ಕೇಳು ಮನಸೇ
೯೦ ನಿಮಿಷ - ಓದುಗರು ಆರು, ಭಾವನೆ ನೂರಾರು!
ಆರು ಓದುಗರು ಒಬ್ಬರಾದ ಮೇಲೆ ಒಬ್ಬರು ಕನ್ನಡದ ಕತೆ ಮತ್ತು ಕವನಗಳನ್ನು ಮನಮುಟ್ಟುವಂತೆ ಓದುವ ಕಾರ್ಯಕ್ರಮ.
ಎಲ್ಲಾ ವಯಸ್ಸಿನವರೂ ಕೇಳಬೇಕಾದ ನೋಡಬೇಕಾದ ಮನರಂಜನೆ ತುಂಬಿದ ಸದಭಿರುಚಿಯ ಕೌಟುಂಬಿಕ ಕಾರ್ಯಕ್ರಮ.
ಕೇಳು ಮನಸೇ
೯೦ ನಿಮಿಷ - ಓದುಗರು ಆರು, ಭಾವನೆ ನೂರಾರು!
ಆರು ಓದುಗರು ಒಬ್ಬರಾದ ಮೇಲೆ ಒಬ್ಬರು ಕನ್ನಡದ ಕತೆ ಮತ್ತು ಕವನಗಳನ್ನು ಮನಮುಟ್ಟುವಂತೆ ಓದುವ ಕಾರ್ಯಕ್ರಮ.
ಎಲ್ಲಾ ವಯಸ್ಸಿನವರೂ ಕೇಳಬೇಕಾದ ನೋಡಬೇಕಾದ ಮನರಂಜನೆ ತುಂಬಿದ ಸದಭಿರುಚಿಯ ಕೌಟುಂಬಿಕ ಕಾರ್ಯಕ್ರಮ.
ಆಗಸ್ಟ್ ೨೪, ೨೦೨೪
ಶನಿವಾರ ಸಂಜೆ ೬.೦೦ಕ್ಕೆ
24 August 2024
Saturday 06.00 pm
ಪ್ರಕಾಶ್ ಬೆಳವಾಡಿ
ಕಲಾವಿದ, ನಿರ್ದೇಶಕ
ರೂಪಾ ಅಯ್ಯರ್
ಕಲಾವಿದೆ, ನಿರ್ದೇಶಕಿ
ಸುಚೇಂದ್ರ ಪ್ರಸಾದ್
ಕಲಾವಿದ, ನಿರ್ದೇಶಕ
ಸವಿತಕ್ಕ
ಹಾಡುಗಾರ್ತಿ
ಆರ್ಜೆ ವಿಶ್ವಾಸ್ ಕಾಮತ್
ರೇಡಿಯೊ ಮಾತುಗಾರ
ಲೇಖಾ ನಾಯ್ಡು
ಕಲಾವಿದೆ
ಕೇಳು ಮನಸೇ
ಮಂದಿಯ ಎದುರಿಗೆ ಕೂತು ಕನ್ನಡದ ಕತೆ ಮತ್ತು ಕವನಗಳನ್ನು ಮನ ಮುಟ್ಟುವಂತೆ ಓದುವವರಿಗೆ ಒಂದು ಸರಿಯಾದ ವೇದಿಕೆ ಬೇಕಾಗಿತ್ತು. ಸೊಗಸಾದ ಕತೆ ಮತ್ತು ಕವನಗಳನ್ನು ಪ್ರತ್ಯಕ್ಷವಾಗಿ ಕೇಳಲು ಬಯಸುವ ಸುಮಾರು ಮಂದಿಗೆ ಒಂದೊಳ್ಳೆಯ ತಾಣ ಬೇಕಾಗಿತ್ತು. ಈ ಎರಡಕ್ಕೂ ಈಗ ಬಂದಿದೆ, ಕೇಳು ಮನಸೇ.
ಜಗತ್ತಿನ ಎಷ್ಟೋ ನುಡಿಗಳಲ್ಲಿ ಓದುವಿಕೆಯು ಒಂದು ಕಲೆ. ಆ ಕಲೆಯನ್ನು ಬಳಸಿಕೊಂಡು ಸಾಹಿತ್ಯದ ಓದು ಮತ್ತು ಕೇಳುವಿಕೆಗಳತ್ತ ಮಂದಿಯ ಒಲವನ್ನು ಬೆಳೆಸುವುದೇ ಕೇಳು ಮನಸೇ ಕಾರ್ಯಕ್ರಮದ ಗುರಿ.
