There are number of stories connected to the past history of the temple. As there are no records to support these stories we may consider them as legends.
Thousands of years ago the temple of Shiva was Situated on top of the hill which spreads to the north of the present temple. It was a forest then. The priest, used to carry water in pots from the river for performing daily Pooja. As he became old it was difficult for him to carry river water to the temple on top of the hill. old priest stood before the lord at the end of Pooja. tear drops rolling down the cheeks, and he prayed “Of Lord, I find it difficult to carry water from the river up to the hill. Why don’t you come down near the river so that I can perform Abhishekam easily?”. The Lord was delighted at his prayer and he appeared before the priest in his dream nd said “My dear devotee, I am pleased with your prayer. I am ready to come down near the river as you wish. You may leave the temple, tomorrow back, I will follow you and stay in the place where you turn back. You can perform Pooja always on that spot afterwards”.
The next morning, the priest went up the hill and worshipped the Lord in the temple as usual. As directed in the dream he left the temple and began walking down the hill. He left that Lord Shiva was following him, with the accompaniment of divine music. When he reached the spot, where the present temple stands, the music suddenly stopped and the priest looked back in surprise. He realized immediately that Lord Shiva merged into the ‘Rudrakshi Stone’ at that place. The priest who chanced to glimpse the God was also turned into stone. As a result there was no worship at the temple on the hill. In course of time people forgot the temple.
A number of years later, a family of Mundala caste came to live near the site of present temple. Unfortunately, the eldest son of the family died in an accident. After a few months the couple went in search of cane for making baskets, which was their livelihood While the woman was cutting the creeper her seythe hit the stone below, which happened to be the Rudrakshi stone. The blood began to ooze out from the cut made on the stone. When She saw it, she was scared and began to shout her eldest sons’ name “O son, Adda”. It is believed that her call to he son ‘Adda’ gave the name to the place as '‘Adyapady”.
