ಅನಿಸ್ ನಾಸಿರುಲ್ಲಾ ಪಠಾಣ್
ಚೀಫ್ ರಿಸ್ಕ್ ಆಫೀಸರ್
ಅನಿಸ್ ನಾಸಿರುಲ್ಲಾ ಪಠಾಣ್
ಚೀಫ್ ರಿಸ್ಕ್ ಆಫೀಸರ್
ಆಡಳಿತ ಮಂಡಳಿಯಿಂದ ಸಂದೇಶ
ಆತ್ಮೀಯ ಚೈತನ್ಯ ತಂಡಕ್ಕೆ,
ತನ್ನ ಹಣಕಾಸಿನ ಸೇವೆಗಳ ಮೂಲಕ ಗ್ರಾಮೀಣ ಭಾರತದಲ್ಲಿ ಧನಾತ್ಮಕ ಪ್ರಭಾವವನ್ನು ಬೀರಲು ಚೈತನ್ಯ ಅವರ ಬದ್ಧತೆಯು ಹಿಂದೆಂದಿಗಿಂತಲೂ ಬಲವಾಗಿದೆ. ಕ್ರಿಯಾತ್ಮಕವಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ ನಮ್ಮ ಸಂಸ್ಥೆಯ ಭಾಗವಾಗಿರುವ ಅಸಮಾನ್ಯ ಸಾಮರ್ಥ್ಯದ ಬಗೆಗಿನ ನನ್ನ ವಿಶ್ವಾಸವನ್ನು ವ್ಯಕ್ತಪಡಿಸುವುದಕ್ಕಾಗಿ ನಾನು ಈ ಅವಕಾಶವನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಚೈತನ್ಯವು ಆರಂಭಿಸಿರುವ ಗಮನಾರ್ಹ ಬೆಳವಣಿಗೆಯ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಮತ್ತು ನಮ್ಮ ಯಶಸ್ಸೂ ನಮ್ಮ ಚೈತನ್ಯದವರ ವೃತ್ತಿಪರ ಬೆಳವಣಿಗೆಯೊಂದಿಗೆ ನಿಕಟವಾಗಿ ಹೆಣೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ. ನಮ್ಮ ತಂಡದ ಸದಸ್ಯರಿಂದ ಪ್ರದರ್ಶಿಸಲ್ಪಟ್ಟ ಅಚಲವಾದ ಸಮರ್ಪಣೆಯ ಬಗ್ಗೆ ನಾವು ಅಪಾರ ಹೆಮ್ಮೆ ಪಡುತ್ತೇವೆ, ಯಾರ ಅದ್ಭುತ ಪ್ರಯತ್ನಗಳು 750+ ಶಾಖೆಗಳ ಮಹತ್ವದ ಮೈಲಿಗಲ್ಲನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸಿದೆ. ದೇಶದಾದ್ಯಂತ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಗ್ರಾಮೀಣ ಭಾರತದಲ್ಲಿ ನೆಲೆಸಿರುವ ಇನ್ನೂ ಹೆಚ್ಚಿನ ವ್ಯಕ್ತಿಗಳ ಜೀವನವನ್ನು ಸುಧಾರಿಸುವುದು ನಮ್ಮ ಧ್ಯೇಯವಾಗಿದೆ.
ಚೈತನ್ಯದ ಅಪಾಯ ಕಾರ್ಯನಿರ್ವಹಣೆಯ ಗಮನಾರ್ಹ ಸಾಧನೆಗಳನ್ನು ಹಂಚಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ನಾವು ಸಂಸ್ಥೆಯ ಅಪಾಯ ನಿರ್ವಹಣೆ ಚೌಕಟ್ಟನ್ನು ಮತ್ತು ಐಸಿಎಎಪಿ ಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದೇವೆ. ಅಪಾಯದ ಮತ್ತು ನಿಯಂತ್ರಣಗಳ ಬಗ್ಗೆ ಅಮೂಲ್ಯವಾದ ತಿಳುವಳಿಕೆಗಳನ್ನು ಒದಗಿಸುವ ಮೂಲಕ ಪ್ರಮುಖ ಕಾರ್ಯಗಳ ಅಪಾಯದ ನಕ್ಷೆಯನ್ನು ಸಹ ನಾವು ಪೂರ್ಣಗೊಳಿಸಿದ್ದೇವೆ. ಮೂರನೇ-ವ್ಯಕ್ತಿಯ ಅಪಾಯ ನಿರ್ವಹಣೆ ಚೌಕಟ್ಟಿನ ಪರಿಚಯವು ಮೂರನೇ ವ್ಯಕ್ತಿಯ ಅಪಾಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಪ್ಯಾರಾಮೆಟ್ರಿಕ್ ವಿಮೆಯಂತಹ ಪ್ರಾಯೋಗಿಕ ಯೋಜನೆಗಳಿಂದ ಭರವಸೆಯ ಫಲಿತಾಂಶಗಳು ಹೊರಹೊಮ್ಮಿವೆ, ಯಾವುದು ಹವಾಮಾನ ಮತ್ತು ಹವಾಗುಣದ ಅಪಾಯಗಳ ವಿರುದ್ಧ ವಿಮಾರಕ್ಷಣೆಯನ್ನು ಒದಗಿಸುತ್ತದೆ. ಅಸ್ತಿತ್ವದಲ್ಲಿರುವ ಅಪಾಯ ನಿರ್ವಹಣಾ ಸಮಿತಿಯ ಜೊತೆಗೆ ಕಾರ್ಯಕಾರಿ ಅಪಾಯ ನಿರ್ವಹಣಾ ಸಮಿತಿ, ವಲಯ ಅಪಾಯ ನಿರ್ವಹಣಾ ಸಮಿತಿಯನ್ನು ಸ್ಥಾಪಿಸುವ ಮೂಲಕ ನಮ್ಮ ಅಪಾಯದ ಆಡಳಿತವನ್ನು ನಾವು ಬಲಪಡಿಸಿದ್ದೇವೆ.
ಮುಂದೆ ನೋಡುವಾಗ, ಮಾಹಿತಿಯ ಗೌಪ್ಯತೆಗೆ, ಸೈಬರ್ ಭದ್ರತೆಗೆ ಮತ್ತು ವೈಯಕ್ತಿಕ ಮಾಹಿತಿಯ ಸಂರಕ್ಷಣಾ ಕಾಯ್ದೆಯ ಅನುಸರಣೆಗೆ ನಾವು ಆದ್ಯತೆಯನ್ನು ನೀಡುವುದು ಅತ್ಯಗತ್ಯ. ಭಾರತದಲ್ಲಿ ಐದು ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ರಾಜಕೀಯ ಅಪಾಯಗಳ ಬಗ್ಗೆಯೂ ನಾವು ಜಾಗರೂಕರಾಗಿರಬೇಕು. ಪರಿಣಾಮಕಾರಿ ಅಪಾಯದ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಸ್ಥಿತಿಸ್ಥಾಪಕತ್ವವನ್ನು ನಿರ್ವಹಿಸಲು ನಿಮ್ಮ ಬದ್ಧತೆಯು ಪ್ರಮುಖವಾಗಿದೆ. ಒಟ್ಟಿನಲ್ಲಿ, ನಾವು ಪ್ರಸ್ತುತ ಅವಕಾಶಗಳನ್ನು ಬಳಸಿಕೊಳ್ಳೋಣ ಮತ್ತು ಸಾಧನೆಯ ಹೊಸ ಉನ್ನತಿಗಳ ಕಡೆಗೆ ಹಾದಿಯನ್ನು ರೂಪಿಸೋಣ. ನಮ್ಮ ಉತ್ಕೃಷ್ಟತೆಯ ಪಯಣವು ಮುಂದುವರಿಯುತ್ತದೆ ಮತ್ತು ಚೈತನ್ಯದ ಕುಟುಂಬದ ಭಾಗವಾಗಿ, ನಮ್ಮ ಈಗಿನ ಯಶಸ್ಸಿನಲ್ಲಿ ನೀವು ನಿರ್ಣಾಯಕ ಪಾತ್ರವನ್ನು ವಹಿಸುತ್ತೀರಿ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
ಪರಿಶೋಧನೆ ಗಡಿಗಳು
ಸಾಧಿಸಿದ ಮೈಲಿಗಲ್ಲುಗಳು
"ಎಲ್ಲಿ ಮೆಟ್ಟಿಲು ಇದೆಯೋ ಅಲ್ಲಿ ಮೈಲಿಗಲ್ಲು ಇರುತ್ತದೆ"
ಒಂದು ಸಂಸ್ಥೆಯಾಗಿ, ನಾವು ಪ್ರತಿ ಹೆಜ್ಜೆಯನ್ನು ಶ್ಲಾಘನೀಯ ಮೈಲಿಗಲ್ಲಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇವೆ. ಈ ತ್ರೈಮಾಸಿಕದಲ್ಲಿ ನಮ್ಮ ಅಸಾಧಾರಣ ಸಾಧನೆ ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.
ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಗಮನಾರ್ಹ ಸಾಧನೆಯನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ. ಜುಲೈ 5, 2023 ರಂದು, M-CRIL ಅಂತರ್ಗತ ಮೈಕ್ರೋಎಕನಾಮಿಕ್ಸ್ನಿಂದ ಪ್ರತಿಷ್ಠಿತ ಗೋಲ್ಡ್ ಲೆವೆಲ್ ಕ್ಲೈಂಟ್ ಪ್ರೊಟೆಕ್ಷನ್ ಪ್ರಮಾಣೀಕರಣದ ಪುರಸ್ಕಾರವನ್ನು ನಮಗೆ ನೀಡಲಾಗಿದೆ. ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಮತ್ತು ಗ್ರಾಹಕರ ರಕ್ಷಣೆ ಮತ್ತು ಕಿರುಬಂಡವಾಳದ ಉದ್ಯಮದಲ್ಲಿನ ನೈತಿಕ ಅಭ್ಯಾಸಗಳಿಗೆ ಇರುವ ನಮ್ಮ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ.
ಈ ಸಾಧನೆಯು ನಮ್ಮನ್ನು ವ್ಯಾಖ್ಯಾನಿಸುವ ಪ್ರಮುಖ ಮೌಲ್ಯಗಳಿಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ: ಶಿಸ್ತು-ಗೌರವ-ಸಮಗ್ರತೆ ಮತ್ತು ಪಾರದರ್ಶಕತೆ ನಾವು ಯಾವಾಗಲೂ ಈ ಮೌಲ್ಯಗಳನ್ನು ಎತ್ತಿಹಿಡಿಯಲು ಶ್ರಮಿಸಿದ್ದೇವೆ, ಮತ್ತು Cerise+SPTF ನಿಂದ ಪ್ರಚಾರ ಮಾಡಲಾದ ಈ ಪ್ರತಿಷ್ಠಿತ ಪ್ರಮಾಣೀಕರಣವು ನಮ್ಮ ಬದ್ಧತೆಯ ದೃಢವಾದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಚೈತನ್ಯದಲ್ಲಿ, ನಾವು ನಮ್ಮ ಗ್ರಾಹಕರ ಅಗತ್ಯತೆಗಳನ್ನು ನಿರಂತರವಾಗಿ ಪೂರೈಸುವ ಮತ್ತು ಮೀರುವ ಪ್ರಾಥಮಿಕ ಗಮನದೊಂದಿಗೆ, ಶ್ರೇಷ್ಠತೆಯ ನಿರಂತರ ಅನ್ವೇಷಣೆಯಿಂದ ನಡೆಸಲ್ಪಡುತ್ತೇವೆ. ನಿಮ್ಮ ಪ್ರೋತ್ಸಾಹ ಮತ್ತು ಅಚಲವಾದ ಬೆಂಬಲವೇ ಎಲ್ಲೆಗಳನ್ನು ಮೀರಿ, ಜನರ ಜೀವನವನ್ನು ಧನಾತ್ಮಕವಾಗಿ ಪ್ರಭಾವಿಸಲು ನವೀನ ಮಾರ್ಗಗಳನ್ನು ಕಂಡುಕೊಳ್ಳಲು ನಮ್ಮ ಪ್ರೇರಣೆಗೆ ಸ್ಪೂರ್ತಿಯನ್ನು ನೀಡುತ್ತದೆ. ಪ್ರತಿಯೊಬ್ಬ ಚೈತನ್ಯದವರಿಗೆ ತಮ್ಮ ತಮ್ಮ ಪಾತ್ರಗಳಲ್ಲಿ ಸಮರ್ಪಣಾ ಮನೋಭಾವ ಮತ್ತು ಶಿಸ್ತಿನ ಅನುಸಂಧಾನವಿಲ್ಲದಿದ್ದರೆ ಈ ಅದ್ಭುತ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂಬುದು ನಮಗೆ ಅರಿವಾಗಿದೆ.
ನಮ್ಮ ಸಂಸ್ಥೆಯ ಯಶಸ್ಸಿಗೆ ನೀಡಿದ ನಿಮ್ಮ ನಿರಂತರ ಪ್ರಯತ್ನ, ಸಮರ್ಪಣೆ ಮತ್ತು ಅಚಲವಾದ ಬದ್ಧತೆಗಾಗಿ ನಾವು ಪ್ರತಿಯೊಬ್ಬರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ಒಟ್ಟಾಗಿ, ನಾವು ನಿಜವಾಗಿಯೂ ಗಮನಾರ್ಹವಾದದ್ದನ್ನು ಸಾಧಿಸಿದ್ದೇವೆ ಮತ್ತು ಭವಿಷ್ಯದಲ್ಲಿ ಇಂತಹ ಇನ್ನೂ ಹೆಚ್ಚಿನ ಸಾಧನೆಗಳನ್ನು ನಾವು ನಿರೀಕ್ಷಿಸುತ್ತೇವೆ.
ಚೈತನ್ಯದಲ್ಲಿ ಸಮಗ್ರ ಅಭಿವೃದ್ಧಿ ಪ್ರಯತ್ನಗಳ ಕೆಲಿಡೋಸ್ಕೋಪ್
ನಮ್ಮ ಸಮಗ್ರ ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ನಿರಂತರ ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸಲು ಚೈತನ್ಯವು ಬಲವಾದ ಒತ್ತು ನೀಡುತ್ತದೆ. ಸಮಗ್ರ ಯೋಗಕ್ಷೇಮದ ಪ್ರಾಮುಖ್ಯತೆಯನ್ನು ನಾವು ದೃಢವಾಗಿ ನಂಬುತ್ತೇವೆ. ಆದ್ದರಿಂದ, ನಮ್ಮ ಎಲ್ಲಾ ತರಬೇತಿ ಕಾರ್ಯಕ್ರಮಗಳು ಮೀಸಲಾದ ದೈಹಿಕ ಮತ್ತು ಮಾನಸಿಕ ಆರೋಗ್ಯ ಅವಧಿಗಳನ್ನು ಒಳಗೊಂಡಿವೆ. ಕಳೆದ ತ್ರೈಮಾಸಿಕದ ಕೆಲವು ಮನಮೋಹಕ ನೋಟಗಳು ಇಲ್ಲಿವೆ:
ಆಗ್ರಾ - ಇಂಡಕ್ಷನ್ ತರಬೇತಿ
ಉದಯಪುರ - ಇಂಡಕ್ಷನ್ ತರಬೇತಿ
ಪುಣೆ - ಇಂಡಕ್ಷನ್ ತರಬೇತಿ
ತಮಿಳುನಾಡು - ಇಂಡಕ್ಷನ್ ತರಬೇತಿ
ಜೈಪುರ - ಇಂಡಕ್ಷನ್ ತರಬೇತಿ
ರಾಯಗಢ - ಇಂಡಕ್ಷನ್ ತರಬೇತಿ
ಮೀರತ್ - ಸೇರ್ಪಡಿಸಲು ತರಬೇತಿ
ಅಂಬಾಲಾ - ಇಂಡಕ್ಷನ್ ತರಬೇತಿ
ಅಜಂಗಢ - ಇಂಡಕ್ಷನ್ ತರಬೇತಿ
ಡಿಯೊರಿಯಾ - ಇಂಡಕ್ಷನ್ ತರಬೇತಿ
ಸುಲ್ತಾನ್ಪುರ - ಇಂಡಕ್ಷನ್ ತರಬೇತಿ
ವಾರಣಾಸಿ - ಇಂಡಕ್ಷನ್ ತರಬೇತಿ
ಹಾವೇರಿ - ಎಬಿಎಂ ರಿಫ್ರೆಶ್ ತರಬೇತಿ
ಡಾಲ್ತೋಂಗಂಜ್ - ಆಡಿಟ್ ರಿಫ್ರೆಶ್ ತರಬೇತಿ
ಪುಣೆ - ಕ್ಯುಸಿ ಮತ್ತು ಕ್ರೆಡಿಟ್ ರಿಫ್ರೆಶ್ ತರಬೇತಿ
ಜೋಧಪುರ - ಸಿಆರ್ಇ ರಿಫ್ರೆಶ್ ತರಬೇತಿ
ಮಹಾರಾಷ್ಟ್ರ - ಬಿಎಂ ರಿಫ್ರೆಶ್ ತರಬೇತಿ
ಡಾಲ್ತೋಂಗಂಜ್ - ಎಬಿಎಂ ರಿಫ್ರೆಶ್ ತರಬೇತಿ
ಕರ್ನಾಟಕ -ಆರ್ಹೆಚ್ಆರ್ ರಿಫ್ರೆಶ್ ತರಬೇತಿ
ಔರಂಗಾಬಾದ್ - ಬಿಎಂ ರಿಫ್ರೆಶ್ ತರಬೇತಿ
ಮಹಾರಾಷ್ಟ್ರ - ಯುಎಎಂ ರಿಫ್ರೆಶರ್ ಟ್ರೈನಿಂಗ್
ಭೋಪಾಲ್ - ಎಬಿಎಂ ರಿಫ್ರೆಶ್ ತರಬೇತಿ
ಮಹಾರಾಷ್ಟ್ರ- ಮೊದಲ ಬಾರಿ ವ್ಯವಸ್ಥಾಪಕ ತರಬೇತಿ
ಮಧ್ಯಪ್ರದೇಶ - ಎಬಿಎಂ ರಿಫ್ರೆಶ್ ತರಬೇತಿ
ಚೈತನ್ಯದೊಂದಿಗೆ 10 ವರ್ಷಗಳು ಮತ್ತು ಮೀರಿದ ನಂಟು
ನಮ್ಮ ಉದ್ಯೋಗಿಗಳು ನಮ್ಮ ಶಕ್ತಿ, ನಮ್ಮ ಕಂಪನಿಯು ನಮ್ಮ ನೌಕರರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಸಾಕಾರವಾಗಿದೆ. ನಮ್ಮೊಂದಿಗಿರುವ ನಮ್ಮ ಉದ್ಯೋಗಿಗಳ ಒಡನಾಟವನ್ನು ನಾವು ಗೌರವಿಸುತ್ತೇವೆ. ನಮ್ಮ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಾ 10 ಅದ್ಭುತ ವರ್ಷಗಳನ್ನು ಪೂರೈಸಿದ ನಮ್ಮ ತಂಡದ ಸದಸ್ಯರ ಹೆಸರುಗಳು ಇಲ್ಲಿವೆ.
C0309 - ನಿಂಗಪ್ಪ ಅರಳಿಮರದ
C0313 - ಉಮೇಶ್ ಪೂಜಾರಿ
ಚೈತನ್ಯದೊಂದಿಗೆ 5 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವವರು
C4028 - ಅಂಶುಕುಮಾರ್ ಗೌರವ್
C4032 - ರಾಜ್ಕುಮಾರ್ ಶರ್ಮಾ
C4227 - ಮುಕೇಶ್ ಕುಮಾರ್
C4006 - ಅಮರ್ ಕುಮಾರ್
C4399 - ರಂಜನ್ ಕುಮಾರ್ ಪಟೇಲ್
C4008 - ಸುಬಾಷ್ ಕುಮಾರ್ ಸುಮನ್
C4012 - ಶಾಲು ಶ್ರೀವತ್ಸವ
C4398 - ದೀಪಕ್ ಕುಮಾರ್
C4007 - ಪ್ರಿನ್ಸ್ ಕುಮಾರ್
C4222-ಶಿವಬಚನ್ ಕುಮಾರ್
C4018 - ಅಮರ್ಜಿತ್ ಕುಮಾರ್ ಸಿಂಗ್
C4037-ಗೌತಮ್ ಕುಮಾರ್ ಪಾಸ್ವಾನ್
C4212 - ರಾಕೇಶ್ ಕುಮಾರ್
C4220 - ಅನುಜ್ ಕುಮಾರ್
C4221 - ಪಂಕಜ್ ಕುಮಾರ್
C4404 - ಆದಿತ್ಯ ಕುಮಾರ್
C4216 - ಹೇಮಂತ್ ಕುಮಾರ್
C4015 - ಮನೀಶ್ ಕುಮಾರ್
C4030 - ಸಂಜೀವ್ ಕುಮಾರ್
C4172 - ಕಾವ್ಯ ಬಿ ಎಸ್
C4175 - ರಕ್ಷಿತಾ ಎಸ್
C4230- ಅಕ್ಷಯಪ್ರಲ್ಹಾದ್ ನಾಗೇಶ್
C4458 - ಅನಿಲ್. ಬಿ
CR0028 - ಪಲ್ಲವಿ ಡಿ ಎಸ್
CR0029 - ವಿಘ್ನೇಶ್ ಬಾಸ್ಕರನ್
C4315 - ರುದ್ರೇಶ ಎಚ್ ಸಿ
C431 - ಸಂಜಿತ್
C4051 - ಕಲ್ಲಪ್ಪ ಮಲ್ಲಪ್ಪ ಯರಗಟ್ಟಿ
C4047 - ಗಿರೀಶ್ ಬಸನಗೌಡ ಪಾಟೀಲ್
C4450 - ಮಂಜುನಾಥ್ ಕೋಲ್ಕಾರ್
C4093 - ಕಲಾಕೇಶಕುಮಾರ್
C4099 - ಬಸವರಾಜ
C4385 - ಕುಮಾರ್ ಕೆ ಒ
C4390 - ಯಂಕಪ್ಪ ವೈ ಉಪ್ಪಾರ್
C4113 - ಸಿದ್ದರಾಮ
C4134 - ರಾಹುಲ್
C4190 - ವೀರೇಶ್
C4102 - ದೇವೇಗೌಡ
C4388 - ಅಶೋಕ್
C4389 - ವೀರನಗೌಡ
C4116- ಮಲ್ಲಿಕಾರ್ಜುನ್
C4091 - ಶ್ರವಣಕುಮಾರ್ ರಾಂಪುರ
C4288 - ಹರೀಶ್ ಆರ್
C4249- ರತನ್ ದಗಡು ಗರಾಲೆ
C4418 - ವಿಶಾಲಕಿರಣ ಪ್ರಕಾಶ ಭೋಸಲೆ
C4423-ವಿಕ್ರಮ್ಸೋಪಾನ್ ಲೋಖಂಡೆ
C4428 - ಶೀತರಂ ಬಾಪುರವ್ ಪರಷೆ
C4271 - ಲಾಹು ಸಖಾರಂ ಝೆಲೆ
C4272 - ಮಹಾದೇವ ಸದಾಶಿವ ಕಾಂಬಳೆ
C4365 - ಶ್ರೀನಿವಾಸ್ ಭಾನುದಾಸ್ ವಾಘಮಾರೆ
C4429 - ಪವನ್ ರವೀಂದ್ರ ಕಾಂಬಳೆ
C4022 - ರಾಮ್ ರಕ್ಷಾ
C4024 - ಸಂದೀಪ್ ಕುಮಾರ್ ಮಿಶ್ರಾ
C4214- ಲಲಿತ್ ಕುಮಾರ್ ವಿಶ್ವಕರ್ಮ
C4401 - ಸುದೀಪ್ ವಜೆ
C4405 - ಅಂಶು ಕುಮಾರ್
"ನೀವು ಬಯಸುವ ನಾಳೆಯನ್ನು ನಿರ್ಮಿಸಲು ಈ ದಿನ ಒಂದು ಅವಕಾಶವಾಗಿದೆ "
ಬೆಂಗಳೂರಿನ ಗಡಿಬಿಡಿಯ ನಗರ ಪ್ರದೇಶದ ಜೀವಶೈಲಿಯ ನಡುವೆ, ಉತ್ಸಾಹಭರಿತ ತಂಡವೊಂದು ಶಾಂತ ಪಟ್ಟಣವಾದ ಗುಂಡುಲ್ಪೇಟೆಗೆ ಪ್ರಯಾಣ ಬೆಳೆಸಿತು. ಸ್ಥಳೀಯ ಜನರ ಶಾಂತಿ ಮತ್ತು ಸೌಜನ್ಯದಿಂದ ನಮ್ಮ ತಂಡಕ್ಕೆ ಉಲ್ಲಾಸಕರ ಅನುಭವವು ಸಿಕ್ಕಿತು. ಈ ಶಾಂತಿಯುತ ವಾತಾವರಣದಲ್ಲಿಯೇ ನಮ್ಮ ಗ್ರಾಹಕರಾದ ಶ್ರೀಮತಿ ಭಾಗ್ಯ ಅವರನ್ನು ಭೇಟಿಯಾಗುವ ಸೌಭಾಗ್ಯವು ನಮಗೆ ದೊರಕಿತು. ಎರಡು ಮಕ್ಕಳ ತಾಯಿಯಾಗಿರುವ ಆಕೆಗೆ ತನ್ನ ಕುಟುಂಬಕ್ಕೆ ಉಜ್ವಲ ಭವಿಷ್ಯವನ್ನು ಭದ್ರಪಡಿಸುವ ಸಂಕಲ್ಪದಲ್ಲಿ ಅಚಲವಾಗಿದೆ..
ಶ್ರೀಮತಿ ಭಾಗ್ಯ ಅವರು ತಮ್ಮ ನೆರೆಹೊರೆಯಲ್ಲಿ ಒಂದು ಸಣ್ಣ ಅಂಗಡಿಯನ್ನು ತೆರೆದಿದ್ದಾರೆ, ಅವರು ತನ್ನ ಕುಟುಂಬದ ಬೆಂಬಲದೊಂದಿಗೆ ನಿರ್ವಹಿಸುತ್ತಾರೆ. ಈ ಅಂಗಡಿ ಚಿಕ್ಕದಾದರೂ ಲಗತ್ತಿಸಲಾದ ಚಿತ್ರದಲ್ಲಿ ತೋರಿಸಿರುವಂತೆ ಸ್ಥಳೀಯ ಜನರ ದೈನಂದಿನ ಅಗತ್ಯಗಳಿಗೆ ಅಗತ್ಯವಾದ ವಸ್ತುಗಳನ್ನು ಒದಗಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಗರದಿಂದ 15 ಕಿಲೋಮೀಟರ್ ದೂರದಲ್ಲಿರುವ ಈ ಅಂಗಡಿಯು ಹತ್ತಿರದ ನಿವಾಸಿಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ, ಯಾವುದು ಅವರ ಅಗತ್ಯವಾದ ವಸ್ತುಗಳಿಗೆ ಮತ್ತು ದೈನಂದಿನ ಲೇಖನ ಸಾಮಗ್ರಿಗಳಿಗೆ ಅನುಕೂಲಕರವಾದ ಮೂಲವಾಗಿದೆ.
ಚೈತನ್ಯದಿಂದ ಒದಗಿಸಲಾದ ಹಣಕಾಸಿನ ಬೆಂಬಲದಿಂದ ತಮ್ಮ ವ್ಯವಹಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಶ್ರೀಮತಿ ಭಾಗ್ಯ ಅವರು ಹೊಂದಿದ್ದಾರೆ. ತನ್ನ ಸಮುದಾಯದ ಯುವತಿಯರು ಮತ್ತು ಮಹಿಳೆಯರು ದೂರದ ಪ್ರಯಾಣ ಮಾಡದೆಯೇ ಅಂತಹ ಉತ್ಪನ್ನಗಳನ್ನು ಪ್ರವೇಶಿಸಲು ಸುಲಭವಾಗುವಂತೆ ಅನುಕರಣೆ ಆಭರಣಗಳು ಮತ್ತು ಇತರ ವಸ್ತುಗಳನ್ನು ನೀಡುವುದನ್ನು ಅವರು ಕಲ್ಪಿಸಿಕೊಂಡಿದ್ದಾರೆ.
