ಲೇಖಕಿ : ಡಾ. ಜಯಲಕ್ಷಿ ಮಂಗಳಮೂರ್ತಿ
ಮಹಿಳಾ ದಾಸ ಸಾಹಿತ್ಯದಲ್ಲಿ ಅಭಿವ್ಯಕ್ತಿಯ ಸವಾಲುಗಳು :-ಯಾವುದೇ ಸಾಹಿತ್ಯ ಪ್ರಕಾರ ಶತಶತಮಾನಗಳವರೆಗೆ ಸೃಜನಾತ್ಮಕತೆಯ ಕ್ರಿಯೆ, ಪ್ರಕ್ರಿಯೆಗಳಿಗೆ ಒಳಗಾಗುತ್ತ, ಅನೇಕ ನೂತನ ಆಯಾಮಗಳನ್ನು ಒಳಗೊಳ್ಳುತ್ತ , ಮಾನವನ ಅಭ್ಯುದಯದಲ್ಲಿ , ವಿಕಾಸಕ್ಕೆ ಪ್ರೇರಕ ಶಕ್ತಿಯಾಗಿ ರೂಹು ಪಡೆಯುವಲ್ಲಿ , ಒಂದು ಸದೃಢವಾದ ಪರಂಪೆಯನ್ನು ನಿರ್ಮಿಸುವಲ್ಲಿ, ಒಂದು ಸಂಸ್ಕçತಿಯ ಪ್ರಮುಖ ಅಂಶವಾಗಿ , ಲಕ್ಷಣವಾಗಿ ಪರಿಗಣಿಸುವಲ್ಲಿ ಆ ಸಾಹಿತ್ಯ ಸ್ರೋತದ ಅಂತಃಸ್ಸತ್ವವಾಗಿರುವ ಮಾನವೀಯ ಮೌಲ್ಯಗಳು, ತತ್ವಗಳು , ಪ್ರಮುಖವೆನಿಸುತ್ತವೆ. ಈ ದಿಸೆಯಲ್ಲಿ ದಾಸ ಸಾಹಿತ್ಯ ಮೇಲ್ಕಾಣಿಸಿದ ಅಂಶಗಳೆಲ್ಲವನ್ನೂ ಒಳಗೊಂಡಿದೆ.
ಯಾವುದೇ ಸಿದ್ಧಾಂತಗಳಲ್ಲಿ, ತತ್ವಗಳಲ್ಲಿ, ದೈವಿಕ ಅಥವಾ ಸಾಂಘಿಕ ಶಕ್ತಿಗಳಲ್ಲಿ ಆಯಾ ಸಮಕಾಲೀನ ಜನ ಮಾನಸ ಹೊಂದಿದ ಅಚಲವಾದ, ಸದೃಢವಾದ ನಂಬಿಕೆಯು, ವಿಶ್ವಾಸ, ಅಥವಾ ಶ್ರದ್ಧೆಯ ರೂಪದಿಂದ ಒಂದು ಶಕ್ತಿಯಾಗಿ ಯುಗ ಯುಗಗಳವರೆಗೂ ಮುಂದುವರೆಯುತ್ತದೆ. ನಂಬಿಕೆಯ ಶಕ್ತಿ ಅಪಾರವಾದುದು . ನಂಬಿಕೆಯ ಅತ್ಯುಚ್ಚವಾದ ಉನ್ನತಸ್ತರವೆ ಭಕ್ತಿಯೆನಿಸುತ್ತದೆ. ಈ ವಿಶ್ವಾಸ, ಭಕ್ತಿಯ ಶಕ್ತಿಯು ವ್ಯಕ್ತಿಗೆ ಅಂತರ್ಮುಖತೆಯ ಅರಿವನ್ನು ಚಿತ್ತಸ್ವಾಸ್ಥö್ಯವನ್ನು ನೀಡುತ್ತದೆ. ಇದೇ ಶಕ್ತಿಯು ಮಾನವ ಹಿತಕ್ಕಾಗಿ, ಮಾನವಕಲ್ಯಾಣಕ್ಕಾಗಿ, ದೈವಿಕ ಸಾಕ್ಷಾತ್ಕಾರಕ್ಕಾಗಿ ಅಲ್ಲದೆ ವಿಶ್ವದ ಮೂಲಭೂತ ಸತ್ಯ ಶೋಧಕ್ಕಾಗಿಯು ವ್ಯಕ್ತಿಯು ತಾನು ಅಪೇಕ್ಷಿಸಿದ ವಿಜ್ಞಾನ ಇನ್ನಿತರ ಕ್ಷೇತ್ರದಲ್ಲಿ ತೊಡಗಿಸಬಹುದು. ಇಂತಹ ಸಮಷ್ಠಿ ಪ್ರಜ್ಞೆ ವಿಶ್ವದಲ್ಲಿಯೇ ಅದ್ಭುತ ಬದಲಾವಣೆಯನ್ನು ತರಬಲ್ಲದು. ದಾಸ ಸಾಹಿತ್ಯವನ್ನು ಕುರಿತಂತೆ ಮೇಲ್ಕಾಣಿಸಿದ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹಿಳಾ ದಾಸ ಸಾಹಿತ್ಯದ ಅಭಿವ್ಯಕ್ತಿಗೆ ಮೂಲಸೆಲೆಯಾಗಿ ಭಕ್ತಿಯ ಹಿನ್ನಲೆಯಲ್ಲಿ ಸಂವೇದನೆ, ಸೃಜನಶೀಲತೆಯ ಪ್ರಕ್ರಿಯೆ, ನಂತರ ಅಭಿವ್ಯಕ್ತಿ ಕಂಡುಬರುತ್ತದೆ.
ಅನುಸಂಧಾನ ಅಂತರ್ಮುಖ ಚಿಂತನೆಯೆನಿಸಿದರೆ ಅಭಿವ್ಯಕ್ತಿ ಅದರ ಬಹಿರ್ ಮುಖ ರೂಪವೆನಿಸುತ್ತದೆ. ಒಂದರ್ಥದಲ್ಲಿ ಅನುಸಂಧಾನವಿಲ್ಲದ ಅಭಿವ್ಯಕ್ತಿ ಅಪೂರ್ಣವೆನಿಸುತ್ತದೆ. ಅಭಿವ್ಯಕ್ತಿಯ ಕ್ರಿಯೆ ಮಾನವ ಪಡೆದಿರುವ ಒಂದು ವಿಶೇಷ ವರ ಅಥವಾ ಶಕ್ತಿ. ಈ ಶಕ್ತಿ ಸೃಷ್ಟಿಯಲ್ಲಿಯ ಪ್ರತಿಯೊಂದು ಘಟಕಗಳಿಂದ , ಚೇತನಗಳಿಂದ ತನ್ನಿಂದ ತಾನೆ ನಿರಂತರವಾಗಿ ಹೊರ ಹೊಮ್ಮುತ್ತಲೆ ಇರುತ್ತದೆ. ಜೈವಿಕವಾಗಿ ನಾವು ಪಡೆದಿರುವ ಕಾಯಿಕ, ವಾಚನಿಕ, ಮಾನಸಿಕ ಮುಂತಾದ ತ್ರಿಕರಣಪೂರ್ವಕ ಆಯಾಮಗಳಿಂದ ಅಭಿವ್ಯಕ್ತಿಸುತ್ತೇವೆ. ಈ ಅಭಿವ್ಯಕ್ತಿ ವೈಚಾರಿಕತೆಯಿಂದ, ಪ್ರಜ್ಞಾಪೂರ್ವವಾಗಿ ಧ್ಯೇಯ ಪರಿಕಲ್ಪನೆಯಿಂದ , ಸಂಕಲ್ಪದಿAದ , ಸಾಧನೆಯ, ಮಹದೋದ್ದೇಶದಿಂದ ದಾಸ ಸಾಹಿತ್ಯದಲ್ಲಿ ಕಂಡು ಬರುತ್ತದೆ. ದಾಸ ಸಾಹಿತ್ಯ ದಾಸಕೂಟವೆಂಬ ಭಕ್ತಿ ಪಂಥದ ಆಧಾರಿತವಾಗಿ ಮೂಡಿಬಂದಿರುವAಥದು.
