As in all regions of Tulu Nadu, in ancient times, only the worship of Bermer (local guardian spirits) existed in Hiriyadka as well. In the beginning, the worship here was limited to the five divine spirits—Bermer, Naga, Raktheshwari, Kshetrapala, and Mahishantaya. At that time, there was no presence of Lord Veerabhadra in this place. The arrival of Veerabhadra here is an interesting story.
A short distance from this temple lived the Aalva Hegde family of Padubagha Beedu, who used to manage the administration of this sacred Brahmasthana. A Brahmin priest named Adakattaya used to perform the rituals for the five spirits. His daily routine included offering prayers at the Brahmasthana and then delivering the sacred offerings (prasada) to the Hegde family at the Beedu. The Aalva Hegde would not eat food each day until he had received and partaken of the Bermer’s prasada.
One day, for some reason, Adakattaya, after completing the worship and taking the offering (prasada), got delayed. Due to this, the Aalva Hegde became angry and, in a fit of rage, insulted Adakattaya severely. Deeply hurt by this humiliation, Adakattaya took a vow, saying, “I will bring a deity more powerful than these Brahmaru and establish him nearby.” With this resolve, he climbed the Ghats and went to Khandya near Balehonnur.
There, he performed intense penance and pleased the local form of Lord Veerabhadra. He prayed to the deity, requesting him to come along and reside in his village. Pleased with his devotion, Veerabhadra agreed and descended the Ghats with thousands of Rudraganas (divine attendants), following Adakattaya.
As they reached near Agumbe, two guards named Maali and Sumaali were stationed at the checkpoint. When they looked toward the slope of the hill, they saw thousands of divine beings. However, only a single Brahmin (Adakattaya) crossed the checkpoint. Right after he crossed, the thousands of Rudraganas followed him in a flash of divine light. Astonished by this strange phenomenon, the curious guards followed them.
Upon reaching Hiriyadka, with the support of the Aalva Hegde and Anjaru Beedu’s Kurla Hegde, Adakattaya established a magnificent shrine for Veerabhadra and a hall for his Rudraganas. As time passed, Adakattaya, who continued to serve both the Brahmaru and Veerabhadra, attained oneness with the divine and was elevated to a deity himself. His presence is still felt in Hiriyadka.
To this day, Veerabhadra receives three daily offerings (poojas), and Adakattaya receives two. The two guards, Maali and Sumaali, who followed the Rudraganas, are also worshipped in the temple’s Rajagopura (main gateway tower).
ತುಳುನಾಡಿನ ಎಲ್ಲಾ ಕಡೆಗಳಲ್ಲಿ ಇರುವಂತೆ ಹಿರಿಯಡಕದಲ್ಲೂ ಅತೀ ಪ್ರಾಚೀನ ಕಾಲದಲ್ಲಿ ಬೆರ್ಮರ ಆರಾಧನೆ ಮಾತ್ರವಿತ್ತು. ಪಂಚಶಕ್ತಿಗಳಾದ ಬೆರ್ಮರು, ನಾಗ, ರಕ್ತೇಶ್ವರಿ,ಕ್ಷೇತ್ರಪಾಲ ಮತ್ತು ಮಹಿಷಂತಾಯನ ಉಪಾಸನೆ ಇಲ್ಲಿ ಆರಂಭದಲ್ಲಿತ್ತು. ಆಗ ಇಲ್ಲಿ ವೀರಭದ್ರ ದೇವರು ಇರಲಿಲ್ಲ.ವೀರಭದ್ರ ಇಲ್ಲಿಗೆ ಬಂದ ಹಿನ್ನೆಲೆ ರೋಚಕವಾಗಿದೆ. ಈ ದೇವಾಲಯದಿಂದ ಕೆಲವೇ ದೂರದಲ್ಲಿರುವ ಪಡುಭಾಗ ಬೀಡಿನ ಆಳ್ವಹೆಗಡೆಯವರು ಈ ಬ್ರಹ್ಮಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದರು. ಈ ಪಂಚಶಕ್ತಿಗಳ ಆರಾಧನೆಗೆ ಅಡಕತ್ತಾಯ ಎಂಬ ಓರ್ವ ಬ್ರಾಹ್ಮಣ ಅರ್ಚಕರಿದ್ದರು. ಪ್ರತೀ ದಿನ ಬ್ರಹ್ಮಸ್ಥಾನದಲ್ಲಿ ಪೂಜೆ ನಡೆಸಿ ಬ್ರಹ್ಮರ ಪ್ರಸಾದವನ್ನು ಬೀಡಿನ ಹೆಗಡೆಗೆ ಕೊಟ್ಟು ಬರುವುದು ಇವರ ದಿನಚರಿಯಾಗಿತ್ತು. ಬೆರ್ಮರ ಪ್ರಸಾದ ಸ್ವೀಕರಿಸದೆ ಆಳ್ವಹೆಗಡೆ ಅನ್ನಾಹಾರ ಮುಟ್ಟುತ್ತಿರಲಿಲ್ಲ.
ಒಂದು ದಿನ ಯಾವುದೋ ಕಾರಣದಿಂದಾಗಿ ಅಡಕತ್ತಾಯರು ಪೂಜೆ ಮುಗಿಸಿ ಪ್ರಸಾದ ಕೊಂಡು ಹೋಗುವಾಗ ವೇಳೆ ಮೀರಿ ಹೋಯಿತು. ಆಳ್ವ ಹೆಗಡೆ ಕೋಪದಿಂದ ಕ್ಷುದ್ರನಾಗಿ ಅಡಕತ್ತಾಯರನ್ನು ತೀವ್ರವಾಗಿ ಅಪಮಾನಿಸಿದ. ಇದರಿಂದ ಮನನೊಂದ ಅಡಕತ್ತಾಯರು ಈ ಬ್ರಹ್ಮರಿಗಿಂತಲೂ ಶಕ್ತಿಶಾಲಿಯಾದ ದೇವರನ್ನು ತಂದು ಇಲ್ಲೇ ಸಮೀಪದಲ್ಲಿ ನಾನು ಸ್ಥಾಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ ಘಟ್ಟ ಹತ್ತಿ ಬಾಳೆ ಹೊನ್ನೂರು ಸಮೀಪದ ಖಾಂಡ್ಯಕ್ಕೆ ತೆರಳುತ್ತಾರೆ. ಅಲ್ಲಿ ಘೊರ ತಪಸ್ಸಾಚರಿಸಿ ಅಲ್ಲಿನ ವೀರಭದ್ರನನ್ನು ಮೆಚ್ಚಿಸುತ್ತಾರೆ. ನನ್ನ ಜೊತೆಯಾಗಿ ನನ್ನ ಊರಿಗೆ ಬಂದು ನೆಲೆಯಾಗಬೇಕು ಎಂದು ಪ್ರಾರ್ಥಿಸುತ್ತಾರೆ. ಇದಕ್ಕೆ ಒಪ್ಪಿದ ವೀರಭದ್ರ ತನ್ನ ಸಹಸ್ರಾರು ರುದ್ರಗಣಗಳ ಜೊತೆ ಅಡಕತ್ತಾಯರ ಬೆನ್ನುಹಿಡಿದು ಘಟ್ಟದಿಂದ ಇಳಿದು ಬಂದ. ಆಗುಂಬೆ ಬಳಿ ಬರುತ್ತಿದ್ದಂತೆ ಅಲ್ಲಿ ಸುಂಕದ ಕಟ್ಟೆಯಲ್ಲಿ ಮಾಲಿ ಸುಮಾಲಿ ಎಂಬ ಇಬ್ಬರು ಕಾವಲಿನವರಿರುತ್ತಾರೆ. ಅವರಿಗೆ ಘಟ್ಟದ ಇಳಿಜಾರಿನ ಮೇಲಿನ ಸುತ್ತಿನಲ್ಲಿ ನೋಡಿದಾಗ ಸಾವಿರಾರು ದೊಂದಿಗಳು ಕಂಡವಂತೆ. ಆದರೆ ಸುಂಕದ ಕಟ್ಟೆಯಿಂದ ಒಬ್ಬ ಬ್ರಾಹ್ಮಣ ಮಾತ್ರ ಹಾದು ಹೋದ. ಸುಂಕದ ಕಟ್ಟೆ ಹಾದು ಎದುರು ನೋಡಿದರೆ ಬ್ರಾಹ್ಮಣನ ಹಿಂದೆ ಮತ್ತೆ ಸಾವಿರ ದೊಂದಿಗಳು ಜಗ್ಗನೆ ಉರಿದು ಸಾಗತೊಡಗಿತು. ಇದೆಂತಾ ವೈಚಿತ್ರ್ಯ ಎಂದು ಅವರಿಗೆ ಅಚ್ಚರಿಯಾಯಿತು. ಕುತೂಹಲಕ್ಕೆ ಬಿದ್ದ ಆ ಇಬ್ಬರು ಕಾವಲುಗಾರರು ದೊಂದಿಗಳನ್ನು ಹಿಂಬಾಲಿಸುತ್ತಾ ಬಂದರಂತೆ. ಹಿರಿಯಡಕಕ್ಕೆ ಬಂದ ಅಡಕತ್ತಾಯರು ಆಳ್ವ ಹೆಗಡೆ ಮತ್ತು ಅಂಜಾರು ಬೀಡು ಕುರ್ಲಹೆಗಡೆಯವರ ಸಹಕಾರದೊಂದಿಗೆ ವೀರಭದ್ರನಿಗೆ ಭವ್ಯವಾದ ಗುಡಿ ಮತ್ತು ಅವನ ಗಣಗಳಿಗೆ ಗಣಗಳ ಶಾಲೆಯನ್ನು ಸ್ಥಾಪಿಸಿದರಂತೆ. ಬ್ರಹ್ಮರು ಮತ್ತು ವೀರಭದ್ರನ ಸೇವೆ ಮಾಡುತ್ತಾ ಕಾಲ ಕಳೆದ ಅಡಕತ್ತಾಯರು ಬ್ರಹ್ಮೈಕ್ಯರಾಗಿ ದೈವೀಶಕ್ತಿಯಾದರು. ಅವರ ಸಾನಿಧ್ಯ ಇಂದಿಗೂ ಹಿರಿಯಡಕದಲ್ಲಿದೆ. ವೀರಭದ್ರನಿಗೆ ಮೂರು ಪೂಜೆಗಳಾದರೆ ಅಡಕತ್ತಾಯರಿಗೆ ಎರಡು ಪೂಜೆ ನಿತ್ಯವೂ ಸಲ್ಲಿಕೆಯಾಗುತ್ತದೆ. ರುದ್ರಗಣಗಳನ್ನು ಹಿಂಬಾಲಿಸುತ್ತಾ ಬಂದ ಆ ಕಾವಲುಗಾರರಾದ ಮಾಲಿ- ಸುಮಾಲಿಯವರೂ ದೇವಸ್ಥಾನದ ರಾಜಗೋಪುರದಲ್ಲಿ ಆರಾಧಿಸಲ್ಪಡುತ್ತಿದ್ದಾರೆ.