ಹೊಸ ಓದುಗರನ್ನು ಮತ್ತು ಹೊಸ ಕೇಳುಗರನ್ನು ಹುಟ್ಟು ಹಾಕಿ, ಒಂದೊಳ್ಳೆಯ ಸಾಹಿತ್ಯದ ವಾತಾವರಣವನ್ನು ಸಮಾಜದಲ್ಲಿ ಕಟ್ಟುವ ಯೋಜನೆಯೇ ಕೇಳು ಮನಸೇ.
ಕೇಳು ಮನಸೇ ಕಾರ್ಯಕ್ರಮದಿಂದಾಗಿ ಬರಹಗಾರರಿಗೆ, ಪ್ರಕಾಶಕರಿಗೆ, ಮುದ್ರಕರಿಗೆ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕನ್ನಡ ಸಾಹಿತ್ಯವನ್ನು ಹರಡುತ್ತಿರುವವರಿಗೆ ಗ್ರಾಹಕರು ಸಿಗುವಂತಾಗುತ್ತದೆ.
ಕೇಳು ಮನಸೇ, ಒಂದು ಸದಭಿರುಚಿಯ ಅತ್ಯುತ್ತಮ ಗುಣಮಟ್ಟದ ಮನರಂಜನಾ ಕಾರ್ಯಕ್ರಮ. ಒಟ್ಟಾರೆಯಾಗಿ ಒಂದು ಹೊಸ ಬಗೆಯ ಕನ್ನಡದ ಕೆಲಸ.
ಬಗೆ ಬಗೆಯ ಮೂರು ಕತೆ ಮತ್ತು ಹತ್ತು ಕವನಗಳ ಓದನ್ನು ಒಳಗೊಂಡಿರುವ ಸುಮಾರು ಒಂದೂರವರೆ ತಾಸಿನ ಕಾರ್ಯಕ್ರಮ. ಕತೆಗಳಿಗೆ ಮೂರು ಜನ ಮತ್ತು ಕವನಗಳಿಗೆ ಮೂರು ಜನ ಓದುಗರು. ಕವನ ಕತೆ ಕವನ... ಹೀಗೆ ಓದು ಸಾಗುತ್ತದೆ.
ಓದಿಗೆ ಸರಿಯಾದ ತರಬೇತಿ ಕೊಟ್ಟು ಸುಂದರವಾಗಿ ಕಾರ್ಯಕ್ರಮವನ್ನು ನಡೆಸುವತ್ತಲೇ ಮೊದಲ ಗಮನ. ಕೇಳುಗರ ಮನಮುಟ್ಟುವುದೇ ಕಾರ್ಯಕ್ರಮದ ಮುಖ್ಯ ಗುರಿ ಆಗಿರುವುದರಿಂದ, ಓದುವ ಕತೆ-ಕವನಗಳು ಮತ್ತು ಓದುಗರನ್ನು ಆಯ್ಕೆ ಮಾಡುವುದು ಅದೇ ಮಾನದಂಡದಲ್ಲಿ. ಕಾರ್ಯಕ್ರಮದ ಟಿಕೇಟು ಒಬ್ಬರಿಗೆ 150 ರೂಪಾಯಿಗಳು. ಅಷ್ಟರಲ್ಲೇ ಕೇಳುಗರಿಗೆ ಒಂದು ಮರೆಯದ ಅನುಭವ ನೀಡಬೇಕೆಂಬುದೇ ಕೇಳು ಮನಸೇಯ ಬಯಕೆ.
ಕನ್ನಡದಲ್ಲಿ ಬರಹಗಾರರು ಮತ್ತು ಓದುಗರನ್ನು ಕಟ್ಟುತ್ತಿರುವ ಹರಿವು ಬುಕ್ಸ್ ಕನ್ನಡದ ಈ ಕೆಲಸಕ್ಕೆ ಬೆಂಬಲ ನೀಡುತ್ತಿದೆ. ಒಡನಾಡಿಯಾಗಿ ಒಲವು ಸಿನಿಮಾ ಮತ್ತು ತ್ರಿಲೋಕ ಬರಹ ಕೆಲಸ ಮಾಡುತ್ತಿವೆ. ಬಿಗ್ 92.7 ಎಫ್ ಎಂ ಬಾನುಲಿ ಗೆಳೆಯರಾಗಿ ಹುರುಪು ತುಂಬುತ್ತಿದ್ದಾರೆ.
ಬನ್ನಿ, ಕೇಳು ಮನಸೇ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಸೊಗಸಾಗಿ ಕತೆ, ಕವನಗಳನ್ನು ಕೇಳಬಹುದು.
ಬನ್ನಿ, ಕೇಳಿ, ಆನಂದಿಸಿ, ಅನುಭವಿಸಿ...