ಕಂಪ್ಯೂಟರಿನಲ್ಲಿ ಕನ್ನಡವನ್ನು ಉಳಿಸಿ


ಮೈಕ್ರೋಸಾಫ್ಟ್ ಸಂಸ್ಥೆಯ ಜತೆಗಿನ ತಿಳಿವಳಿಕೆ ಪತ್ರಕ್ಕೆ ವಿರೋಧ 
[English] [Kannada].

Font Help

ಕರ್ನಾಟಕ ಸರಕಾರಕ್ಕೊಂದು ಪತ್ರ

ಪಿ ಡಿ ಎಫ್ ಆವೃತ್ತಿ

ಕನ್ನಡ | English 

 ಮೇಲಿನ ಪತ್ರಕ್ಕೆ ನೀವೂ ಸಹಿ ಹಾಕಿ ಈ ವಿಳಾಸಗಳಿಗೆ ಫ್ಯಾಕ್ಸ್ ಅಥವ ಅಂಚೆ ಮೂಲಕ ಕಳುಹಿಸಬಹುದು.  

  ಬನ್ನಿ, ತಂತ್ರಾಂಶದಲ್ಲಿರುವ ಕನ್ನಡ ಕುರಿತ ತಪ್ಪುಗಳನ್ನು ಸರಿಪಡಿಸುವತ್ತ ಓಗೊಡದೇ ಸರಿಯಾದ ಕನ್ನಡದ ಬೆಂಬಲವೂ ಇಲ್ಲದ, ತಪ್ಪು ತಪ್ಪು ಕನ್ನಡವಿರುವ ತಂತ್ರಾಂಶವನ್ನೇ ಸರಕಾರಕ್ಕೆ ಮಾರಲು ಹೊರಟಿರುವ ಮೈಕ್ರೊಸಾಫ್ಟಿನ ಧೋರಣೆಯನ್ನೂ, ಅದನ್ನು ಕೋಟ್ಯಂತರ ಜನರ ತೆರಿಗೆ ಹಣವನ್ನು ತೆತ್ತು ಕೊಳ್ಳುತ್ತಿರುವ ಸರಕಾರದ ಧೋರಣೆಯನ್ನೂ ಖಂಡಿಸೋಣ. 

ಕರ್ನಾಟಕ ಸರ್ಕಾರ ಇತ್ತೀಚೆಗೆ ಮೈಕ್ರೋಸಾಫ್ಟ್ ನೊಂದಿಗೆ ಸಹಿ ಹಾಕಿದ ತಿಳಿವಳಿಕೆ ಪತ್ರಕ್ಕೆ ವಿರೋಧ ವ್ಯಕ್ತಪಡಿಸೋಣ. ವಿರೋಧ ವ್ಯಕ್ತಪಡಿಸಲಿಕ್ಕೆ ಬೇಕಾದ ಎಲ್ಲ ಮಾಹಿತಿಯನ್ನ, ಸರಕಾರಕ್ಕೆ ನಿಮ್ಮ ಆಕ್ಷೇಪಣೆಯನ್ನು ಕಳುಹಿಸಲಿಕ್ಕಾಗಿ ಬೇಕಾದ ಪತ್ರದ ಪ್ರತಿಯನ್ನ ಈ ಗೂಗಲ್ ಪುಟದಲ್ಲಿ ಪಡೆಯಿರಿ:   

ಕನ್ನಡದಲ್ಲಿ

 English

ಸೂಚನೆ :-   ಸರಕಾರಿ ಕಚೇರಿಗಳು ಇ-ಮೇಲ್ ಗಳಿಗೆ ಸ್ಪಂದಿಸುವುದಿಲ್ಲವಾದುದರಿಂದ ಸಾಮಾನ್ಯ ಅಂಚೆ ಅಥವಾ ಫ್ಯಾಕ್ಸ್ ಜೊತೆಗೆ ದಾಖಲೆಗಾಗಿ ಒಂದು ಇ-ಮೇಲ್ ಕೂಡಾ ಕಳುಹಿಸುವುದು ಉತ್ತಮ. ಮುಖ್ಯಮಂತ್ರಿಗಳನ್ನು ಸಂಭೋದಿಸಿ ಬರೆಯಲಾಗಿರುವ ಈ ಮನವಿಯ ಒಕ್ಕಣೆಯನ್ನು ಕಳುಹಿಸುವವರು ತಮಗೆ ಸರಿ ಎನ್ನಿಸುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಸ್ವತಂತ್ರರು. 