ಶ್ರೀ ಕ್ಷೇತ್ರ ಅದ್ಯಪಾಡಿಯ ಬಗ್ಗೆ ಹಲವು ಐತಿಹಾಸಿಕ ಕತೆಗಳಿವೆ. ಇದಕ್ಕೆ ಹೆಚ್ಚಿನ ಪುರಾವೆಗಳು ಇಲ್ಲದಿದ್ದರೂ ಈ ಕತೆಯು ಅನಾದಿ ಕಾಲದಿಂದ ಒಬ್ಬರಿಂದೊಬ್ಬರಿಗೆ ಮೌಖಿಕವಾಗಿ ಹೇಳಲ್ಪಟ್ಟ, ಚರಿತ್ರೆಯಾದುದರಿಂದ ಇದನ್ನು ಸತ್ಯ ಎಂದು ಸ್ವೀಕರಿಸಬೇಕು.
ಸಾವಿರಾರು ವರ್ಷಗಳ ಹಿಂದೆ ಶ್ರೀ ದೇವರ ಸನ್ನಿಧಿಯು ಈಗ ಇರುವ ದೇವಳದ ಬಡಗು ಪಾರ್ಶ್ವದಲ್ಲಿ ಬೆಟ್ಟದ ಮೇಲಿತ್ತು. ಆ ಕಾಲದಲ್ಲಿ ಈಗ ಇರುವ ಕ್ಷೇತ್ರವು ಅರಣ್ಯಮಯವಾಗಿತ್ತು. ಅರ್ಚಕರು ಹೊಳೆಯಿಂದ ನೀರು ತಂದು ಪೂಜೆಯ ಕಾರ್ಯ ನೆರವೇರಿಸುತ್ತಿದ್ದರು. ಕ್ರಮೇಣ ಅರ್ಚಕರಿಗೆ ಮಯಸ್ಸಾದಂತೆ ನದಿಯಿಂದ ನೀರು ತಂದು ಬೆಟ್ಟವೇರಿ ಪೂಜಾ ಕಾರ್ಯ ಗಳನ್ನು ಮಾಡಲು ಅಶಕ್ತರಾದರು. ಇದರಿಂದ ಬಳಲಿದ ಅರ್ಚಕರು ಒಂದು ದಿನ ಪೂಜೆ ಮಾಡಿ ದೇವರ ಎದುರು ಕಂಬನಿದುಂಬಿ ಈ ರೀತಿ ಪ್ರಾರ್ಥಿಸಿದರು. “ಇನ್ನು ಮುಂದೆ ನಿನ್ನ ಪೂಜೆ ಮಾಡಲು ನನಗೆ ವೃದ್ಯಾಪ್ಯರ ದೆಸೆಯಿಂದ ಅಸಾಧ್ಯವಾಗಿದೆ. ಆದ್ದರಿಂದ ನೀನು ಕೃಪೆದೋರಿ ನದಿಯ ಬಳಿಯಲ್ಲಿ ಬಂದು ನಿಂತರೆ ನಿನಗೆ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಅಭಿಷೇಕ ಪೂಜೆ ಮಾಡುತ್ತೇನೆ” ಎಂದು ತಮ್ಮ ಮನೆಗೆ ಬಂದರು, ಅವರ ಭಕ್ತಿಯ ಪ್ರಾರ್ಥನೆಗೆ ಮೆಚ್ಚಿದ ಶ್ರೀ ದೇವರು ಸ್ವಪ್ನದಲ್ಲಿ ಮೈದೋರಿ ನಿನ್ನ ಪ್ರಾರ್ಥನೆಯಂತೆ ನಾನು ಹೊಳೆಯ ಬದಿಗೆ ಬರುವೆನು, ನೀನು ನಾಳೆ ನನ್ನ ಪೂಜೆಯನ್ನು ಮುಗಿಸಿ ಹಿಂದೆ ನೋಡದೆ ಹೋಗು. ಎಲ್ಲಿ ಹಿಂತಿರುಗಿ ನೋಡುತ್ತೀಯೋ ಅಲ್ಲಿಯೇ ನಾನು ನೆಲೆಯಾಗುವೆ” ಎಂದು ಅಪ್ಪಣೆಯಿತ್ತರು. ಇದರಿಂದ ಸಂತಸಗೊಂಡ ಅರ್ಚಕರು ಮರುದಿನ ಪೂಜೆಯನ್ನು ಮುಗಿಸಿ ದೈನ ವಾಣಿಯಂತೆ ದೇವರನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಬರುವಾಗ ಹಿಂದೆ ಮೃದು ಮಧುರವಾದ ವಾದ್ಯಮೇಳಗಳೊಂದಿಗೆ ಭಗವಂತನು ಅರ್ಚಕರ ಹಿಂದೆಯೇ ಬರುವುದು ಅವರಿಗೆ ವೇದ್ಯವಾಯಿತು. ಅದೇ ರೀತಿ ಮುಂದೆ ಬರುವಾಗ ಈಗಿರುವ ದೇಗುಲದ ಜಾಗದಲ್ಲಿ ವಾದ್ಯ ಘೋಷಗಳು ಪಕ್ಕನೆ ನಿಂತುಹೋದವು. ಅದೇನೆಂದು ಅರ್ಚಕರು ಹಿಂದೆ ತಿರುಗಿ ನೋಡಿದಾಗೆ ಶ್ರೀದೇವರು ಅಲ್ಲಿರುವ ರುದ್ರಾಕ್ಷಿ ಶಿಲೆಯಲ್ಲಿ ಐಕ್ಯವಾದರು. ದೇವರನ್ನು ಪ್ರತ್ಯಕ್ಷವಾಗಿ ಕಂಡ ಆರ್ಚಕರು ಅಲ್ಲಿಯೇ ಶಿಲೆಯಾದರು. ಹಾಗಾಗಿ ಆ ಲಿಂಗದಲ್ಲಿದ್ದ ದೇವರಿಗೆ ಪೂಜೆ ಇಲ್ಲದೆ ಹೋಯಿತು. ದೈವದ ಅಸ್ತಿತ್ವವು ಕೂಡಾ ಯಾರಿಗೂ ತಿಳಿಯದೆ ಹೋಯಿತು.
ಆದಿಮಾಯೆ
ಹೀಗೆ ಕೆಲವು ವರ್ಷಗಳಾದಾಗ ಈಗಿರುವ ಕ್ಷೇತ್ರದ ಹತ್ತಿರವೇ ಒಂದು ಮುಂಡಾಲ ಜಾತಿಯ ಸಂಸಾರವು ವಾಸವಾಗಿತ್ತು. ಆ ದಂಪತಿಗಳ ಹಿರಿಮಗ ಅಪಮೃತ್ಯುವಿಗೆ ತುತ್ತಾದ. ಇದಾದ ಕೆಲವು ದಿನಗಳ ನಂತರ ಕುಕ್ಕೆ ಹೆಣೆಯಲು ಬೀಳಲಿಗಾಗಿ ಅಲೆಯುತ್ತಾ ಇದ್ದ ದಂಪತಿಗಳಿಗೆ ಶಿಲೆಯ ಮೇಲಿದ್ದ ಒಳ್ಳೆಯ ಬೀಳಲನ್ನು ನೋಡಿ ಕಡಿಯುತ್ತಿರುವಾಗ ಅವಳ ಕೈಯಲ್ಲಿದ್ದ ಕತ್ತಿ ಶಿಲೆ ಮೇಲೆ ತಗಲಿ ಧಾರಾಕಾರವಾಗಿ ರಕ್ತ ಬರಲು ಪ್ರಾರಂಭವಾಯಿತು. ಇದನ್ನು ನೋಡಿ ಹೆದರಿದ ಹೆಂಗಸು ತನ್ನ ಅಳಿದ ಮಗನ ಹೆಸರನ್ನು ಹಿಡಿದು “ಓ ಮಗ ಆದ್ವಾ” ಎಂಬುದಾಗಿ ಉದ್ಗಾರ ತೆಗೆದಳು. ಆದ್ದರಿಂದ ಈ ಕ್ಷೇತ್ರಕ್ಕೆ ಅದ್ಯಪಾಡಿ ಎಂದು ಹೆಸರಾಯಿತು.
