ಕೆರೆಗೆ ಹಾರ ( ಕೆರೆಗೆ ಅಹುತಿ )

                                       ಕೆರೆಗೆ ಹಾರ  ( ಕೆರೆಗೆ ಅಹುತಿ )

       ದೊಡ್ಡ ಮನೆ ಯಜಮಾನರು ಊರಿಗೆಂದು ಒಂದು ಕೆರೆ ಕಟ್ಟಿರಲು ಕೆರೆಗೆ ನೀರು ಬಾರದಿರಲು ಶಾಸ್ತ್ರಿಗಳಲಿ ಶಾಸ್ತ್ರವನು ಕೇಳಲು ನಮ್ಮ ದೊಡ್ಡಮನೆಯಿಂದ ಒಂದು ಆಹುತಿ ಹೆಣ್ಣನು ಆಹುತಿ ಕೊಡಬೇಕು ಜೋತಿಷಿಗಳು ಹೇಳುತ್ತ್ತಾರೆ. ಮನೆಯೊಡತಿ ಹೇಳುತ್ತಾಳೆ ಯಾರನ್ನ ಆಹುತಿ ಕೊಡುವುದೆಂದು ಯೋಚಿಸುತಿರೆ, ಹಿರಿಸೊಸೆಯ ಕೊಟ್ಟರೆ ಹಿರಿತನಕೆ ಯಾರಿಲ್ಲ ಕಿರಿ ಸೊಸೆಯನ್ನಾದರು ಕೊಡಬೇಕು ಹೇಗೆಂದು ? ಎಲ್ಲರೂ ನೋವಿನಿಂದಯೋಚಿಸುತ್ತಿರುವಲ್ಲಿ ಕಿರಿಸೊಸೆಯು ಸೂಕ್ಷ್ಮವ ಅರಿತು ಕಿರುಸೊಸೆಯು ಆಸೆಯಿಂದ ತನ್ನ ಗಂಡ ಸೇನೆಯಿಂದ ಬರುವುದ ಕಾತರದಿಂದ ಕಾಯುತ್ತಿರುತ್ತಾಳೆ. ಆದರೆ ಸೇನೆಯಿಂದ ಗಂಡ ಬಂದರೆ ತನಗೆ ಈ ಅವಕಾಶ ದೊರೆಯದೆಂದು ತೀರ್ಮಾನಿಸಿ ತಾನೇ ಮುಂದಾಗಿ  ಆ ಕೆರೆಗೆ ಹಾರವಾಗುತ್ತಾಳೆ. ಗಂಡ ಬಂದೊಡನೆ ಅವನಾಸೆಗಳು ಏನೇನು ಹೇಗಿರಿತ್ತವೆ ಹೆಂಡತಿಯನ್ನು ಎಲ್ಲರಲ್ಲಿ ಹೇಗೆ ಕೇಳುತ್ತಾನೆ. ಉತ್ತರ ಸಿಗದೇ ಹುಡುಕುತ್ತಿರುವ ಸನ್ನಿವೇಶದಿಂದ ಕವನವದು ಮುಂದು.

            ಕನಸು

 

