ಗ್ರಾಮಪಂಚಾಯಿತಿಗಳು ಈ ಹಿಂದೆ ಅನುಭವಿಸುತ್ತಿದ್ದ ತೆರಿಗೆ ಸಂಬಂಧಿತ ಲೆಕ್ಕಾಚಾರ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಿದೆ. ವಿವಿಧ ಬಗೆಯ ಕರ ಮತ್ತು ಉಪಕರಗಳನ್ನು ನಿಗದಿಪಡಿಸಲು, ಕಾಮಗಾರಿಗಳಲ್ಲಿ ತೆರಿಗೆ ಕಟಾವಣೆ ಗೊಳಿಸಿ ಬಿಲ್ ಪಾವತಿಸಲು, ವಿವಿಧ ಬಗೆಯ ನಿವೇಶನ ಮತ್ತು ಕಟ್ಟಡಗಳ ತೆರಿಗೆ ಗೊತ್ತುಪಡಿಸಲು, ಜಾಗಗಳ ವಿಸ್ತೀರ್ಣವನ್ನು ವಿವಿಧ ಮಾನದಂಡಗಳಿಗೆ ಅನುಗುಣವಾಗಿ ಪರಿವರ್ತಿಸಿಕೊಳ್ಳಲು ಪಂಚಾಯಿತಿ ಮಟ್ಟದ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಬೇಕಿತ್ತು. ಸದ್ಯ ಇಂತಹ ಶ್ರಮವನ್ನು ಮತ್ತಷ್ಟು ಸರಳಗೊಳಿಸಲು ಗ್ರಾಮಪಂಚಾಯತ್ ಮಲ್ಟಿ ಟಾಸ್ಕಿಂಗ್ ಕ್ಯಾಲುಕ್ಯುಲೇಟರ್ 6 in 1 ಆಪ್ ನ್ನು ಸೆಪ್ಟೆಂಬರ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು ಬಳಕೆದಾರರ ಸಲಹೆ ಸೂಚನೆಗಳನ್ನು ಅನುಸರಿಸಿ,.ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಹಾಗೂ ಇ ಬಗ್ಗೆ ನೀಡಲಾದ ಆದೇಶ,ಸುತ್ತೋಲೆಗಳ ಅನುಸಾರ ವಾಗಿ ಲೆಕ್ಕಾಚಾರವನ್ನು ಚಾಚೂ ತಪ್ಪದೇ , ಕ್ಷಣಾರ್ಧದಲ್ಲಿ ಲೆಕ್ಕಾಚಾರವನ್ನು ಮಾಡಲೂ GP Tax Calculator 6 in 1 ಆಂಡ್ರಾಯ್ಡ್ ಆ್ಯಪ್ ಸಿದ್ದಗೊಳಿಸಲಾಗಿರುತ್ತದೆ.
ಗ್ರಾಮಪಂಚಾಯಿತಿಗಳಿಗೆ ವರದಾನ: ಕರ್ನಾಟಕದಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಅನುಕೂಲಕ್ಕಾಗಿ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ
ಇದರಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ.
A . Gp tax Trail Version Click for Sample
B . Gp Tax Calculator Pro Click for Sample
C . Assessment tax calculator ultimate . Click for Sample
A .Trail Version. Click for Sample
ಸಾಮಾನ್ಯ ಕ್ಯಾಲ್ಕುಲೇಟರ್ ಮತ್ತು ಏರಿಯಾ ಕ್ಯಾಲ್ಕುಲೇಟರ್ ಗಳನ್ನು ಉಚಿತವಾಗಿ ನೀಡಲಾಗಿದೆ.
