ದಿನಾಂಕ 5/04/ 2025 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪೂಂಜಾಲಕಟ್ಟೆ ಇಲ್ಲಿ" ಭಾರತೀಯ ಯುವ ರೆಡ್ ಕ್ರಾಸ್ ಘಟಕ" ," ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 " ,"ರೋವರ್ಸ್& ರೇಂಜರ್ಸ್ ಘಟಕ" , ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿಯ" ಹಳೆಯ ವಿದ್ಯಾರ್ಥಿ ಸಂಘ" , " ಶಿಕ್ಷಕ ರಕ್ಷಕ ಸಂಘ" ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು " ರೋಟರಿ ಕ್ಲಬ್ ಮಡಂತ್ಯಾರ್ ", ಇವರ ಸಹಯೋಗದಲ್ಲಿ "ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತ ಕೇಂದ್ರ ಸರಕಾರಿ ಲೇಡಿ ಗೋಶನ್ ಆಸ್ಪತ್ರೆ ಮಂಗಳೂರು" ಆಯೋಜಿಸಿರುವ 'ರಕ್ತದಾನ ಶಿಬಿರ'ವು ಬಹಳ ಸುಸೂತ್ರವಾಗಿ ನಡೆದಿದ್ದು , ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ಮಾದವ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ವಹಿಸಿದ್ದರು ,ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ನಿತ್ಯಾನಂದ .ಬಿ ಅಧ್ಯಕ್ಷರು ರೋಟರಿ ಕ್ಲಬ್ ಮಡಂತ್ಯಾರು ಇವರು ಆಗಮಿಸಿದ್ದರು. ಶ್ರೀ ತುಳಸಿದಾಸ ಪೈ ಪ್ರಧಾನ ಕಾರ್ಯದರ್ಶಿಗಳು ರೋಟರಿ ಕ್ಲಬ್ ಮಡಂತ್ಯಾರು, ಶ್ರೀ ಪ್ರವೀಣ್ ಜಿಲ್ಲಾ ಸಂಯೋಜಕರು ಭಾರತೀಯ ರೆಡ್ ಕ್ರಾಸ್ ಸಮಾಜ ರಕ್ತ ಕೇಂದ್ರ ಸರಕಾರಿ ಲೇಡಿ ಗೋಶನ್ ಆಸ್ಪತ್ರೆ ಮಂಗಳೂರು, ಶ್ರೀ ಶ್ಯಾಮರಾವ್ ಯು ಜಿ ಅಧ್ಯಕ್ಷರು ಶಿಕ್ಷಕ ರಕ್ಷಕ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಶ್ರೀ ರಾಜೇಶ್ ಕುಮಾರ್ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಕಾರ್ಯಕ್ರಮವನ್ನು ಸುನೈನಾ ಕಲಾವಿಭಾಗ ಇವರು ನಿರೂಪಿಸಿದ್ದು, ನಾಗಶ್ರೀ ದ್ವಿತೀಯ ವಾಣಿಜ್ಯ ವಿಭಾಗ ಇವರು ದೇವರನ್ನು ನೆನೆದರು ಮತ್ತು ತೃತೀಯ ವಾಣಿಜ್ಯ ವಿಭಾಗದ ರಕ್ಷಿತಾ ಕುಮಾರಿ ಎಲ್ಲರಿಗೂ ಆದರದ ಸ್ವಾಗತವನ್ನು ಕೋರಿದರು ನಂತರ ಶ್ರೀ ಪ್ರವೀಣ್ ಇವರು ರಕ್ತದಾನವು ಮಾನಸಿಕ ಒತ್ತಡವನ್ನು ನಿವಾರಿಸಲು ಬಹಳ ಸಹಕಾರಿಯಾಗಿದೆ ಎಂದು ರಕ್ತದಾನದ ಮಹತ್ವವನ್ನು ತಿಳಿಸಿದರು. ತದನಂತರ ಶ್ರೀ ತುಳಸಿದಾಸ್ ಪೈ ಇವರು ತನ್ನ ಕಾಲೇಜಿನ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ರಕ್ತದಾನ ಮಾಡಿದ ದಿನಗಳನ್ನು ವಿದ್ಯಾರ್ಥಿ/ ನಿಗಳಲ್ಲಿ ಹಂಚಿಕೊಂಡರು. ರಕ್ತದಾನ ಶಿಬಿರದಲ್ಲಿ ಸುಮಾರು 68 ಶಿಬಿರಾರ್ಥಿಗಳು ರಕ್ತದಾನ ಮಾಡಿದರು ನಂತರ ದ್ವಿತೀಯ ವ್ಯವಹಾರ ವಿಭಾಗದ ಅರ್ಷದ್ ಇವರು ವಂದಿಸಿದರು.