In earlier times, this temple was considered to be extremely wealthy, and the presence of an elaborate musical ensemble (Vadya Vrinda) here stands as evidence of its former glory. It is said that in the past, 16 different types of traditional musical instruments were played daily as part of the temple rituals. The families of those musicians were granted lands (umbali) by the temple for their service. Many of these instruments are still played today. Among them, the Nagari (a traditional drum) of this temple gained special fame. In earlier times, the sound of the Nagari served as a time indicator for people in the surrounding villages.
Even though thousands of measures of rice are offered annually to this temple, the naivedya (ritual food offering) made to Lord Veerabhadra even today consists only of hudi avalakki (a simple preparation of beaten rice). When Adakattaya first brought and began worshipping Veerabhadra, he is said to have gone house to house collecting hudi avalakki for the offering. Veerabhadra liked it so much that he commanded it be continued as a tradition.
People from Chikkamagaluru and Shivamogga regions follow a custom of offering donations in the name of Veerabhadra Swamy of Hiriyadka. They keep a special container (dabbi) at home into which they regularly drop handfuls of beaten rice and small offerings. Once it is full, they bring it to the temple and offer it to the deity.
Among the flagpoles (dwajasthambhas) in the undivided Dakshina Kannada district, the one at Hiriyadka is considered to be the tallest. Although the priests who perform worship here are Madhwa Brahmins, naivedya is offered to the deity even on Ekadashi days, which is traditionally avoided in Madhwa customs—showing the temple's unique traditions.
ಪೂರ್ವ ಕಾಲದಲ್ಲಿ ಇದು ಅತ್ಯಂತ ಶ್ರೀಮಂತ ದೇಗುಲವಾಗಿತ್ತು ಎನ್ನುವುದಕ್ಕೆ ಇಲ್ಲಿರುವ ವಾದ್ಯ ವೃಂದವೇ ಸಾಕ್ಷಿ. ಇಲ್ಲಿ ದೇವರ ನಿತ್ಯ ಪೂಜೆಗೆ ೧೬ ರೀತಿಯ ವಾದ್ಯಗಳನ್ನು ಹಿಂದೆ ಬಳಸಲಾಗುತ್ತಿತ್ತಂತೆ. ಅಷ್ಟೂ ಜನ ಚಾಕರಿಯವರ ಕುಟುಂಬಕ್ಕೆ ದೇವಸ್ಥಾನದಿಂದ ಉಂಬಳಿ ಬಿಟ್ಟ ಭೂಮಿಗಳಿದ್ದವು. ಇದರಲ್ಲಿ ಬಹುತೇಕ ವಾದ್ಯಗಳನ್ನು ಇಂದಿಗೂ ನುಡಿಸುತ್ತಿದ್ದಾರೆ. ಇಲ್ಲಿನ ನಗಾರಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಈ ನಗಾರಿಯ ದನಿ ಹಿಂದಿನ ಕಾಲದಲ್ಲಿ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಸಮಯಸೂಚಕವಾಗಿತ್ತು. ಈ ದೇವಾಲಯಕ್ಕೆ ಸಾವಿರಾರು ಮುಡಿ ಅಕ್ಕಿ ಗೇಣಿ ಬರುತ್ತಿದ್ದರೂ ಇಲ್ಲಿನ ವೀರಭದ್ರ ದೇವರಿಗೆ ಇಂದಿಗೂ ನೈವೇದ್ಯ ಬಡಿಸುವುದು ಮಾತ್ರ ಹುಡಿ ಅವಲಕ್ಕಿಯನ್ನು. ಅಡಕತ್ತಾಯರು ವೀರಭದ್ರನನ್ನು ಮೊದಲು ತಂದು ಆರಾಧಿಸಿದಾಗ ಅವರು ಮನೆಮನೆಗಳಿಂದ ಬೇಡಿ ತಂಡ ಹುಡಿ ಅವಲಕ್ಕಿಯನ್ನೇ ಆತನಿಗೆ ಅರ್ಪಿಸಿದ್ದರಂತೆ. ವೀರಭದ್ರನಿಗೆ ಅದೇ ರುಚಿಯಾಯಿತು, ಮುಂದೆ ಇದೇ ಕಟ್ಟಳೆ ನಡೆದು ಬರಲಿ ಎಂದು ವೀರಭದ್ರನ ಅಪ್ಪಣೆಯಾಯಿತಂತೆ. ಹಿರಿಯಡಕದ ವೀರಭದ್ರ ಸ್ವಾಮಿಯ ಹೆಸರಲ್ಲಿ ಚಿಕ್ಕಮಗಳೂರು, ಶಿವಮೊಗ್ಗದ ಜನರು ಮುಡಿಪು ಕಟ್ಟಿಡುವ ಕ್ರಮವಿದೆ. ವೀರಭದ್ರ ದೇವರ ಹೆಸರಲ್ಲಿ ಒಂದು ಡಬ್ಬಿ ಇರಿಸಿ ಪ್ರತೀವರ್ಷ ಮುಷ್ಟಿ ಕಾಣಿಕೆ ಮತ್ತು ಏಲಕ್ಕಿಯನ್ನು ಅದಕ್ಕೆ ಹಾಕಿಡುತ್ತಾರೆ. ಅದು ತುಂಬಿದ ಬಳಿಕ ತಂದು ಕ್ಷೇತ್ರಕ್ಕೆ ಅರ್ಪಿಸುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದ್ವಜಸ್ಥಂಬಗಳ ಪೈಕಿ ಅತೀ ಎತ್ತರದ ದ್ವಜಸ್ಥಂಭ ಹಿರಿಯಡಕದಲ್ಲಿದೆ ಇಲ್ಲಿ ಪೂಜೆ ಮಾಡುವವರು ಮಾಧ್ವ ಬ್ರಾಹ್ಮಣರಾದರೂ ಇಲ್ಲಿ ದೇವರಿಗೆ ಏಕಾದಶಿಯ ದಿನವೂ ನೈವೇದ್ಯ ಅರ್ಪಿಸಲಾಗುತ್ತದೆ.