ಮನೆ..

  Sanjeev Wadeyar (ಸಂಜೀವ ಓಡೇಯರ್).

 

 

ನಾನು ಸಂಜೀವ ಇದು ನನ್ನ ಪರಿಚಯ . . 

                                                                ಮನಸ್ಸಿಗೆ ಹಿಡಿಸಿದ್ದು .

ಸುರಿಯಲಿ ತಂಪೆರೆಯಲಿ
ಜೀವನ ಪ್ರೀತಿಯ ಮಳೆ ;
ಹರಿಯಲಿ ಭೋರ್ಗರೆಯಲಿ
ಬತ್ತಿದೆದೆಗಳಲಿ ಹೊಳೆ ;
ಕೊಚ್ಚಿ ಹೋಗಲಿ ಸ್ವಾರ್ಥ , ದುರಾಸೆ ;
ಸ್ವಚ್ಛವಾಗಲೀ ಇಳೆ.
 
ಚಿಮ್ಮಲಿ ಹಚ್ಚನೆ ಹಸಿರು,
ನಿರ್ಮಲವಾಗಲಿ ಉಸಿರು,
ಮತ್ತೆ ಆಗಲೀ ವಸುಂಧರೆ
ಸಕಲ ಜೀವಿಗಳಿಗಾಸರೆ.

ಧುಮ್ಮಿಕ್ಕಿ ಧುಮುಕಿ ಜಲಪಾತ
ನೀಡಿ ಜಡತೆಗಾಘಾತ
ಹೊಮ್ಮಿಸಲಿ ಹೊಸ ಚೇತನ,
ಕ್ರಿಯಾಶೀಲತೆಗೆ ಇಂಧನ.
 
ತೊನೆಯಲಿ ತೆನೆ ಹೊಂದೇರು,
ಅಡಗಲಿ ಹಸಿವಿನ ಚೀರು,
ಅಡಗಲಿ ಹಸಿವಿನ ಚೀರು,
ಅಡಗಲಿ ಹಸಿವಿನ ಚೀರು,
 
                 - ಬಿ.ಆರ್.ಲಕ್ಷ್ಮಣರಾವ್. 
 
ċ
Sanjeev Wadeyar,
May 22, 2010, 4:20 AM