Kannada literature- Kathe Kadambari...
ನನ್ನ ಕನ್ನಡ ಕಥೆ ಕಾದಂಬರಿಗಳು ಮತ್ತು ಇತರೆ ಪುಸ್ತಕಗಳು

ಹಿಂದೊಂದು ಕಾಲವಿತ್ತು;ಸಾಹಿತ್ಯವೆಂಬುದು ಕೇವಲ ವಿದ್ವಾಂಸರ ಸ್ವೊತ್ತಾಗಿದ್ದ ಕಾಲ. ಈಗ ಮತ್ತದೇ ಕಾಲ ಬರಲಿದೆಯೇ? ಅ.ನ.ಕೃ, ತ.ರಾ.ಸು ಮುಂತಾದ ಜನಪ್ರಿಯ ಕಥೆ ಕಾದಂಬರಿಕಾರರ ಕಾಲದಲ್ಲಿ ಕೆಳವರ್ಗದ ಕೂಲಿ-ಕಾರ್ಮಿಕರಲ್ಲೂ ಓದುಗರು ಬಹುಸಂಖ್ಯೆಯಲ್ಲಿದ್ದರು. ಈಗ ಅವರೆಲ್ಲ ಟಿ.ವಿ., ಸಿನಿಮಾಗಳಲ್ಲಿ ತಲ್ಲೀನರು.  ಅವುಗಳನ್ನು ನೋಡುವುದು ಚರ್ಚೆ ಮಾಡುವು ದರಲ್ಲಿಯೆ ಆಸಕ್ತರಲ್ಲವೇ?  ಇದೀಗ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಮಾತ್ರ ಸಾಹಿತ್ಯ ಸಭೆಗಳು ಮತ್ತು ಚರ್ಚೆಗಳು.  ಅಂದರೆ ಮಧ್ಯಮ ಮೇಲ್ವರ್ಗ ಮತ್ತು ಉನ್ನತ ವರ್ಗದವರಲ್ಲಷ್ಟೇ ಸಾಹಿತ್ಯಾಸಕ್ತರು ಎನ್ನುವಂತಾಗಿದೆಯಲ್ಲ....

ಇನ್ನೂ ಹೇಳ ಬೇಕೆಂದರೆ, ಇಂದಿನ ದಿನಗಳಲ್ಲಿ ಲೇಖಕನೊಬ್ಬ ಕಥೆ ಕಾದಂಬರಿ ಬರೆದು ಸ್ವತಃ ಪ್ರಕಟಿಸುವ ಎದೆಗಾರಿಕೆ ತೋರಲಾರನಲ್ಲ.  ಈಗಾಗಲೇ, ಸುಪ್ರಸಿದ್ಧರಾದವರ ಕೃತಿಗಳಿಗೆ ಒಂದಿಷ್ಟು ಬೇಡಿಕೆ ಇದೆ. ಅವರದೂ ಕುಸಿದಿದೆ ಎಂಬ ಮಾತೂ ಕೇಳಿ ಬರುತ್ತಿದೆ.  ಈಗೇನಿದ್ದರೂ ವಿವಾದಾಸ್ವದ ಕೃತಿಗಳನ್ನು ಬರೆದು (ಕು)ಪ್ರಸಿದ್ಧರಾಗುವರರೂ ಹುಟ್ಟಿಕೊಂಡಿದ್ದಾರಲ್ಲ! ಅವುಗಳ ಬಗ್ಗೆ ಚರ್ಚೆಯ ಭರಾಟೆಯೆ.  ಅವುಗಳಿಗೆ ಬೇಡಿಕೆಯೆ....

ಆದರೆ, ಸಭಿರುಚಿಯ ಸಹೃದಯರು ಎಲ್ಲಕಾಲಕ್ಕೂ ಇರುತ್ತಾರೆ;  ಒಳ್ಳೆಯ ಓದು ಮತ್ತು ಉನ್ನತ ವಿದ್ಯೆಯ ಬೆಲೆ ಅರಿತವರೇ ಅವರು.  ಅವರ ಸಂಖ್ಯ ಒಟ್ಟು ಜನಸಂಖ್ಯೆಯ ಕಾಲು ಭಾಗ ಮಾತ್ರ ಎಂಬುದನ್ನುತಿಳಿದವರು ವಿರಳ. ಅಥವಾ ತಿಳಿದೂ ತಿಳಯದಂತಿರುವವರಿಗೇನೂ ಕಡಿಮೆಯಿಲ್ಲ....