ಪ್ರಸ್ತುತ ಮಹಿಳಾ ದಾಸ ಸಾಹಿತ್ಯದ ಅಭಿವ್ಯಕ್ತಿಯನ್ನು, ಅಭಿವ್ಯಕ್ತಿಯ ಸವಾಲುಗಳನ್ನು ಗುರುತಿಸುವಾಗ ನಾನು ನಾಲ್ಕು ಸ್ತರಗಳನ್ನು ಗುರುತಿಸಿದ್ದೇನೆ.
೨) ರಚಿತವಾದ ಸಾಹಿತ್ಯವನ್ನು ಸಮಾಜಕ್ಕೆ ತಲುಪಿಸುವ ಹಂತ.
೩) ದಾಸ ಸಾಹಿತ್ಯವನ್ನು ಕುರಿತ ಸಂರಕ್ಷಣೆ, ಪರಿಷ್ಕರಣ ಇತ್ಯಾದಿ.
೪) ಶುದ್ಧಪಾಠದ ಬಗೆಗೆ ತಿಳುವಳಿಕೆ.
ಸೃಜನಶೀಲತೆಯಲ್ಲಿ ಅಭಿವ್ಯಕ್ತಿಯ ಹಲವಾರು ವೈವಿಧ್ಯತೆಯನ್ನು, ವೈಶಿಷ್ಟö್ಯತೆಯನ್ನು ದಾಸ ಸಾಹಿತ್ಯದಲ್ಲಿ ಗುರುತಿಸಬಹುದಾಗಿದೆ. ವಸ್ತು, ಭಾಷೆ, ಶೈಲಿ, ನಿರೂಪಣೆ, ಧೋರಣೆಗಳೆಲ್ಲವನ್ನು ಕುರಿತ ಚಿಂತನೆ ಪ್ರಮುಖವೆನಿಸುತ್ತದೆ. ಮಹಿಳಾ ದಾಸ ಸಾಹಿತ್ಯದ ಪ್ರಾರಂಭಿಕ ಹಂತದಲ್ಲಿ, ಬರವಣಿಗೆಯ ಪರಿಕರಗಳು ಬಳಕೆಯಲ್ಲಿಲ್ಲದ ಕಾಲ. ಆಧ್ಯಾತ್ಮಿಕ ವಿಷಯಗಳೇ ಮುಖ್ಯವಾಗಿರುವಾಗ ಮಡಿಯಿಂದ ಶಾಹಿಯನ್ನು ತಯಾರಿಸಿಕೊಂಡು , ದೇವರ ಮನೆಯಲ್ಲಿ ಕುಳಿತು ರಚನೆ
ಮಾಡುತ್ತಿದಿದ್ದುದು ತಿಳಿದುಬರುತ್ತದೆ. ಪ್ರಥಮ ಹರಿದಾಸಿಯೆನಿಸಿದ ಗಲಗಲಿ ಅವ್ವ, “ಶುಭ್ರವಾದ ಸೀರೆಯ ಮೇಲೆ ಬರೆದಿಡುತ್ತಿದ್ದರು ಎಂದು ತಿಳಿದು ಬರುತ್ತದೆ. ( ಶ್ರೀಮತಿ ರೂಪಾ ರಾಜೇಂದ್ರ ಅವರು ತಾವು ರಚಿಸಿದ “ ಕೋಟಿ ಪ್ರಮೇಯದ ಅವ್ವ”ಎನ್ನುವ ರೂಪಕದಲ್ಲಿ ತಿಳಿಸಿದ್ದಾರೆ. )
ಈ ಪ್ರಥಮ ಘಟ್ಟದ ಹರಿದಾಸಿಯರು ಓದು ಬರಹ ಕಲಿತವರಲ್ಲ, ಮನೆಯಲ್ಲಿ, ಮಂದಿರಗಳಲ್ಲಿ ನಡೆಯುತ್ತಿದ್ದ ಪುರಾಣ, ಪ್ರವಚನಗಳ ಶ್ರವಣವೇ ಅವರ ಅನುಸಂಧಾನದ ಮೂಸೆಯಿಂದ ಕೃತಿಗಳಾಗಿ ಹೊರ ಹೊಮ್ಮಿವೆ. ಹೆಳವನಕಟ್ಟೆ ಗಿರಿಯಮ್ಮನಿಗೆ ರಂಗೋಲಿ ಚಿತ್ರಕಲೆ ಬಾಲಗೋಪಾಲನ ದರ್ಶನದ ಮಾಧ್ಯಮವಾಯಿತು. ಹರಪನಹಳ್ಳಿ ಭೀಮವ್ವನವರಿಗಿಂತೂ ಕೃತಿಗಳು ಹೊರಹೊಮ್ಮುವ ಸಂದರ್ಭದಲ್ಲಿ ಅವರು ಪಡುತ್ತಿರುವ ತಳಮಳವನ್ನು ನೋಡಲಾರದೆ ಮನೆಯ ಹಿರಿಯರೆ ಒಬ್ಬ ಗುಮಾಸ್ತನನ್ನು ನೇಮಿಸಿದ್ದರೆಂದು ತಿಳಿದುಬರುತ್ತದೆ. ಭೀಮವ್ವನವರ ಕೀರ್ತನಗಳು ಸುದೀರ್ಘಬಂಧದಲ್ಲಿರುವ ಕಥನಕಾವ್ಯಗಳೆಲ್ಲವೂ ಬರೆಯಿಸಲ್ಪಟ್ಟವುಗಳು. ಭೀಮವ್ವನವರು ಸಾಂಕೇತಿಕ ಪದಗಳನ್ನು ಹೇಳಲು ಪ್ರಾರಂಭಿಸಿದೊಡನೆ ವಹಿ ಮತ್ತು ಟಾಕು ಹಿಡಿದು ಕೃತಿಯನ್ನು ಬರಹರೂಪಕ್ಕಿಳಿಸಲು ತಯಾರಾಗುತ್ತಿದ್ದರೆಂದು ತಿಳಿದು ಬರುತ್ತದೆ. ಭೀಮವ್ವನವರಿಗೆ ಸ್ವಪ್ನದಲ್ಲಿ ದರ್ಶನನಾದ ಸನ್ನಿವೇಶಗಳು ಕೃತಿಗಳಾಗಿ ಹೊಮ್ಮುತ್ತಿದ್ದವಂತೆ.
