ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಜಗದಾಳ
ನಮ್ಮೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಗದಾಳ ಶಾಲೆಯು ಶತಮಾನ ಕಂಡ ಶಾಲೆಯು ಕೂಡ ಹೌದು ನಮ್ಮ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಈ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ರೂಪಿಸುವ ಸಮಗ್ರ ಯೋಜನೆಯೊಂದಿಗೆ ಮತ್ತು ಕಲಿತ ಶಾಲೆಯ ಋಣ ತೀರಿಸಲು ನಮ್ಮ ಪಣ ಎಂಬ ಉದ್ದೇಶದೊಂದಿಗೆ ಈ ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖ ಹಿರಿಯರು ಮುಖಂಡರು ಶಿಕ್ಷಕರು ಕೂಡಿಕೊಂಡು ಈ ಶಾಲೆಗೆ ಒಂದು ಹಳೆ ವಿದ್ಯಾರ್ಥಿಗಳ ಸಂಘ ರಚಿಸಲು ನಿರ್ಧರಿಸಲಾಯಿತು. ದಿನಾಂಕ 20- 10 -2019 ರಂದು ರವಿವಾರ 10:00 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಗದಾಳ ದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ರಚನೆಯ ನಿಮಿತ್ಯವಾಗಿ ಅಂತಿಮ ಸಭೆ ಕರೆದು ಈ ಸಭೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಂ ಎ ಭಾಗವಾನ್ ಸರ್ ಮಾತನಾಡಿ ನಮ್ಮ ಶಾಲೆಗೆ ಒಂದು ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚನೆ ಮಾಡಲು ಸೇರಿರುವ ಎಲ್ಲ ಸದಸ್ಯರಲ್ಲಿ ಮನವಿ ಮಾಡಿಕೊಂಡರು ಸಂಘ ರಚನೆ ಮಾಡುವ ಕುರಿತು ಹೂಗಾರ ಸರ್ ಸಂಘದ ರಚನೆ ಉದ್ದೇಶಗಳು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾಗಿ ವಿವರಿಸಿದರು ನಂತರ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಪ್ರಮುಖ ಹಿರಿಯರು ಮುಖಂಡರು ಮತ್ತು ಶಿಕ್ಷಕರು ವಿವರವಾಗಿ ಚರ್ಚಿಸಿ ಅಂತಿಮವಾಗಿ ಕಲಿತ ಶಾಲೆಯ ಋಣ ತೀರಿಸಲು ನಮ್ಮ ಪಣ ಎಂಬ ವಾಕ್ಯದೊಂದಿಗೆ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಒಂದು ನಿಸ್ಪಕ್ಷಪಾತ ಸಂಘವನ್ನು ರಚಿಸಿದರು .
ಈ ಸಂಘಕ್ಕೆ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ನೀಡಲು 13 ಸದಸ್ಯರನ್ನು ಒಳಗೊಂಡ ಒಂದು ಸಲಹಾ ಸಮಿತಿಯನ್ನು ರಚಿಸಿದರು .ಸಲಹಾ ಸಮಿತಿಯ ಸದಸ್ಯರು ಈ ಕೆಳಗಿನಂತೆ ಇರುತ್ತಾರೆ
1. ಶ್ರೀಶೈಲ ಮ ಬಿ/ ಪಾಟೀಲ್
2. ಸುರೇಶ್ ಗಂ ಅಸ್ಕಿ
