ದಿನಾಂಕ 25 ಮಾರ್ಚ್ 2025 ಮಂಗಳವಾರದಂದು ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜ್ ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟವು ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ಆರಂಭಗೊಂಡಿದ್ದು ಈ ಪಂದ್ಯಾಟಕ್ಕೆ ವಿವಿಧ ಕಾಲೇಜುಗಳಿಂದ ಆರು ತಂಡಗಳು ಆಗಮಿಸಿದ್ದವು . ಈ ಪಂದ್ಯಕೂಟದ ಉದ್ಘಾಟನೆಯನ್ನು ಪ್ರೊ.ಅಲೆಕ್ಸ್ ಐವನ್ ಸೀಕ್ವೆರಾ ಪ್ರಾಂಶುಪಾಲರು ಸೀಕ್ರೆಟ್ ಹಾರ್ಟ್ ಕಾಲೇಜು ಮಡಂತ್ಯಾರು ಇವರು ಮಾಡಿದರು. ಪ್ರೊಫೆಸರ್ ಮಾದವ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಂಜಾಲಕಟ್ಟೆ .ಸರಕಾರಿ ಪ್ರಥಮ ದರ್ಜೆ ಕಾಲೇಜ್ ಪುಂಜಾಲಕಟ್ಟೆ ಇಲ್ಲಿಯ ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ದೀನಾಕೃಪಾ ಮತ್ತು ತಂಡದವರು ದೇವರ ಸ್ತುತಿಯನ್ನು ಮಾಡಿದರು. ನಂತರ ಪ್ರೊಫೆಸರ್ ಸೌಮ್ಯ ವ್ಯಾಣಿಜ್ಯ ವಿಭಾಗ ಇವರು ಸರ್ವರಿಗೂ ಸ್ವಾಗತ ಬಯಸಿದರು. ಈ ಕಾರ್ಯಕ್ರಮವನ್ನು ಕನ್ನಡ ವಿಭಾಗದ ಪ್ರೊ.ಗಾಯತ್ರಿ ಇವರು ನಿರೂಪಿಸಿದರು . ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಅಜಿತ್ ಜಿ ಶೆಟ್ಟಿ ಉದ್ಯಮಿ ಅಧ್ಯಕ್ಷರು ವಿಜಯ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಆಗಮಿಸಿದ್ದರು ಶ್ರೀ ಜಯಪ್ರಕಾಶ್ ಗ್ರಾಮ ಆಡಳಿತಾಧಿಕಾರಿ, ಹಿರಿಯ ವಿದ್ಯಾರ್ಥಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇವರು ಉಪಸ್ಥಿತರಿದ್ದರು . ಪ್ರೊಫೆಸರ್ ಸಂತೋಷ್ ಪ್ರಭು ಇವರು ವಂದಿಸಿದರು .ನಂತರ ಕಾಲೇಜಿನ ವತಿಯಿಂದ ಎಲ್ಲಾ ಅತಿಥಿಗಳಿಗೆ ಬೆಳಗಿನ ಉಪಹಾರ ಮತ್ತು ಎಲ್ಲರಿಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಇದರ ಜವಾಬ್ದಾರಿಯನ್ನು ಮಂಗಳವಾರದಂದು ರೋವರ್ ರೇಂಜರ್ಸ್ ಘಟಕದ ಸ್ವಯಂಸೇವಕರಿಗೆ ನೀಡಿದ್ದರು. ಅಪರಾಹ್ನ ಸರಿಯಾಗಿ ೨:೩೦ಕ್ಕೆ ಅಂತಿಮ ಪಂದ್ಯಾಟವು ಆಳ್ವಾಸ್ ಕಾಲೇಜ್ ಮೂಡುಬಿದ್ರೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆ ಇವರ ನಡುವೆ ನಡೆದಿದ್ದು ,ಪಂದ್ಯಾಟವು ಮುಗಿದ ನಂತರ ಸಮರೋಪ ಸಮಾರಂಭ ಕಾರ್ಯಕ್ರಮ ಜರಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರು ವಹಿಸಿದ್ದರು ಮತ್ತು ಕನ್ನಡ ವಿಭಾಗದ ಪ್ರೊ.ರೇಖಾ ಯು .ಎನ್ ನಿರೂಪಿಸಿದರು ಶ್ರೀಮತಿ ವಿದ್ಯಾಇವರು ಎಲ್ಲರಿಗೂ ಆದರದ ಸ್ವಾಗತಿಸಿದರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪ್ರೊಫೆಸರ್ ಸುರೇಶ್ ವಿ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇವರು ಪಾಲ್ಗೊಂಡರು ಮತ್ತು ಶ್ರೀ ಜಿತೇಶ್ ಖಜಾಂಚಿ ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಮತ್ತು ಶ್ರೀಮತಿ ರಂಜಿತ ಹಿರಿಯ ವಿದ್ಯಾರ್ಥಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಉಪಸ್ಥಿತರಿದ್ದರು ನಂತರ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆ , ದ್ವಿತೀಯ ಸ್ಥಾನವನ್ನು ಆಳ್ವಾಸ್ ಕಾಲೇಜ್ ಮೂಡಬಿದ್ರೆ, ತೃತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಚತುರ್ಥ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕರ್ಕಾಳ. ಇಲ್ಲಿಯ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಮತ್ತು ಚಿನ್ನ , ಬೆಳ್ಳಿ , ಕಂಚಿನ ಪದಕಗಳನ್ನು ನೀಡಿ ಗೌರವಿಸಲಾಯಿತು. ನಂತರ ಡಾ| ಶೈಲೇಶ್ ಕುಮಾರ್ ಡಿ .ಎಚ್ ಇವರು ಸರ್ವರಿಗೂ ಧನ್ಯವಾದ ಕೋರುವುದರ ಮೂಲಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿಯ ಐಕ್ಯುಎಸಿ ಹಾಗೂ ದೈಹಿಕ ಶಿಕ್ಷಣ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟಕ್ಕೆ ಒಂದು ಸುಂದರ ಪೂರ್ಣ ವಿರಾಮವನ್ನು ಇಡುವುದರ ಮೂಲಕ ವಿಶ್ರಾಂತಿಯನ್ನು ನೀಡಿದರು.