ರಾಯಚೂರಿನ ಅನುಭಾವಿ ಮಹಿಳೆ ಹನುಮಂತವ್ವ “ಶ್ರೀ ವೆಂಕಟೇಶ” ಅಂಕಿತದಿAದ ಅನೇಕ ರಚನೆ ಮಾಡಿದ್ದಾರೆ. ಈಕೆಯನ್ನು “ಯೋಗಿನಿ” ಎಂದು ಗೌರವಿಸಲಾಗುತ್ತದೆ. ಈಕೆ ಕಟ್ಟಿಗೆಯ ಹಲಗೆಯಿಂದ ಚೌಕಾಕೃತಿಯ ಡಬ್ಬಿಗಳನ್ನು ಮಾಡಿ ಅದರಲ್ಲಿ ಉಸುಕು ತುಂಬಿಸಿ ಅವುಗಳ ಮೇಲೆ ಬರೆಯುತ್ತಿದ್ದರಂತೆ.
ದಾಸ ಸಾಹಿತ್ಯ ಕ್ಷೇತ್ರದಲ್ಲಿ “ಅಂಕಿತ” ಪಡೆದ ಹರಿಭಕ್ತೆಯರು ಅಪಾರಸಂಖ್ಯೆಯಲ್ಲಿ ಕೀರ್ತನ, ಸುಳಾದಿ, ಉಗಾಭೋಗ, ಒಗಟುಗಳು, ರೂಪಕಗಳು, ಕಥೆಗಳು ಮುಂತಾಗಿ ಎಲ್ಲ ಪ್ರಕಾರಗಳಲ್ಲಿಯೂ ರಚಿಸುತ್ತಿದ್ದಾರೆ. ಸೃಜನೇತರ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದಾಸಸಾಹಿತ್ಯದಲ್ಲಿ ಸಂಶೋಧನಾಧ್ಯಯನವನ್ನು ಕೈಗೊಂಡಿದ್ದಾರೆ.
ಇತ್ತೀಚಿನ ದಶಕಗಳಲ್ಲಿನ ಸೃಜನ ಶೀಲತೆಗೆ ಚರಿತ್ರಾತ್ಮಕವಾದ, ಐತಿಹಾಸಿಕವಾದ ಚಿಂತನೆ, ಗುರುಕಕ್ಷ, ದಾಸಕಕ್ಷ, ಯತಿಕಕ್ಷ ಮತ್ತು ದೇವಕಕ್ಷದ ಸ್ತೋತ್ರ, ಪರಂಪರೆಯ ಚಿತ್ರಣ ಗೈದ ಕಾರ್ಯ, ಸಾಧನೆಗಳು ವಸ್ತು ವೈಶಿಷ್ಟö್ಯತೆಯನ್ನು ನೀಡುತ್ತಿವೆ. ಪ್ರಾಚೀನ ಹರಿದಾಸರನ್ನು ಅರ್ವಾಚೀನರು, ಅರ್ವಾಚೀನರನ್ನು ಆಧುನಿಕ ಹರಿದಾಸರು ತಮ್ಮ ಕೃತಿಗಳಲ್ಲಿ ಚಿತ್ರಿಸುವುದರ ಮೂಲಕ ಮುಂಬರುವ ಜನಾಂಗಕ್ಕೆ ಇತಿಹಾಸವನ್ನು ಕಟ್ಟಿಕೊಡುವ ಗುರುತರವಾದ ಕಾರ್ಯ ನಡೆಯುತ್ತಿದೆ.
ಸಂಗ್ರಹದ , ಪ್ರಕಾಶನದ, ಮುದ್ರಣದ ಸೌಲಭ್ಯವಿರುವ ಇಂದಿನ ದಿನಮಾನಗಳಲ್ಲಿ ದಾಸ ಸಾಹಿತ್ಯವನ್ನು ಕುರಿತ ರಕ್ಷಣೆಯ ಕಾರ್ಯ ಸ್ವತಃ ರಚಯಿತರಿಂದಲೂ, ಸಂಘ ಸಂಸ್ಥೆಗಳಿAದಲೂ ಜರುಗುತ್ತಿವೆ. ಆದರೂ ಸಮಗ್ರ ಮಹಿಳಾ ದಾಸ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸಿ ಪರಿಷ್ಕರಿಸಿ ನೀಡುವಲ್ಲಿಯ ಕೊರತೆಯನ್ನು ಒಪ್ಪಿಕೊಳ್ಳಬೇಕಿದೆ.
II ದಾಸ ಸಾಹಿತ್ಯವನ್ನು ಸಮಾಜಕ್ಕೆ ತಲುಪಿಸುವ ಹಂತ :-
ರಚನೆಯಲ್ಲಿ ತೊಡಗಿದ ಹರಿಭಕ್ತರು ತಮ್ಮ ರಚನಾ ಕಾರ್ಯವನ್ನು ಲೇಖನಯಜ್ಞ ಎಂಬ ಪವಿತ್ರಭಾವನೆಯಿಂದ ತಮ್ಮ ಹೃದಯಸ್ಥ ಪರಮಾತ್ಮನಿಗೆ, ಸಮರ್ಪಿಸುತ್ತಾರೆ. ಈ ಹೃದಯಸ್ಥ ಪರಮಾತ್ಮನನ್ನು “ಬಿಂಬ ಮೂರುತಿ” ಎಂದು ಕರೆಯಲಾಗುತ್ತದೆ. ಮೋಕ್ಷದ ಸಾಧನೆಯಲ್ಲಿ “ಬಿಂಬೋಪಾಸನೆ” ಅತ್ಯಂತ ಮಹತ್ವದ್ದೆನಿಸಿದೆ. ಮೋಕ್ಷದ ಸಾಧನೆಯಲ್ಲಿ “ ತಮ್ಮ ಆರಾಧ್ಯದೈವನ ಏಕಾಂತಿಕ ಉಪಾಸನೆಯೊಡನೆ ಹರಿಭಕ್ತರು ಸಮಾಜರೂಪಿ, ರಾಷ್ಟçರೂಪಿ, ದೈವವನ್ನೂ ಉಪಾಸನೆಗೈಯುತ್ತಾರೆ. ಈ ದಿಸೆಯಲ್ಲಿ ಜಡ ಚೇತನವೆಲ್ಲಾ ಪರಮಾತ್ಮನ ಅಧಿಷ್ಠಾನವೆಂಬ ಚಿಂತನೆಯಿದೆ. ಮಾನವಮಾತ್ರನಿಗೆ ಜ್ಞಾನದ , ಅರಿವಿನ ಕಾಯಕಲ್ಪ ನೀಡುವ ದಾಸಸಾಹಿತ್ಯ ಬಿಂಬ ಅಂತರAಗದಲ್ಲಿ ಭಗವಂತನನ್ನು , ಬಹಿರಂಗದಲ್ಲಿ ಸಕಲಭೂತದಯಾ ಭಾವವನ್ನು ಹೊಂದಿದ್ದು, ಎಲ್ಲೆಡೆ ಪರಮಾತ್ಮನ ವ್ಯಾಪ್ತಿತ್ವವನ್ನು ಚಿಂತನೆಗೈಯುತ್ತಾರೆ. ಈ ದಿಸೆಯಲ್ಲಿ ದಾಸ ಸಾಹಿತ್ಯ ವೃಷ್ಠಿ ಚಿಂತನೆಯನ್ನು ಸಮಷ್ಠಿ ಚಿಂತನೆಯನ್ನು ನಮ್ಮ ಮುಂದಿಡುತ್ತದೆ. ವ್ಯಕ್ತಿಯ ಆತ್ಮಚಿಂತನೆಯ ನೆಲೆಯಿಂದ ವಿಶ್ವಚಿಂತನೆಯೆಡೆಗೆ ವಿಸ್ತರಿಸುತ್ತಾ ಸಾಗುತ್ತದೆ.
