ರಕ್ಷಕರೋ ಅಥವಾ ಭಕ್ಷಕರೋ ?


 

ಆತ್ಮೀಯ ಸ್ನೇಹಿತರೆ,ನನ್ನೊಂದಿಗೆ ನಡೆದ ನಿಜವಾದ ಅಹಿತಕರ ಘಟನೆಯೊಂದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

 

ಅಂದು ಜನವರಿ ೬ ೨೦೦೮ ಬಾನುವಾರ, ಎಂದಿನಂತೆ ನನ್ನ ಆತ್ಮೀಯ ಗೆಳೆಯನಿಗೆ ಫೋನ್ ಮಾಡಿ ನಮ್ಮ ಮನೆ ಹತ್ತಿರದ ಬ್ಯುಗಲ್ ರಾಕ್ ಪಾರ್ಕ್ ಗೆ   ಬರಲು ಹೇಳಿದೆ. ಅವನು ಕೂಡ ನನ್ನ ಮಾತಿಗೆ ಬೆಲೆಕೊಟ್ಟು ಸುಮಾರು ಗಂಟೆ ೫ ರ ಹೊತ್ತಿಗೆ ನನ್ನನ್ನು ಬೆಟಿಮಾಡಿದ. ಇಬ್ಬರು ಒಟ್ಟಾಗಿ ಸ್ವಲ್ಪ ಸಮಯ ಕಳೆಯಲು ಮುಂದಾದೆವು. ಅನಂತರ ಹತ್ತಿರದ ಹೋಟೆಲ್ ಒಂದರಲ್ಲಿ ಕಾಫಿ ಕುಡಿದು ಮತ್ತೆ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು ಕುಳಿತು ಕೊಂಡು (ಹರಟೆ ಹೊಡೆಯುತ್ತಾ ) ನಂತರ ಒಮ್ಮೆ ಎ ಪಿ ಎಸ್ ನ ಬಯಲಿನಲ್ಲಿ ಸುತ್ತಾಡುವ ನಿರ್ಧಾರ ಮಾಡಿದೆವು  ಆಗಲೇ ನೋಡಿ ಶುರುವಾಗಿದ್ದು ನಮಗೆ ಗ್ರಹಚಾರ!!!

 

ಬಾಲ್ಯ ದ ಹಾಗು ನಮ್ಮ ಹೈ ಸ್ಕೂಲ್ ನಲ್ಲಿ ಆಡಿದ ಆಟಗಳು, ತಲೆ ಹರಟೆಗಳನ್ನ ಮತ್ತೊಮ್ಮೆ ಮೆಲುಕು ಹಾಕುತ್ತ ಕುಳಿತಿದ್ದ ನಮಗೆ ಸಂಜೆ ಘಂಟೆ ೭ ಆಗಿರುವುದು ಗೊತ್ತಾಗಲೇ ಇಲ್ಲ. ಅಸ್ಟರಲ್ಲೇ  ಅಲ್ಲಿಗೆ ಬಂದ ಒಬ್ಬ ವ್ಯಕ್ತಿ ನಮ್ಮನ್ನು ವಿಚಾರಿಸ ತೊಡಗಿದ . " ಇಲ್ಲಿ ಏನಕ್ಕೆ ಕೂತಿದ್ರಿ?" ನಾವು ಆಗ ತುಂಬ normal ಆಗಿಯೇ "ಹೀಗೆ ಸುಮ್ನೆ ಸರ್ " ಅನ್ನೋ ಉತ್ತರ ಕೊಟ್ಟೆವು ಆಗ ಅವ್ನು " ನೀವು ಇಲ್ಲಿ ಹೀಗೆಲ್ಲಾ ಕುಳಿತಉಕೊಳ್ಳಬಾರ್ದು ಹೋಗಿ"  ಅಂದಿದ್ದರೆ ನಾವು ಅಲ್ಲಿಂದ  ಹೊರಟು ಬಿಡ್ತಿದ್ವು. ಆದ್ರೆ ಆ ವ್ಯಕ್ತಿ ನನನ್ನು ಹೊಡೆಯಲು ಮುಂದಾದ, ಅವಾಗಲೇ ನಮಗೆ ಅರಿವಾಗಿದ್ದು ಇವರು ಪೊಲೀಸ್ ನೋರು ಅಂತ!! ಅವನು ಅಲ್ಲದೆ ಅವನ "ಸಾಹೇಬ್ರು" (ಇನ್ಸ್ಪೆಕ್ಟರ್) ಕೂಡ ನನ್ನನ್ನು ಅವಾಚ್ಯ ಶ್ಬ್ಧಗಳಿಂದ ಬೈದಿದ್ದಲ್ಲದೆ ಅವನು ಹೊಡೆಯಲು ಬಂದ. ಆಗಲು  ನಾವು ಶಾಂತ ರೀತಿಯಿಂದಲೇ ಉತ್ತರಿಸಿ ಅಲ್ಲಿಂದ ಓಡಿ ಬಂದೆವು ಆದರೆ ಇಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ ಅಂದರೆ ಒಬ್ಬ ನಾಗರಿಕನೊಂದಿಗೆ ವರ್ತಿಸುವ ಪೊಲೀಸರ ರೀತಿ!!!   