ಓದು, ಚಿಂತನೆಯೆ  ಒಬ್ಬನನ್ನು ಮನುಷ್ಯನನ್ನಾಗಿ ಮಾಡಿ  ನವ ಜೀವನೋತ್ಸಾಹ  ತುಂಬಿದರೆ,  ಇಂದಿನ  ಟಿ.ವಿ, ಸಿನಿಮಾ, ಇಂಟರ್ ನೆಟ್ ನಲ್ಲಿ ನೋಡಬಾರದಂಥ ಅನೇಕಾನೇಕ ದೃಶ್ಯ ಗಳು  ಆಲೋಚನೆಯ ದಿಕ್ಕನ್ನೇ ಬದಲಿಸಿ ಬಿಡುತ್ತವೆ,  ನಮ್ಮನ್ನು ನಾವೇ ಕಳೆದುಕೊಳ್ಳುವಂತೆ ಮಾಡುತ್ತವೆ ಎಂಬುದು ನಮ್ಮ ಜನಸಾಮಾನ್ಯರಿಗೆ ಅರ್ಥವಾಗುವುದು ಯಾವಾಗ...? 

ಇಂದಿನ ಟಿವಿ ಚಾನೆಲ್ಸ್ , ಸಿನಿಮಾ, ಇಂಟರ್ ನೆಟ್  ಇವುಗಳ ದುರುಪಯೋಗಗಳಿಂದಾಗಿ, ಅವು ಕೊಡುವ ಕೃತಕ- ಭ್ರಾಮಕ ಪ್ರಪಂಚದ ಖುಷಿಗಿಂತಲೂ, ಜನ ಜೀವನಕ್ಕೆ ಹತ್ತಿರವಾದ ಉತ್ತಮ ಕಥಾ ಸಾಹಿತ್ಯ ಕೃತಿಗಳು,  ನೀಡುವ ಸಂತೋಷ ಬೇರೆಯೇ ಎಂಬುದನ್ನು ಓದಿ ಅನುಭವಿಸಲೂ ಸಹೃದಯತೆ ಬೇಕಾಗುತ್ತದೆ ಎಂಬುದೂ ನಿಜವೇ.   ಉತ್ತಮ ಸಾಹಿತ್ಯ ಕೃತಿಗಳು  ಕಟ್ಟಿಕೊಡುವ ಜೀವನ ಮೌಲ್ಯಗಳು ಇಡೀ ವ್ಯಕ್ತಿತ್ವವನ್ನೇ ರೂಪಿಸುತ್ತವೆ. ಭವಿಷ್ಯ ರೂಪಿಸುತ್ತವೆ;  ಹೊಸ ಹೊಳವಿನಲ್ಲಿ ಹೊಸ ಚೈತನ್ಯವನ್ನೇ ಬದುಕಿಗೆ ನೀಡುತ್ತವೆ; ಅಂತಹ ಶಕ್ತಿ ಸಾಹಿತ್ಯ ಕಲೆಗಳಿಗಿದೆ ಎಂಬುದನ್ನು ಅನಭವಿಸಿ ಸವಿದವರಿಗೇ ಗೊತ್ತು...

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ "ನಹಿ ಜ್ಞಾನೇನ ಸದೃಶಂ" ಜ್ಞಾನಕ್ಕಿಂತ ಮಿಗಿಲಾದದ್ದು ಬೇರಾವುದೂ ಇಲ್ಲ. ಎಂಥ ದುರ್ಬರ ಪ್ರಸಂಗಗಳಲ್ಲೂ ಬದುಕನ್ನು ಎದುರಿಸುವ ಶಕ್ತಿ ಬರುವುದು ಜ್ಞಾನದ ಅರಿವಿನಿಂದಲೇ, ಹೊರತು ಹಣದ ಬಲದಿಂದ ಅಲ್ಲವೇ ಅಲ್ಲ...  ಹಣಗಳಿಸಲೇ ಬೇಕು. ನಿಜ. ಈ ವ್ಯವಹಾರಿಕ ಪ್ರಧಾನ ಪ್ರಪಂಚದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಹೊಂದಲಿಕ್ಕಾಗಿಯೆ  ಹಣದ ಪ್ರಾಮುಖ್ಯತೆ  ಇದೆ. ಕೆಲವೊಮ್ಮೆ ಒಳ್ಳೆಯ ಸೇವಾ ಕಾರ್ಯಗಳಿಗೆ ಅಧಿಕಾರವೂ ಇರಬೇಕೆನಿಸುತ್ತದೆ. ಆದರೆ, ಹಣ ಮತ್ತು ಅಧಿಕಾರಗಳು ಎಂದಿಗೂ ಸರ್ವಸ್ವವೂ ಅಲ್ಲ;ಶಾಶ್ವತವಲ್ಲ.   ಅವು ಎಂದಿಗೂ ದುರ್ವಿನಿಯೋಗವಾಗಬಾರದಷ್ಟೇ...

ನನ್ನ ಪ್ರಕಟಿತ ಕಥಾ ಸಂಕಲನ,ಕವನ ಸಂಕಲನ ಮತ್ತು ಕಾದಂಬರಿಗಳ ಮುಖಪುಟಗಳು ಹೀಗಿದೆ:-

ನನ್ನ ಇತರ ಕೃತಿಗಳಿಗೆ ಇಲ್ಲಿ ಓದಿ>>>>

                                    ಪ್ರಕಟಿತ ಕಥಾಸಂಕಲನಗಳು, ಕವನ ಸಂಗ್ರಹಗಳು, ಕಾದಂಬರಿಗಳು, ಪೌರಾಣಿಕ ಕೃತಿಗಳು ಮತ್ತು ಕಂಪ್ಯೂಟರ‍್ ಪುಸ್ತಕ ಗಳು

ನನ್ನ ಕೈ ಬರಹದ ಮಾಸ ಪತ್ರಿಕೆ- " ಮಧುರ ವಾಣಿ" (1990-1999)

ಟೆಲಿಕಾಂ ಇಲಾಖೆಯಲ್ಲಿ- ಟೆಲಿಕಾಂ ನೌಕರರಿಗೆಂದೇ ನನ್ನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಕೈ ಬರಹದ ಮಾಸ ಪತ್ರಿಕೆ -
"ಮಧುರ ವಾಣಿ' ಎರಡೂವರೆ ವರ್ಷಗಳ ಕಾಲ  ಇಲಾಖೆಯಲ್ಲಿ ಪ್ರಕಟವಾಗಿ ಮೆಚ್ಚುಗೆ ಪಡೆದಿತ್ತು.  
'ಮಧುರವಾಣಿ' ಪತ್ರಿಕೆಯ ಎರಡು ಪ್ರತಿಗಳು:-


ನನ್ನದೊಂದು ಕಥಾ ಸಂಕಲನ:-ಆವರ್ತಕಾಲ-14 ಕಥೆಗಳ ಸಂಕಲನ (ಅಚ್ಚಿನಲ್ಲಿದೆ)

"ಆವರ್ತಕಾಲ" ಇದು ಉತ್ಥಾನ ೧೯೯೧ ಕಥಾಸ್ಪರ್ಧೆಯಲ್ಲಿ  ಬಹುಮಾನಿತ ಸಣ್ಣಕಥೆ

ಸೇರಿದಂತೆ ಇದರಲ್ಲಿರುವ 14 ಕಥೆಗಳೂ ಈಗಾಗಲೇ ಉತ್ಥಾನ, ಮಯೂರ, ತರಂಗ, ಕನ್ನಡ ಪ್ರಭ,ಮಂಗಳ,ವಾರಪತ್ರಿಕೆ ಮುಂತಾದ ಸುಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಿತವಾಗಿ  ಓದುಗರಿಂದ ಮೆಚ್ಚುಗೆ ಪಡೆದಿವೆ.  

ಆಲೈನ್ನಲ್ಲಿ ಕಥಾಸಂಕಲನ ಉಚಿತವಾಗಿ ಓದಲು ನೀಡುತ್ತಿದ್ದೇನೆ.   

ಪ್ರೀತಿಯ ಸಹೃದಯಿಗಳೇ,

ಓದಿ ಪ್ರತಿಕ್ರಿಯಿಸಿ,

ಆವರ್ತಕಾಲ
ಆವರ್ತಕಾಲ
ಸಪ್ತಗಿರಿ ಸಂಪದ(ಪುರಾಣ ಕಥೆ)-ಲೇಖಕರ ಧ್ವನಿವಾಹಿನಿ-sapta2.mp3