ಕನ್ನಡ ಸಂಸ್ಕೃತಿಯಲ್ಲಿ ಭಕ್ತಿ ಪಂಥದ ಉಪಾಂಗವೆನಿಸಿದ ದಾಸ ಸಾಹಿತ್ಯ ವೈಶಿಷ್ಟö್ಯ ಪೂರ್ಣಸ್ಥಾನವನ್ನು ಪಡೆದಿದೆ. ಕನ್ನಡ ಸಮಾಜ ಮತ್ತು ಕೀರ್ತನ ಪ್ರಕಾರ ಅವಿನಾಭಾವದಿಂದ ಸಮನ್ವಯಗೊಂಡಿದೆ. ಸಾಂಪ್ರದಾಯಿಕವಾಗಿ ಮದುವೆ, ಬಸಿರಿ, ಬಾಣಂತನ, ನಾಮಕರಣ, ಸಂಸ್ಕಾರದ ವಿವಿಧ ಘಟ್ಟ ಗಳಲ್ಲಿ ಕೊನೆಗೆ ಮರಣದ ಸನ್ನಿವೇಶದಲ್ಲೂ ಹೇಳಬಹುದಾದ ಕೀರ್ತನೆಗಳ ಶ್ರೀಮಂತ ಕಣಜ ನಮ್ಮಲ್ಲಿದೆ. ಕನ್ನಡಿಗರ ಜೀವನಶೈಲಿಯಲ್ಲಿ ಕೀರ್ತನ, ಸುಳಾದಿ, ಉಗಾಭೋಗಗಳು ಪ್ರಮುಖ ಸ್ಥಾನವನ್ನು ಪಡೆದಿವೆ. ಜೀವನ ಮತ್ತು ಸಾಹಿತ್ಯ ಒಂದಕ್ಕೊAದು ಪೂರಕ ಪೋಷಕವಾಗಿರುವ ಅದ್ಭುತ ಚಿತ್ರಣ ದಾಸ ಸಾಹಿತ್ಯದಲ್ಲಿದೆ.
ಆಧ್ಯಾತ್ಮಿಕ ದಿವ್ಯಾನುಭೂತಿಯಲ್ಲಿ ರಚಿತವಾಗುವ ದಾಸ ಸಾಹಿತ್ಯ ಸಾಮೂಹಿಕ ಪಾರಾಯಣದ ಮಾಧ್ಯಮದಲ್ಲಿ ಭಕ್ತವಲಯಕ್ಕೆ ಧಾರ್ಮಿಕ ಕ್ಷೇತ್ರಕ್ಕೆ ತಲುಪುತ್ತದೆ. ಭಜನೆ ಮಾಡುತ್ತಾ ಸಾಗುವ ವರ್ಷ ವರ್ಷವೂ ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆಯ ಸಂಘಟನೆಯ ಮೂಲಕವೂ ತಲುಪುತ್ತದೆ.
ಇಂದು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟçದ ವಿಠಲ ಆಂಧ್ರದ ತಿರುಮಲೇಶ, ತಮಿಳುನಾಡಿನ ರಂಗನಾಥ ಕರ್ನಾಟಕದ ಉಡುಪಿಯ ಕೃಷ್ಣ ಮುಂತಾಗಿ ಭಾರತದ ಬದರಿನಾರಾಯಣ ಮುಂತಾಗಿ ದೇಶದ ಉದ್ದಗಲಕ್ಕೂ ಇರುವ ಧಾರ್ಮಿಕ ಭಕ್ತಿ ಕೇಂದ್ರಗಳನ್ನು ಸಂದರ್ಶಿಸುವ , ಉಪಾಸಿಸುವ ಭಜನಾ ಮಂಡಲಿಗಳ ಅದ್ಭುತ ಸಂಘಟನೆ ಭಕ್ತಿಯ ಇತಿಹಾಸದಲ್ಲಿ ಧಾರ್ಮಿಕ ಕ್ರಾಂತಿಯನ್ನು ಮೂಡಿಸಿವೆ. ಕರ್ನಾಟಕ ಒಂದರಲ್ಲಿಯೇ ಕಂಡುಬರುವ ಸಾವಿರಾರು ಭಜನಾಮಂಡಳಿಗಳು, ಈ ಭಜನಾ ಮಂಡಳಿಗಳಲ್ಲಿ ಕಂಡು ಬರುವ
ಮಹಿಳಾಹರಿಭಕ್ತೆಯರು, ಸಹಜವಾಗಿಯೆ ಇವರು ರಚಿಸಿದ ಕೀರ್ತನ ಪ್ರಕಾರವು ನಾಡಿನ ಉದ್ದಗಲಕ್ಕೂ ಪರಿಚಿತವಾಗುತ್ತದೆ.
ದಾಸ ಸಾಹಿತ್ಯದ ಇನ್ನೊಂದು ಪ್ರಮುಖವಾದ ವೈಶಿಷ್ಟö್ಯ ದಾಸಸಾಹಿತ್ಯದ ಪ್ರಕಾರಗಳನ್ನು ಸಂಗೀತದೊಡನೆ ಸಮನ್ವಯಗೊಳಿಸುವುದು. ಭಜನಾ ಮಂಡಳಿಗಳ ಸಹಸ್ರಾರು ಮಹಿಳಾಸಭ್ಯರು ಪ್ರಾಚೀನ, ಅರ್ವಾಚೀನ ಮತ್ತು ಆಧುನಿಕ ಸಾಹಿತ್ಯವನ್ನು ದೇಶೀಯಮಟ್ಟುಗಳಲ್ಲಿ ಪ್ರಚಲಿತ ರಾಗಗಳಲ್ಲಿ ಹಾಡಿನ ಮೂಲಕ ರಕ್ಷಿಸುತ್ತ ಬಂದಿದ್ದಾರೆ. ಇನ್ನೊಂದು ಹಂತದಲ್ಲಿ ಶಾಸ್ತಿçÃಯವಾಗಿ ಸಂಗೀತ ಅಭ್ಯಾಸ ಮಾಡಿದ ಸಂಗೀತಾಕಟ್ಟಿ, ಡಾ.ಸಂಗೀತಾ ಕಾಖಂಡಕಿ, ಡಾ. ದೀಪಿಕಾ ಪಾಂಡುರAಗಿ, ಮುಂತಾಗಿ ಅನೇಕ ಸಂಗೀತಜ್ಞರು ಜಗತ್ತಿನ ಮೂಲೆ, ಮೂಲೆಗೂ ಕನ್ನಡದ ಭಾಷಾ ಕಂಪನ್ನು, ತತ್ವದ ಸಿದ್ಧಿಯನ್ನು, ಸಾಹಿತ್ಯದ ಸೊಗಡನ್ನು ಬಿತ್ತುತ್ತಿದ್ದಾರೆ.