ಆದಾಯದ ಇನ್ನೊಂದು ಮೂಲವನ್ನು ರಚಿಸಲು ಶಮಿಸುತ್ತಿರುವವರಲ್ಲಿ ಶ್ರೀಮತಿ ಭಾಗ್ಯ ಕೇವಲ ಒಬ್ಬ ವ್ಯಕ್ತಿಯಲ್ಲ ಅವರು ತಮ್ಮ ಸಮುದಾಯದ ಮಹಿಳೆಯರಿಗೆ ಮತ್ತು ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಆಕೆಯ ಆಕಾಂಕ್ಷೆಗಳು ಅವಳ ಪ್ರಸ್ತುತ ಅಂಗಡಿಯನ್ನೂ ಮೀರಿದೆ ಮತ್ತು ಪ್ರತಿ ಮನೆಯಲ್ಲೂ ತನ್ನ ವ್ಯಾಪಾರವನ್ನು ಪ್ರಸಿದ್ಧಗೊಳಿಸುವುದಕ್ಕಾಗಿ ಹೊಸ ಶಾಖೆಗಳನ್ನು ಸ್ಥಾಪಿಸಲು ಅವರು ಯೋಜಿಸಿದ್ದಾರೆ. ಅವರ ಯಶಸ್ಸಿಗೆ ನಾವು ಶುಭ ಹಾರೈಸುತ್ತೇವೆ ಮತ್ತು ಅವರ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಭಾಗ್ಯ
ಗುಂಡುಲಪೇಟೆ ಶಾಖೆ
ಕರ್ನಾಟಕ
ಚೈತನ್ಯದಲ್ಲಿ ಬದಲಾವಣೆಯ ಧನಾತ್ಮಕ ಅಲೆಯನ್ನು ಸೃಷ್ಟಿಸುವ ಶಕ್ತಿಯನ್ನು ನಾವು ದೃಢವಾಗಿ ನಂಬುತ್ತೇವೆ. ಈ ತ್ರೈಮಾಸಿಕದಲ್ಲಿ ಎರಡು ಪ್ರಮುಖವಾದ CSR ಉಪಕ್ರಮಗಳನ್ನು ನಾವು ಪ್ರಾರಂಭಿಸಿದ್ದೇವೆ, ಯಾವುದು ಅನೇಕ ಜನರ ಜೀವನವನ್ನು ಅರ್ಥಪೂರ್ಣವಾದ ರೀತಿಯಲ್ಲಿ ಪ್ರಭಾವಿಸಿದೆ. ಈ ಪ್ರಯತ್ನಗಳ ವಿವರವಾದ ವಿವರಣೆಯು ಇಲ್ಲಿದೆ:
1. ಜಾರ್ಖಂಡ್ನಲ್ಲಿ ಗ್ರಾಮೀಣ ಶಿಕ್ಷಣವನ್ನು ಸಶಕ್ತಗೊಳಿಸುವುದು:- ಜೀವನವನ್ನು ಸುಧಾರಿಸುವ ನಿರಂತರವಾದ ನಮ್ಮ ಅನ್ವೇಷಣೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲಾ ಮಕ್ಕಳಿಗೆ ಜ್ಞಾನದ ಹಾದಿಯನ್ನು ಬೆಳಗಿಸುವ ನಿಟ್ಟಿನಲ್ಲಿ ನಾವು ಪ್ರಮುಖ ಹೆಜ್ಜೆಯನ್ನು ಇಟ್ಟಿದ್ದೇವೆ. ಚೈತನ್ಯ ಅವರು ಜಾರ್ಖಂಡ್ನ ಸಿರೋಹಿ ಖುರ್ದ್ ಕೇವಾಲ್ ಮತ್ತು ರಾಬ್ಡಾ ಗ್ರಾಮಗಳಲ್ಲಿ ಅತ್ಯುತ್ತಮ ಶೈಕ್ಷಣಿಕ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ. ಆಗಸ್ಟ್ 1, 2023 ರಿಂದ ಈ ಸುಸಜ್ಜಿತ ಕೇಂದ್ರಗಳು ಈ ಪ್ರದೇಶಗಳಲ್ಲಿರುವ ಯುವಕರಿಗೆ ಕಲಿಕೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ.
ಆಫ್ಲೈನ್ ಮತ್ತು ಆನ್ಲೈನ್ ತರಗತಿಗಳ ಸಂಯೋಜನೆಯ ಮೂಲಕ ಮಕ್ಕಳಿಗೆ ಜ್ಞಾನವನ್ನು ನೀಡಲು ಪ್ರತಿಭಾವಂತ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ವಿನಮ್ರ ಉಪಕ್ರಮವು ಗ್ರಾಮೀಣ ಸಮುದಾಯಗಳ ಜನರಿಗೆ ಶಿಕ್ಷಣದ ಬೆಳಕನ್ನು ತರುವ ಗುರಿಯನ್ನು ಹೊಂದಿದೆ. ಈಗಾಗಲೇ ಮಧ್ಯಮ ಮತ್ತು ಪ್ರೌಢಶಾಲೆಗಳ 90 ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ ಮತ್ತು ಶಿಕ್ಷಣದ ಶಕ್ತಿಯು ಉತ್ಸಾಹದ ಅಲೆಗಳನ್ನು ಸೃಷ್ಟಿಸುತ್ತಿದೆ, ಅವರಲ್ಲಿ ಸ್ವಾವಲಂಬನೆಯನ್ನು ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುತ್ತದೆ.
2. ಅಗತ್ಯದ ಸಮಯದಲ್ಲಿ ಸಹಾಯ ಹಸ್ತ ಚಾಚುವುದು:- ಜುಲೈ ಮತ್ತು ಆಗಸ್ಟ್ 2023 ರಲ್ಲಿ ಮಹಾರಾಷ್ಟ್ರದ ಹೃದಯಭಾಗದಲ್ಲಿರುವ ಚೋಂಡಿ ಮತ್ತು ಬಿಲೋಲಿ ಗ್ರಾಮಗಳಿಗೆ ಅಪ್ಪಳಿಸಿದ ವಿನಾಶಕಾರಿ ಭಾರೀ ಮಳೆ ಮತ್ತು ಪ್ರವಾಹದ ನಡುವೆ ಚೈತನ್ಯ ಅವರ ಸಿಎಸ್ಆರ್ ಚಟುವಟಿಕೆಯು ಭರವಸೆಯ ಕಿರಣವಾಗಿ ಕಂಡುಬಂದಿತು. ಸರಿಸುಮಾರು 1000 ಕುಟುಂಬಗಳಿಗೆ ನಾವು ಸಹಾಯ ಹಸ್ತವನ್ನು ಚಾಚಿದ್ದೇವೆ, ಅವರ ಕಷ್ಟದ ಸಮಯದಲ್ಲಿ ಅವರಿಗೆ ಜೀವನಾಡಿಯನ್ನು ಒದಗಿಸಿದ್ದೇವೆ.
ಆಗಸ್ಟ್ 23, 2023 ರಂದು, ಮಹಾರಾಷ್ಟ್ರದ ನಮ್ಮ ಚೈತನ್ಯ ತಂಡವು ಸಂತ್ರಸ್ತ ಕುಟುಂಬಗಳಿಗೆ ದಿನಸಿ ಚೀಲಗಳನ್ನು ವಿತರಿಸಲು ಗ್ರಾಮ ಪಂಚಾಯತ್ ಕಚೇರಿಗೆ ಒಟ್ಟಾಗಿ ಬಂದಿದ್ದರು. ಈ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ದಿನಸಿಗಳು ಸಿಕ್ಕಿತು, ಅದರಿಂದ ಅವರ ಮನೆಯು ಆಹಾರ ಸಾಮಾಗ್ರಿಗಳಿಂದ ಮತ್ತು ಸಂತೋಷದಿಂದ ತುಂಬಿತು. ಅವರ ಅಗತ್ಯದ ಸಮಯದಲ್ಲಿ ಸ್ವೀಕರಿಸಿದ ಸಹಾಯವನ್ನು ಸ್ವೀಕರಿಸಿದವರ ಹೃದಯದಿಂದ ಹೊರಹೊಮ್ಮಿದ ನಗುವಿನಲ್ಲಿ ಮತ್ತು ಅಗಾಧವಾದ ಕೃತಜ್ಞತೆಯಲ್ಲಿ ಮಾನವೀಯತೆಯ ನಿಜವಾದ ಸಾರವು ಸ್ಪಷ್ಟವಾಗಿ ಕಾಣಿಸುತ್ತದೆ..
ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ಪ್ರೀತಿ ಮತ್ತು ಬೆಂಬಲದೊಂದಿಗೆ ಜೀವನವನ್ನು ಪರಿವರ್ತಿಸುವ ಶಕ್ತಿಯು ನಮಗಿದೆ ಎಂದು ನಾವು ಸಾಬೀತುಪಡಿಸಿದ್ದೇವೆ. ಅವಶ್ಯಕತೆಗಳನ್ನು ಗುರುತಿಸಿದ್ದಕ್ಕಾಗಿ ಮತ್ತು ಸಹಾಯವನ್ನು ತ್ವರಿತವಾಗಿ ಒದಗಿಸಿದ್ದಕ್ಕಾಗಿ ಗಮನಾರ್ಹವಾದ ಚೈತನ್ಯ ತಂಡಕ್ಕೆ ವ್ಯಾಪಿಸಿರುವವರಿಗೆ ಸಿಎಸ್ಆರ್ ನಿರ್ವಾಹಕರಿಗೆ ಮತ್ತು ವ್ಯಾಪಾರದವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು.
