Home‎ > ‎Posts‎ > ‎

ಜ್ಯೋತಿಷ ಶಾಸ್ತ್ರ ಪ್ರತ್ಯಕ್ಷ ಶಾಸ್ತ್ರ...

posted 6 Aug 2018, 01:24 by Srikanth Dharmavaram   [ updated 6 Aug 2018, 01:38 ]
ಅಪ್ರತ್ಯಕ್ಷಾಣಿ ಶಾಸ್ತ್ರಾಣಿ ವಿವಾದಾಸ್ತೇಷು ಕೇವಲಂ।
ಪ್ರತ್ಯಕ್ಷಂ ಜ್ಯೋತಿಷಂ ಶಾಸ್ತ್ರಂ ಚಂದ್ರಾರ್ಕೌ ಯತ್ರ ಸಾಕ್ಷಿಣೌ।।

- "ಅನ್ಯ ಶಾಸ್ತ್ರಗಳಲ್ಲಿ ಸಂವಾದ, ವಿವಾದ ಮಾಡಿ ಜಯಿಸಬಹುದು ಆದರೆ ಅವುಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಜ್ಯೋತಿಷ ಶಾಸ್ತ್ರ ಪ್ರತ್ಯಕ್ಷವಾದ ಶಾಸ್ತ್ರ. ಈ ಶಾಸ್ತ್ರಕ್ಕೆ ಸೂರ್ಯ, ಚಂದಾದಿಗಳೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ."

ಮನುಷ್ಯನಿಗೆ ಜೀವನ ಪ್ರಮಾಣ ವೇದ, ಜ್ಯೋತಿಷಶಾಸ್ತ್ರವು ವೇದಗಳಿಗೆ ಕಣ್ಣಿದ್ದಂತೆ (ವೇದಚಕ್ಷುಃ). ಇಡೀ ವೇದಗಳು ಭಗವಂತನ ಶರೀರವಾದರೆ ಜ್ಯೋತಿಷಶಾಸ್ತ್ರವು ಭಗವಂತನ ಕಣ್ಣುಗಳು. ದೇಹದಲ್ಲಿ ಕಣ್ಣು ಎಷ್ಟು ಪ್ರಾಧಾನ್ಯವನ್ನು ಹೊಂದಿದಿಯೋ ಶೃತಿಗಳಲ್ಲಿ ವೇದಾಂಗ ಆದಂತಹ ಜ್ಯೋತಿಷಶಾಸ್ತ್ರ ಅಷ್ಟುಪ್ರಾಧಾನ್ಯತೆಯನ್ನು ಹೊಂದಿದೆ. ಮನುಷ್ಯಜೀವನದಲ್ಲಿ ಸಮಸ್ಯೆಗಳು ಬಂದಾಗ ಧೈರ್ಯವನ್ನು ತುಂಬಿ ಪ್ರಯತ್ನಶೀಲರನ್ನಾಗಿ ಮಾಡುವುದರಲ್ಲಿ ಜ್ಯೋತಿಷಶಾಸ್ತ್ರ ಬಹಳ ಉಪಕಾರವನ್ನು ಮಾಡುತ್ತದೆ.

ಋಷಿಮುನಿಗಳು ಜ್ಯೋತಿಷಶಾಸ್ತ್ರವನ್ನು ಮನಃಶಾಸ್ತ್ರವಾಗಿ, ಪ್ರತ್ಯಕ್ಷಜೀವನಧರ್ಮಶಾಸ್ತ್ರವಾಗಿ ಭಾವಿಸಿ ಮೋಕ್ಷಗಮನವನ್ನು ತಿಳಿಯುವುದಕ್ಕಾಗಿ ಜ್ಯೋತಿಷಶಾಸ್ತ್ರದ ಪ್ರಯೋಜನವನ್ನುಹೊಂದುತ್ತಿದ್ದರು. ಈ ಅತ್ಯಾಧುನಿಕೆ ಕಾಲದಲ್ಲಿ ಜನರು ಲೌಖಿಕ ಸುಖ-ಭೋಗಗಳ ಬಗ್ಗೆಮ್ ಅನಗತ್ಯವಾದ ಹಣ ಸಂಪಾಧನೆ ಬಗ್ಗೆ, ಸಮಾಜದಲ್ಲಿ ಹೊಂದಬಯಸಿದ ಹೆಸರು-ಕೀರ್ತಿಗಳಿಗಾಗಿ, ಅಲ್ಪಶ್ರಮೆಯಿಂದ ಹೆಚ್ಚಿನ ಫಲವನ್ನು ಹೊಂದುವುದರಲ್ಲಿ, ಪ್ರಾರಬ್ಧಕರ್ಮದಿಂದ ಪಲಾಯನವಾಗುವ ಮಾರ್ಘಾನ್ವೇಷಣೆಗಾಗಿ ಜ್ಯೋತಿಷಶಾಸ್ತ್ರವನ್ನು ಆಶ್ರಯ/ಅಧ್ಯಯನ ಮಾಡುವುದು ಪ್ರಧಾನವಾಗಿದೆ. ಇಂತಹ ಸಂದ್ಭರ್ಭದಲ್ಲಿ ಮಾನಸಿಕ ಧೌರ್ಭಲ್ಯಗಳಿಂದ ಪಾರಾಗುವ ಮಾರ್ಘವನ್ನು ತಿಳಿಯುವುದಕ್ಕಾಗಿ ಸನಾತನಧರ್ಮಸಹಿತ ಜ್ಯೋತಿಷಶಾಸ್ತ್ರವನ್ನು ಭೋದಿಸುತ್ತಾ, ಹಿತಮಾರ್ಘವನ್ನು ತಿಳಿಯುವುದರಲ್ಲಿ ಜ್ಯೋತಿಷಶಾಸ್ತ್ರದ ಅಧ್ಯಯನ ಸಹಾಯಕಾರಿಯಾಗುತ್ತದೆ.

Comments