ಭಾರತದ ನೆಲದಲ್ಲಿ ಅರಳಿದ ಕಲಾಪ್ರಕಾರಗಳೆಲ್ಲವೂ ಭಗವಂತನ ಉಪಾಸನೆಯನ್ನು ಸಾರುತ್ತವೆ. ಮಂದಿರಗಳಲ್ಲಿ ನೃತ್ಯಸೇವೆಯೂ ಒಂದು ಪ್ರಕಾರವಾಗಿದ್ದು ಕೀರ್ತನೆಗಳನ್ನು ಹಾಡುತ್ತಾ ನರ್ತನ ಸೇವೆ ಜರುಗಿಸುತ್ತಾರೆ. ಕಿಶೋರಿಯರು, ಭಜನಾ ಮಂಡಳಿಯ ಸೋದರಿಯರು ಕೋಲಾಟಗಳನ್ನು ದಾಸರ ಹಾಡನ್ನು ಹೇಳುತ್ತಾ ಹಾಕುವುದು ಜಾನಪದ ಮಾಧ್ಯಮಗಳನ್ನು ಬಳಸಿಕೊಳ್ಳುವ ಉತ್ತಮ ನಿದರ್ಶನವೆನಿಸುತ್ತದೆ. ವೈಷ್ಣವ ಹರಿದಾಸರು ರಚಿಸಿದ ಬಯಲಾಟಗಳು ಕಂಡುಬರುತ್ತವೆ. ಇತ್ತೀಚಿನ ಹರಿದಾಸಿಯರು ರಂಗಪ್ರದರ್ಶನದ ಉತ್ತಮ ಪ್ರಯತ್ನವನ್ನು ಮಾಡುತ್ತಿದ್ದಾರೆ. ಡಾ.ವಿದ್ಯಾಕಸಬೆಯವರ ಸಂಘಟನೆಯಲ್ಲಿ ಅನೇಕ ರೂಪಕಗಳು ಪ್ರದರ್ಶನಗೊಳ್ಳುತ್ತಿವೆ. ಡಾ.ವಿದ್ಯಾಕಸಬೆಯವರು ಹರಪನಹಳ್ಳಿ ಭೀಮವ್ವವನ್ನು ಕುರಿತಂತೆ ಡಾ. ಶಾಂತಾರಘೋತ್ತಮಾಚಾರ್ಯರು ಹೆಳವನಕಟ್ಟೆ ಗಿರಿಯಮ್ಮನನ್ನು ಕುರಿತಂತೆ ಶ್ರೀಮತಿ ಸುಧಾ ನರಸಿಂಗರಾವ್ ದೇಶಪಾಂಡೆಯವರು, ಗಲಗಲಿ ಅವ್ವನವರನ್ನು ಕುರಿತಂತೆ, ಡಾ.ಎ. ಕುಮುದಾ ಅವರು ಅಂಬಾಬಾಯಿಯವರನ್ನು ಕುರಿತಂತೆ ರೂಪಕಗಳನ್ನು ರಚಿಸಿದ್ದು ರಂಗಪ್ರದರ್ಶನಗೊಳ್ಳುತ್ತಿವೆ. ತಾವೇ ಪಾತ್ರವನ್ನು ವಹಿಸುತ್ತಾರೆ. ಮೇಲ್ಕಾಣಿಸಿದ ನಾಲ್ಕು ಜನ ಸಾಧಕಿಯರು ದಾಸ ಸಾಹಿತ್ಯದಲ್ಲಿ ಸಂಶೋಧನಾಧ್ಯಯವನ್ನು ಗೈದವರು. ಶ್ರೀಮತಿ ಸುಧಾ , ಡಾ. ಶಾಂತಾ ಅವರು “ಪ್ರಹ್ಲಾದವರದ” ತಟ್ಟೆ ಹನುಮಕೃಷ್ಣ” ಅಂಕಿತದಿAದ ಅನೇಕ ಕೀರ್ತನೆಗಳನ್ನು ಉಗಾಭೋಗಗಳನ್ನು ಸುಳಾದಿಗಳನ್ನು ರಚಿಸಿದ್ದಾರೆ. ಲೇಖನಗಳು , ಪ್ರವಚನಗಳು ಮುಂತಾಗಿ ದಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಇಲ್ಲಿಯ ಸಾಧಕಿಯರು ಹಿರಿಯ ಅನುಭಾವಿ ಸಾಧಕಿಯರನ್ನು ಕುರಿತು ರಚನಾಕಾರ್ಯ, ಪ್ರಸಾರ ಕಾರ್ಯ ಮಾಡುತ್ತಿದ್ದಾರೆ. ಮಹಿಳಾ ದಾಸಸಾಹಿತ್ಯವನ್ನು ಕುರಿತಂತೆ ಇವರ ಸೇವೆ ಅನನ್ಯವಾದುದು. ಶ್ರೀಮತಿ ರೂಪಾ ರಾಜೇಂದ್ರ ಅವರು ಮಕ್ಕಳಿಗಾಗಿ ದಾಸ ಮಹನೀಯರ ಚರಿತ್ರೆಯನ್ನು ಕಥೆಗಳ ಮೂಲಕ, ರೂಪಕಗಳ ಮೂಲಕ ಪ್ರಸಾರಗೈಯುತ್ತಿದ್ದಾರೆ. ಶ್ರೀಮತಿ ತ್ರಿವೇಣಿಬಾಯಿಯವರು ನಾನೂರಕ್ಕು ಮಿಕ್ಕಿ ಕೀರ್ತನೆಗಳನ್ನು, ಸುಳಾದಿಗಳನ್ನು ಉಗಾಭೋಗಗಳನ್ನು ಒಗಟುಗಳನ್ನು , ನಾಟಕಗಳನ್ನು ರಚಿಸಿ ಬಾಲಕರಿಂದ ಪ್ರದರ್ಶನಗೈಸುವರು. ಸುಳಾದಿ ಪ್ರಸಾರ ಕೇಂದ್ರವನ್ನು ಸ್ಥಾಪನೆಗೈದು ಆಸಕ್ತರಿಗೆ ಸುಳಾದಿಯನ್ನು ಹೇಳುವುದನ್ನು ಬೋಧಿಸುವರು. ಮಕ್ಕಳಿಗಾಗಿ ಸುಳಾದಿ ಶಿಬಿರಗಳನ್ನು ಆಯೋಜಿಸುವರು. ಮಹಿಳಾ ಸದಸ್ಯರೊಡನೆ ಯಾಯಾವಾರಗೈಯುವರು. ಶ್ರೀಮತಿ ಸೌಮ್ಯ ಕುಲಕರ್ಣಿಯವರು “ಹರಿಕಥಾಮೃತಸಾರ” ಪಾರಾಯಣ ಮಂಡಳಿಯನ್ನು ಸ್ಥಾಪಿಸಿ ಪ್ರತಿನಿತ್ಯ ಅನೇಕ ಮಹಿಳೆಯರೊಡನೆ ಪಾರಾಯಣಗೈಯುವರು. ಇಂದಿನ ವೈಜ್ಞಾನಿಕ , ತಾಂತ್ರಿಕ ಯುಗದಲ್ಲಿ ಆತ್ಮಕೇಂದ್ರಿತವಾದ , ಸರಕುಸಂಸ್ಕೃತಿಯಲ್ಲಿ ಬಾಳುತ್ತಿರುವ ವಿದ್ಯಾವಂತ, ಉದ್ಯೋಗಸ್ಥ ಮಹಿಳೆಯರೂ ದಾಸ ಸಾಹಿತ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡAತಹ ಸಂದರ್ಭಗಳು ದಾಸಸಾಹಿತ್ಯದ ಹಿರಿಮೆ –
ಗರಿಮೆಗಳನ್ನು ಸಾರುತ್ತವೆ. ದಾಸಸಾಹಿತ್ಯದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಹರಿದಾಸ ಸಾಹಿತ್ಯ ಅಧ್ಯಯನದ ಪೀಠದಲ್ಲಿ ಕೃಷಿಗೈದ ವಿದ್ವಾಂಸರು ಡಾ. ಟಿ.ಎನ್ ನಾಗರತ್ನ ಅವರು, ನಾಗೇಶ ಶಯನ “ಅಂಕಿತದಿAದ ಅನೇಕ ಕೀರ್ತನಗಳನ್ನು ರಚಿಸಿರುವರು. ಡಾ. ಜಯಲಕ್ಷಿö್ಮÃ ಮಂಗಳಮೂರ್ತಿ”ಸಿರಿನರಸಿAಹವಿಠಲ” ಅಂಕಿತದಿAದ ಕೀರ್ತನಗಳನ್ನು , ಉಗಾಭೋಗಗಳನ್ನು ರಚಿಸಿರುವರು.
ಜರವಾಯಿಲಕ್ಷಿö್ಮÃದೇವಮ್ಮ , ಪದ್ಮಾಬಾಯಿಕೋಲಾರ, ಸುಧಾಬಾಯಿ ದೊಡ್ಡಿ ಮುಂತಾದ ಸಾಧಕಿಯರನ್ನು ಸ್ಮರಿಸುತ್ತಲೆ ಶ್ರೀಮತಿ ಬಿ.ಕೆ. ಶ್ರೀಮತಿರಾವ್ ಅವರು ಗುರುಗೋವಿಂದದಾಸರಿAದ ಗುರುಪ್ರಿಯವಿಠಲ ಅಂಕಿತ ಪಡೆದವರು ಮತ್ತು ಮಹಿಳಾ ಹರಿದಾಸ ದರ್ಪಣದಂತಹ ಉತ್ತಮ ಕೃತಿಯನ್ನು ಪ್ರಕಟಿಸಿದವರು. ಇವರು ಒಟ್ಟು ಅಂಕಿತಪಡೆದ ೧೨೩ ಜನ ಹರಿದಾಸಿಯರನ್ನು ಗುರುತಿಸಿದ್ದಾರೆ. ಡಾ.ವಾಣಿಶ್ರೀ ಅವರು ತಮ್ಮ ಸಂಶೋಧನಾ ಗ್ರಂಥದಲ್ಲಿ ತಿಳಿಸಿದಂತೆ ತಂದೆ ಮುದ್ದುಮೋಹನವಿಠಲ ದಾಸರಿಂದ ಅಂಕಿತಪಡೆದ ೩೭೮ ಜನ ಹರಿದಾಸಿಯರು ರಚನೆಗೈದಿದ್ದಾರೆ. ಹೆಚ್ಚು ಮಾಹಿತಿ ಇಲ್ಲದ ೧೪೬ ಹರಿದಾಸಿಯರಿದ್ದಾರೆ. ದಾಸ ಸಾಹಿತ್ಯದಲ್ಲಿ ಸೃಜನ ಮತ್ತು ಸೃಜನೇತರ ಎರಡೂ ಸ್ತರಗಳಲ್ಲಿ ಮಹಿಳೆಯರ ಅಭಿವ್ಯಕ್ತಿ ಮೆಚ್ಚುವಂತಿದೆ. ಸಂಶೋಧನಾ ಅಧ್ಯಯನಗೈದ ಮಹಿಳೆಯರ ಸಂಖ್ಯೆಯು ಶ್ಲಾಘನೀಯವಾಗಿದೆ.
ದಾಸಸಾಹಿತ್ಯ ಮನೆಗಳಲ್ಲಿ ಸೆಲೆಯೊಡೆದು ಮಂದಿರಗಳಲ್ಲಿ ನೆಲೆಪಡೆದು, ಶಾಲಾಕಾಲೇಜುಗಳ ಪಠ್ಯಗಳಲ್ಲಿ ವಿರಳವಾಗಿ ಸೇರ್ಪಡೆಯಾಗಿ, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠಗಳು ಸ್ಥಾಪನೆಯಾಗಿರುವುದು ಕಂಡು ಬರುತ್ತದೆ. ಶಿಬಿರಗಳು , ಕಾರ್ಯಾಗಾರಗಳು, ಕಮ್ಮಟಗಳು ಆಯೋಜನೆಗೊಳ್ಳುತ್ತಿವೆ. ವಿದ್ಯುನ್ಮಾನ , ವಿದ್ಯುನ್ಮಾನೇತರ ಹಂತಗಳಲ್ಲಿ ಅಂತರ್ಜಾಲಗಳಲ್ಲಿ ದಾಸ ಸಾಹಿತ್ಯದ ಅಭಿವ್ಯಕ್ತಿಯ ಆಯಾಮಗಳನ್ನು ಗುರುತಿಸಲಾಗುತ್ತದೆ.
