Online Quiz Series (2024-25)
The department of Library & Information Centre is jointly organizing with the College Internal Quality Assurance Cell (IQAC) an intra college monthly online quiz series (2024-25) for students of Smt. G. B. Ankalkoti Govt. First Grade College, Shiggaon. The online quiz programme will be conducted through Google Forms at the end of every month. Along with current affairs of the current month, questions will be on one particular subject/topic, which is useful for competitive exams. TheSubject/topic list is provided in the table below.
General Guidelines and Rules
The quiz contest is only for the students of Smt. G. B. Ankalkoti Govt. First Grade College Shiggaon.
The online quiz programme will be conducted on 30th of every Month. (28thof February).
The joining link for each quiz will be updated in the College Library website (https://sites.google.com/view/gfgclibraryshiggaon/home) and the same will be circulated through the WhatsApp group of the College.
Scan the QR code displayed on the Library notice board or Scan the Web Library QR code inserted in your College ID Card (backside) to join the contest.
The quiz will be completed within a certain time frame on the scheduled date. The quiz link automatically opens at 6:00 pm and closes at 7:00pm. Students are instructed to attend within a time limit.
The online quiz consists of 50 questions. Each question carries 2 marks. There is no negative marking.
Top 5 students who answered maximum number of correct answers in the shortest time will be considered as a topper and a printed certificate will be given and the result will be displayed on the library notice board.
At the end of the academic year, the top student who secured highest marks in each quiz will be awarded a book prize.
ಆನ್ಲೈನ್ ರಸಪ್ರಶ್ನೆ ಸರಣಿ
ಶ್ರೀಮತಿ ಜಿ.ಬಿ.ಅಂಕಲಕೋಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಿಗ್ಗಾಂವಿ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸ ಕೋಶ (IQAC)ದ ಸಹಯೋಗದಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾಸಿಕ ಆನ್ಲೈನ್ ರಸಪ್ರಶ್ನೆ ಸರಣಿಯನ್ನು ಆಯೋಜಿಸುತ್ತಿದೆ. ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರತಿ ತಿಂಗಳ ಕೊನೆಯಲ್ಲಿ Google Forms ನ ಮೂಲಕ ನಡೆಸಲಾಗುತ್ತದೆ. ಪ್ರಸಕ್ತ ತಿಂಗಳ ಪ್ರಚಲಿತ ವಿದ್ಯಮಾನಗಳ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಒಂದು ನಿರ್ದಿಷ್ಟ ವಿಷಯದ ಮೇಲೆ ಪ್ರಶ್ನೆಗಳು ಇರುತ್ತವೆ. ವಿಷಯ ಪಟ್ಟಿಯನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.
ಮಾರ್ಗಸೂಚಿಗಳು ಮತ್ತು ನಿಯಮಗಳು
ರಸಪ್ರಶ್ನೆ ಸ್ಪರ್ಧೆಯು ಶ್ರೀಮತಿ ಜಿ.ಬಿ.ಅಂಕಲಕೋಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಗ್ಗಾಂವ ವಿದ್ಯಾರ್ಥಿಗಳಿಗೆ ಮಾತ್ರ.
ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರತಿ ತಿಂಗಳ 30 ರಂದು ನಡೆಸಲಾಗುವುದು. (ಫೆಬ್ರವರಿ 28).
ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮದ ಲಿಂಕ್ ಅನ್ನು ಕಾಲೇಜು ಗ್ರಂಥಾಲಯದ ವೆಬ್ಸೈಟ್ನಲ್ಲಿ (https://sites.google.com/view/gfgclibraryshiggaon/home) ಹಾಕಲಾಗುವುದು ಮತ್ತು ಅದನ್ನು ಕಾಲೇಜಿನ WhatsApp group ಮೂಲಕ ಪ್ರಸಾರ ಮಾಡಲಾಗುತ್ತದೆ.