 

ಈರೀತಿ ಯಾಗಿ  ಪೋಲಿಸರೆ ಯುವಕರನ್ನು ಬೈದು ಅವರನ್ನು ರೋಚ್ಚಿಗೆಬ್ಬಿಸಿ ದಾರಿ ತಪ್ಪಿಸುವ ಗಟನೆಗಳು, ನಿಜವಾಗಿಯೂ ಖಂಡನಾರ್ಹವೆ ಸರಿ!!ಖಾಕಿ ಯ ಸಮವಸ್ತ್ರ ಮೈಮೇಲೆ ಇದ್ದರೆ ಮನಸ್ಸಿಗೆ ಬಂದಂತೆ ಮಾತನಾಡುವ, ವರ್ತಿಸುವ ನಡವಳಿಕೆ ಬದಲಾಗದಿದ್ದರೆ ಯುವಕರನ್ನು ದಾರಿತಪ್ಪಿಸಿ ,ರೋಚ್ಚಿಗೆಬ್ಬಿಸಿ ಅವರು ಕೆಟ್ಟಕೆಲಸ ಮಾಡಲು ಪೋಲಿಸರೆ ಪ್ರೆರೆಪಿಸದಂತೆ ಆಗುವುದಿಲ್ಲವೇ?  ಸಮಾಜ ದಲ್ಲಿ ಆರಕ್ಷಕರೆ ದಿಕ್ಕು ತಪ್ಪಿಸುವ ಕೇಂದ್ರ ಗಳು ಆದರೆ ಸುಖೀ ಸಮಾಜ ದ ಕನಸಿನ ಸಾಕಾರ ಸಾದ್ಯವೇ? ಅಭಯ ನಿಡುವವವರೇ ಭಯ ಹುಟ್ಟಿಸಿದರೆ ಪೊಲೀಸರ ಮೇಲಿನ ನಂಬಿಕೆ ಉಳಿಯುವುದಾದರು ಹೇಗೆ ?

 

ಆದರೆ ನನಗನಿಸಿದ್ದು ಇಷ್ಟೇ ಇದೇನಾ ನಮ್ಮ ಆರಕ್ಷಕರ ಸಭ್ಯತೆ?, ಇದನ್ನು ಪ್ರಶ್ನಿಸುವ ಧ್ವನಿ ಯಾರಲ್ಲೂ ಇಲ್ಲವೇ? ಎಂದು  ಈರೀತಿಯ ಉಸಿರಿಗಟ್ಟಿಸುವ ವಾತಾವರಣಕ್ಕೆ ಕೊನೆ?   ಈ ಎಲ್ಲಾ ಪ್ರಶ್ನೆ ಗಳೊಂದಿಗೆ ನೋವಿನ ಮನಸಿನೋದಿಗೆ ಮನೆಗೆ ಮರಳಿದೆ.

 

ನಿಮ್ಮವ, ನಾಗರಾಜ್ ಎಂ ಎಂ