ಈ ಅಸಾಮಾನ್ಯ ಮಕ್ಕಳ ಮತ್ತು ವಯಸ್ಕರ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುವ ನಮ್ಮ ಅಚಲವಾದ ಬದ್ಧತೆಯನ್ನು ಈ ಎಲ್ಲಾ ಉಪಕ್ರಮಗಳು ಪ್ರತಿಧ್ವನಿಸುತ್ತವೆ. ಪ್ರತಿಯೊಂದು ಸಣ್ಣ ಕ್ರಿಯೆಯು ಗಮನಾರ್ಹ ವ್ಯತ್ಯಾಸವನ್ನುಂಟುಮಾಡುತ್ತದೆ ಎಂದು ತಿಳಿದೊಕೊಂಡು, ನಮ್ಮ ವಿನಮ್ರ ಪ್ರಯತ್ನಗಳ ಮೂಲಕ ಜಗತ್ತಿನಲ್ಲಿ ನಗುವನ್ನು ಮತ್ತು ಕರುಣೆಯನ್ನು ಹರಡುವುದನ್ನು ನಾವು ಮುಂದುವರಿಸೋಣ,
ನಮ್ಮ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸಲಹೆಯನ್ನು ನೀಡಲು ಈ ಜಾಗದಲ್ಲಿ ಉದ್ದೇಶಿಸಲಾಗಿದೆ. ಈ ವೈಶಿಷ್ಟ್ಯದಲ್ಲಿ ನಮ್ಮ ವ್ಯಾಪಾರ ವಿಭಾಗವನ್ನು ನಾವು ಗುರುತಿಸಿದ್ದೇವೆ
ವ್ಯಾಪಾರದ ತಂಡ - ಶ್ರೇಷ್ಠತೆಯನ್ನು ಹೆಚ್ಚಿಸುವುದು
ವ್ಯಾಪಾರವನ್ನು ಮುನ್ನಡೆಸಲು ಮತ್ತು ನಮ್ಮ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಬದ್ಧವಾಗಿರುವ ಸಮರ್ಪಿತ ಮತ್ತು ಕ್ರಿಯಾತ್ಮಕ ತಂಡವು, ನಮ್ಮ ಸಂಸ್ಥೆಯ ಯಶಸ್ಸಿಗೆ ಮೂಲ ಕಾರಣವಾಗಿದೆ. ಅವರು ನಿರಂತರವಾಗಿ ಉತ್ಕೃಷ್ಟತೆ ಮತ್ತು ನಾವೀನ್ಯತೆಯ ಕಡೆಗೆ ಶ್ರಮಿಸುವುದರಿಂದಾಗಿ ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ. ಲಿ. ನಲ್ಲಿರುವ ವ್ಯಾಪಾರ ತಂಡವು ಈ ಸ್ಪೂರ್ತಿಯನ್ನು ಸಾಕಾರಗೊಳಿಸುತ್ತದೆ. ಶ್ರೀ ದೀಪಕ್ ಝಾ ಅವರ ನೇತೃತ್ವದಲ್ಲಿ ಚೈತನ್ಯ ಕುಟುಂಬದ ವ್ಯಾಪಾರ ತಂಡವು 6343 ಸದಸ್ಯರನ್ನು ಒಳಗೊಂಡಿದೆ. ಚೈತನ್ಯದಲ್ಲಿ ವ್ಯಾಪಾರದ ಕಾರ್ಯಾಚರಣೆಗಳನ್ನು ಹೆಚ್ಚಿಸುವುದಕ್ಕಾಗಿ ನಮ್ಮ ವ್ಯಾಪಾರ ತಂಡವು ಗಮನಹರಿಸುವ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
1. ವ್ಯಾಪಾರದ ಅಭಿವೃದ್ಧಿಗಾಗಿ ಮತ್ತು ಗುಣಮಟ್ಟದ ಸುಧಾರಣೆಗಾಗಿ ತಂತ್ರಗಳು: - ವ್ಯಾಪಾರದ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ನಮ್ಮ ಕೊಡುಗೆಗಳ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ನಮ್ಮ ವ್ಯಾಪಾರದ ತಂಡವು ಮೊದಲಿಗರಾಗಿರುತ್ತಾರೆ. ಅವಕಾಶಗಳನ್ನು ಗುರುತಿಸಲು ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸಲು ಅವರು ಮುಂಚೂಣಿಯಲ್ಲಿದ್ದಾರೆ ಯಾವುದು ನಮ್ಮ ಕಾರ್ಯಾಚರಣೆಗಳನ್ನು ಉತ್ತಮಗೊಳಿಸುವುದು ಮಾತ್ರವಲ್ಲದೆ ನಮ್ಮ ಗ್ರಾಹಕರಿಗೆ ನಾವು ಅತ್ಯುತ್ತಮ ಸೇವೆಯನ್ನು ನೀಡುತ್ತೇವೆ ಎನ್ನುವುದನ್ನು ಖಚಿತಪಡಿಸುತ್ತದೆ.
2. ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದು; - ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಯೋಜನೆಗಳನ್ನು ಗುರುತಿಸಲು ಮತ್ತು ಕಾರ್ಯಗತಗೊಳಿಸಲು ಸಹ ವ್ಯಾಪಾರ ತಂಡವು ಸಹಾಯ ಮಾಡುತ್ತದೆ. ಸಂಪೂರ್ಣ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಕ್ಕಾಗಿ ಅವರು ಕ್ಷೇತ್ರದ ಕಾರ್ಯಾಚರಣೆಯ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಈ ಗುರಿಗಾಗಿ ಇರುವ ಅವರ ಸಮರ್ಪಣೆಯು ದಿನದಿಂದ ದಿನಕ್ಕೆ ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ನಮಗೆ ಅಧಿಕಾರವನ್ನು ನೀಡುತ್ತದೆ.
3. ಗ್ರಾಹಕರೊಂದಿಗೆ ಸಂವಹನ; - ನಮ್ಮ ಸಂಸ್ಥೆಯಲ್ಲಿರುವ ವ್ಯಾಪಾರದ ತಂಡವು ನಮ್ಮ ಗ್ರಾಹಕರ ಸಂಬಂಧಗಳ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮತ್ತು ಧನಾತ್ಮಕ ಮತ್ತು ಉತ್ಪಾದಕ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವ ಪ್ರಮುಖ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳುತ್ತದೆ. ನಮ್ಮ ಗ್ರಾಹಕರೊಂದಿಗಿನ ಮೊದಲ ಸಂಪರ್ಕವನ್ನು ನಮ್ಮ ವ್ಯಾಪಾರ ತಂಡವು ಹೊಂದಿದೆ. ಅವರು ನಮ್ಮ ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ನಮ್ಮ ಸಂಸ್ಥೆಯ ಮತ್ತು ನಮ್ಮ ಗೌರವಾನ್ವಿತ ಗ್ರಾಹಕರ ನಡುವಿನ ಕೊಂಡಿಯಾಗುತ್ತಾರೆ. ಚೈತನ್ಯದ ಬೆಳವಣಿಗೆಯ ಪ್ರಚೋದಕರು ಈ ಪ್ರವರ್ತಕರಾಗಿದ್ದಾರೆ ಯಾರು ಕ್ಷೇತ್ರದಲ್ಲಿ ಒಳ್ಳೆಯ ಮತ್ತು ಕೆಲವೊಮ್ಮೆ ಕೆಟ್ಟ ಅನುಭವಗಳನ್ನು ಎದುರಿಸಬೇಕಾಗುತ್ತದೆ.
4. ಪರಿಣಾಮಕಾರಿ ಪ್ರಕ್ರಿಯೆಗಳನ್ನು ಸ್ಥಾಪಿಸುವುದು; - ನಮಗಾಗಿ ನಾವು ಹೊಂದಿಸಿರುವ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಮ್ಮ ವ್ಯಾಪಾರದ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಕೇವಲ ಸರಿಯಾದ ಸ್ಥಳದಲ್ಲಿ ಮಾತ್ರವಲ್ಲದೇ ಪರಿಣಾಮಕಾರಿಯಾಗಿಯೂ ಇದೆ ಎಂದು ವ್ಯಾಪಾರದ ತಂಡವು ಖಚಿತಪಡಿಸುತ್ತದೆ. ಉತ್ತಮ ಗ್ರಾಹಕರು ಮಾತ್ರ ನಮ್ಮ ಪೋರ್ಟ್ಫೋಲಿಯೊದ ಭಾಗವಾಗಿದ್ದಾರೆ ಎಂದು ತಂಡವು ಖಚಿತಪಡಿಸುತ್ತದೆ. ನಮ್ಮ ಗ್ರಾಹಕರ ಹಾಗೆಯೇ ನಮ್ಮ ಸಂಸ್ಥೆಯ ನಿರೀಕ್ಷೆಗಳನ್ನು ನಾವು ಪೂರೈಸುತ್ತೇವೆ ಮತ್ತು ಮೀರುತ್ತೇವೆ ಎನ್ನುವುದನ್ನು ಈ ಕಠಿಣ ವಿಧಾನವು ಖಾತರಿಪಡಿಸುತ್ತದೆ.
5. ಗುಣಮಟ್ಟದ ಭರವಸೆ; - ಗುಣಮಟ್ಟವು ನಮಗೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ನಿಟ್ಟಿನಲ್ಲಿ ವ್ಯಾಪಾರದ ತಂಡವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಮ್ಮ ಪೋರ್ಟ್ಫೋಲಿಯೊದ ಗುಣಮಟ್ಟವು ಉನ್ನತ ದರ್ಜೆಯಲ್ಲಿದೆ ಎನ್ನುವುದನ್ನು ಖಾತ್ರಿಪಡಿಸಲು ನಿರಂತರವಾಗಿ ನಮ್ಮ ಕಾರ್ಯಾಚರಣೆಗಳನ್ನು ವಿವಿಧ ನಿಯತಾಂಕಗಳ ಆಧಾರದ ಮೇಲೆ ಅವರು ಮೇಲ್ವಿಚಾರಣೆ ಮಾಡುತ್ತಾರೆ. ಸಾಲಗಳನ್ನು ಒದಗಿಸುವ ಸಮಯದಲ್ಲಿ ಅವರು ಅಪಾಯವನ್ನು ನಿಯಂತ್ರಿಸಲು ಮತ್ತು ನಮ್ಮ ಸಂಸ್ಥೆಗೆ ಉಪಯುಕ್ತವಾದ ಪೋರ್ಟ್ಫೋಲಿಯೊವನ್ನು ನಿರ್ಮಿಸಲು ಸಕ್ರಿಯವಾಗಿ ಗಮನಹರಿಸುತ್ತಾರೆ. ಗುಣಮಟ್ಟಕ್ಕೆ ನೀಡಿದ ಈ ಸಮರ್ಪಣೆಯು ನಮ್ಮ ಗ್ರಾಹಕರ ಯೋಗಕ್ಷೇಮಕ್ಕಾಗಿ ಇರುವ ಅವರ ಬದ್ಧತೆಗೆ ಸಾಕ್ಷಿಯಾಗಿದೆ.