B . Gp Tax Calculator Pro Click for Sample
1).ಏರಿಯಾ ಕ್ಯಾಲ್ಕುಲೇಟರ್: Click for Sample
ಇದರಲ್ಲಿ ಸೆಂಟ್ಸ್, ಗುಂಟೆ, ಸ್ಕ್ವೇರ್ ಮೀಟರ್, ಸ್ಕ್ವೇರ್ ಫೀಟ್ ಮುಂತಾದ ಆಯ್ಕೆಗಳನ್ನು ಈ ಆಪ್ ಮಲ್ಲಿ ನೀಡಲಾಗಿದೆ. ಇದರಿಂದ ಜಾಗಗಳು ಮತ್ತು ಕಟ್ಟಡಗಳ ಅಳತೆಯನ್ನು ನಿಖರವಾಗಿ ವಿವಿಧ ಮಾನದಂಡಗಳಿಗೆ ಅನುಸಾರವಾಗಿ ಬದಲಾಯಿಸಿಕೊಳ್ಳಬಹುದಾಗಿದೆ.
2.ವರ್ಕ್ ಬಿಲ್ ಟ್ರ್ಯಾಕ್ಸ್ ಕ್ಯಾಲ್ಕುಲೇಟರ್: Click for Sample
ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅನುಷ್ಠಾನಗೊಳಿಸುವಂತಹ ಹಲವಾರು ಕಾಮಗಾರಿಗಳಲ್ಲಿನ ಆದಾಯ ತೆರಿಗೆ, ಕಾರ್ಮಿಕ ಕಲ್ಯಾಣ ನಿಧಿ, ಕಂಟ್ರಾಕ್ಟರ್ ಬೆನ್ವೆಲೆಂಟ್ ಫಂಡ್, GST, ರಾಜ್ಯಧನ ತೆರಿಗೆಗಳನ್ನು ನಿಖರವಾಗಿ ತಿಳಿಯಲು ಈ ಹಿಂದೆ ಪಂಚಾಯಿತಿ ಮಟ್ಟದ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಬೇಕಿತ್ತು. ಸದ್ಯ ಈ ಎಲ್ಲಾ ಕಾರ್ಯಗಳು ಕ್ಯಾಲ್ಕುಲೇಟರ್ ಮೂಲಕ ಸುಲಭವಾಗಲಿದೆ ಮತ್ತು ಕಟಾವಣೆ ಮಾಡಲು ಸಾಕಷ್ಟು ಸಹಕಾರಿಯಾಗಿದೆ. ಪ್ರಸ್ತುತ ಕಟಾವಣೆ ಆಗಬೇಕಿರುವ ಶೇಕಡಾವಾರು ಗಳನ್ನು ಇದರಲ್ಲಿ ಪರಿಷ್ಕೃತ ಗೊಳಿಸಿ ನೀಡಲಾಗಿದೆ.
3. ಸೆಸ್ ಕ್ಯಾಲ್ಕುಲೇಟರ್: Click for Sample
ಖಾಲಿ ನಿವೇಶನ ಮತ್ತು ಕಟ್ಟಡಗಳಿಗೆ ವಿಧಿಸಬಹುದಾದ ತೆರಿಗೆಗೆ ಅನುಗುಣವಾಗಿ ಸೆಸ್ (24%) ಮೊತ್ತವನ್ನು ಕಂಡುಹಿಡಿಯಲು ಆಪ್ ನಲ್ಲಿನ ಈ ಕ್ಯಾಲ್ಕುಲೇಟರ್ ಬಳಸಬಹುದಾಗಿದೆ. ಇದರ ಜೊತೆಗೆ ನೀರಿನ ತೆರಿಗೆ ಮತ್ತು ಬೀದಿದೀಪಗಳ ತೆರಿಗೆಯನ್ನು ಕ್ರೋಡೀಕರಿಸಲು ಬಹು ಸಹಕಾರಿಯಾಗಿದೆ.
4. ಕ್ಯಾಶ್ ಕ್ಯಾಲ್ಕುಲೇಟರ್: Click for Sample
ಇದರಲ್ಲಿ ನೋಟು ಹಾಗೂ ಅದರ ಮೌಲ್ಯಕ್ಕೆ ಅನುಗುಣವಾಗಿ ಒಟ್ಟು ಮೊತ್ತವನ್ನು ಸುಲಭವಾಗಿ ಲೆಕ್ಕ ಹಾಕಬಹುದಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿನ ಕರವಸೂಲಿಗಾರರು ಬ್ಯಾಂಕುಗಳಿಗೆ ಹಣ ತುಂಬುವಾಗ ಲೆಕ್ಕ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ.
