Library Rules & Regulations
ಗ್ರಂಥಾಲಯದ ನಿಯಮಗಳು
(Library Rules & Regulations)
ಗ್ರಂಥಾಲಯ ಕಾರ್ಯನಿರ್ವಹಣೆಯ ವೇಳೆ: ಬೆಳಿಗ್ಗೆ 10.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ.
ಗ್ರಂಥಾಲಯದ ಪುಸ್ತಕಗಳ ಮೇಲೆ ಯಾವುದೇ ರೀತಿಯ ಗುರುತುಗಳನ್ನಾಗಲಿ, ಇನ್ನಿತರ ಯಾವುದೇ ಹಾನಿಯನ್ನು ಮಾಡುವಂತಿಲ್ಲ. ಯಾವುದೇ ಹಾನಿ ಮಾಡಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.
ಪ್ರತಿ ವಿದ್ಯಾರ್ಥಿಗೆ 2 ಪುಸ್ತಕಗಳನ್ನು 15 ದಿನಗಳ ಅವಧಿಗೆ ಎರವಲು ಪಡೆಯಲು ಅವಕಾಶವಿರುತ್ತದೆ. 15 ದಿನಗಳ ನಂತರ ಹಿಂತಿರುಗಿಸುವ ಪುಸ್ತಕಗಳ ಮೇಲೆ ದಿನ ಒಂದಕ್ಕೆ 1 ರೂಪಾಯಿ ದಂಡವನ್ನು ವಿಧಿಸಲಾಗುವುದು.
ಪುಸ್ತಕಗಳನ್ನು, ನಿಯತಕಾಲಿಕೆಗಳು ಮತ್ತು ಇನ್ನಿತರ ಗ್ರಂಥಾಲಯ ಪರಿಕರ ಎರವಲು ಪಡೆಯಲು ಗ್ರಂಥಾಲಯ ಸದಸ್ಯತ್ವ ಕಾರ್ಡ್ನ್ನು ತೆಗೆದುಕೊಂಡು ಬರುವುದು ಕಡ್ಡಾಯ.
ಗ್ರಂಥಾಲಯ ಸದಸ್ಯತ್ವ ಕಾರ್ಡ್ನ್ನು ಯಾವುದೇ ಕಾರಣಕ್ಕೂ ವರ್ಗಾಹಿಸುವಂತಿಲ್ಲ.
ಗ್ರಂಥಾಲಯ ಸದಸ್ಯತ್ವ ಕಾರ್ಡ್ನ್ನು ಕಳೆದುಕೊಂಡಲ್ಲಿ ತಕ್ಷಣ ಗ್ರಂಥಪಾಲಕರ ಗಮನಕ್ಕೆ ತರುವುದು. ನಕಲು ಗ್ರಂಥಾಲಯ ಸದಸ್ಯತ್ವ ಕಾರ್ಡ್ನ್ನು ಪಡೆಯಲು ಹೆಚ್ಚುವರಿ 20 ರೂಪಾಯಿಯನ್ನು ಪಾವತಿಸಿ ನಕಲು ಸದಸ್ಯತ್ವ ಕಾರ್ಡ್ನ್ನು ಪಡೆಯಬಹುದು. ಗ್ರಂಥಪಾಲಕರು ಪುಸ್ತಕಗಳನ್ನು ಎರವಲು ನೀಡುವ/ನೀಡದಿರುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.
ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದ ಕೊನೆಯಲ್ಲಿ/ಅನಿವಾರ್ಯ ಕಾರಣಗಳಿಂದ ಮಧ್ಯದಲ್ಲಿ ಕಾಲೇಜು ಬಿಟ್ಟಲ್ಲಿ ಕಡ್ಡಾಯವಾಗಿ ಗ್ರಂಥಾಲಯದ ಸದಸ್ಯತ್ವ ಕಾರ್ಡನ್ನು ಹಿಂತಿರುಗಿಸಿ ಗ್ರಂಥಾಲಯದಿಂದ ಬೇ-ಬಾಕಿ ಪ್ರಮಾಣ ಪತ್ರವನ್ನು (No-Due Certificate) ಪಡೆಯತಕ್ಕದ್ದು.