6. ತಡೆರಹಿತ ಹೊಂದಾಣಿಕೆ; - ನಮ್ಮ ಸಂಸ್ಥೆಯ ಸುಗಮ ಕಾರ್ಯಾಚರಣೆಗೆ ನೀಡುವ ಕೊಡುಗೆಯಾಗಿ ಎಲ್ಲಾ ಇಲಾಖೆಗಳು ಸಾಮರಸ್ಯದಿಂದ ಕೆಲಸ ಮಾಡುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ತಂಡದ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಸಮರ್ಥ ಮತ್ತು ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ನಮಗೆ ಅನುವು ಮಾಡಿಕೊಡುತ್ತಾ ಅವರ ದಣಿವಿಲ್ಲದ ಸಹಕಾರವು ಸಂಸ್ಥೆಯ ಪ್ರತಿಯೊಂದು ಕಾರ್ಯವನ್ನು ಸುಗಮವಾಗಿ ನಿರ್ವಹಿಸುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.
ಸಂಕ್ಷಿಪ್ತವಾಗಿ ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ. ಲಿ. ನಲ್ಲಿರುವ ವ್ಯಾಪಾರದ ತಂಡವು ನಮ್ಮ ಉತ್ಕೃಷ್ಟತೆಯ ಅನ್ವೇಷಣೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ನಮ್ಮ ಪರಿಧಿಯನ್ನು ವಿಸ್ತರಿಸಲು ನಮ್ಮ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ನಮ್ಮ ಗ್ರಾಹಕರಿಗೆ ನಮ್ಮ ಬದ್ಧತೆಯನ್ನು ಸಮರ್ಥಿಸಲು ಅವು ನಮಗೆ ಅನುವು ಮಾಡಿಕೊಡುತ್ತವೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯು ನಮ್ಮ ಅತ್ಯಧಿಕ ಶ್ಲಾಘನೆಗೆ ಅರ್ಹವಾಗಿದೆ. ಚೈತನ್ಯ ಕುಟುಂಬದ ಭಾಗವಾಗಿ ನಮ್ಮ ಸಂಸ್ಥೆಯ ಯಶಸ್ಸಿನ ಹಾದಿಯನ್ನು ಬೆಳಗುವಂತೆ ಮಾಡಿದ ನಮ್ಮ ವ್ಯಾಪಾರ ತಂಡದ ಮಹತ್ವದ ಕೊಡುಗೆಗಳನ್ನು ನಾವು ಅಂಗೀಕರಿಸೋಣ ಮತ್ತು ಆಚರಿಸೋಣ.
ಕರ್ನಾಟಕದ ವಿವಿಧ ಮೈಕ್ರೋಫೈನಾನ್ಸ್ ಸಂಸ್ಥೆಗಳ ಪ್ರಮುಖ ವ್ಯಕ್ತಿಗಳ ಗಮನಾರ್ಹ ಒಟ್ಟುಗೂಡುವಿಕೆಯಲ್ಲಿ ಸೆಪ್ಟೆಂಬರ್ 12, 2023 ರಂದು AKMI ಕರ್ನಾಟಕ ಮೈಕ್ರೋಫೈನಾನ್ಸ್ ಸಮ್ಮೇಳನವು ಬೆಂಗಳೂರಿನಲ್ಲಿ ನಡೆಯಿತು. ಎಕೆಎಂಐ ಕೌಶಲ್ಯದಿಂದ ಆಯೋಜಿಸಲಾದ ಈ ಪ್ರಭಾವಶಾಲಿ ಕಾರ್ಯಕ್ರಮವು ಅದರ ಅದ್ಭುತ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಮೈಕ್ರೊಫೈನಾನ್ಸ್ನ ಏರಿಳಿತಗಳ ಬಗ್ಗೆ ತಮ್ಮ ಆಳವಾದ ಒಳನೋಟಗಳನ್ನು ಉದಾರವಾಗಿ ಹಂಚಿಕೊಂಡ ಉದ್ಯಮದ ತಜ್ಞರ ಸಭೆಯು ಸಮ್ಮೇಳನದ ಅತ್ಯಂತ ಗಮನಾರ್ಹ ಕ್ಷಣಗಳಲ್ಲಿ ಒಂದಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ವಿಭಾಗದ ಪ್ರಮುಖರಾದ, ಶ್ರೀ ಎನ್. ಶ್ರೀನಿವಾಸನ್ ಅವರು ತಮ್ಮ ಇತ್ತೀಚಿನ ಪ್ರಕಟಣೆಯಾದ "ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್" ಅನ್ನು ಅನಾವರಣಗೊಳಿಸಿದರು. ಈ ಪುಸ್ತಕವು ಕರ್ನಾಟಕದ ಮೈಕ್ರೊಫೈನಾನ್ಸ್ ಮಾರುಕಟ್ಟೆಯನ್ನು ಆಳವಾಗಿ ಪರಿಶೀಲಿಸುತ್ತದೆ, ಅದರ ಪ್ರಸ್ತುತ ಸ್ಥಿತಿ ಅದು ಎದುರಿಸುತ್ತಿರುವ ಸವಾಲುಗಳು ಮತ್ತು ಮುಂದಿನ ದೃಷ್ಟಿಕೋನದ ಸಮಗ್ರ ವಿಶ್ಲೇಷಣೆಯನ್ನು ಒದಗಿಸುತ್ತದೆ.
ಸಮ್ಮೇಳನದುದ್ದಕ್ಕೂ ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರಗಳ ಕುರಿತಾದ ಚರ್ಚೆಗಳು ನಡೆದವು.ಈ ಸಂವಾದಗಳು ನವೀನ ಉತ್ಪನ್ನಗಳ ಮಹತ್ವಕ್ಕೆ ಗಮನವನ್ನು ನೀಡುವ ಮೂಲಕ ವಲಯವನ್ನು ಎದುರಿಸುವ ಗ್ರಾಹಕರ ಅನುಭವವನ್ನು ಹೆಚ್ಚಿಸುವ ತಾಂತ್ರಿಕ ಪ್ರಗತಿಯನ್ನು ಬಳಸಿಕೊಳ್ಳುವ ಮತ್ತು ಸಹಯೋಗಕ್ಕಾಗಿ ಅವಕಾಶಗಳನ್ನು ಅನ್ವೇಷಿಸುವ ಬಹುಮುಖಿ ಸವಾಲುಗಳನ್ನು ಸಂಬೋಧಿಸಿದೆ.
ಸಮಾರಂಭದ ಪ್ರಮುಖ ಪ್ರಾಯೋಜಕರಲ್ಲಿ ಒಬ್ಬರು ಎನ್ನುವ ಗೌರವವನ್ನು ನಮ್ಮ ಸಂಸ್ಥೆಯು ಹೊಂದಿದೆ ಮತ್ತು ಈ ಪ್ರಮುಖ ಸಮಾರಂಭದಲ್ಲಿ ನಮ್ಮ ತಂಡದ ಕೆಲವು ಸದಸ್ಯರು ಭಾಗವಹಿಸಿದ್ದರು. ಸಮ್ಮೇಳನದ ಕೆಲವು ಪ್ರಮುಖ ಕ್ಷಣಗಳ ಕಿರುನೋಟವನ್ನು ನಿಮಗೆ ನೀಡಲು ನಾವು ಉತ್ಸುಕರಾಗಿದ್ದೇವೆ.
ಚೈತನ್ಯದಲ್ಲಿ ನಾವು ಫಿಟ್ನೆಸ್ಗೆ ಒತ್ತುನೀಡುವ ಸಂಸ್ಕೃತಿಯನ್ನು ಬೆಳೆಸುತ್ತೇವೆ. ನಮ್ಮ ಚೈತನ್ಯದವರ ಸಂಪೂರ್ಣ ಯೋಗಕ್ಷೇಮಕ್ಕಾಗಿ ನಮ್ಮ ಸಂಸ್ಥೆಯಲ್ಲಿ ಈ ಉದ್ದೇಶವನ್ನು ಪೂರೈಸುವುದಕ್ಕಾಗಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಯಮಿತ ದೈಹಿಕ ಚಟುವಟಿಕೆಯು ಆರೋಗ್ಯಕ್ಕಾಗಿ ಒಬ್ಬರು ಮಾಡಬಹುದಾದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ದೈಹಿಕವಾಗಿ ಸಕ್ರಿಯವಾಗಿರುವುದರಿಂದ ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರಿಸಬಹುದು, ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ, ಮೂಳೆಗಳನ್ನು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಉದ್ದೇಶವನ್ನು ಪೂರೈಸಲು ವಾಟ್ಸಾಪ್ ನಲ್ಲಿ ನಾವು ಚೈತನ್ಯದ ವೆಲ್ನೆಸ್ ಗ್ರೂಪ್ ಅನ್ನು ಸಹ ರಚಿಸಿದ್ದೇವೆ..
