ನನ್ನ ಪರಿಚಯ  :
 

ಕೃಷ್ಣಮೂರ್ತಿ ನಾಯಕ :

 

ನನ್ನ ಬದುಕಿನ ನೆಲೆಗೆ
ಭಾವನೆಗಳೇ ಬುನಾದಿ
ಕನಸುಗಳೇ ಕಂಬಗಳು
ಛಲವೇನೆ ಛಾವಣಿ   
ಪ್ರೀತಿನೇ ಬೆಳಕು

       ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ . ಬೆಳೆದದ್ದು ಸಿರಸಿ , ಸಿದ್ದಾಪುರ ಮತ್ತು ಅಂಕೋಲಾದಲ್ಲಿ.  ವಿದ್ಯಾಭ್ಯಾಸ  ಬಿಇ (ಕಂಪ್ಯೂಟರ್ ಸೈನ್ಸ್ )     ಪದವಿ ದಾವಣಗೆರೆಯ ಯುನಿವೆರ್ಸಿಟಿ  ಬಿ ಡಿ ಟಿ ಕಾಲೇಜಿನಲ್ಲಿ . silicon cityಯಲ್ಲಿ ಅದೆಂತದೋ software ಉದ್ಯೋಗ :-) . ಕವನ ಮತ್ತು ಲೇಖನ ಬರೆಯುವುದು, ಮಿಮಿಕ್ರಿ , ಹಾಡುವುದು ಹಾಗು ಹರಟುವುದು ನನ್ನ ಇಷ್ಟದ ಹವ್ಯಾಸಗಳು . ನನಗೆ ನನ್ನದೇ ಸಿದ್ದಾಂತ ಮತ್ತು ನಾನೇ ಆದರ್ಶ. ಶಿಸ್ತು ಮತ್ತು ಶುಚಿತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ. ಹಠ ಮತ್ತು ಕೋಪ ಸ್ವಲ್ಪ ಜಾಸ್ತಿ. ಪ್ರೀತಿನೇ ಬದುಕು ಬೆಳಕು ಎಲ್ಲಾ . ಸ್ನೇಹದಲ್ಲಿ ತುಂಬಾನೇ ಸಲುಗೆ. ನಗಬೇಕು ನಗಿಸಬೇಕು ಅನ್ನೋದೇ ನನ್ನ policy. ಜಗತ್ತನ್ನೇ ಗೆಲ್ಲಬೇಕು ಅನ್ನೋ ಹುಚ್ಚು ಮಹತ್ವಾಕಾಂಕ್ಷೆ. ಗೆದ್ದೇ ಗೆಲ್ತೇನೆ ಅನ್ನೋ ಎಕ್ಸ್ಟ್ರಾ ನಂಬಿಕೆ ಬೇರೆ. ಸದ್ಯದಲ್ಲೇ ಮತ್ತಿಷ್ಟು ವಿವರವಾಗಿ ಬರೀತೀನಿ. ತಾಳ್ಮೆ ಇರಲಿ.

ನಿಮ್ಮ ಪ್ರೀತಿಯ
ಕೃಷ್ಣ

 

                                                      ಮುಖಪುಟ