TEJASVI

ಈಕವಿ - ಕನ್ನಡ ತಂತ್ರಾಂಶ : ದಿವಂಗತ ಶ್ರೀ ತೇಜಸ್ವಿ - ಕನ್ನಡ ವಿಶ್ವವಿದ್ಯಾಲಯ - ಕುವೆಂಪು ಕನ್ನಡ ತಂತ್ರಾಂಶ - ಕನ್ನಡದಲ್ಲಿ ಭಾಷಾಂತರ - ಜಿ.ಎನ್.ಯು/ಒಪನ್ ಸೌರ್ಸ್ - UNICODE - ಸೌರ್ಸ್ ಕೋಡ್ -

ಕನ್ನಡದಲ್ಲಿ ಭಾಷಾಂತರ
 
ಕನ್ನಡ ವಿಶ್ವವಿದ್ಯಾಲಯವು ಕುವೆಂಪು ಕನ್ನಡ ತಂತ್ರಾಂಶ ವನ್ನು ಮತ್ತು ಫಾಂಟ್‌ಗಳನ್ನು ಜಿ.ಎನ್.ಯು/ಒಪನ್ ಸೌರ್ಸ್ ಆಗಿ ಇಟ್ಟಿಲ್ಲ ಈ ವಿಷಯವಾಗಿಯೇ ದಿವಂಗತ ಶ್ರೀ ತೇಜಸ್ವಿ  ಯವರು ಕನ್ನಡ ವಿಶ್ವವಿದ್ಯಾಲದ ಈ ನಿಲುವಿನ ಬಗ್ಗೆ ಒಳ್ಳೆಯ ಧೋರಣೆಯನ್ನು ಹೊಂದಿರಲಿಲ್ಲ. ಕುವೆಂಪು ಕನ್ನಡ ತಂತ್ರಾಂಶವನ್ನು ಮತ್ತು ಫಾಂಟ್‌ಗಳನ್ನು ಜಿ.ಎನ್.ಯು/ಒಪನ್ ಸೌರ್ಸ್ ಆಗಿ ಇಟ್ಟು ಎಲ್ಲರಿಗೂ ಸಹ ಕನ್ನಡ ತಂತ್ರಾಂಶವು ಒಪನ್ ಸೌರ್ಸ್ ಆಗಿ ದೊರೆಯಬೇಕು ಎಂಬುದೇ ಅವರ ವಾದವಾಗಿತ್ತು.
 
ದಿವಂಗತ ಶ್ರೀ ತೇಜಸ್ವಿಯವರು ವಿಧಿವಶರಾಗುವ ಮೊದಲು ನನ್ನ ಜೊತೆ ಮಾತನಾಡಿದಾಗ ಕನ್ನಡ ವಿಶ್ವವಿದ್ಯಾಲಯವು ಕುವೆಂಪು ಕನ್ನಡ ತಂತ್ರಾಂಶವನ್ನು ಮತ್ತು ಫಾಂಟ್‌ಗಳನ್ನು ಜಿ.ಎನ್.ಯು/ಒಪನ್ ಸೌರ್ಸ್ ಆಗಿ ಇಟ್ಟಿಲ್ಲ ಮತ್ತು ಇದೊಂದು ಖೇದಕರ ಸಂಗತಿ ಎಂದು ಹೇಳಿದ್ದರು
 
ಕುವೆಂಪು ಕನ್ನಡ ತಂತ್ರಾಂಶವನ್ನು ಒಪನ್ ಸೌರ್ಸ್ ಆಗಿ ಪಡೆದುಕೊಳ್ಳಲು ಮೊದಲು ಕನ್ನಡ ವಿಶ್ವವಿದ್ಯಾಲಯಕ್ಕೆ ನಾವು ಯಾರು, ಎಲ್ಲಿಯವರು ಮುಂತಾದ ಮಾಹಿತಿಯನ್ನೇಲ್ಲ ಹೇಳಬೇಕಾಗುತ್ತದೆ ಆ ನಂತರ ಅದು ಸರಿ ಎನಿಸಿದರೆ ಮಾತ್ರ ಕನ್ನಡ ವಿಶ್ವವಿದ್ಯಾಲಯದವರು ಕುವೆಂಪು ಕನ್ನಡ ತಂತ್ರಾಂಶದ ಸೌರ್ಸ್ ಕೋಡ್ ಅನ್ನು ಕೊಡುತ್ತಾರೆ ಆದರೆ ಇದು ಶ್ರೀ ತೇಜಸ್ವಿಯವರಿಗೆ ಹಿಡಿಸಿರಲಿಲ್ಲ ಮತ್ತು ಸೌರ್ಸ್ ಕೋಡ್ ಅನ್ನು ಉಚಿತವಾಗಿ ನೀಡಬೇಕೆಂಬುದೇ ಅವರ ವಾದವಾಗಿತ್ತು. ತೇಜಸ್ವಿಯವರೇ ಹೇಳಿದಂತೆ ಕನ್ನಡ ವಿಶ್ವವಿದ್ಯಾಲಯದಿಂದ ಕುವೆಂಪು ಕನ್ನಡ ತಂತ್ರಾಂಶದ ಸೌರ್ಸ್ ಕೋಡ್ ಅನ್ನು ಪಡೆಯುವುದು ಸಾಧ್ಯವೇ ಇಲ್ಲ! ಇಷ್ಟೇ ಅಲ್ಲದೇ ಕನ್ನಡ ವಿಶ್ವವಿದ್ಯಾಲಯದಲ್ಲಿಯ ಕೆಲವು ಪ್ರಮುಖ ವ್ಯಕ್ತಿಗಳ ಪ್ರಭಾವದಿಂದ ಸೌರ್ಸ್ ಕೋಡ್‌ಅನ್ನು ಪಡೆಯುವುದು ಕನಸಿನ ಮಾತು ಎಂದು ದಿವಂಗತ ಶ್ರೀ ತೇಜಸ್ವಿಯವರು ಹೇಳಿದ್ದರು.
 
ಕುವೆಂಪು ಕನ್ನಡ ತಂತ್ರಾಂಶ ೧.೦ ಹೊಸ ಆವೃತ್ತಿಯಲ್ಲಿಯೂ ಅವರು ಸೌರ್ಸ್ ಕೋಡ್ ಇಟ್ಟಿಲ್ಲ, ಇದು UNICODE ಅನ್ನು ಬೆಂಬಲಿಸುವುದಿಲ್ಲ ಮತ್ತು ಇಲ್ಲಿ ೪ ಕೀಬೋರ್ಡ್ ಲೆಔಟ್‌ಗಳನ್ನು ಇಟ್ಟು ಅದರ ಬಳಕೆದಾರರಿಗೆ ಮತ್ತಷ್ಟು ಗೊಂದಲವನ್ನುಂಟು ಮಾಡಿದ್ದಾರೆ.
 
ಒಟ್ಟಿನಲ್ಲಿ ಕುವೆಂಪು ಕನ್ನಡ ತಂತ್ರಾಂಶವನ್ನು ಮತ್ತು ಫಾಂಟ್‌ಗಳನ್ನು ಒಪನ್ ಸೌರ್ಸ್ ಆಗಿ ಇಟ್ಟು ಎಲ್ಲ ಕನ್ನಡಿಗರಿಗೂ ಅದನ್ನು ದಕ್ಕುವಂತೆ ಮಾಡಬೇಕೆನ್ನುವುದೇ ನಮ್ಮ ಆಶಯವಾಗಿದೆ.
ಈಕವಿ ಕುಮಾರಸ್ವಾಮಿ

Comments