ಜುಲೈ ತಿಂಗಳಲ್ಲಿ ನಮ್ಮ ಉದ್ಯೋಗಿಗಳಿಗಾಗಿ ನಾವು ಫಿಟ್ನೆಸ್ ನ ದಿನಚರಿಯನ್ನು ಪ್ರಾರಂಭಿಸಿದ್ದೇವೆ, ಎಲ್ಲಿ ಅವರು ಪರ್ಯಾಯ ದಿನಗಳಲ್ಲಿ ಕಚೇರಿಯ ಸಮಯದ ನಂತರ ಫಿಟ್ನೆಸ್ ಕಾರ್ಯಕ್ರಮದಲ್ಲಿ ತೊಡಗುತ್ತಾರೆ. ಫಿಟ್ನೆಸ್ ತರಬೇತಿಯಲ್ಲಿ 5 ವರ್ಷಗಳ ಅನುಭವವನ್ನು ಹೊಂದಿರುವ ಸ್ವತಂತ್ರ ಫಿಟ್ನೆಸ್ ತರಬೇತುದಾರರು ಮತ್ತು ಪೌಷ್ಟಿಕತಜ್ಞರು ಆಗಿರುವ ಶ್ರೀ ಚೇತನ್ ಅವರು ಈ ಉದ್ದೇಶಕ್ಕಾಗಿ ನಮಗೆ ಸಹಾಯ ಮಾಡುತ್ತಿದ್ದಾರೆ..
ಈ ಉಪಕ್ರಮದ ಮೂಲಕ ನಮ್ಮ ಉದ್ಯೋಗಿಗಳು ಆರೋಗ್ಯಕರವಾದ ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಸಾಧಿಸಲು ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಎರಡರಲ್ಲೂ ಅಭಿವೃದ್ಧಿಯನ್ನು ಹೊಂದಲು ಅವರನ್ನು ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ.
ಮಹಾದೇವ ಬಿರದರ್
ಘಟಕದ ವ್ಯಾಪಾರ ವ್ಯವಸ್ಥಾಪಕ
ಭಗ್ವಾನ್ ಘಟಕ, ಮಹಾರಾಷ್ಟ್ರ
ಚೈತನ್ಯ ತಂಡದ ಸಮರ್ಪಿತ ಸದಸ್ಯರಾದ ಮಹದೇವ್ ಬಿರದರ್ ಅವರು ಎರಡೂವರೆ ವರ್ಷಗಳಿಂದ ನಮ್ಮ ಕುಟುಂಬದ ಭಾಗವಾಗಿದ್ದಾರೆ. ಮೈಕ್ರೋಫೈನಾನ್ಸ್ ಉದ್ಯಮದಲ್ಲಿ 2006 ರವರೆಗಿನ ವೃತ್ತಿಜೀವನದೊಂದಿಗೆ ಯಾವುದೇ ಇತರ ವೃತ್ತಿಪರರಂತೆ ಕಚೇರಿ ಜೀವನದಲ್ಲಿ ಬರುವ ಬೇಡಿಕೆಗಳು ಮತ್ತು ಒತ್ತಡಗಳು ಅವರಿಗೆ ಅರ್ಥವಾಗುತ್ತದೆ. ಹಿಂದೆ ಕೆಲಸಕ್ಕೆ-ಸಂಬಂಧಿಸಿದ ಒತ್ತಡದಿಂದಾಗಿ ನಿದ್ರೆಯಿಲ್ಲದ ರಾತ್ರಿಗಳನ್ನು ಅವರು ಕಳೆದಿದ್ದಾರೆ. ಆದಾಗ್ಯೂ ಅವರು ಸ್ಥಿರವಾದ ವ್ಯಾಯಾಮದ ದಿನಚರಿಯನ್ನು ಅಳವಡಿಸಿಕೊಂಡಾಗ ಅವರ ಜೀವನವು ಪರಿವರ್ತಕ ತಿರುವನ್ನು ಪಡೆದುಕೊಂಡಿತು.
ವೈದ್ಯರ ಶಿಫಾರಸಿನೊಂದಿಗೆ ಆರೋಗ್ಯಪೂರ್ಣ ಜೀವನಶೈಲಿಯತ್ತ ಮಹದೇವ್ ಅವರ ಪಯಣವು ಪ್ರಾರಂಭವಾಯಿತು. ಆರೋಗ್ಯದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಮತ್ತು ಅವರ ಪತ್ನಿ ಇಬ್ಬರಿಗೂ ತಮ್ಮ ದೈನಂದಿನ ಜೀವನದಲ್ಲಿ ವ್ಯಾಯಾಮವನ್ನು ಅಳವಡಿಸಿಕೊಳ್ಳುವಂತೆ ಸಲಹೆಯನ್ನು ನೀಡಲಾಯಿತು.ಆರೋಗ್ಯಕರವಾದ ದೇಹ, ಮನಸ್ಸು ಮತ್ತು ಆತ್ಮವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಗುರುತಿಸಿ, ಅವರು ಹೆಚ್ಚು ಸಮತೋಲಿತ ಮತ್ತು ಸುಸಜ್ಜಿತ ಅಸ್ತಿತ್ವದ ಕಡೆಗೆ ಮೊದಲ ಹೆಜ್ಜೆಗಳನ್ನು ಇಟ್ಟರು.
ಮಹಾದೇವ್ ಅವರ ಫಿಟ್ನೆಸ್ ಪಯಣದಲ್ಲಿ ಸ್ಫೂರ್ತಿಯು ಪ್ರಮುಖ ಪಾತ್ರವನ್ನು ವಹಿಸಿದೆ. ನಮ್ಮ ವಲಯದ ವ್ಯವಸ್ಥಾಪಕರಾದ, ಶ್ರೀ. ಬಿನಿತ್ ಮತ್ತು ತಂಡದ ವ್ಯವಸ್ಥಾಪಕರಾದ ಶ್ರೀ ರಾಜೇಂದರ್ ನಂದಗ್ವಾಲಿ ಅವರಿಂದ ಪಡೆದ ಪ್ರೋತ್ಸಾಹಕ್ಕೆ ಅವರು ಮನ್ನಣೆಯನ್ನು ಸಲ್ಲಿಸುತ್ತಾರೆ, ಯಾರು ಅವರಿಗೆ ಪ್ರತಿದಿನ ಬೆಳಿಗ್ಗೆ ವ್ಯಾಯಾಮದ ದಿನಚರಿಯನ್ನು ರೂಪಿಸಲು ಪ್ರೇರೇಪಿಸಿದವರು. ನಿಜವಾದ ಸ್ವಾಸ್ಥ್ಯವು ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಿದೆ ಎಂದು ಅವರು ಒತ್ತಿ ಹೇಳಿದರು.
ಗಮನಾರ್ಹವಾಗಿ ಮಹಾದೇವ್ ಅವರ ವ್ಯಾಯಾಮದ ದಿನಚರಿಯು ಯಾವುದೇ ಅಲಂಕಾರಿಕ ಉಪಕರಣಗಳನ್ನು ಅಥವಾ ಸಂಕೀರ್ಣವಾದ ವ್ಯಾಯಾಮಗಳನ್ನು ಒಳಗೊಂಡಿರುವುದಿಲ್ಲ. ಅವರು ತನ್ನ ಕಟ್ಟುಪಾಡುಗಳಲ್ಲಿ ದೈನಂದಿನ ನಡಿಗೆಯನ್ನು ಸರಳವಾಗಿ ಸೇರಿಸುತ್ತಾರೆ. ಕಳೆದ ವರ್ಷದ ಡಿಸೆಂಬರ್ನಿಂದ ನಡಿಗೆಯನ್ನು ಅವರು ನಿಷ್ಠೆಯಿಂದ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಮತ್ತು ಫಿಟ್ನೆಸ್ಗೆ ಆದ್ಯತೆಯನ್ನು ನೀಡಲು ದಿನದ ಒಂದು ಗಂಟೆಯನ್ನು ಮೀಸಲಿಡಬೇಕೆಂದು ಮಹದೇವ್ ಅವರು ಉತ್ಸಾಹದಿಂದ ಪ್ರತಿಪಾದಿಸುತ್ತಾರೆ, ಉತ್ತಮ ಆರೋಗ್ಯವು ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಮತ್ತು ನಾವೆಲ್ಲರೂ ಎದುರಿಸುತ್ತಿರುವ ದೈನಂದಿನ ಒತ್ತಡಗಳಿಂದ ಪರಿಹಾರವನ್ನು ಕಂಡುಕೊಳ್ಳಲು ಮೂಲಾಧಾರವಾಗಿದೆ ಎಂದು ದೃಢವಾಗಿ ನಂಬುತ್ತಾರೆ.
ಪ್ರಸ್ತುತವಾಗಿ, ಮಹದೇವ್ ಅವರು ಪ್ರತಿ ಗಂಟೆಗೆ ಸರಿಸುಮಾರು 6,000 ಹೆಜ್ಜೆಗಳನ್ನು ನಡೆಯುತ್ತಾರೆ. ಈ ವರ್ಷದ ಅಂತ್ಯದ ವೇಳೆಗೆ ಗಂಟೆಗೆ 10,000 ಹೆಜ್ಜೆಗಳನ್ನು ನಡೆಯುವುದು ಅವರ ಮಹತ್ವಾಕಾಂಕ್ಷೆಯ ಗುರಿಯಾಗಿದೆ. ಈ ತಾಲೀಮು ದಿನಚರಿಗೆ ಅವರ ಬದ್ಧತೆಯು ವೃತ್ತಿಪರ ಮತ್ತು ವೈಯಕ್ತಿಕ ಸವಾಲುಗಳನ್ನು ಎದುರಿಸಲು ಬೇಕಾದ ಸ್ಥಿತಿಸ್ಥಾಪಕತ್ವವನ್ನು ಅವರಿಗೆ ನೀಡಿದೆ. ಅವರು ದಿನವಿಡೀ ನಿರಂತರ ಶಕ್ತಿ ಮತ್ತು ಅವರ ದೈನಂದಿನ ಗುರಿಗಳಿಗೆ ಅಚಲವಾದ ಸಮರ್ಪಣೆಯನ್ನು ಆನಂದಿಸುತ್ತಾರೆ.
