ಕನ್ನಡ ಪ್ರವಾಸ ಸಾಹಿತ್ಯ 19ನೆಯ ಶತಮಾನದಲ್ಲಿಯೇ ಆರಂಭವಾಯಿತು. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರು (ನೋಡಿ) 1890ರಲ್ಲಿ "ದಕ್ಷಿಣ ಭಾರತ ಯಾತ್ರೆ" ಎಂಬ ಪ್ರವಾಸ ಗ್ರಂಥವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರವಾಸ ಕಥನವಾಗಿದೆ.ನಂತರ 35 ವರ್ಷಗಳ ಕಾಲ ಯಾವ ಪ್ರವಾಸ ಗ್ರಂಥವೂ ಬರಲಿಲ್ಲ. 1920ರಲ್ಲಿ ವಿ.ಸೀ.ಯವರ ಪಂಪಾಯಾತ್ರೆ ಪ್ರಕಟವಾಯಿತು. ಈ ವಿಭಾಗದಲ್ಲಿ ಇದು ಆದ್ಯ ಹಾಗೂ ಮೇರುಕೃತಿ. ಲೇಖಕರು ತಮ್ಮ ಮಿತ್ರರೊಂದಿಗೆ ಹಂಪೆಗೆ ಹೋಗಿ, ಅಲ್ಲಿನ ಪಾಳು ಹಂಪೆಯನ್ನು ಕಂಡು ತಮಗಾದ ಅನುಭವವನ್ನು ಈ ಗ್ರಂಥದಲ್ಲಿ ಪಡಿಮೂಡಿಸಿದ್ದಾರೆ. ಇದೊಂದು ರಸಭರಿತ ಪ್ರಬಂಧ. ಇಲ್ಲಿ ಲೇಖಕರ ಅಗಾಧವಾದ ಲೋಕಾನುಭವ, ತತ್ತ್ವಚಿಂತನ ಮತ್ತು ಜೀವನ ದೃಷ್ಟಿಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಎರಡು ದಿನಗಳ ಅಲ್ಪಾವದಿಯಲ್ಲಿ ಇನ್ನೂರ ಐವತ್ತು ವರ್ಷಗಳ ಚರಿತ್ರೆಯನ್ನು ಸ್ವತಃ ಲೇಖಕರು ಇಲ್ಲಿ ಅನುಭವ ಮಾಡಿಸಿಕೊಡುತ್ತಾರೆ. ಸುಖ ದುಃಖಗಳೆರಡನ್ನೂ ಓದುಗರಿಗೆ ಉಣಬಡಿಸುತ್ತಾರೆ. ಕೊನೆಯಲ್ಲಿ ಬರುವ ಸ್ವಪ್ನ ಮಾಲಿಕೆಗಳಲ್ಲಿ ಗತಕಾಲದ ವೈಭವ, ವಿನಾಶಗಳು ಹೃದಯವಿದ್ರಾವಕವಾಗಿ ನಿರೂಪಿತವಾಗಿವೆ. ಕವಿಯ ಅನುಭವಕ್ಕೆ ಐತಿಹಾಸಿಕ ದೃಷ್ಟಿಯೂ ಉಜ್ವಲ ಅಭಿಮಾನವೂ ಬೆಸೆದುಕೊಂಡಿವೆ.

