್ಲಿ ಮಾತ್ರ ನಮ್ಮ ಪ್ರಯತ್ನಗಳು ಸಫಲ. ನ್ಯಾವಿ ಟೆಕ್ನಾಲಜೀಸ್ ನಿಂದ ಬಂಡವಾಳ ಹೂಡಿಕೆಯ ರೂಪದ ಪೋಷಕ ನೆರವು ತಂಡದ ಪ್ರಯತ್ನಗಳೊಂದಿಗೆ ಸೇರಿ ಕ್ರಿಯಾವರ್ಧಕವಾಗಿ ಕೆಲಸ ಮಾಡಿದೆ ಹಾಗೂ ಸಂಸ್ಥೆಯ ಭೌಗೋಳಿಕ ವಿಸ್ತರಣೆಯಲ್ಲಿ ಸಹಾಯವಿತ್ತಿದೆ. ಸಂಸ್ಥೆಯ ಮತ್ತು ಸ್ವತಃ ನನ್ನ ಅದ್ಭುತ ಪಯಣಕ್ಕೆ ಸಾಕ್ಷಿಯಾಗಿರುವುದು ತುಂಬಾ ಸಂತೋಷವಾಗುತ್ತಿದೆ.
ಗ್ರಾಹಕರ ಅಂಕಣ
ನಾಗಮ್ಮ ಹನುಮಂತಯ್ಯ
ಜಗಳೂರು, ಕರ್ನಾಟಕ
ನಾಗಮ್ಮ ಕರ್ನಾಟಕದ ಜಗಳೂರಿನವರು ಹಾಗೂ ಕಳೆದ 10 ವರ್ಷಗಳಿಂದ ಚೈತನ್ಯದೊಂದಿಗಿದ್ದಾರೆ. ಆಕೆಯ ಪತಿ ಅತಿ ಕಡಿಮೆ ಸಂಪಾದನೆ ಗಳಿಸುತ್ತಿದ್ದರು ಮತ್ತದು ಅವರ ಕುಟುಂಬಕ್ಕೆ ಸಾಲುತ್ತಿರಲಿಲ್ಲ. ಆಕೆ ಜೀವನದಲ್ಲಿ ಹಲವು ತೀವ್ರ ಪರಿಸ್ಥಿತಿಗಳನ್ನು ಎದುರಿಸಿದ ನಂತರ ಪರಿಸ್ಥಿತಿಯನ್ನು ಸುಧಾರಿಸಲು ಬಯಸಿದರು. ಆಕೆ ಮೊದಲಿನಿಂದಲೇ ತಮ್ಮ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮತ್ತು ತಮ್ಮದೇ ಆದ ಏನನ್ನಾದರೂ ಮಾಡಲು ಬಯಸುತ್ತಿದ್ದರು. ಆಕೆ ವೃತ್ತಿಪರವಾಗಿ ಬಟ್ಟೆ ಹೊಲಿಯುವ ತೀರ್ಮಾನವನ್ನು ತೆಗೆದುಕೊಂಡರು, ಆದರೆ ಹೊಲಿಯುವ ಯಂತ್ರಕ್ಕಾಗಿರುವ ಹೂಡಿಕೆ ಒಂದು ಅಡ್ಡಿಯಾಗಿ ನಿಂತಿತ್ತು. ಅದಕ್ಕಿರುವ ಪರಿಹಾರವನ್ನು ಹುಡುಕುತ್ತಿರುವಾಗ ತಮ್ಮ ಮನೆಯ ಹತ್ತಿರ ಚೈತನ್ಯದ ಒಂದು ಭಿತ್ತಿಪತ್ರ ವನ್ನು ಗಮನಿಸಿದರು. ಆಕೆ 25 ಸಮಾನ ಮನಸ್ಕರಾದ ಮಹಿಳೆಯರನ್ನು ಒಟ್ಟುಗೂಡಿಸಿ ಒಂದು ಗುಂಪನ್ನು ರಚಿಸಿದರು ಮತ್ತು ಗುಂಪಿನ ಮುಖಂಡೆಯಾದರು. ಆಕೆಯ ಮೊದಲ ಸಾಲ ರೂ. 10,000/-ದ್ದಾಗಿದ್ದು ಆ ಮೊತ್ತವು ಆಕೆಯ ಹೊಲಿಯುವ ಯಂತ್ರದ ಅಗತ್ಯವನ್ನು ಪೂರೈಸಿತು ಹಾಗೂ ಆಕೆಯ ಪತಿ ಸುಸ್ಥಿರವಾದ ಜೀವನವನ್ನು ಶುರು ಮಾಡಲು ಬೆಂಬಲ ನೀಡಿತು. ಆಕೆ ರೂ. 25,000ದ ಮತ್ತೊಂದು ಸಾಲವನ್ನು ಪಡೆದು ಪಶು ಸಂಗೋಪನೆಯನ್ನು ಶುರು ಮಾಡಲು ಕುರಿಗಳನ್ನೂ ಖರೀದಿಸಿದರು. ತಕ್ಕ ಮಟ್ಟಿನ ಆದಾಯ ಮತ್ತು ಆತ್ಮವಿಶ್ವಾಸವನ್ನು ಗಳಿಸಿದ ನಂತರ ಆಕೆ ರೂ. 