ಅವರ ವೈಯಕ್ತಿಕ ಬದ್ಧತೆಯ ಜೊತೆಗೆ, ಮಹಾದೇವ್ ಅವರು ಚೈತನ್ಯ ವೆಲ್ನೆಸ್ ವಾಟ್ಸಾಪ್ ಗುಂಪಿನ ಬೆಂಬಲವನ್ನು ಅಂಗೀಕರಿಸುತ್ತಾರೆ, ಯಾವುದು ಅವರ ಸಮಗ್ರ ಕ್ಷೇಮದ ಪಯಣಕ್ಕೆ ಅವರನ್ನು ಪ್ರೇರೇಪಿಸಿದೆ ಮತ್ತು ಪ್ರೋತ್ಸಾಹಿಸಿದೆ. ಆರೋಗ್ಯಕರ ಜೀವನಶೈಲಿಯತ್ತ ಸಕ್ರಿಯ ಹೆಜ್ಜೆಗಳನ್ನು ಇಡುವ ಮೂಲಕ ನಾವು ಜೀವನದ ಸವಾಲುಗಳನ್ನು ಉತ್ಸಾಹದಿಂಡ ಮತ್ತು ಸಕಾರಾತ್ಮಕತೆಯಿಂದ ಎದುರಿಸಬಹುದು ಎಂಬ ಸಂದೇಶವನ್ನು ಅವರ ಕಥೆಯು ಅತ್ಯಂತ ಸ್ಪೂರ್ತಿದಾಯಕವಾಗಿ ರವಾನಿಸುತ್ತದೆ. ನಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಮತ್ತು ಆರೋಗ್ಯಕರ, ಹೆಚ್ಚು ಸಾರ್ಥಕ ಜೀವನವನ್ನು ನಡೆಸಲು ಮಹಾದೇವ್ ಅವರ ಪಯಣವು ನಮ್ಮೆಲ್ಲರಿಗೂ ಸ್ಪೂರ್ತಿಯನ್ನು ನೀಡಲಿ.
ಬಹಳ ಹೆಮ್ಮೆ ಮತ್ತು ಅಪರಿಮಿತ ಉತ್ಸಾಹದಿಂದ ನಮ್ಮ ಬೆಂಗಳೂರಿನ ಕಛೇರಿಯಲ್ಲಿರುವ ಚೈತನ್ಯದವರು ಜುಲೈ 2023 ರಲ್ಲಿ ನಡೆದ ವರ್ಷಾಂತ್ಯದ ಆಚರಣೆಯಲ್ಲಿ ಸ್ಮರಣೀಯ ಸಂತೋಷದ ರಾತ್ರಿಯನ್ನು ಆನಂದಿಸಿದರು. ಈ ಗಮನಾರ್ಹ ಸಮಾರಂಭವು ನಮ್ಮ ಉದ್ಯೋಗಿಗಳ ನಿರಂತರ ಪ್ರಯತ್ನಗಳನ್ನು ಗುರುತಿಸುವ ಮತ್ತು ಆಚರಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ.
ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷವನ್ನು ಸಂಸ್ಥೆಗೆ ಮೀಸಲಿಟ್ಟ ನೌಕರರಿಗೆ ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿರುವುದು ಸಂಜೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಈ ಗುರುತಿಸುವಿಕೆಯು ಕೇವಲ ನಿಷ್ಠೆಯನ್ನು ಸಂಕೇತಿಸುವುದಿಲ್ಲ ಅದರೊಂದಿಗೆ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ನೀಡುವ ನಮ್ಮ ಮೆಚ್ಚುಗೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ.
ರಾತ್ರಿಯು ನಮ್ಮ ಪ್ರತಿಭಾನ್ವಿತ ಉದ್ಯೋಗಿಗಳಿಂದ ಮತ್ತು ಸಂಜೆಯನ್ನು ನಿಜವಾಗಿಯೂ ಸ್ಮರಣೀಯವಾಗಿಸಲು ಆಹ್ವಾನಿಸಲಾದ ವಿಶೇಷ ಅತಿಥಿಗಳಿಂದ ಭವ್ಯವಾದ ಪ್ರದರ್ಶನಗಳಿಂದ ತುಂಬಿತ್ತು. ಹಾಡುಗಾರಿಕೆ-ನೃತ್ಯ ಮತ್ತು ಇತರ ಮೋಡಿಮಾಡುವ ಕಾರ್ಯಗಳು ಪ್ರೇಕ್ಷಕರನ್ನು ಆಕರ್ಷಿಸಿದವು, ಯಾವುದು ಮುಂದಿನ ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವ ರಾತ್ರಿಯಾಗಿದೆ.
ಮನರಂಜನೆಯ ಹೊರತಾಗಿ ನಮ್ಮ ಉದ್ಯೋಗಿಗಳಿಗೆ ಒಂದುಗೂಡಲು ಮತ್ತು ಕಳೆದ ವರ್ಷದ ಸಾಧನೆಗಳನ್ನು ಸ್ಮರಿಸುವ ವೇದಿಕೆಯಾಗಿ ಈ ಆಚರಣೆಯು ಕಾರ್ಯನಿರ್ವಹಿಸಿತು. ಇದು ಹೊಸ ನೆನಪುಗಳನ್ನು ಸೃಷ್ಟಿಸುವ ಮತ್ತು ನಮ್ಮ ಚೈತನ್ಯದ ಕುಟುಂಬವನ್ನು ವ್ಯಾಖ್ಯಾನಿಸುವ ಮೈತ್ರಿ/ಸೌಹಾರ್ದದ ಬಂಧಗಳನ್ನು ಬಲಪಡಿಸುವ ಸಮಯವಾಗಿತ್ತು.
2023 ರ ವರ್ಷಾಂತ್ಯದ ಆಚರಣೆಯು ಅದ್ಭುತ ಯಶಸ್ಸನ್ನು ಕಂಡಿತು, ಆ ಸಂಜೆ ನಮ್ಮೊಂದಿಗೆ ಸೇರಿದ ಪ್ರತಿಯೊಬ್ಬ ಚೈತನ್ಯದವರ ಸಾಮೂಹಿಕ ಮನೋಭಾವ ಮತ್ತು ಸಮರ್ಪಣೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂಬರುವ ವರ್ಷದಲ್ಲಿ ಇನ್ನಷ್ಟು ಗಮನಾರ್ಹ ಕ್ಷಣಗಳನ್ನು ಮತ್ತು ಸಾಧನೆಗಳನ್ನು ನಾವು ನಿರೀಕ್ಷಿಸುತ್ತೇವೆ. ಚೈತನ್ಯ ಇಂಡಿಯಾ ಫಿನ್ ಕ್ರೆಡಿಟ್ ಪ್ರೈ. ಲಿ. ನಲ್ಲಿ ಉಜ್ವಲವಾದ ಮತ್ತು ಭರವಸೆಯ ಭವಿಷ್ಯವಿದೆ.
ಈ ಸಂವಹನದ ಮೂಲಕ, ನಿಮ್ಮೊಂದಿಗೆ ಸಂಪರ್ಕದ ನಿಯಮಿತ ಚಾನಲ್ ಅನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ತ್ರೈಮಾಸಿಕ ಆಧಾರದ ಮೇಲೆ ನಮ್ಮ ಸಂಸ್ಥೆಯೊಳಗಿನ ಇತ್ತೀಚಿನ ಬೆಳವಣಿಗೆಗಳ ಕುರಿತು ನಿಮಗೆ ಮಾಹಿತಿ ನೀಡುವುದು ನಮ್ಮ ಉದ್ದೇಶವಾಗಿದೆ. ಕಾರ್ಪೊರೇಟ್ ಕಮ್ಯುನಿಕೇಷನ್ಸ್ ತಂಡವು ತಮ್ಮ ಪ್ರಯಾಣವನ್ನು @ಚೈತನ್ಯವನ್ನು ನಮ್ಮೊಂದಿಗೆ ನಿರಂತರವಾಗಿ ಹಂಚಿಕೊಳ್ಳುವ ನಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ.
ನಿಮ್ಮ ತಂಡದ ಚಟುವಟಿಕೆಗಳ ಚಿತ್ರಗಳು, ಕ್ಷೇತ್ರ ಭೇಟಿಯ ಕುತೂಹಲಕಾರಿ ಕಥೆ, ಅಸಾಧಾರಣ ಗ್ರಾಹಕರೊಂದಿಗೆ ಮುಖಾಮುಖಿ ಅಥವಾ ನೀವು ಕಂಡ ವಿಚಾರ-ಪ್ರಚೋದಕ ಲೇಖನದಂತಹ ಆಸಕ್ತಿದಾಯಕ ಏನನ್ನಾದರೂ ಹಂಚಿಕೊಳ್ಳಲು ನೀವು ಹೊಂದಿದ್ದರೆ, ನಮ್ಮನ್ನು ತಲುಪಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. communication@chaitanyaindia.in ನಲ್ಲಿ ಭವಿಷ್ಯದಲ್ಲಿ ಹೆಚ್ಚಿನ ಕೊಡುಗೆಗಳನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ.