ಕವನ ಸಂಗ್ರಹ


                   ಭಾಷೆಗೂ ನಿಲುಕದ ಭಾವಗೀತೆ.....

 ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜನಪ್ರಿಯ ಮತ್ತು ಅಗಾಧ ಸಾಹಿತ್ಯಾಸಕ್ತರ ಪ್ರೀತಿಗೆ ಪಾತ್ರವಾದದ್ದು ಈ ಕವತೆ. ನಮ್ಮಲ್ಲಿರುವ ಕವನಗಳನ್ನ ಒಂದೆ ವೇದಿಕೆಯಲ್ಲಿ ಹಂಚಿಕೊಳ್ಳುವ ಪುಟ್ಟ ಪಯತ್ನವೆ ಈ ಕವನ ಸಂಗ್ರಹಕ್ಕೆ ಸ್ಪೂರ್ತಿ. ಕವನ ಸಂಗ್ರಹದಲ್ಲಿರುವ ವರಕವಿ ಬೇಂದ್ರೆ, ಕೆ ಎಸ್ ನರಸಿಂಹಸ್ವಾಮಿ, ನಿಸಾರ್ ಅಹಮದ್, ಕುವೆಂಪು, ಅಡಿಗ, ಸಂತ ಶಿಶುನಾಳ ಶರೀಫ, ಲಕ್ಷ್ಮೀನಾರಾಯಣ ಭಟ್ಟ, ಬಿ ಆರ್ ಲಕ್ಷ್ಮಣ ರಾವ್ ಇನ್ನೂ ಹಲವರ ಕವನಗಳು ನಿಮ್ಮ ಮನ ತಣಿಸಲಿವೆ.

 

ಇಲ್ಲಿರುವ ಎಲ್ಲ ಕವನಗಳನ್ನ ಆಯಾ ಸಂಕಲನಗಳಾಗಿ ವರ್ಗಿಕರಿಸಿ ಗೂಗಲ್ ಸೈಟಿನಲ್ಲಿ ಸೇರಿಸಲಾಗಿದೆ.

ಕವನ ಸಂಗ್ರಹ 

http://sites.google.com/site/kavanasangraha/

 

ನಿಮ್ಮ ಬಳಿ ಇರುವ ಕವನಗಳನ್ನ ಈ ಸಂಗ್ರಹದಲ್ಲಿ ಸೇರಿಸ ಬಹುದು, ಕವನಗಳನ್ನ ಕೆಳಗಿನ ವಿಳಾಸಕ್ಕೆ ಮೈಲ್ ಮಾಡಿ. ನಿಮ್ಮ ಆತ್ಮಿಯ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ .

kavana.sangraha@gmail.com

ಜನಪ್ರಿಯ ಕನ್ನಡ ಅಂತರ್ಜಾಲ ತಾಣಗಳು