50,000ದ ದೊಡ್ಡದಾದ ಸಾಲ ಮೊತ್ತವನ್ನು ಪಡೆದು ಅದನ್ನು ಕೃಷಿಯಲ್ಲಿ ಹೂಡುವುದರೊಂದಿಗೆ ತಮ್ಮ ಮಕ್ಕಳಿಗಾಗಿ ಗುಣಮಟ್ಟದ ವಿದ್ಯಾಭ್ಯಾಸವನ್ನೂ ಗಳಿಸಿದರು. ತಮ್ಮ ಪಯಣವನ್ನು ನಮ್ಮ ತಂಡದ ಒಬ್ಬ ಸದಸ್ಯರೊಂದಿಗೆ ಹಂಚಿಕೊಳ್ಳುವಾಗ ಆಕೆ, "ಈ ರೀತಿಯ ಚಿಕ್ಕ ಆರ್ಥಿಕ ನೆರವು ಕ್ರಮೇಣವಾಗಿ ನಮ್ಮ ಜೀವನವನ್ನು ಬದಲಾಯಿಸುತ್ತದೆ ಮತ್ತು ನಮಗೆ ಸಶಕ್ತರಾದ ಅನುಭವ ನೀಡುತ್ತದೆ" ಎಂದರು.
ಸಮಾಜಕ್ಕಾಗಿ ನಮ್ಮ ಕೈಲಾದುದನ್ನು ಮಾಡುವುದು
ಪ್ರತಿಯೊಬ್ಬ ವ್ಯಕ್ತಿಯೂ ಒಂದು ಸುರಕ್ಷಿತ, ಆರೋಗ್ಯಕರ, ಜವಾಬ್ದಾರಿಯುತ ಸಮಾಜವನ್ನು ರಚಿಸುವ ಹೊಣೆಹೊಂದಿರಬೇಕು. ಸಣ್ಣದಾದರೂ ಪರಿಣಾಮಕಾರಿಯಾದ ಹೆಜ್ಜೆಗಳನ್ನು ಕೈಗೊಳ್ಳುವ ಮೂಲಕ ಇಂತಹ ಪರಿಸರವನ್ನು ರಚಿಸಲು ಚೈತನ್ಯ ಶ್ರಮಿಸುತ್ತದೆ. ಈ ತ್ರೈಮಾಸಿಕ ಅವಧಿಯಲ್ಲಿ ಚೈತನ್ಯದ ತಂಡವು POSH ಅರಿವು, ನನ್ನ ಕುಟುಂಬ ನನ್ನ ಜವಾಬ್ದಾರಿ (COVID ಅರಿವು ಮತ್ತು ರಸ್ತೆ ಸುರಕ್ಷೆ ಅರಿವು) ಮೊದಲಾದ ವಿವಿಧ ಉಪಕ್ರಮಗಳಲ್ಲಿ ತೊಡಗಿತ್ತು.
ಸರಳ ಹೆಜ್ಜೆಗಳು ಆಳ ಪರಿಣಾಮವನ್ನು ಬೀರುತ್ತವೆ
ನೆನಪಿನಲ್ಲಿಡುವಂತಹ ಕ್ಷಣಗಳು
ಮಹಾರಾಷ್ಟ್ರದ ಸತಾರದಲ್ಲಿ ಚೈತನ್ಯ ಸರಣಿ ಜಾನುವಾರು ಆರೋಗ್ಯ ಶಿಬಿರಗಳನ್ನು ನಡೆಸಿತು ಮತ್ತು ಸುಮಾರು 602 ಮನೆಗಳಲ್ಲಿ ಸಕಾರಾತ್ಮಕ ಪರಿಣಾಮವನ್ನುಂಟುಮಾಡಿತು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಗ್ರಾಹಕ ದೂರುಗಳಿಗಾಗಿ ದೂರವಾಣಿ ಸಂಖ್ಯೆ:
MFIN: 1800-102-1080,
ಕರ್ನಾಟಕ: 1800-103-5185
ಮಹಾರಾಷ್ಟ್ರ: 1800 2126 685,
ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ : 1800-1216-685
ನಮ್ಮನ್ನು ಸಂಪರ್ಕಿಸಲು communication@chaitanyaindia.in ಗೆ ಬರೆಯಿರಿ. ನಮ್ಮನ್ನು ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮತ್ತು ಲಿಂಕ್ಡ್ಇನ್ ನಲ್ಲಿ ಫಾಲೊ ಮಾಡಿ.