The Adyapady Kshetra is considered a life-giving forest (Sanjeevini Vana) for those suffering from asthma. By partaking in the prasada (sacred offering) of Lord Shri Adinatheshwara, asthma is believed to be cured very quickly. Numerous asthma patients have benefited from this and continue to do so even today.In addition, the Lord blesses devotees praying for children with progeny. If young children have the habit of eating mud, it is believed that by offering jaggery (bella) as a vow, this habit can be permanently removed. Moreover, when worshipped with true devotion, Lord Shri Adinatheshwara is said to remove the hardships of his devotees and grant them their desires.The deity Mundittaya, located to the right of the Lord, serves as His divine messenger and temple guardian.If cattle are affected by diseases, lighting a sesame oil lamp (ellenne deepa) to this deity is believed to cure them.The Bailu Magane Dhūmāvati Daiva is also a guardian spirit associated with this sacred place.
ಅದ್ಯಪಾಡಿ ಕ್ಷೇತ್ರವು ಉಬ್ಬಸ (ಅಸ್ತಮಾ) ರೋಗಿಗಳಿಗೆ ಸಂಜೀವಿನಿ ವನವಾಗಿದೆ. ಶ್ರೀ ದೇವರ ಪ್ರಸಾದ ಸೇವನೆಯಿಂದ ಅತಿ ಶೀಘ್ರವಾಗಿ ಉಬ್ಬಸ ರೋಗವು ಮಾಯವಾಗಿ ಬಿಡುತ್ತದೆ ಸುವಿರಾರು ಉಬ್ಬಸ ರೋಗಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಈಗಲೂ ಪಡೆಯುತ್ತಾ ಇದ್ದಾರೆ. ಅದಲ್ಲದೆ ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸುವ ಭಕ್ತರಿಗೆ ಸಂತಾನವನ್ನು ಕರುಣಿಸುತ್ತಾನೆ. ಚಿಕ್ಕ ಮಕ್ಕಳು ಮಣ್ಣು ತಿನ್ನುವ ಚಟವಿದ್ದರೆ ಬೆಲ್ಲದ ಹರಕೆಯಿಂದ ಶಾಶ್ವತವಾಗಿ ಚಟವನ್ನು ದೂರ ಮಾಡಿಕೊಳ್ಳಬಹುದು. ಅದಲ್ಲದೆ ಭಕ್ತಿಯಿಂದ ಆರಾಧಿಸಿದರೆ ಭಕ್ತರ ಕಷ್ಟಗಳನ್ನು ದೂರ ಮಾಡುವ ಭಕ್ತಾಭೀಷ್ಟ ಪ್ರದಾಯಕನಾಗಿದ್ದಾನೆ ಶ್ರೀ ಆದಿನಾಥೇಶ್ವರ, ದೇವರ ಬಲಭಾಗದಲ್ಲಿರುವ ಮುಂಡಿತ್ತಾಯ ದೈವವು ದೇವರ ದೂತನಾಗಿ ದೇವಳದ ರಕ್ಷಕನಾಗಿದ್ದಾನೆ. ಜಾನುವಾರುಗಳಿಗೆ ರೋಗ ಬಂದರೆ ಈ ದೈವಕ್ಕೆ ಎಳ್ಳೆಣ್ಣೆ ದೀಪವನ್ನಿಟ್ಟರೆ ರೋಗವು ವಾಸಿಯಾಗುತ್ತದೆ. ಬೈಲು ಮಾಗಣೆಯ ಧೂಮಾವತಿ ದೈವವು ಈ ಕ್ಷೇತ್ರಕ್ಕೆ ಸಂಬಂಧಪಟ್ಟ ದೈವವಾಗಿದೆ.