ಗ್ರಂಥಾಲಯದ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾದ QR ಕೋಡ್ ಅಥವಾ ನಿಮ್ಮ ಕಾಲೇಜಿನ ಗುರುತಿನ ಚೀಟಿಯ (College ID Card) ಹಿಂದುಗಡೆ ಹಾಕಲಾಗಿರುವ Web Library QR ಕೋಡ್ಅನ್ನು ಸ್ಕ್ಯಾನ್ ಮಾಡುವ ಮೂಲಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ನಿಗದಿತ ದಿನಾಂಕದಂದು ನಿರ್ದಿಷ್ಟ ಸಮಯದ ಮಿತಿಯೊಳಗೆ ರಸಪ್ರಶ್ನೆಯನ್ನು ಪೂರ್ಣಗೊಳಿಸಲಾಗುತ್ತದೆ. ರಸಪ್ರಶ್ನೆ ಲಿಂಕ್ ಸ್ವಯಂಚಾಲಿತವಾಗಿ ಸಂಜೆ 6:00 ಗಂಟೆಗೆ ತೆರೆಯುತ್ತದೆ ಮತ್ತು ರಾತ್ರಿ 7:00 ಗಂಟೆಗೆ ಕೊನೆಗೊಳ್ಳುತ್ತದೆ. ಕಾಲಮಿತಿಯೊಳಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಆನ್ಲೈನ್ ರಸಪ್ರಶ್ನೆಯು 50 ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರತಿ ಸರಿಯಾದ ಉತ್ತರಕ್ಕೆ 2 ಅಂಕಗಳು. ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳಿರುವುದಿಲ್ಲ.
ಕಡಿಮೆ ಸಮಯದಲ್ಲಿ ಗರಿಷ್ಠ ಸಂಖ್ಯೆಯ ಸರಿಯಾದ ಉತ್ತರಗಳಿಗೆ ಉತ್ತರಿಸುವ ಟಾಪ್ ಐದು ವಿದ್ಯಾರ್ಥಿಗಳನ್ನು ವಿಜೇತರೆಂದು ಪರಿಗಣಿಸಲಾಗುತ್ತದೆ ಮತ್ತು ಮುದ್ರಿತ ಪ್ರಮಾಣಪತ್ರವನ್ನು ನೀಡಲಾಗುತ್ತದ.
ಫಲಿತಾಂಶವನ್ನು ಗ್ರಂಥಾಲಯದ ಸೂಚನಾ ಫಲಕದಲ್ಲಿ ಮತ್ತು ಕಾಲೇಜು ಗ್ರಂಥಾಲಯದ ವೆಬ್ಸೈಟ್-Web Library ನಲ್ಲಿ (https://sites.google.com/view/gfgclibraryshiggaon/home)ಪ್ರಕಟಿಸಲಾಗುವುದು.
ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸರಣಿಯ ಪ್ರತಿ ತಿಂಗಳ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಅಂಕಗಳನ್ನು ಪಡೆದ ಒಬ್ಬ ವಿದ್ಯಾರ್ಥಿಗೆ ಗ್ರಂಥಾಲಯದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪುಸ್ತಕ ಬಹುಮಾನವಾಗಿ ನೀಡಲಾಗುವುದು.
This is to inform you that the online quiz series for the year 2024-25 is concluded with the May quiz i.e. General Knowledge. Thank you for your active participation in the Online Quiz Series. We loved your enthusiasm. We hope that you found the contests are informative.
Further, the top student who secured highest marks in each quiz competition will be awarded a book prize and top 5 students of each quiz competition will be issued a printed certificate in the college annual day function.
2024-25ನೇ ಸಾಲಿನ ಆನ್ಲೈನ್ ರಸಪ್ರಶ್ನೆ ಸರಣಿಯು ಮೇ ತಿಂಗಳ ರಸಪ್ರಶ್ನೆ(ಸಾಮಾನ್ಯ ಜ್ಞಾನ) ದೊಂದಿಗೆ ಮುಕ್ತಾಯಗೊಳ್ಳುತ್ತಿದೆ ಎಂದು ನಿಮಗೆ ತಿಳಿಸಲು ಇಚ್ಛಿಸುತ್ತೇವೆ. ಆನ್ಲೈನ್ ರಸಪ್ರಶ್ನೆ ಸರಣಿಯಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆಗೆ ಧನ್ಯವಾದಗಳು. ನಿಮ್ಮ ಉತ್ಸಾಹ ನಮಗೆ ತುಂಬಾ ಇಷ್ಟವಾಯಿತು. ರಸಪ್ರಶ್ನೆ ಸರಣಿಯು ಮಾಹಿತಿಯುಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ.
ಇದಲ್ಲದೆ, ಪ್ರತಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಅಗ್ರ ವಿದ್ಯಾರ್ಥಿಗೆ ಪುಸ್ತಕ ಬಹುಮಾನವನ್ನು ಮತ್ತು ಪ್ರತಿ ರಸಪ್ರಶ್ನೆ ಸ್ಪರ್ಧೆಯ ಅಗ್ರ 5 ವಿದ್ಯಾರ್ಥಿಗಳಿಗೆ ಮುದ್ರಿತ ಪ್ರಮಾಣಪತ್ರವನ್ನು ಕಾಲೇಜು ವಾರ್ಷಿಕೋತ್ಸವದ ಸಮಾರಂಭದಲ್ಲಿ ನೀಡಲಾಗುತ್ತದೆ.