3.ಅಲ್ಲಪ್ಪ ಸಿ ಹೊಸೂರು
4. ಬಸವರಾಜ್ ಗಂ ಉಳ್ಳಾಗಡ್ಡಿ
5. ಮಾರುತಿ ವಿ ಸೊರಗಾವ
6. ಪಂಡಿತ್ ಜೋ ಭೋಸ್ಲೆ
7. ಗುರುಲಿಂಗ ಸಿ ಚಿಂಚಲಿ
8. ಅಶೋಕ ಭೀ ಬಂಗಿ
9. ಪ್ರಭು ಮು ಬಿ/ ಪಾಟೀಲ್
10. ಈಶ್ವರ್ ಬಾ ಬಂಗಿ
11. ಶಿವಾಜಿ ರಾ ಸೋರಗಾವಿ
12. ಚನ್ನಬಸಪ್ಪ ಬ ನೀಲಕಂಠ
13. ಪ್ರೇಮಾ ಶಂಕರಯ್ಯ ಮಠಪತಿ
ನಂತರ ಸಲಹಾ ಸಮಿತಿಯವರ ಮಾರ್ಗದರ್ಶನದಲ್ಲಿ 15 ಜನರ ಕಾರ್ಯಕಾರಿ (ಆಡಳಿತ) ಮಂಡಳಿ ರಚನೆ ಮಾಡಲಾಯಿತು . ಆಡಳಿತ ಮಂಡಳಿಯ ಸದಸ್ಯರು ಈ ಕೆಳಗಿನಂತೆ ಇರುತ್ತಾರೆ
1. ಸತ್ಯಪ್ಪ ಮಲ್ಲಪ್ಪ ಬಂಗಿ ಗೌರವಾಧ್ಯಕ್ಷರು
2. ಸಿದ್ದಪ್ಪ ಮುತ್ತಪ್ಪ ಕಬಾಡಗಿ ಅಧ್ಯಕ್ಷರು
3. ಬರಮಪ್ಪ ಕೇದಾರಿ ಜಾದವ್ ಉಪಾಧ್ಯಕ್ಷರು
4. ಹನುಮಂತ ರಾಜು ದೇಶಪಾಂಡೆ ಕಾರ್ಯದರ್ಶಿ
5. ಗುರುಪಾದಪ್ಪ ದುಂಡಪ್ಪ ಹೊಸೂರು. ಸಹಕಾರ್ಯದರ್ಶಿ
6. ಅರುಣ್ ರಾ ಬಿರಾದಾರ್ ಖಜಾಂಚಿ
7. ಲೊಕೇಶ ಚನಮಲ್ಲಪ್ಪ ಅಸ್ಕಿ ,ಸಂಘಟನಾ ಕಾರ್ಯದರ್ಶಿ
8. ಮಾಹಾಲಿಂಗ್ ಶಿವಪ್ಪ ಚಿಂಚಲಿ ನಿರ್ದೇಶಕರು
9. ಆಂಜನೇಯ ರಾಮಪ್ಪ ಕಬಾಡಗಿ, ನಿರ್ದೇಶಕರು
10. ಅಶೋಕ್ ರಾಮಪ್ಪ ಬಡಿಗೇರ್ ನಿರ್ದೇಶಕರು
11. ರಾಮಪ್ಪ ಮಲ್ಲಪ್ಪ ಸುತಗುಂಡಿ ,ನಿರ್ದೇಶಕರು
12. ಪ್ರದೀಪ್ ತವನಪ್ಪ ಕಾಸಾರ ನಿರ್ದೇಶಕರು
13. ಕಿರಣ್ ಮಾರುತಿ ಸೋರಗಾವಿ ,ನಿರ್ದೇಶಕರು
14. ಕುಶಪ್ಪ ರಾಮಪ್ಪ ಹರಪನಹಳ್ಳಿ ನಿರ್ದೇಶಕರು
15. ಭೀಮಪ್ಪ ಬಸಪ್ಪ ಉಳ್ಳಾಗಡ್ಡಿ ,ನಿರ್ದೇಶಕರು
ಹೀಗೆ ಆಡಳಿತ ಮಂಡಳಿಯನ್ನು ರಚಿಸಿದ್ದು ಸೇರಿರುವ ಎಲ್ಲಾ ಸದಸ್ಯರು ಶಾಲಾ ಸಮಿತಿಯ ಸದಸ್ಯರನ್ನು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರನ್ನು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಸೇರಿರುವ ಸದಸ್ಯರು ಈ ಶಾಲೆಯನ್ನು ಒಂದು ಉತ್ತಮ ಗುಣಮಟ್ಟದ ಕಲಿಕೆಯ ಮತ್ತು ಮಾದರಿಯ ಶಾಲೆಯನ್ನಾಗಿಸಲು ಶ್ರಮಿಸಬೇಕೆಂದು ಸೂಚನೆ ನೀಡಿದರು . ಅಂತಿಮವಾಗಿ ಶಾಲೆಯ ಮುಖ್ಯ ಗುರುಗಳು ಶ್ರೀ ಎಮ ಎ ಬಾಗವಾನ್ ಮಾತನಾಡಿ ನಮ್ಮ ಶಾಲೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿಗಳ ಅಂಗವನ್ನು ರಚಿಸಿಕೊಟ್ಟ ಊರಿನ ಎಲ್ಲ ಹಿರಿಯರಲ್ಲಿ ಮುಖಂಡರಿಗೆ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು