ನಮ್ಮ ಜಿಲ್ಲಾ ಮಾಸಿಕ ಸಭೆ
ಇಂದು 16.09.2026 ನಮ್ಮ ಜಿಲ್ಲಾ ಮಾಸಿಕ ಸಭೆಯು ಜಿಲ್ಲಾಧ್ಯಕ್ಷರಾದ ಕಾಂ.ರಂಗನಾಯಕುಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಕಾಂ. ಪಿ. ಗಂಗಾಧರ ರಾವ್ ರವರು, ವಲಯ ಕಾರ್ಯದರ್ಶಿಗಳಾದ ಕಾಂ. ಪಿ.ಎ. ವಿರೂಪಾಕ್ಷಯ್ಯನವರು ಮತ್ತು ಸುಮಾರು ಅರವತ್ತು ಸದಸ್ಯರು ಭಾಗವಹಿಸಿದ್ದರು.
ಅಧ್ಯಕ್ಷರ ಪ್ರಾಸ್ತಾವಿಕ ಭಾಷಣದನಂತರ, ಕಾರ್ಯದರ್ಶಿಯವರು ಸದಸ್ಯರನ್ನು ಸ್ವಾಗತಿಸಿ ಮಾತನಾಡಿ ಬೆಂಗಳೂರು ಜಿಲ್ಲೆಯ ಏಳನೇ ದ್ವೈವಾರ್ಷಿಕ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ದೇಣಿಗೆಯನ್ನು ನೀಡಿದ ಹಾಗೂ ಸಮ್ಮೇಳನವು ಸಾಂಗವಾಗಿ ನಡೆಯಲು ಸಹಕರಿಸಿದ ಎಲ್ಲಾ ಸಮಿತಿಗಳ ಸದಸ್ಯರಿಗೆ ಮತ್ತು ಕಾಂ.ಸವಿತಾ ಹಾಗೂ ಅವರ ಪತಿ ಶ್ರೀ ಶಶಿಧರ ಅಡಪ ರವರ ಸಹಕಾರವನ್ನು ಶ್ಲಾಘಿಸಿದರು.
ನಮ್ಮ ಜಿಲ್ಲೆಯ ಉಪಾಧ್ಯಕ್ಷರಾದ ಕಾಂ. ಎಸ್. ಜವರಪ್ಪನವರು ಮಾತನಾಡಿ ತಾವು ನಮ್ಮ ಜಿಲ್ಲಾಸಂಘಕ್ಕಾಗಿ ಹೊಸದಾಗಿ ರೂಪಿಸಿರುವ “ಅಂತರ್ಜಾಲ ತಾಣದ (WEBSITE) ವಿನ್ಯಾಸವನ್ನು ಸಭೆಯಲ್ಲಿ ವಿವರಿಸಿ, ಅದನ್ನು ಪ್ರಚುರಪಡಿಸಲು ಸದಸ್ಯರಿಗೆ ಮನವಿ ಮಾಡಿದರು.
ವಲಯ ಕಾರ್ಯದರ್ಶಿಗಳಾದ ಕಾಂ. ವಿರೂಪಾಕ್ಷಯ್ಯ ನವರು ಮಾತನಾಡಿ, ಕೌಟುಂಬಿಕ ಪಿಂಚಣಿಗೆ ಹೆಣ್ಣು ಮಕ್ಕಳು ಅರ್ಜೀ ಸಲ್ಲಿಸಿದಾಗ ಅವರ ವಾರ್ಷಿಕ ಆದಾಯವನ್ನು ಸಿ.ಸಿ.ಎ. ಕಛೇರಿಯಲ್ಲಿ ಅತೀ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ . ವಾರ್ಷಿಕ ಆದಾಯವು ರೂ. 1,80,000/- ಕ್ಕಿಂತ ಹೆಚ್ಚಾಗಿದ್ದರೆ ಪಿಂಚಣಿ ಸವಲತ್ತುಗಳು ಸಿಗುವುದಿಲ್ಲ. ಆದ್ದರಿಂದ, ಅವರ ಹೆಸರಿನಲ್ಲಿರುವ F. D ಗಳನ್ನು ಅವರ ಮಕ್ಕಳ ಹೆಸರಿಗೆ ವರ್ಗಾಯಿಸಿ ಆದಾಯ ಮಿತಿಯನ್ನು ರೂ. 1,80,000/- ಮೀರದಂತೆ ನಿಗಾವಹಿಸಿ ಎಂದು ತಿಳಿಸಿದರು.
ಕಾರ್ಯಕ್ರಮವು ಮತ್ತೊಬ್ಬ ಉಪಾಧ್ಯಕ್ಷರಾದ ಹೆಚ್. ವಿ. ಪ್ರಕಾಶ್ ರವರ ವಂದನಾರ್ಪಣೆಯೊಡನೆ ಮುಕ್ತಾಯವಾಯಿತು.
DISTRICT- MONTHLY MEETING
On 16.09.2026, our district monthly meeting was held under the chairmanship of District President Com. Ranganayakulu. The meeting was attended by Central Committee Vice President Com. P. Gangadhara Rao, Zonal Secretary Com. P. A. Virupakshayya, and around sixty members.
Following the president's introductory speech, the secretary welcomed the members and expressed appreciation to all committee members who donated and cooperated for the grand success of the 7th Biennial Conference of Bengaluru District, as well as acknowledging the cooperation of Com. Savita and her husband Mr. Shashidhara Adapa.
Our District Vice President Com. S. Javarappa spoke and explained in detail about the layout of the newly designed website for our district association at the meeting, and requested members to popularize it.
Circle Secretary Com. Virupakshayya spoke and stated that when daughters apply for family pension, their annual income is being scrutinized very closely at the CCA office. If the annual income exceeds Rs. 1,80,000/-, pension benefits are not granted. Therefore, he advised transferring FDs held in their names to their children's names to ensure the income limit does not exceed Rs. 1,80,000/-.
The program concluded with a vote of thanks by another Vice President, Com. H. V. Prakash.