5. ನಿವೇಶನ ತೆರಿಗೆ. Click for Sample
ಖಾಲಿ ನಿವೇಶನಗಳಿಗೆ ಸರ್ಕಾರದ ಆದೇಶದಂತೆ , ತೆರಿಗೆಯನ್ನು ವಿಧಿಸಲು ಅನುಸೂಚಿ- 4 ರಲ್ಲಿ ನೀಡಿರುವಂತೆ ವಿಧಿಸಬೇಕಿರುವ ತೆರಿಗೆಯನ್ನು ನಿಖರವಾಗಿ ಲೆಕ್ಕಾಚಾರ ಮಾಡಬಹುದು .
6. ಕಟ್ಟಡ ತೆರಿಗೆ Click for Sample
ನಿವೇಶನ ಮತ್ತು ಕಟ್ಟಡ ತೆರಿಗೆಯನ್ನು ಸರ್ಕಾರದಿಂದ ಹೊರಡಿಸಲಾದ ವಿವಿಧ ಸುತ್ತೋಲೆ ಮತ್ತು ಆದೇಶಗಳನ್ನು ಅನುಸರಿಸಿ ತೆರಿಗೆಯನ್ನು ವಿಧಿಸಲು ಅನುಸೂಚಿ- 4 ರಲ್ಲಿ ನೀಡಿರುವಂತೆ ಈ ಕ್ಯಾಲ್ಕುಲೇಟರ್ ಅಭಿವೃದ್ಧಿಪಡಿಸಲಾಗಿದ್ದು ಸುಲಭವಾಗಿ ಅಗತ್ಯ ಮಾಹಿತಿಗಳನ್ನು ಒದಗಿಸಿದಲ್ಲಿ ನಿಖರವಾದ ಲೆಕ್ಕಾಚಾರ ಮಾಡಲು ಸಾಧ್ಯವಿದೆ.
7.ಅಸೆಸ್ಮೆಂಟ್ ಟ್ಯಾಕ್ಸ್ ಕ್ಯಾಲ್ಕುಲೇಟರ್: Click for Sample
ಗ್ರಾಮ ಪಂಚಾಯಿತಿಗಳಲ್ಲಿನ ಖಾಲಿ ನಿವೇಶನ ಮತ್ತು ಕಟ್ಟಡಗಳಿಗೆ ತೆರಿಗೆಯನ್ನು ವಿಧಿಸಲು ಅನುಸೂಚಿ- 4 ರಲ್ಲಿ ನೀಡಿರುವಂತೆ ಗ್ರಾಮ ಪಂಚಾಯತಿಗಳಲ್ಲಿಲಭ್ಯವಿರುವ ಬೈಲಾ ಅನುಸಾರ ಬಂಡವಾಳ ಮೌಲ್ಯ ಮತ್ತು ವಿಧಿಸಬೇಕಾದ ತೆರಿಗೆ ಪ್ರಮಾಣಕ್ಕನುಗುಣವಾಗಿ,ಸೆಸ್ ಸೇರಿದಂತೆ ಚದರ ಮೀಟರ್ ಗೆ ಅನುಗುಣವಾಗಿ ಲೆಕ್ಕಹಾಕುವ ಮತ್ತು ಒಟ್ಟು ತೆರಿಗೆಯನ್ನು ತಿಳಿಯಲು ಈ ಆಪ್ ಬಳಸಬಹುದಾಗಿದೆ.
8. ಬೇಸಿಕ್ ಕ್ಯಾಲ್ಕುಲೇಟರ್: Click for Sample
ಇದರಲ್ಲಿ ಸಾಮಾನ್ಯ ಕ್ಯಾಲ್ಕುಲೇಟರ್ ನಲ್ಲಿರುವ ಎಲ್ಲಾ ಆಯ್ಕೆಗಳನ್ನುಗಳನ್ನು ಒದಗಿಸಲಾಗಿದ್ದು ಸಾಮಾನ್ಯ ಲೆಕ್ಕಕ್ಕಾಗಿ ಬಳಸಬಹುದಾಗಿದೆ.
C . Assessment tax calculator ultimate . Click for Sample
1.ವಸತಿ ಮತ್ತು ವಾಣಿಜ್ಯ/ವಸತಿಯೇತರ ಕಟ್ಟಡಗಳ ತೆರಿಗೆ ನಿರ್ಧರಣೆ ಕ್ಯಾಲ್ಕುಲೇಟರ್: Click for Sample
ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳು ಅನುಸರಿಸಿ ಅನುಬಂಧದಲ್ಲಿ ನೀಡಲಾಗಿರುವ ಮಾಹಿತಿಯನ್ನು ಕ್ರೋಢೀಕರಿಸಿ ಕಟ್ಟಡ ಮೌಲ್ಯ ,ಸವಕಳಿ ಮೌಲ್ಯ, ಒಟ್ಟು ಕಟ್ಟಡದ ಮೌಲ್ಯ, ಸೆಸ್ ಮತ್ತು ತೆರಿಗೆ ಒಳಗೊಂಡಂತೆ ನಿಖರವಾದ ಲೆಕ್ಕಾಚಾರವನ್ನು ಒಳಗೊಂಡಿದೆ.
2 . ಕೈಗಾರಿಕಾ ನಿವೇಶನ ಮತ್ತು ಕಟ್ಟಡದ ತೆರಿಗೆ ನಿರ್ಧರಣಾ ಕ್ಯಾಲ್ಕುಲೇಟರ್.Click for Sample
ಕೈಗಾರಿಕಾ ಕಟ್ಟಡ ಮೌಲ್ಯ ( Rcc & AC Sheet ) ,ಸವಕಳಿ ಮೌಲ್ಯ, ಒಟ್ಟು ಕಟ್ಟಡದ ಮೌಲ್ಯ, ಸೆಸ್ ಮತ್ತು ತೆರಿಗೆ ಒಳಗೊಂಡಂತೆ ನಿಖರವಾದ ಲೆಕ್ಕಾಚಾರವನ್ನು ಒಳಗೊಂಡಿದೆ.
3. ಅಪಾರ್ಟ್ಮೆಂಟ್ ಮತ್ತು ಫ್ಲಾಟ್ ತೆರಿಗೆ ನಿರ್ಧರಣಾ ಕ್ಯಾಲ್ಕುಲೇಟರ್.Click for Sample
ಅಪಾರ್ಟ್ಮೆಂಟ್ ಮತ್ತು ಫ್ಲಾಟ್ ಕಟ್ಟಡದ ಮೌಲ್ಯ ,ಸವಕಳಿ ಮೌಲ್ಯ, ಒಟ್ಟು ಕಟ್ಟಡದ ಮೌಲ್ಯ, ಸೆಸ್ ಮತ್ತು ತೆರಿಗೆ ಎಲ್ಲವನ್ನೂ ಒಳಗೊಂಡಂತೆ ನಿಖರವಾದಲೆಕ್ಕಾಚಾರವನ್ನು ಒಳಗೊಂಡಿದೆ.