ಹೀಗೆ ಮನವಿಯನ್ನು ಕಳುಹಿಸಿದವರು ಈ ಕುರಿತಂತೆ savekannada@gmail.com ಇ-ಮೇಲ್ ವಿಳಾಸಕ್ಕೆ ಅದನ್ನು ತಪ್ಪದೆ ತಿಳಿಸಿ. ಒಟ್ಟು ಪ್ರತಿಭಟನಾ ಪತ್ರಗಳ ಸಂಖ್ಯೆಯನ್ನು ಅರಿಯಲು ಸುಲಭವಾಗುತ್ತದೆ.

ಹೆಚ್ಚಿನ ಮಾಹಿತಿ : -  ಕನ್ನಡವನ್ನು ಸದಾ ಕಡೆಗಣಿಸುವ ಮೈಕ್ರೋಸಾಫ್ಟ್  ಧೋರಣೆಯನ್ನು ವಿರೋಧಿಸಲು ಅಂತರ್ಜಾಲದಲ್ಲಿ ನಡೆದ ಚರ್ಚೆಗಳು ಮತ್ತು ಇತರೆ ಲೇಖನಗಳ ಲಿಂಕುಗಳನ್ನು ಕೆಳಗೆ ನೀಡಲಾಗಿದೆ: 

ಮೈಕ್ರೋಸಾಫ್ಟಿನ  ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಇರುವ ತೊಂದರೆಗಳು ಏನೇನು?

ಕಣ್ಣರಳಿಸಿ ನೋಡು ಕನ್ನಡಿಗ ಹೊರಗೇನು ನಡೆದಿದೆ:

ಕಹಿ ಸತ್ಯಗಳು ಇತಿಹಾಸದ ಪುಟಗಳಿಂದ : 

 ಶೀತಲ ಸಮರದ ಸಮಯದಲ್ಲಿ ಅಮೇರಿಕಾ ರಷ್ಯಾಗೆ ಮಾರಿದ ಸಾಫ್ಟ್ ವೇರ್ ಉಪಯೊಗದಿಂದಾಗಿ  ಆದ ಹಾನಿಯನ್ನ ಕೆಳಕೊಟ್ಟಿರುವ ಕೆಲವು ಕೊಂಡಿಗಳು ವಿವರಿಸುತ್ತವೆ. ಸರಕಾರಕ್ಕೆ ಸಂಬಂದ ಪಟ್ಟ ದಾಖಲೆಗಳನ್ನ ಬಹುರಾಷ್ಟ್ರೀಯ ಕಂಪನಿ ನೀಡುವ  ಸಾಫ್ಟ್ ವೇರ್ ನಲ್ಲಿ ಕೂಡಿಡುವುದು ಉಚಿತವಲ್ಲ ಎನ್ನಲಿಕ್ಕೆ ಇಷ್ಟು ಸಾಲದೇ? 

 
ಹೊಸ ಸುದ್ದಿ :

ಈ ಪುಟವನ್ನು ಬದಲಾಯಿಸುವಲ್ಲಿ ಪಾಲ್ಗೊಳ್ಳಲು, ತಪ್ಪುಗಳನ್ನು 
ತಿದ್ದುವಲ್ಲಿ ಸಹಾಯ ಮಾಡಲು, ಹಾಗೂ ಪ್ರತಿಭಟನೆಯ ಹಲವು 
ಕಾರ್ಯಗಳಲ್ಲಿ ಪಾಲ್ಗೊಳ್ಳಲು ಉತ್ಸಾಹವಿರುವವರು ದಯವಿಟ್ಟು ಒಂದು 
ಇ-ಮೇಯ್ಲ್ ಕಳುಹಿಸಿ.
 
  

ಸುದ್ದಿಯಲ್ಲಿ... 

ಪ್ರತಿಕ್ರಿಯೆ