My career My Choice
ಹಾಸನ ಜಿಲ್ಲೆಯ ರೈತ ಬಂಧುಗಳಿಗೆ ಹಾರ್ದಿಕ ಸ್ವಾಗತ.
ಈ ಪುಟದಲ್ಲಿ ನೀವು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (AI) ಹೇಗೆ ಉಪಯೋಗಿಸಬಹುದು ಎಂಬ ಸರಳ ಮಾಹಿತಿಯನ್ನು ಪಡೆಯಬಹುದು.
• ಬೆಳೆ ಆಯ್ಕೆ ಸಲಹೆಗಳು
• ಹವಾಮಾನ ಮಾಹಿತಿ ಆಧಾರಿತ ಸೂಚನೆಗಳು
• ರೋಗ ಮತ್ತು ಕೀಟಗಳ ಗುರುತು ಹಾಗೂ ಪರಿಹಾರ
• ಮಾರುಕಟ್ಟೆ ಬೆಲೆ ಮಾಹಿತಿ
• ವೆಚ್ಚ ಕಡಿಮೆ ಮಾಡುವ ವಿಧಾನಗಳು
1️⃣ ನಿಮ್ಮ ಪ್ರಶ್ನೆಯನ್ನು ಸರಳವಾಗಿ ಟೈಪ್ ಮಾಡಿ
ಉದಾಹರಣೆ: “ಅಕ್ಕಿ ಬೆಳೆ ರೋಗ ಪರಿಹಾರ” “ಮಳೆಯಿಲ್ಲದೆ ಬೆಳೆ ಉಳಿಸುವುದು ಹೇಗೆ?”
2️⃣ ಸ್ಪಷ್ಟ ಉತ್ತರವನ್ನು ಓದಿ 3️⃣ ಬೇಕಾದರೆ ಮತ್ತಷ್ಟು ಪ್ರಶ್ನೆ ಕೇಳಿ
ತಂತ್ರಜ್ಞಾನವನ್ನು ನಿಮ್ಮ ಹೊಲಕ್ಕೆ ತಲುಪಿಸುವುದು.
ರೈತನಿಗೆ ಸ್ಪಷ್ಟ ಮಾಹಿತಿ – ಸರಿಯಾದ ಸಮಯದಲ್ಲಿ.
ಒಂದು ಪ್ರಶ್ನೆ ಕೇಳಿ. ಒಂದು ಪರಿಹಾರ ಪಡೆಯಿರಿ. ಒಂದು ಹೆಜ್ಜೆ ಮುಂದೆ ಹೋಗಿ. ಧನ್ಯವಾದಗಳು 🙏
ಕಿರಣ್ ಅವರ ಭಾಷಣದ ಪೂರ್ಣ ಪಠ್ಯ ಇಲ್ಲಿದೆ:
ಪ್ರೀತಿಯ ರೈತ ಬಾಂಧವರೇ ನಾನು ಇಲ್ಲಿ ಟೆಕ್ನಾಲಜಿ ಬಗ್ಗೆ ಏನು ಮಾತಾಡಲಿಕ್ಕೆ ಬಂದಿಲ್ಲ. ನಿಮಗೆಲ್ಲರಿಗೂ ಎಐ ಬಗ್ಗೆ ಒಂದು ಕಥೆಯಿಂದ ಶುರು ಮಾಡ್ತೀನಿ. ಕಥೆ ಏನಪ್ಪಾ ಅಂದ್ರೆ ನಾನು ಹಾಸನದವನೇ. ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ರು ಕೂಡ ನಮ್ಮೂರು ಅರಸೀಕೆರೆ ರೋಡ್ನಲ್ಲಿರೋ ನಿಡೋಡಿ ಅಂತ ದುದ್ದ ಹತ್ರ ಬರುತ್ತೆ. ನಮ್ಮ ದೊಡ್ಡಪ್ಪನ ಮಕ್ಕಳೆಲ್ಲ ಇವಾಗಲೂ ಇಲ್ಲೇ ಇದ್ದಾರೆ. ನಮ್ಮ ಜಮೀನೆಲ್ಲ ಇಲ್ಲೇ ಇರೋದ್ರಿಂದ ಇಲ್ಲಿಗೆ ಹೋಗಿ ಬಂದು ಮಾಡ್ತಾ ಇರ್ತೀನಿ. ಮತ್ತೆ ನಾನು ಇಲ್ಲಿ ಓದಿದ್ದು ಕೂಡ ಮಲ್ನಾಡು ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಮಲ್ನಾಡು ತಾಂತ್ರಿಕ ವಿದ್ಯಾಲಯದಲ್ಲಿ ಮತ್ತೆ ಇಲ್ಲಿ ಇವಾಗಲೂ ಬಂದು ಮಾರ್ಗದರ್ಶನ ಮಾಡ್ತಾ ಇರ್ತೀನಿ. ಆ ಕಾರಣದಿಂದ ಆಕಾಶವಾಣಿ ಜೊತೆ ಸಂಪರ್ಕ ಸಿಕ್ತು ಇವಾಗ ಎಐ ಬಗ್ಗೆ ಹೇಳಬೇಕು ಅಂದ್ರೆ ಒಬ್ಬ ರೈತನ ದಿನಚರ್ಯ ನೋಡ್ಕೊಂಡ್ರೆ ಇವಾಗ ಇಷ್ಟೊಂದು ಎಐ ಮುಂದುವರೆದಿದ್ದರೂ ಕೂಡ ಟೆಕ್ನಾಲಜಿ ಮುಂದುವರೆದಿದ್ದರೂ ಕೂಡ ನಮ್ಮ ದೊಡ್ಡಪ್ಪನ ಮಕ್ಕಳು ಕೂಡ ಇವಾಗಲೂ ರೈತರೇ ಅವರು ಏನು ಮಾಡ್ತಾರೆ ಅಂದ್ರೆ ಒಂದು ಬೀಜ ಹೀಗೆ ಬಿತ್ತನೆ ಮಾಡಬೇಕು ಅಂದ್ರೆ ಬೆಳಗ್ಗೆ ನಾಲ್ಕು ಗಂಟೆ ಅಷ್ಟೊತ್ತಿಗೆ ಒಂದು ಬೀಜ ಜೋಳ ಇರಬಹುದು ರಾಗಿ ಇರಬಹುದು ತಗೊಂಡು ಹೋಗ್ತಾ ಇರ್ತಾರೆ ಬಟ್ ಅವರ ಮನಸ್ಸಿನಲ್ಲಿ ಒಂದು ಕಳವಳ ಇದ್ದೆ ಇರುತ್ತೆ ಏನಾಗುತ್ತೆ ಈ ಸೀಸನ್ ನಲ್ಲಿ ಚೆನ್ನಾಗಿ ಮಳೆ ಬರುತ್ತಾ ಬಿಸಿಲು ತುಂಬಾ ಜಾಸ್ತಿ ಆಗುತ್ತಾ ಒಣಗೋಗುತ್ತಾ ಒಳ್ಳೆ ರೇಟ್ ಸಿಗುತ್ತಾ ಕೆಲವು ಸಲ ಏನಾಗಿ ಹೋಗುತ್ತೆ ತುಂಬಾ ಬೆಳೆ ಚೆನ್ನಾಗಿ ಬಂದ್ರು ಕೂಡ ಆ ಟೈಮ್ ನಲ್ಲಿ ಅವರಿಗೆ ಒಳ್ಳೆ ರೇಟ್ ಸಿಗದೇನೆ ಇರೋ ಚಾನ್ಸಸ್ ತುಂಬಾ ಇದೆ. ಸೋ ಆತರ ತುಂಬಾ ಸಲನು ಕೂಡ ಆಗಿದೆ. ಇನ್ನು ಕೆಲವು ಸಲ ಏನಾಗುತ್ತೆ ಸಡನ್ ಆಗಿ ಬೆಂಕಿ ಬೀಳುವ ಚಾನ್ಸಸ್ ಇದೆ. ಸೋ ಇವಾಗ ಏನಾಗಿದೆ ಈ ವಾಟ್ಸಪ್ ಮೂಲಕ ಏನಾಗಿೋಗಿದೆ ತುಂಬಾ ನೆಗೆಟಿವ್ ಇನ್ಫಾರ್ಮೇಷನ್ ಕೂಡ ಬರ್ತಾ ಇದೆ ಕೆಲವರು ಹೇಳ್ತಾ ಇದ್ರು ಅವರ ಭಾಷಣದಲ್ಲಿ ತುಂಬಾ ಕನ್ಫ್ಯೂಷನ್ ಕೂಡ ಇದೆ ಸಿಸ್ಟಮ್ ನಲ್ಲಿ ಮತ್ತೆ ನಾವು ಈ 35 ವರ್ಷ ಇದ್ರೂ ಕೂಡ ಈ ಐಟಿ ಫೀಲ್ಡ್ ನಲ್ಲಿ ನಮ್ಗಳಿಗೆ ತುಂಬಾ ದಿವಸ ತಗೊಂತು ಇದರ ಬಗ್ಗೆ ಏನೇನು ಕಲಿಬೇಕು ಅಂತ ಇನ್ನ ರೈತ ಬಾಂಧವರಿಗೆ ಎಷ್ಟು ದಿನ ಆಗಬಹುದು ಮತ್ತೆ ಕಲಿಲಿಕ್ಕೆ ಆಗುತ್ತಾ ನಿಜವಾಗಲೂ ಕೂಡ ಅನ್ನೋ ಮನಸ್ಸಿನಲ್ಲಿ ಒಂತರ ಗಾಬರಿ ಇದ್ದೆ ಇರುತ್ತೆ ಅದಕ್ಕೆ ಏನು ಮಾಡಬಹುದು ಅನ್ನೋದನ್ನ ಇದರ ಮೂಲಕ ಹೇಳಿಕೊಡ್ತಾ ಇದ್ದೀನಿ ಇವಾಗ ಆತರ ಆದ್ರೆ ಅವರ ಮಕ್ಕಳು ಇರುವಾಗ ತುಂಬಾ ಚೆನ್ನಾಗಿ ಕಲಿತಾ ಇದ್ದಾರೆ ಅವರು ಮುಂದೆ ಒಳ್ಳೆ ಒಳ್ಳೆ ಕಾಲೇಜುಗಳಲ್ಲಿ ಓದ್ತಾ ಇದ್ದಾರೆ ಮತ್ತೆ ಅವರು ಒಳ್ಳೆ ಒಳ್ಳೆ ಸ್ನೇಹಿತರ ಜೊತೆನೂ ಕಲಿತಾ ಇದ್ದಾರೆ ಅವಾಗ ಏನಾಗುತ್ತೆ ನಮ್ಮ ಹಳ್ಳಿ ಗಾಡ್ ಕಡೆ ಇರುವ ರೈತರು ಇರಬಹುದು ಅವರ ಮಕ್ಕಳು ಬಂದು ಅಪ್ಪ ಈ ಮೊಬೈಲ್ ಆಪ್ ಮೂಲಕ ನೀನು ಚೆನ್ನಾಗಿ ಬೇಕಾದರೆ ಹವಾಮಾನ ವರದಿನ ತಿಳ್ಕೊಂಡು ಬೆಳೆಸಬಹುದು ಅಂತ ಹೇಳಿದ್ರೆ ಅವರಿಗೆ ಅಪ್ಪನ ನಂಬಿಕೆ ಏ ನು ಬರಲ್ಲ ಯಾಕಂದ್ರೆ ಅವರ ತಾತನ ಕಾಲದಿಂದಲೂ ಆಕಾಶ ನೋಡಿ ಬೆಳೆ ಮಾಡು ಅಂತ ಕಳಿಸಿರ್ತಾರೆ ಇಲ್ಲ ನಮ್ಮ ಅಪ್ಪನ ಕಾಲದಲ್ಲಿ ಹವಾಮಾನ ವರದಿ ನೋಡಿ ಮಾಡು ಸೋ ಅವರು ಅದನ್ನೇ ನಂಬಿಕೊಂಡು ಇವಾಗ ಅವರು ಬಿತ್ತನೆ ಮಾಡ್ತಾ ಇದ್ದಾರೆ ಇವಾಗ ಸಡನ್ ಆಗಿ ಒಂದು ಮೊಬೈಲ್ ಆಪ್ ನೋಡ್ಕೊಂಡು ಬಿತ್ತನೆ ಮಾಡು ಅಂದ್ರೆ ನಂಬೋದು ಬಹಳ ಕಷ್ಟ ಆಗುತ್ತೆ ಸೋ ಅದು ನಿಜನೇ ಅದಕ್ಕೆ ಏನು ಮಾಡಬಹುದು ಅಂದ್ರೆ ಇವಾಗ ಮಲ್ನಾಡು ತಾಂತ್ರಿಕ ಕಾಲೇಜಿನಲ್ಲಿ ಸುಮಾರು ಮಕ್ಕಳು ವ್ಯವಸಾಯ ಕುರಿತು ಪ್ರಾಜೆಕ್ಟ್ಗಳು ಕೂಡ ಮಾಡ್ತಾ ಇದ್ದಾರೆ ಇವಾಗ ಅದರದ್ದು ಅಡ್ವಾನ್ಸ್ ಏನಪ್ಪ ಅಂದ್ರೆ ಅವರಿಗೆ ಹೊಸ ಹೊಸ ಟೆಕ್ನಾಲಜಿನಲ್ಲಿ ಏನೇನು ಮುಂದುವರೆದಿದೆ ಅದರ ಬಗ್ಗೆ ಜ್ಞಾನ ಅವರಿಗೆ ತುಂಬಾ ಚೆನ್ನಾಗಿ ರಿಲಯಬಲ್ ಸೋರ್ಸಸ್ ಇಂದ ಅವರಿಗೆ ಗೊತ್ತಾಗಿರುತ್ತೆ ನಾನು ಕೂಡ ಅವರಿಗೆ ಬಂದು ಮಾರ್ಗದರ್ಶನ ಮಾಡ್ತಾ ಇರ್ತೀನಿ ಮತ್ತೆ ನಾನು ಒಬ್ಬನೇ ಅಲ್ಲ ನನ್ನ ಸ್ನೇಹಿತರು ನಮ್ಮ ಸಹೋದ್ಯೋಗಿಗಳೇ ಇರಬಹುದು ಬೇರೆ ಕಂಪನಿ ಸಹೋದ್ಯೋಗಿಗಳೇ ಇರಬಹುದು ಮತ್ತೆ ನಮಗೆ ಪ್ರಪಂಚದಾದ್ಯಂತ ನೆಟ್ವರ್ಕ್ ಇದೆ ಮತ್ತೆ ನಾವು ಇನ್ಫೋಸಿಸ್ ಮೂಲಕ ಐದು ವರ್ಷದ ಹಿಂದೆನೆ ಒಂದು ಜರ್ಮನಿಯನಲ್ಲಿ ಬಿಎಸ್ಎಫ್ ಅಂತ ಒಂದು ಕಂಪನಿ ಇದೆ ಅಂತರಾಷ್ಟ್ರೀಯ ಕಂಪನಿ ಇದರ ಬಗ್ಗೆ ಐದು ವರ್ಷದ ಹಿಂದೆನೆ ಅವರು ಏನ್ ಮಾಡ್ತಾರೆ ಬಿಎಸ್ಎಫ್ ನವರು ಗೊಬ್ಬರು ತಯಾರಿ ಮಾಡ್ತಾರೆ ಮತ್ತೆ ಕೀಟನಾಶಕಗಳು ತಯಾರಿ ಮಾಡ್ತಾರೆ ಇದರ ಜೊತೆಗೆ ಪ್ರಪಂಚದಾದ್ಯಂತ ಎಲ್ಲಾ ಫಾರ್ಮರ್ ಗಳಿಗೂ ಅವರು ಕಂಟ್ರಿ ಸ್ಪೆಸಿಫಿಕ್ ಆಗಿ ಇನ್ಫಾರ್ಮೇಷನ್ ಕೊಡ್ತಾ ಇದ್ದಾರೆ ರಿಲಯಬಲ್ ಇನ್ಫಾರ್ಮೇಷನ್ ಅಂದ್ರೆ ನಂಬಲಾರ್ಹವಾದ ಇನ್ಫಾರ್ಮೇಷನ್ ಅವರು ಆಪ್ ಮೂಲಕ ಇಲ್ಲ ವೆಬ್ಸೈಟ್ ಮೂಲಕ ಕೊಡ್ತಾ ಇದ್ದಾರೆ ಅದು ಹೇಗೆ ಕಾರಣ ಆಯ್ತು ಅದರಲ್ಲಿ ನಮ್ಮ ಸಹೋದ್ಯೋಗಿಗಳೇ ಅದರಲ್ಲಿ ಕೆಲಸ ಮಾಡಿದ್ರು ಸುಮಾರು ಮೂರ್ನಾಲ್ಕು ವರ್ಷದಿಂದನು ಕಂಟಿನ್ಯೂಸ್ ಆಗಿ ಕೆಲಸವನ್ನು ಕೂಡ ಮಾಡ್ತಾ ಇದ್ದೀನಿ ಇದರ ಬಗ್ಗೆ ನಿಮಗೆ ಹೆಚ್ಚಿಗೆ ಮಾಹಿತಿಗಳು ಬೇಕು ಅಂದ್ರೆ ಒಂದು ನನ್ನನ್ನು ಕೇಳಿದರೆ ಆಯ್ತು ಇಲ್ಲ ಇನ್ಫೋಸಿಸ್ ವೆಬ್ಸೈಟ್ ಗೆ ಹೋಗಿದ್ದರೆ ಅದರ ಬಗ್ಗೆ ಪೂರ್ತಿ ಮಾಹಿತಿಗಳನ್ನು ಕೂಡ ಕೊಟ್ಟಿದ್ದಾರೆ ಇದರ ಬಗ್ಗೆ ಒಂದು ವಿಡಿಯೋ ಕೂಡ ಇದೆ ನಾವು ಇನ್ಫೋಸಿಸ್ ಉದ್ಯೋಗಗಳು ಹೇಗೆ ಮಾಡಿದ್ರು ಇದರಲ್ಲಿ ಒಂದು ವಿಶೇಷತೆ ಏನಂದ್ರೆ ಟೆಕ್ನಾಲಜಿ ಉಪಯೋಗಿಸಿ ಸ್ಯಾಟಿಲೈಟ್ ಫೀಡ್ಸ್ ಇರಬಹುದು ಮತ್ತೆ ವೆದರ್ ಇನ್ಫಾರ್ಮೇಷನ್ ಇರಬಹುದು ಇದು ಏನಾಗುತ್ತೆ ಇದು ಯಾವುದೇ ಮಧ್ಯವರ್ತಿಗಳ ಸಹಾಯ ಇಲ್ದೇನೆ ಸ್ಟ್ರೈಟ್ ಆಗಿ ನಾವು ಫಾರ್ಮರ್ಸ್ಗೆ ಆಪ್ ಮೂಲಕ ರಿಲೇ ಆಗುತ್ತೆ ಅದರಿಂದ ಅಡ್ವಾಂಟೇಜ್ ಏನಂದ್ರೆ ಇವಾಗ ಎಐ ಬಂದಿರೋದ್ರಿಂದ ಅವರಿಗೆ ಬೇಕಾದ ಲ್ಯಾಂಗ್ವೇಜ್ ನಲ್ಲಿ ಬೇಕಾದ್ರೆ ಕನ್ನಡದಲ್ಲೇ ತಿಳ್ಕೊಬಹುದು ಯಾವುದೇ ತೊಂದರೆ ಇಲ್ದೇನೆ ಯಾವುದೇ ಮಿಸ್ ಟ್ರಾನ್ಸ್ಲೇಷನ್ ಇವಾಗ ಇನ್ನೊಂದು ಪ್ರಾಬ್ಲಮ್ ಏನಾಗುತ್ತೆ ಯಾವುದೇ ಒಂದು ಆಪ್ ಯೂಸ್ ಮಾಡ್ಕೊಂಡು ನೀವು ಮಾಡ್ಬಿಟ್ಟರೆ ಏನಾಗುತ್ತೆ ಅದ ು ನಿಮಗೆ ತಪ್ಪು ಇನ್ಫಾರ್ಮೇಷನ್ ಸಿಗಬಹುದು. ಸೊ ಅದೇನು ತೊಂದರೆ ಇಲ್ದನೆ ಇವಾಗ ಇಂಜಿನಿಯರಿಂಗ್ ಕಾಲೇಜ್ ಇರಬಹುದು ಇಲ್ಲ ಫಸ್ಟ್ ಗ್ರೇಡ್ ಕಾಲೇಜ್ ಇರಬಹುದು ಎಲ್ಲಾ ಕಾಲೇಜ್ ಮಕ್ಕಳು ಕೂಡ ಅವರಿಗೆ ಚೆನ್ನಾಗಿ ಗೈಡೆನ್ಸ್ ಸಿಕ್ಕಿದ್ರೆ ಅವರು ಈ ತರದ ಆಪ್ ಗಳನ್ನ ರೈತರಿಗೆ ಅನುಕೂಲ ಆಗೋ ಹಾಗೆ ಮಾಡಬಹುದು ಅವರಿಗೆಲ್ಲ ನಾವು ಮಾರ್ಗದರ್ಶನ ಮಾಡಲಿಕ್ಕೆ ನಾವು ರೆಡಿಯಾಗಿದ್ದೀವಿ ಆದ್ದರಿಂದ ನಾನು ಈ ಪ್ರೋಗ್ರಾಮ್ಗಳಿಗೆ ಮಧು ಅವರು ನನಗೆ ಇನ್ವೈಟ್ ಮಾಡಿದಾಗ ನಾನು ಬಹಳ ಖುಷಿಯಿಂದ ಒಪ್ಪಿಕೊಂಡೆ ಯಾಕಂದ್ರೆ ನಾನು ಹೇಗೂ ಬರ್ತಾ ಇರ್ತೀನಿ ಮತ್ತೆ ಈ ಮಾಧ್ಯಮದಿಂದ ಲಕ್ಷಾಂತರ ರೈತರಿಗೆ ನಾನು ತಿಳ್ಕೊಳ್ಳೋದಾದ್ರೆ ಅವರಿಗೆ ಸಹಾಯ ಆಗೋದಾದ್ರೆ ನಾನು ಇದರ ಬಗ್ಗೆ ಕೆಲಸ ಮಾಡಲಿಕ್ಕೆ ರೆಡಿಯಾಗಿದ್ದೇನೆ ಸೋ ಆದ್ದರಿಂದ ನಿಮಗೆ ಏನೇ ತೊಂದರೆ ಇದ್ರೂ ಕೂಡ ನಿಮ್ಮದು ಫಸ್ಟ್ ಸ್ಟೆಪ್ ಏನಂದ್ರೆ ನಿಮ್ಮ ಸುತ್ತಮುತ್ತ ಯಾರಾದರೂ ಯುವಕರಿದ್ರೆ ನಿಮ್ಮ ನಂಬಲರ್ ಹವಾದ ಯುವಕರು ಅವರು ಚೆನ್ನಾಗಿ ಓದ್ತಾ ಇದ್ರೆ ಅವರನ್ನ ಕೇಳಿದ್ರೆ ಅವರು ಬೇಕಾದ್ರೆ ಎಐ ನ ಕೇಳಿ ನಿಮಗೆ ಅರ್ಥ ಆಗುವ ಹಾಗೆ ನಿಮಗೆ ವಿವರಿಸಿ ಹೇಳ್ತಾರೆ ನೀವೇ ಡೈರೆಕ್ಟ್ ಆಗಿ ಕಲಿಯೋವರೆಗೂ ಅಥವಾ ಸರ್ಕಾರ ತುಂಬಾ ಕೆಲಸ ಮಾಡ್ತಾರೆ ಈ ನಿಟ್ಟಿನಲ್ಲಿ ಅದು ನಿಮಗೆಲ್ಲ ರೀಚ್ ಆಗೋವರೆಗೂ ಕೂಡ ನೀವು ನಿಮ್ಮ ಹತ್ತಿರದ ಸಂಬಂಧಿಕರು ಇರಬಹುದು ಇಲ್ಲ ನಿಮ್ಮ ಮಕ್ಕಳು ಯಾರಾದ್ರೂ ಇಲ್ಲಿ ಓದ್ತಾ ಇದ್ರೆ ಸೋ ಅವರ ಸಹಾಯ ತಗೊಂಡು ಈ ನಿಟ್ಟಿನ ಲ್ಲಿ ಉಪಯೋಗಿಸಲಿಕ್ಕೆ ಶುರು ಮಾಡಬಹುದು ಅವಾಗ ಅಡ್ವಾಂಟೇಜ್ ಏನಪ್ಪಾ ಅಂದ್ರೆ ನಿಮಗೆ ನಿಧಾನಕ್ಕೆ ಫಾರ್ ಎಕ್ಸಾಂಪಲ್ ಈಗ ಯುಪಿಐ ಬಂದಾಗ ಮೊದಲು ನಮಗೆ ಹಿಂಜರಿಕೆ ಇತ್ತು ನಮ್ಮ ಬ್ಯಾಂಕಿಂದ ಏನಾದರೂ ದುಡ್ಡು ತಗೊಂಡು ಬಿಡ್ತಾರಾ ಇದು ಉಪಯೋಗಿಸೋದು ಸೇಫಾ ಇವಾಗ ನಾವು ಯುಪಿಐ ಇಲ್ದೇನೆ ರೋಡ್ನಲ್ಲಿ ಒಂದು ಎಳೆನೀರು ಕೂಡ ಕುಡಿಯೋಕೆ ಆಗಲ್ಲ ಒಂದು ಪಾನಿಪುರಿ ಕೂಡ ತಿನ್ನೋಕೆ ಆಗಲ್ಲ ಅಕಸ್ಮಾತ್ ಏನಾದರೂ ಅಡ್ರೆಸ್ ಮರೆತು ಹೋದ್ರೆ ನಮ್ಮ ಮೊಬೈಲ್ ಇಲ್ದೇನೆ ಅಡ್ರೆಸ್ ಕೂಡ ಹೋಗಕ ಆಗಲ್ಲ ಯಾಕಂದ್ರೆ ಫೋನ್ ಮೇಲೆ ಡಿಪೆಂಡ್ ಆಗಿಬಿಟ್ಟಿದ್ದವಿ ಬಟ್ ಇವಾಗ ನೋಡಿದರೆ ನಾವು ಆನ್ಲೈನ್ ಬ್ಯಾಂಕಿಂಗ್ ಕೂಡ ಬಹಳ ಕಂಫರ್ಟಬಲ್ ಆಗಿ ಮಾಡ್ತಾ ಇದೀವಿ ಲಕ್ಷಾಂತರ ರೂಪಾಯಿ ವ್ಯವಹಾರಗಳನ್ನು ಕೂಡ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಮಾಡ್ತಾ ಇದ್ದೀವಿ ಅದೇ ತರ ಇದು ಎಐ ಉಪಯೋಗಿಸಿ ನಾವು ಕೃಷಿ ಸಂಬಂಧ ವಿಷಯಗಳನ್ನು ಕೂಡ ಅಷ್ಟೇ ಸುಲಭವಾಗಿ ತಿಳ್ಕೊಬಹುದು ಇದರ ಅಡ್ವಾಂಟೇಜ್ ಏನಪ್ಪಾ ಅಂದ್ರೆ ಇವಾಗ ಏನಾಗುತ್ತೆ ಪ್ರತಿಯೊಬ್ಬರು ಕೂಡ ಇಂಡಿವಿಜುಯಲ್ ಆಗಿ ನಿಮ್ಮದೇ ಆದ ಕನ್ಸರ್ನ್ ಇರುತ್ತೆ ನನಗೆ 10 ಗುಂಟೆ ಮಾತ್ರ ಜಾಗ ಇದೆ ನಾನು ಏನು ಮಾಡಬಹುದು ಇದರಲ್ಲಿ ಇವಾಗ ನೀವು ಸುತ್ತ ಮುತ್ತ ಇರೋ ಬೇರೆ ರೈತರ ಜೊತೆ ಸೇರಿಕೊಂಡು ಮತ್ತೆ ಚೆನ್ನಾಗಿ ಓದ್ತಾ ಇರೋ ಮಕ್ಕಳ ಜೊತೆ ಅವಾಗವಾಗ ಮೀಟ್ ಮಾಡಿಕೊಂಡು ಇನ್ಫಾರ್ಮೇಷನ್ ತಗೊಳ್ತಾ ಇದ್ರೆ ಆವಾಗ ನಿಮಗೆ ನಂಬಿಕೆ ಬರೋತರ ಧೈರ್ಯವಾಗಿ ಕೆಲಸ ಮಾಡಬಹುದು ಅವ ಾಗ ನಿಮಗೆ ಗ್ರಾಜುವಲ್ ಆಗಿ ನಿಮಗೆ ಗೊತ್ತಾಗುತ್ತೆ ಯಾವಯಾವ ಬೆಳೆ ಬೆಳಿಬೇಕು ಯಾವ ಯಾವಾಗ ಒಳ್ಳೆ ರೇಟ್ ಸಿಗ್ತಾ ಇದೆ ಮತ್ತೆ ಯಾರು ರಿಲಯಬಲ್ ಮೀಡಿಯೇಟರ್ಸ್ ಯಾರ್ಯಾರು ಅನ್ನೋ ಇನ್ಫಾರ್ಮೇಷನ್ ನಿಮ್ಮ ಮೊಬೈಲ್ ಆಪ್ ನಲ್ಲೇ ಒಂದೇ ಕಡೆ ಸಿಕ್ತಾ ಇರುತ್ತೆ ಸೋ ಅವಾಗ ಯಾವ ಕನ್ಫ್ಯೂಷನ್ ಇರಲ್ಲ ಸೋ ನಿಧಾನಕ್ಕೆ ನೀವು ಯೂಸ್ ಮಾಡ್ತಾ ಮಾಡ್ತಾ ನಿಮಗೆ ಅದರ ಬಗ್ಗೆ ನಂಬಿಕೆ ಬರುತ್ತೆ ಇವಾಗ ಮಧು ಅವರು ಹೇಳಿದ್ರು ಇದರಲ್ಲಿ ಏನೇನು ತಪ್ಪಾಗಬಹುದು ಅಂದ್ರೆ ಮಿಸ್ ಇನ್ಫಾರ್ಮೇಷನ್ ಸಿಗಬಹುದು ಅನ್ನೋದರ ಬಗ್ಗೆ ಹೇಳೋದಾದ್ರೆ ಇವಾಗ ಇನ್ನೊಂದು ಪ್ರಾಬ್ಲಮ್ ಆಗಿಬಿಟ್ಟಿದೆ ಏನೇ ಪ್ರಾಬ್ಲಮ್ ಬರ್ಲಿ ಎಲ್ಲಾ ಕಡೆ WhatsApp ಎಕ್ಸ್ಪರ್ಟ್ಸ್ ಹುಡ್ಕೊಂಡು ಬಿಡ್ತಾರೆ. ಇವಾಗಲೂ ಅಷ್ಟೇ ನೀವು YouTube ಗೆ ಹೋಗಿ ಯಾವುದೇ ಮಾಧ್ಯಮ ಚಾನೆಲ್ ಗಳಿಗೆ ಹೋಗಿ ಆಗ್ಲೇ ನೂರಾರು ಚಾನೆಲ್ ಗಳಿದಾವೆ ನೀವು ಯಾವುದು ನಂಬೋದು ಯಾವುದನ್ನು ಬಿಡೋದು ಅನ್ನೋದು ಪ್ರಾಬ್ಲಮ್ ಬರುತ್ತೆ ಮತ್ತೆ ಇವಾಗ ಸೈಬರ್ ಫ್ರಾಡ್ ತುಂಬಾ ತೊಂದರೆ ಆಗಿ ಹೋಗಿದೆ ಕೋಟ್ಯಾಂತರ ರೂಪಾಯಿ ತುಂಬಾ ಜನರು ಅವರ ಬ್ಯಾಂಕ್ ಅಕೌಂಟ್ ಇಂದ ಕಳ್ಕೊತಾ ಇದ್ದಾರೆ ಅದೇ ತರ ಇದು ಕೃಷಿ ಸಂಬಂಧನು ಇದೇ ತರ ಆಗ್ಬಿಡುತ್ತಾ ಅನ್ನೋ ಹೆದರಿಕೆ ಇರುತ್ತೆ ಅದರಿಂದ ಒಂದು ಎಚ್ಚರಿಕೆ ಉಪಯೋಗಿಸಬೇಕು ಅಂದ್ರೆ ನಿಮ್ದು ಯಾವುದೇ ತೊಂದರೆ ಇದ್ರು ಕೂಡ ನಿಮ್ಮ ರಿಲಯಬಲ್ ಪರ್ಸನ್ ಯಾರ ಒಬ್ಬರನ್ನ ನೀವು ಇಟ್ಕೋಬೇಕು ಯಾಕಂದ್ರೆ ಏನೇ ತೊಂದರೆ ಇದ್ರು ಅವರಿ ಗೆ ಬೇಕಾದ್ರೆ ವಾಟ್ಪ್ ಮಾಡಿ ಇಲ್ಲ ಅವರನ್ನ ಮೀಟ್ ಮಾಡ್ತಾ ಇರಿ ರೆಗ್ಯುಲರ್ ಆಗಿ ಈಗ ಫಾರ್ಚುನೇಟ್ಲಿ ವಿ ಹ್ಯಾವ್ ಗುಡ್ ನಂಬರ್ ಆಫ್ ಕಾಲೇಜಸ್ ಎಲ್ಲರೂ ಕೂಡ ಒಳ್ಳೆ ಕೆಲಸ ಸಿಗಬೇಕು ಇಲ್ಲ ಒಳ್ಳೆ ಸ್ಟಾರ್ಟಪ್ ಇಂದ ಅವರೇ ಉದ್ಯೋಗ ಸೃಷ್ಟಿ ಮಾಡುವಂತ ಇದರಲ್ಲಿ ಹೋಗಬೇಕು ಅನ್ನೋ ಉದ್ದೇಶ ಇಟ್ಕೊಂಡು ಪ್ರತಿಯೊಬ್ಬರು ಬಹಳ ಕಷ್ಟಪಟ್ಟು ಕೆಲಸ ಮಾಡ್ತಾ ಇದ್ದಾರೆ ಕಷ್ಟಪಟ್ಟು ಓದ್ತಾ ಇದ್ದಾರೆ ಸೋ ಅವರೆಲ್ಲ ಒಳ್ಳೆ ರೀತಿಯಲ್ಲಿ ನಿಮಗೆ ಮಾರ್ಗದರ್ಶನ ಮಾಡ್ತಾರೆ ಸೋ ದಟ್ ಇಸ್ ದ ಬೆಸ್ಟ್ ವೇ ಯಾವುದೇ ವಿಷಯದ ಬಗ್ಗೆ ನಿಮಗೆ ಏನಾದ್ರೂ ಡೌಟ್ ಇದ್ರೆ ನೀವೇ ರಿಸ್ಕ್ ತಗೊಳೋ ಬದಲು ಯು ಕ್ಯಾನ್ ಜಸ್ಟ್ ಬೌನ್ಸ್ ಇಟ್ ಆಫ್ ಅಂದ್ರೆ ಬೇರೆಯವರನ್ನ ಕೇಳ್ಕೊಂಡು ಅದರ ಬಗ್ಗೆ ಮುಂದುವರಿಬೇಕು ಮತ್ತೆ ನನ್ನನ್ನ ಮೊದಲನೇ ಸಲ ನೀವೆಲ್ಲ ನೋಡ್ತಾ ಇದ್ದೀರಾ ನಾಳೆಯಿಂದ ಏನಾಗುತ್ತೆ ನಾನು ಇಲ್ಲಿ ಇರೋದು ಇಲ್ಲ ಬೆಂಗಳೂರಿನಲ್ಲಿ ಇರ್ತೀನಿ ಅವಾಗ ಏನಾಗುತ್ತೆ ಒಂದೋ ನನ್ನ WhatsApp ಮೂಲಕ ಸಂಪರ್ಕ ಮಾಡಬಹುದು ಇಲ್ಲ ನಾನು ಇದೇ ಸಂಪರ್ಕೋಸ್ಕರ ಒಂದು ವೆಬ್ಸೈಟ್ ಕ್ರಿಯೇಟ್ ಮಾಡಿ ನಂದೇ ಒಂದು ವೆಬ್ಸೈಟ್ ಇದೆ ಅದನ್ನ ಮಧು ಅವರ ಕೈಯಲ್ಲಿ ಕೊಟ್ಟಿರ್ತೀನಿ ಅವರು ನಿಮಗೆಲ್ಲ ತಲುಪಿಸ್ತಾರೆ https://igniteailabs.in ಅದರಲ್ಲಿ ನಾನು ಕೃಷಿ ಸಂಬಂಧಿತ ಒಂದು ಸ್ಪೆಸಿಫಿಕ್ ಆಗಿ ಪೇಜ್ ಕ್ರಿಯೇಟ್ ಮಾಡ್ಬಿಟ್ಟು ಅದರಲ್ಲಿ ಇವತ್ತು ಏನೇನು ನಾನು ಮಾತಾಡಿದ್ನೋ ಇ ದರದ್ದು ಒಂದು ಶಾರ್ಟ್ ಸಮ್ಮರಿ ಹಾಕ್ತೀನಿ ಕನ್ನಡದಲ್ಲೇ ಹಾಕ್ತೀನಿ ಅವಾಗ ನಿಮಗೂ ಕೂಡ ಏನಾದ್ರೂ ಮಿಸ್ ಆಗಿದ್ರೆ ಬಿಕಾಸ್ ಇವಾಗ ಸ್ವಲ್ಪ ಫಾಸ್ಟ್ ಆಗಿ ಮಾತಾಡ್ತಾ ಇರಬಹುದು ನಾನು ಇಲ್ಲ ಕೆಲವು ಮಿಸ್ ಆಗಿರಬಹುದು ಕೆಲವು ಡೌಟ್ ಇರಬಹುದು ಅದೆಲ್ಲ ಕೂಡ ನೀವು ಅದರಲ್ಲಿ ಕೇಳೋ ಹಾಗೆ ನಾನು ಒಂದು ಇಮೇಲ್ ಐಡಿ ಕೂಡ ಕೊಡ್ತೀನಿ ಮತ್ತೆ ವೆಬ್ಸೈಟ್ ಇನ್ಫಾರ್ಮೇಷನ್ ಕೂಡ ಕೊಡ್ತೀನಿ ಅದು ಕನ್ನಡದಲ್ಲಿ ಇರೋದ್ರಿಂದ ನೀವು ಮೊಬೈಲ್ ನಲ್ಲೇ ನೋಡ್ಕೋಬಹುದು ಮತ್ತೆ ಏನಾದ್ರೂ ಡೌಟ್ ಇದ್ರೆ ನೀವು ಕೂಡ ಅದರಲ್ಲಿ ಕೇಳಬಹುದು ಸೋ ನಾನಿಲ್ಲಿ ಅವಾಗವಾಗ ಬರ್ತಾ ಇರ್ತೀನಿ ಮತ್ತೆ ನಾನು ಈ ಮಲ್ನಾಡು ತಾಂತ್ರಿಕ ವಿದ್ಯಾಲಯದ ಮಕ್ಕಳ ಜೊತೆ ಒಟ್ಟಿಗೆ ಸೇರ್ಕೊಂಡು ನಿಮಗೆ ಬೇಕಾದ ಆಪ್ ನ್ನು ಕ್ರಿಯೇಟ್ ಮಾಡಲಿಕ್ಕೆ ಅವರಿಗೆ ಮಾರ್ಗದರ್ಶನ ಮಾಡ್ತೀನಿ ಅವಾಗ ಏನಾಗುತ್ತೆ ಬೇರೆ ಯಾವುದೋ ಒಂದು ಸ್ಟ್ರೇಂಜ್ ಆಪ್ ಇನ್ಸ್ಟಾಲ್ ಮಾಡೋ ಬದಲಿ ನಿಮಗೆ ಗೊತ್ತಿರೋ ಸ್ನೇಹಿತರ ಮೂಲಕ ಅಥವಾ ಗೊತ್ತಿರೋ ವಿದ್ಯಾರ್ಥಿಗಳ ಮೂಲಕ ಆಪ್ ಇನ್ಸ್ಟಾಲ್ ಮಾಡಕೊಂಡು ನೀವು ಧೈರ್ಯವಾಗಿ ಉಪಯೋಗಿಸಬಹುದು ಸೋ ಇಷ್ಟೆಲ್ಲ ಮಾತಾಡಲಿಕ್ಕೆ ನನಗೆ ಅವಕಾಶ ಕೊಟ್ಟ ಆಕಾಶವಾಣಿ ಅವರಿಗೂ ಮಾನ್ಯ ಜಿಲ್ಲಾಧಿಕಾರಿಗಳಿಗೂ ಮತ್ತೆ ಇಲ್ಲಿ ನೆರೆದಿರತಕಂತ ಎಲ್ಲರಿಗೂ ತುಂಬಾ ಧನ್ಯವಾದಗಳು