ನನ್ನ ನಲ್ಲೆಗೆ ಬಿಲ್ಲಾದ ಬಾನನ್ನೆ ಚಪ್ಪರವ ಮಾಡಿ

ಭೂಮಿಯನ್ನೆ ಮಲಗುವ ಸುಂದರ ಮಂಚವಮಾಡಿ 

ಬಾಂದಣದಲ್ಲಿನ ಸೂರ್ಯ ಚಂದ್ರರ ದೀಪವಾಗಿಸಿ

ಬಾನಲಿ ಹೊಳೆವ ನಕ್ಷತ್ರಗಳಿಂದಲೇ ತೋರಣವ ಕಟ್ಟಿ

ರಂಗು ರಂಗಾದ ಹೂವಿಂದ ಬಣ್ಣದ ಹಾಸಿಗೆ ಹಾಸಿ

ವಜ್ರ ದೋಲೆಯಲಿ ನಲ್ಲೆಯ ಕಿವಿಯ ಸಿಂಗರಿಸಿ 

ಮಧು ಮಂಚಕೆ ಪ್ರೀತಿಯಲಿ ನನ್ನವಳ ಆಹ್ವಾನಿಸಿ

ಜಗ ಜಗಿಸಿವ ಬೆಳಕಿನಲಿ ಅವಳ ಮೊಗವ ಕಂಡಿಲ್ಲಿ

ನಾಚುವ ನೋಟದ ಮೊಗದಲಿ ಮನಮುದಗೊಂಡಿಲ್ಲಿ

ಆಕೆಯ ಹವಳದ ತುಟಿಯಿಂದ ಮಧುವ ಹೀರುತಲಿ

ಮನ್ಮಥನ ಮೀರುವಂತೆ ರತಿಲೀಲೆಯ ಆಡಲಿಲ್ಲಿ

ರಜೆಯೊಂದಿಗೆ ಬಂದಿರುವೆ ಬಾ ಎನ್ನರಾಣಿ ಎಂದುಹುಡುಕುತಲಿ

ಸಡಗರ ಸದ್ದು ಗದ್ದಲವಿಲ್ಲದಲೆ ಮನೆಯಲ್ಲಾ ನಿಶಬ್ದದಿರಲಿಲ್ಲಿ

ಮೌನಾವರಿಸಿತ್ತು ಸ್ಮಶಾನದಂತೆ ಕಂಡು ಕೇಳ್ಗೆ ಎಲ್ಲರಲಿ ಮೌನವಿಲ್ಲಿ .

                 

                    ಆಸೆ
 

 

ಸಿಪಾಯಿ ಬತ್ತಲೆ ಕುದುರೆಯೇರಿ ಹೊರಟ ಹುಡುಕುತಲಿ ತನ್ನ ನಲ್ಲೆಯ !

ಅಪ್ಪನೇ, ಹೆತ್ತವ್ವ, ಅತ್ತವ್ವ, ಅತ್ತಿಗೆ, ನೀವು ಕಂಡೀರಾ ನನ್ನನಲ್ಲೆಯಾ?

ಅಕ್ಕವ್ವ, ತಂಗವ್ವ, ಅಣ್ಣ, ತಮ್ಮಂದಿರೆ, ನೀವು ಕಂಡೀರಾ ನನ್ನನಲ್ಲೆಯಾ?

ಭಾವಿ ಕಟ್ಟೆ, ಹಗ್ಗ, ರಾಟೆ, ಬಿಂದಿಗೆಗಳೇ,  ನೀವು ಕಂಡೀರಾ ನನ್ನನಲ್ಲೆಯಾ?

ಹಾಲುಕರೆವ ಹಸುಗಳೇ, ನಂದಿನಿ, ಪುಣ್ಯಕೋಟಿ, ನೀವು ಕಂಡೀರಾ ನನ್ನನಲ್ಲೆಯಾ?

ಸುತ್ತಲು ನಿಂದು ತಂಪೆರೆವ ಗಿಡಮರಗಳೇ , ನೀವು ಕಂಡೀರಾ ನನ್ನನಲ್ಲೆಯಾ?

ಶುಭೋದಯದಿ ಎಲ್ಲೆಡೆ ಬೆಳೆಗುವ ರವಿಯೇ,  ನೀವು ಕಂಡೀರಾ ನನ್ನನಲ್ಲೆಯಾ?

ಗೊಲ್ಲತಿ, ಗೌಡತಿ, ಹೂವಾಡಗಿತ್ತಿಯರೇ,  ನೀವು ಕಂಡೀರಾ ನನ್ನನಲ್ಲೆಯಾ?

ಪತಿಯ ಪೂಜೆಗೆಂದು ಬಂದ ನನ್ನವಳಾ ಶಿವನೇ,  ನೀವು ಕಂಡೀರಾ ನನ್ನನಲ್ಲೆಯಾ?

                     ತೀರ್ಮಾನ

  

ಓ,... ಮಾವ ಓ,... ಮಾವ ಮಲ್ಲಿ ಅಕ್ಕಾ ಮಲ್ಲಿ

ನಮ್ಮೂರನಾ ಹೊಸಕೆರೆಗೆ ಆಹುತಿ ಎಂದಳಲ್ಲಿ !

ಕೆರೆಗೆ ಹಾರವಾದಳೇ ನನ್ನ ಮಲ್ಲಿ ಓ,...ಮಲ್ಲಿ  ?

ಜೋತೆಗೆ ನಾ ಬರುವೇ ನಿಲ್ಲೆ ಮಲ್ಲಿ ಎಂದು ಮಲ್ಲಿ,....

ಎಂದಾ ಹಾರಿದ ಹೊಸಕೆರೆಗೆ ಸಗ್ಗವೆಂಬ ಕೈಲಾಸದಲಿ

ಅವಳ ಕಾಣೇ ಈಶನಾ ಸೇವೆ ಎಂದರೆ ಇದಲ್ಲದೆ ಮತ್ತೆನೆಂದು

ಜಗಕೆ ಸಾರಿದರು ಈ ಪ್ರೀತಿ ಪ್ರೇಮದ ನವ ದಂಪತಿಗಳು .  

Comments