1943ರಲ್ಲಿ ಶಿವಮೊಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಿತ್ರರೊಂದಿಗೆ ಹೋಗಿದ್ದ ಮಾನ್ವಿ ನರಸಿಂಗರಾಯರು ತಮ್ಮ ಮತ್ತು ಮಿತ್ರರ ಅನುಭವಗಳನ್ನು ಕನ್ನಡ ಯಾತ್ರೆಯಲ್ಲಿ ತಂದುಕೊಟ್ಟಿದ್ದಾರೆ. ಸಿದ್ಧವನಹಳ್ಳಿ ಕೃಷ್ಣಶರ್ಮರ ವಾರ್ಧಾಯಾತ್ರೆಯಲ್ಲಿ ಕಥನ ಕೌಶಲ, ವರ್ಣನೆ, ವಿನೋದ ವಿಲಾಸ ಮೊದಲಾದ ಅನೇಕ ಗುಣಗಳು ಕೃಷ್ಣಶರ್ಮರ ಮನಃಶಕ್ತಿಗಳ ಪರಿಪಾಕದೊಡನೆ ಇದರಲ್ಲಿ ಸ್ವಚ್ಫಂದವಾಗಿ ಬಂದಿವೆ ಎಂದು ಬೇಂದ್ರೆಯವರು ಅಬಿಪ್ರಾಯಪಟ್ಟಿದ್ದಾರೆ. ಇವರ ಭೂದಾನಯಜ್ಞ ಯಾತ್ರೆ ಉತ್ತರ ಭಾರತ ಪ್ರವಾಸದ ವಿವರವನ್ನೊಳಗೊಂಡ ಮತ್ತೊಂದು ಕೃತಿ. ಒಕ್ಕಲುತನದ ಪ್ರವಾಸ ಗ್ರಂಥಗಳಲ್ಲಿ ವೀ.ಚ.ಹಿತ್ತಲಮನಿಯವರ ಶರಾವತಿಯಿಂದ ಸಾಬರಮತಿ, ವಿ.ಪುರಂದರ ರೈರವರ ನಮ್ಮ ಪ್ರವಾಸಾನುಭವ ಗಣನೀಯ ಕೃತಿಗಳು.

ಜಿ.ಪಿ.ರಾಜರತ್ನಂ ಅವರ ಚೀನಾದೇಶದ ಬೌದ್ಧ ಯಾತ್ರಿಕರು, ಪಾಹಿಯಾನನ ಕ್ಷೇತ್ರಯಾತ್ರೆ ಎಂಬುವು ವಿದೇಶೀ ಯಾತ್ರಿಕರ ಅನುಭವಗಳನ್ನು ಕುರಿತ ಅನುವಾದ ಗ್ರಂಥಗಳು. ಪ್ರಾಚೀನ ಕಾಲದಿಂದಲೂ ಭಾರತಕ್ಕೆ ಬಂದು ಹೋದ ನೂರಾರು ಪ್ರವಾಸಿಗಳ ಪ್ರವಾಸ ಕಥನವನ್ನು ಸಮಗ್ರವಾಗಿ ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಎಚ್.ಎಲ್.ನಾಗೇಗೌಡರಿಗೆ (ನೋಡಿ) ಸಲ್ಲುತ್ತದೆ. ಮಾರ್ಕೋಪೋಲೋನ ಪ್ರವಾಸ ಕಥನವನ್ನು ಮೊದಲು ಕನ್ನಡಕ್ಕೆ ತಂದು, ಈ ಅನುವಾದದಿಂದ ಪ್ರೋತ್ಸಾಹಿತರಾಗಿ, ದಶಕಗಳಷ್ಟು ಕಾಲ ಇಡೀ ಭಾರತದಲ್ಲಿ ಸಂಚರಿಸಿ ಹಲವು ಪ್ರಾಚ್ಯ ಕೋಶಾಗಾರಗಳಲ್ಲೂ ಗ್ರಂಥ ಹಾಗೂ ವಸ್ತು ಸಂಗ್ರಹಾಲಯಗಳಲ್ಲೂ ಹುದುಗಿದ್ದ ವರದಿಗಳನ್ನು ಹೆಕ್ಕಿ ತಂದು ಅವುಗಳ ಸಾರವನ್ನು ಭಟ್ಟಿ ಇಳಿಸಿ ಸು.200 ಜನ ವಿದೇಶೀಪ್ರವಾಸಿಗರ ಪ್ರವಾಸ ಕಥನವನ್ನು ಕನ್ನಡದಲ್ಲಿ "ಪ್ರವಾಸಿ ಕಂಡ ಇಂಡಿಯಾ" ಎಂಬ ಹೆಸರಿನಲ್ಲಿ ಐದು ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಈ ಗ್ರಂಥಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕಾಣಿಕೆ ಕೊಟ್ಟು ಕನ್ನಡಿಗರೆಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.