III ಸಂಗ್ರಹ, ಪರಿಷ್ಕರಣ, ಪ್ರಕಾಶನ ಮುಂತಾದ ವೈಜ್ಞಾನಿಕ ರಕ್ಷಣಾ ಕಾರ್ಯ :-
ಮಹಿಳಾ ದಾಸ ಸಾಹಿತ್ಯದ ಅಧ್ಯಯನ ಸಮಾಧಾನಕರವಾಗಿದೆ . ಆದರೆ ತೃಪ್ತಿಕರವಾಗಿಲ್ಲವೆಂದು ಹೇಳಬಹುದು. ಸಮಗ್ರವಾದ ಇಡಿಯಾದ ವ್ಯವಸ್ಥೆಯ ಅಡಿಯಲ್ಲಿ ಮಹಿಳಾ ದಾಸಸಾಹಿತ್ಯದ ಸಂಗ್ರಹ ಆಗಬೇಕಿದೆ. ಇಂದಿಗೂ ರಚಯಿತರು ತಮ್ಮ ಕೃತಿಗಳನ್ನು ಶಿಸ್ತುಬದ್ಧವಾಗಿ ಉಳಿಸಿಕೊಂಡು ಬರುತ್ತಿಲ್ಲವೆಂಬುದು ಕಂಡುಬರುತ್ತಿದೆ. “ಗಿರಿವೆಂಕಟೇಶ” ಅಂಕಿತದಿAದ ಮುನ್ನೂರಕ್ಕೂ ಮಿಕ್ಕಿ ಕೀರ್ತ£ಗಳನ್ನು ರಚಿಸಿದ ಶ್ರೀಮತಿ ಶಾಂತಾಬಾಯಿ ಮಸ್ಕಿ ಅವರು ಒಂದು ಕೀರ್ತನೆಯನ್ನು ಬರೆದಿಟ್ಟಿಲ್ಲ. ಎಲ್ಲವೂ ಅವರ ಕಂಠಸ್ಥವಾಗಿವೆ. ಆಶುಕವಿತ್ವದ ಪ್ರತಿಭೆಯನ್ನು ಹೊಂದಿದ ಅವರ ಕೃತಿಗಳು ಸುಂದರ ಕಾವ್ಯಾಂಶಗಳನ್ನು ಹೊಂದಿವೆ ಆದರೆ ಬರಹ ರೂಪದಲ್ಲಿಲ್ಲ. ಕೆಲವರು ತಮ್ಮ ಕೃತಿಗಳನ್ನು ಬಹಿರಂಗಪಡಿಸುವುದಿಲ್ಲ . ರಚನೆಗಳ ಸಂರಕ್ಷಣೆಯೂ ಸರಿಯಾಗಿರುವುದಿಲ್ಲ . ಸಮಯ ಸಮಯಕ್ಕೆ ಇವುಗಳ ಪುನರ್ಲೇಖನವಾಗಲಿ , ಮುದ್ರಣವಾಗಲಿ ಆಗದೆ ದೊರಕದಂತಹ ಸ್ಥಿತಿ ಉಂಟಾಗುತ್ತದೆ. ಸಂಬAಧಪಟ್ಟ ವಂಶದವರು, ಬಿಚ್ಚು ಮನಸ್ಸಿನಿಂದ ಮನೆಗೆ ಹೋದರೆ ತೋರಿಸುವುದಿಲ್ಲ ನೀಡುವುದಂತೂ ದೂರದ ಮಾತು.
ಸಂಗ್ರಹಗೊAಡ ಸಾಹಿತ್ಯದ ಪರಿಷ್ಕರಣೆ ಮಾಡುವವರಿಗೆ ಆಯಾ ಪ್ರಾದೇಶಿಕ ಭಾಷೆಯ ಪ್ರಯೋಗದ ಮಾಹಿತಿ ಇರಬೇಕು. ಕೃತಿಕಾರರು ಬಳಿಸಿದ ದೇಶೀಯವಾದ, ಆಡುಭಾಷೆಯನ್ನು ಇದ್ದಂತೆಯೆ ಬಳಸುವ, ಅಥವಾ ಗ್ರಂಥಸ್ಥಪದ ಬಳಸುವ ವ್ಯತ್ಯಾಸಗಳು, ಅರ್ಥಪಲ್ಲಟ, ಪದಪಲ್ಲಟಗಳು ಒತ್ತಕ್ಷರಗಳು ಬಳಕೆಯ ದೋಷಗಳು ಕಂಡುಬರುತ್ತವೆ. ಅಲ್ಲದೆ ಆಯಾ ಭಾಗದ ಮಹತ್ಸಾಧಕರನ್ನು ಕುರಿತ ರಚನೆಗಳಲ್ಲಿ ಅವರ ಚಾರಿತ್ರಿಕಾಂಶದ ಪರಿಚಯ ಪರಿಷ್ಕರಣ ಮಂಡಲಿಗೆ ಇರಬೇಕಾಗುತ್ತದೆ . ಇಂತಹ ಅನೇಕ ಸಮಸ್ಯೆಗಳು ಮಹಿಳಾ ದಾಸಸಾಹಿತ್ಯದ ಅಭಿವ್ಯಕ್ತಿಯಲ್ಲಿ ಎದುರಾಗುತ್ತವೆ.
Iಗಿ ಶುದ್ದಪಾಠವನ್ನು ಕುರಿತಂತೆ ಇಂದು ಕೈಗೊಳ್ಳಬೇಕಾದ ಕಾರ್ಯ ಅವಶ್ಯಕವಾಗಿದೆ. :-
ಆಸಕ್ತ ಅಧ್ಯಯನಶೀಲ ರಚಯಿತರಾದ ಮಹಿಳಾ ವರ್ಗಕ್ಕೆ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಶುದ್ಧಪಾಠ ನಿರ್ಣಯದ ವಿಚಾರಗಳನ್ನು ತಿಳಿಸಬೇಕಿದೆ. ಈ ದಿಸೆಯಲ್ಲಿ ಅಪಾರ ಶ್ರಮವಹಿಸಿ ಕಾರ್ಯಗೈದ ಡಾ. ಟಿ.ಎನ್ ನಾಗರತ್ನ ಅವರಂತಹ ವಿದ್ವಾಂಸರ ನೆರವು ಅತ್ಯವಶ್ಯಕವಾಗಿದೆ. ಹೆಳವನಕಟ್ಟೆಗಿರಿಯಮ್ಮ ಮತ್ತು ಹರಪನಹಳ್ಳಿ ಭೀಮವ್ವನವರು ರಚಿಸಿದ ಸುದೀರ್ಘಕಥನ ಕಾವ್ಯಗಳನ್ನು ಕುರಿತ ಮರುಪರಿಶೀಲನೆ ಅವಶ್ಯಕವಾಗಿದೆ. ಈ ದಿಸೆಯಲ್ಲಿ ಮಹಿಳಾಪರಿಷತ್ತುಗಳು , ಭಜನಾಮಂಡಳಿಗಳು , ದಾಸಸಾಹಿತ್ಯ ಅಧ್ಯಯನಕೇಂದ್ರಗಳು , ಅಧ್ಯಯನಪೀಠಗಳು ಮಹಿಳಾ ದಾಸಸಾಹಿತ್ಯವನ್ನು ಕುರಿತಂತೆ ಯೋಜನೆಗಳನ್ನು ರೂಪಿಸುವುದು ಅವಶ್ಯಕವಾಗಿದೆ. ನನ್ನ ಅಭಿಪ್ರಾಯದಲ್ಲಿ.
೧) ಕರ್ನಾಟಕದಾದ್ಯಂತ ಸಮಸ್ತ ಮಹಿಳಾ ರಚನಾಕಾರ್ತಿಯರು ಆಗಾಗ್ಗೆ ಒಂದೆಡೆ ಸೇರಿ ಚರ್ಚಿಸುವುದು . ಇಲ್ಲಿಯವರೆಗೂ ದಾಸ ಸಾಹಿತ್ಯದಲ್ಲಿ ಕಂಡುಬರುವ ವಸ್ತುವೈವಿಧ್ಯಯತೆಯಲ್ಲಿ ನೂತನ ಆಯಾಮಗಳನ್ನು ಗುರುತಿಸುವುದು.
