ಕಾಲೇಜಿನ ಬಗ್ಗೆ :
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯು ಗ್ರಾಮೀಣ ಆಕಾಂಕ್ಷಿಗಳಿಗೆ ಉನ್ನತ ಶಿಕ್ಷಣಕ್ಕೆ ಸುಲಭ ಪ್ರವೇಶವನ್ನು ಒದಗಿಸುವ ಉದಾತ್ತ ದೃಷ್ಟಿಯೊಂದಿಗೆ 2006ರಿಂದ ಅಸ್ತಿತ್ವದಲ್ಲಿದೆ. ಕಾಲೇಜು UGCಯಿಂದ ಅನುಮೋದಿಸಲ್ಪಟ್ಟದೆ. NAAC ನಿಂದ B+ ಮಾನ್ಯತೆ ಪಡೆದಿದೆ. ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂಯೋಜಿತವಾಗಿದೆ. ಪುಂಜಾಲಕಟ್ಟೆ ಮತ್ತು ಸುತ್ತಮುತ್ತಲಿನ ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಒದಗಿಸಲು ಕಾಲೇಜು ಸ್ಥಾಪಿಸಲಾಗಿದೆ. ಕಾಲೇಜು, ಶಿಕ್ಷಣ ಮತ್ತು ಇತರ ಸಹಪಠ್ಯಕ್ರಮದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯ ಮೂಲಕ ಅನುಕೂಲಕರವಾದ ಕಲಿಕೆಯ ವಾತಾವರಣವನ್ನು ಒದಗಿಸುತ್ತದೆ. ಪ್ರಸ್ತುತ, ಕಾಲೇಜು B.A, B.B.A ಮತ್ತು B.Com ಪದವಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಕಾಲೇಜು. LMS ಶಕ್ತತರಗತಿ ಕೊಠಡಿಗಳು, ಡಿಜಿಟಲ್ ಗ್ರಂಥಾಲಯ, ಕಂಪ್ಯೂಟರ್ ಪ್ರಯೋಗಾಲಯ ಮತ್ತು ಆಟದ ಮೈದಾನದಂತಹ ಸಾಕಷ್ಟು ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿದೆ. ನಿಯಮಿತ ಬೋಧನಾ ಕಲಿಕಾ ಚಟುವಟಿಕೆಗಳ ಜೊತೆಗೆ, ಕಾಲೇಜು ವಿವಿಧ ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಾಲೇಜು ತನ್ನ NSS ಘಟಕಗಳು, ಯೂತ್ ರೆಡ್ ಕ್ರಾಸ್ ಘಟಕ, ರೇಂಜರ್ಸ್ ಮತ್ತು ರೋವರ್ಸ್, ರೆಡ್ ರಿಬ್ಬನ್ ಘಟಕಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಚಟುವಟಕೆಗಳನ್ನು ಆಯೋಜಿಸುತ್ತದೆ. ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಮಾರ್ಗದರ್ಶನ ನೀಡುವ ಸಲುವಾಗಿ, ಪ್ರತಿ ತರಗತಿಯ ವಿದ್ಯಾರ್ಥಿಗಳು ಶೈಕ್ಷಣಿಕ, ವೈಯಕ್ತಿಕ ಮತ್ತು ವೃತ್ತಿ ಸಮಾಲೋಚನೆಯನ್ನು ಪಡೆಯುವ ಮಾರ್ಗದರ್ಶನದ ವ್ಯವಸ್ಥೆಯು ಚಾಲ್ತಿಯಲ್ಲಿದೆ.
Upcoming Events
Commerce Association
Quick Links
Vistors