4 . ವಿಲ್ಲಾ ಮತ್ತು ರೋ ಹೌಸ್ ತೆರಿಗೆ ನಿರ್ಧರಣೆ ಕ್ಯಾಲ್ಕುಲೇಟರ್: Click for Sample
ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳು ಅನುಸರಿಸಿ ಅನುಬಂಧದಲ್ಲಿ ನೀಡಲಾಗಿರುವ ಮಾಹಿತಿಯನ್ನು ಚಾಚೂ ತಪ್ಪದೆ ಪಾಲಿಸಿ ವಿಲ್ಲಾ ಮತ್ತು ರೋ ಹೌಸ್ ಕಟ್ಟಡದ ಮೌಲ್ಯ,ಸವಕಳಿ ಮೌಲ್ಯ, ಒಟ್ಟು ಕಟ್ಟಡದ ಮೌಲ್ಯ, ಸೆಸ್ ಮತ್ತು ತೆರಿಗೆ ಒಳಗೊಂಡಂತೆ ನಿಖರವಾದ ಮತ್ತು ಸಂಪೂರ್ಣವಾದ ಲೆಕ್ಕಾಚಾರವನ್ನು ಒಳಗೊಂಡಿದೆ.
5. ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಘಟಕಗಳ ತೆರಿಗೆ ನಿರ್ಧರಣೆ ಕ್ಯಾಲ್ಕುಲೇಟರ್: Click for Sample
ಸರ್ಕಾರದ ಆದೇಶಗಳು ಮತ್ತು ಸುತ್ತೋಲೆಗಳು ಅನುಸರಿಸಿ ಅನುಬಂಧದಲ್ಲಿ ನೀಡಲಾಗಿರುವ ಮಾಹಿತಿಯನ್ನು ಕ್ರೋಢೀಕರಿಸಿ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಮೆಗಾ ವ್ಯಾಟ್ ಮತ್ತು ಕಟ್ಟಡ ಮೌಲ್ಯ ,ಸವಕಳಿ ಮೌಲ್ಯ, ಒಟ್ಟು ಕಟ್ಟಡದ ಮೌಲ್ಯ, ಸೆಸ್ ಮತ್ತು ತೆರಿಗೆ ಒಳಗೊಂಡಂತೆ ನಿಖರವಾದ ಲೆಕ್ಕಾಚಾರವನ್ನು ಒಳಗೊಂಡಿದೆ.
6. ನಿವೇಶನ ತೆರಿಗೆ. Click for Sample
ನಿವೇಶನಗಳ ತೆರಿಗೆಯನ್ನು ಹಾಕುವಂತಹ ಸಂದರ್ಭದಲ್ಲಿ ಗಮನಿಸಬೇಕಾದ ರಾಷ್ಟ್ರ ರಾಜ್ಯ ಮತ್ತು ಇತರೆ ರಸ್ತೆಗಳು, ವಸತಿ-ವಸತಿಯೇತರ ಹಾಗೂ ಕಾರ್ನರ್ ಸೈಟ್ ಇವೇ ಮೊದಲಾದವುಗಳನ್ನು ಗಣನೆಗೆ ತೆಗೆದುಕೊಂಡು ಪೂರ್ಣವಾಗಿ ಲೆಕ್ಕಾಚಾರ ಮಾಡಬಹುದಾಗಿದೆ.
7. ಅಭಿವೃದ್ಧಿ ಹೊಂದದ ಭೂಪರಿವರ್ತನೆ ಜಮೀನಿನ ತೆರಿಗೆ ನಿರ್ಧರಣಾ ಕ್ಯಾಲ್ಕುಲೇಟರ್ Click for Sample
ಕೃಷಿ ಅಥವಾ ಇತರೆ ಭೂಮಿ ಯನ್ನು ವಿವಿಧ ಕಾರಣಗಳಿಗೆ ಭೂಪರಿವರ್ತನೆ ಹೊಂದಿರುತ್ತದೆ ಆದರೆ ಆ ಉದ್ದೇಶಕ್ಕೆ ಅಭಿವೃದ್ಧಿಪಡಿಸಲಾಗಿರುವುದಿಲ್ಲ ಇಂತಹ ಜಮೀನಿಗೆ ತೆರಿಗೆಯನ್ನು ವಿಧಿಸಲು ಲೆಕ್ಕಚಾರ ಮಾಡುವ ಕ್ಯಾಲ್ಕುಲೇಟರ್ ಆಗಿದೆ
ಆ್ಯಪ್ ಪಡೆಯುವುದು ಹೇಗೆ:
ಗ್ರಾಮಪಂಚಾಯಿತಿ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇಷ್ಟೊಂದು ಉಪಕಾರಿಯಾಗಿರು ಈ ಆ್ಯಪ್ ಅನ್ನು ಸದ್ಯ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.ಇದರ ಲಿಂಕ್
https://play.google.com/store/apps/details?id=com.news.calculatorapp
ಯನ್ನು ಬಳಸಿಕೊಂಡು ಡೌನ್ ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.
Gp Tax Calculator 6 in 1 Version -2 ಬಳಕೆಯ ಬಗೆಗೆ ತಿಳಿಯಲು YouTube ಕೊಂಡಿ
https://youtube.com/channel/UCEfk4zexlrJlr-4sOuRhl5g
ಈ ಆ್ಯಪ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ
E-Mail - care.gptax6in1@gmail.com
Mobile - 8880882111
ಅವರನ್ನು ಸಂಪರ್ಕಿಸಬಹುದಾಗಿದೆ.
Source:
1.ಕರ್ನಾಟಕ 1 [ಗ್ರಾಮ ಸ್ವರಾಜ್ ಮತು ಪಂಚಾಯತ್ ರಾಜ್] 1 ಅಧಿನಿಯಮ, 1993
2.ಕರ್ನಾಟಕ ಸರ್ಕಾರ ದ ಸುತ್ತೋಲೆ ಸಂಖ್ಯೆ :ಗ್ರಾಅಪ 481 ಗ್ರಾಪಂಅ 2016 ದಿನಾಂಕ:27-02-2018
3.ಕರ್ನಾಟಕ ಸರ್ಕಾರ ಪತ್ರ ಸಂಖ್ಯೆ: ಗ್ರಾಅಪ 939 ಗ್ರಾಪಂಅ 2016(1) ದಿನಾಂಕ: 09.11.2016
4.ಕರ್ನಾಟಕ ವಿಕಾಸ ಮಾಸ ಪತ್ರಿಕೆ April-May 2019
6. Building Valuation And Depreciation Rates
7.Property & Site Tax - Uttara kannada zp
8.ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು ನಿಯಮಗಳು, 2021
9.ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2020
12.ಇ-ಸ್ವತ್ತು ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ
15 ರಾಜ್ಯದ ಗ್ರಾಮ ಪಂಚಾಯತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ಸಂಗ್ರಹಿಸಿರುವ ತೆರಿಗೆ ಮೊತ್ತದ ಮೇಲೆ ವಿಧಿಸುವ ಆರೋಗ್ಯ, ಭಿಕ್ಷುಕರ ಮತ್ತು ಗ್ರಂಥಾಲಯ ಉಪಕರಗಳ ಮೊತ್ತವನ್ನು ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸುವ ಬಗ್ಗೆ- ಗ್ರಾಅಪ 84 ಗ್ರಾಪಂಅ 2020, ದಿನಾಂಕ:21.01.2020
17 ಜಂಟಿ ಸುತ್ತೋಲೆ-ಗ್ರಾಮಠಾಣದಲ್ಲಿ ತೆರಿಗೆ ನಿರ್ಧರಣೆ ಪಟ್ಟಿಯಾಗಿರುವ ಮತ್ತು ತೆರಿಗೆ ನಿರ್ಧರಣೆ ಪಟ್ಟ ಕೋರಿ ಬರುವ ಆಸ್ತಿಗಳನ್ನು ದಿಶಾಂಕ್ ಆಫ್ ಮೂಲಕ ಅಳತೆ ಮಾಡಿ ನಕ್ಷೆ ತಯಾರಿಸುವ ಬಗ್ಗೆ- ಗ್ರಾಅಪ/64/ಇ-ಆಡಳಿತ/2021, ಬೆಂಗಳೂರು, ದಿನಾಂಕ: 18/10/2021