೨) ರಾಷ್ಟಿçÃಯ ಪ್ರಜ್ಞೆ , ಸಾಮಾಜಿಕ ಜಾಗೃತಿ, ನಾಗರಿಕ ಪ್ರಜ್ಞೆಯನ್ನು ಮಹಿಳಾ ದಾಸ ಸಾಹಿತ್ಯದ ಮೂಲಕ ನೀಡುವುದು “ಕಪಿಲನಾಮಕ ಪರಮಾತ್ಮ” ಅಂಕಿತದಿAದ ಶ್ರೀಮತಿ ದೊಡ್ಡಿ ಸುಧಾಬಾಯಿಯವರು ತಮ್ಮ ಕೀರ್ತನೆಗಳಲ್ಲಿ ಭಾರತದ ಶ್ರೇಷ್ಠವ್ಯಕ್ತಿಗಳನ್ನೆಲ್ಲ ಸ್ಮರಿಸಿದ್ದಾರೆ. ಈ ದಿಸೆಯಲ್ಲಿ ಅವರ ಪ್ರಯತ್ನ ಅಪರೂಪವೆನಿಸುತ್ತದೆ.
೩) ದಾಸ ಸಾಹಿತ್ಯದಲ್ಲಿ ಸಂಶೋಧನಾ ಅಧ್ಯಯನ ಮಾಡಿದವರು, ಮಹಿಳಾ ಸಂಶೋಧಕಿಯರು ಆಗಾಗ್ಗೆ ಒಂದೆಡೆ ಸೇರಿ ದಾಸ ಸಾಹಿತ್ಯದ ಪ್ರಯೋಗಾತ್ಮಕತೆಯ ಪರಿಣಾಮವನ್ನು ಕುರಿತಂತೆ ಚಿಂತನ ಮಂಥನಗೈಯುವುದು , ದಾಸಸಾಹಿತ್ಯದಲ್ಲಿ ಈಗ ಕಂಡುಬರುವ ಪ್ರಕಾರಗಳು, ಬಂಧಗಳು, ಸಂವಹನರೂಪಗಳೊಡನೆ ಪ್ರಸ್ತುತ ಸಮಕಾಲೀನ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವ ರೂಪುರೇಷೆಗಳನ್ನು ಗುರುತಿಸುವುದು.
೪) ಸೃಷ್ಠಿಯ ಕಾರ್ಯ , ಖಗೋಲ, ಭೂಗೋಲಗಳನ್ನು ಕುರಿತಂತಹ ಮತ್ತು ಮನಃ ಶಾಸ್ತçದಂತಹ ವಿಷಯಗಳನ್ನು ಜೀವಚಿಂತನೆಯAತಹ ವಿಷಯಗಳನ್ನು ವೈಜ್ಞಾನಿಕಹಿನ್ನಲೆಯಲ್ಲಿ ವಿವರಿಸುವುದು.
೫) ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ ಮತ್ತು ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟಗಳ ಅಧಿಕಾರಿಗಳೊಡನೆ ಮಾತನಾಡಿ ಭಜನಾಮಂಡಳಿಗಳಿಗಾಗಿ ನಿಗದಿಗೊಳಿಸುವ ಪಠ್ಯಕ್ರಮಗಳಲ್ಲಿ ಮಹಿಳಾ ರಚನಾಕಾರ್ತಿಯರ ಬಗೆಗೆ, ಸಂಶೋಧನಾಕಾರ್ತಿಯರ ಬಗೆಗೆ ಪರಿಚಯಿಸುವಂತೆ ವಿನಂತಿಸುವುದು.
೬) ಹರಿಭಕ್ತೆಯರು ಬದುಕಿರುವಾಗಲೇ ಅವರ ರಚನೆಗಳನ್ನು ಹಾಡಬಾರದೆಂಬ ತಪ್ಪು ಕಲ್ಪನೆಯನ್ನು ನಿವಾರಿಸುವುದು.
೭) ಹರಿಭಕ್ತೆಯರ ರಚನೆಗಳಿಗೆ ರಾಗ ಸಂಯೋಜನೆಗೊಳಿಸಿ ಪ್ರಚುರ ಪಡಿಸುವುದು.
೮) ಪ್ರತಿಯೋರ್ವ ಹರಿಭಕ್ತೆಯರ ಜೀವನ ಮತ್ತು ಸಾಧನೆಯನ್ನು ಕುರಿತಂತೆ ಗ್ರಂಥಮಾಲಿಕೆಯನ್ನು ಪ್ರಕಟಿಸುವುದು ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕçತಿ ಇಲಾಖೆ, ಮಠಮಾನ್ಯಗಳನ್ನು, ದಾನಿಗಳನ್ನು ಸಂಪರ್ಕಿಸುವುದು.
ರಾಯಚೂರಿನಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿರುವ “ಹರಿದಾಸ ಸಾಹಿತ್ಯ ಅಧ್ಯಯನಪೀಠದಿಂದ ಹದಿಮೂರು ವರ್ಷಗಳ ನಂತರ ಪುನಃ ಕಾರ್ಯಾರಂಭವಾದುದು ಅತ್ಯಂತ ಸಂತಸದ ವಿಷಯವಾಗಿದೆ. ಕುಲಪತಿಗಳಾದ ಸನ್ಮಾನ್ಯ ಡಾ. ಪರಿಮಳಾ ಅಂಬೇಕರ ಮೇಡಮ್ ನವರು ತೋರಿದ ವಿಶೇಷ ಕಾಳಜಿಯಿಂದಾಗಿ ದಿನಾಂಕ : ೨೮-೧೧-೨೦೧೯ರಂದು ಒಂದು ದಿನದ ಮಹಿಳಾದಾಸಸಾಹಿತ್ಯದ ಕಾರ್ಯಗಾರ ನೆರವೇರಿತು. ಈ ಕಾರ್ಯಾಗಾರದಲ್ಲಿ ನನಗೆ “ಮಹಿಳಾದಾಸಸಾಹಿತ್ಯದ ಅಭಿವ್ಯಕ್ತಿಯ” ಸವಾಲುಗಳು ಎನ್ನುವ ವಿಷಯದ ಬಗೆಗೆ ಪ್ರಬಂಧ ಮಂಡಿಸಲು ಅವಕಾಶ ನೀಡಿದ ಕುಲಪತಿಗಳಿಗೂ, ಹರಿದಾಸ ಸಾಹಿತ್ಯ ಅಧ್ಯಯನ ಪೀಠದ ಸಮಿತಿಯ ಸಂಚಾಲಕರಿಗೂ ಸದಸ್ಯರಿಗೂ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಡಾ.ಜಯಲಕ್ಷಿö್ಮÃ ಮಂಗಳಮೂರ್ತಿ
ಬಾಹ್ಯ ಸದಸ್ಯರು “ಶ್ರೀ ಹರಿದಾಸ ಅಧ್ಯಯನಪೀಠ”
ಸ್ನಾತಕೋತ್ತರ ಕೇಂದ್ರ ರಾಯಚೂರು.