e-PATA(Kannada)‎ > ‎

Class 6: Lagna & Dwadasha Bhavagalu

ಆಧಿಪತ್ಯಕಾರಕತ್ವ:- 

Day 6

          ಎಲ್ಲಗ್ರಹಗಳಿಗೆ ಸಹಜ ಕಾರಕತ್ವಗಳಜೊತೆ ತಾತ್ಕಾಲಿಕ ಕಾರಕತ್ವವನ್ನು ಸೂಚನೆಮಾಡುತ್ತದೆ. ಇದು ಶಾಶ್ವತ ಅಲ್ಲ. ಇದು ಎಲ್ಲರಲ್ಲು ಒಂದೇತರ ಇರುವುದಿಲ್ಲ. ಮನುಷ್ಯ ಹುಟ್ಟಿದ ಲಗ್ನದ (ಸಮಯದ) ಅನುಸಾರವಾಗಿ ಗ್ರಹಗಳಿಗೆ ಆಧಿಪತ್ಯಕಾರಕತ್ವ ತಿಳಿಸಲ್ಪಡುತ್ತದೆ. ಇದು ಕನಿಷ್ಠವೆಂದರೆ ಒಂದು ಜನ್ಮಕ್ಕೆ ಸ್ತೀಮಿತ.

 

ಲಗ್ನ:-

    ಪೂರ್ವದಿಲ್ಲಿನಲ್ಲಿ ಉದಯಿಸುವರಾಶಿಯನ್ನು ಲಗ್ನವೆನ್ನುತ್ತೇವೆ. ಇದರ ಪ್ರಮಾಣ ಎರಡು ಗಂಟಿಗಳ ಕಾಲ. ಲಗ್ನವು ಸೂರ್ಯೋದಯದ ಆಧಾರವಾಗಿ ಗಣನೆಮಾಡಲಾಗುತ್ತದೆ. ಲಗ್ನ ಪ್ರಾಂತಕ್ಕನುಸಾರವಾಗಿ ಬದಲಾಗುತ್ತದೆ. ಹಿಂದೆ ಗ್ರಹಳ ಸ್ವಕ್ಷೇತ್ರವನ್ನು ಅಧ್ಯಯನಮಾಡಿದ್ದೇವೆ. ಲಗ್ನವು ಯಾರ ಸ್ವಕ್ಷೇತ್ರವಾಗುತ್ತ್ದೆ ಗ್ರಹವೇ ಲಗ್ನಾಧಿಪಥಿ. ಹಾಗಾಗಿ ಲಗ್ನಕ್ಕೆ ಸೂಚನೆಮಾಡುವ ವಿಷಯಗಳನ್ನು ಲಗ್ನಾಧಿಪಥಿಯಾದ ಗ್ರಹ ಸೂಚಿಸಲ್ಪಡುತ್ತದೆ. ಕೆಳಗೆ ಲಗ್ನಾಧಿ ದ್ವಾದಶಭಾವಗಳನ್ನು ತಿಳಿಸಲಾಗಿದೆ.

1. ಲಗ್ನ ಅಥವ ತನು ಸ್ಥಾನ:-

     ಜನ್ಮಕಾಲದ ಲಗ್ನ ಯಾವ ರಾಶಿಯಾಗುತ್ತದಿಯೋ ರಾಶಿಯ ಅಧಿಪಥಿ ಲಗ್ನವಿಚಾರಗಳನ್ನು ಸೂಚನೆಮಾಡುತ್ತಾನೆ. ಲಗ್ನವು ಶರೀರ, ಆತ್ಮ, ಮನಸ್ಸು, ರೂಪ, ಸ್ವಭಾವ, ವ್ಯಕ್ತಿತ್ವ, ಆರೋಗ್ಯ ಬಲ, ಅದೃಷ್ಟ, ಪೂರ್ವಪುಣ್ಯ ಮೊದಲಾದ ವಿಷಯಗಳನ್ನು ಸೂಚನೆಮಾಡುತ್ತದೆ.

2. ದ್ವಿತೀಯ ಭಾವ:- 

    ಕುಟುಂಭ, ಧನ(ಹಣ), ವಾಕ್ಕು, ನೇತ್ರ, ಮಾರಕ, ಪ್ರಾಥಮಿಕ ವಿದ್ಯೆ

3. ತೃತೀಯ ಭಾವ:- 

    ಕನಿಷ್ಠ ಭ್ರಾತುಃ ಸ್ಥಾನ (ತಮ್ಮ ಅಥವ ತಂಗಿ), ಧೈರ್ಯ, ಕಿವಿ, ಕೋಪ, ಅಹಂಕಾರ, ಉಪಾಯ, ಮಿತ್ರ.

4. ಚತುರ್ಥ ಭಾವ:- 

    ಸುಖಸ್ಥಾನ, ಮಾತೃಸ್ಥಾನ, ಲೌಖಿಕವಿದ್ಯೆ, ವಾಹನ, ಸ್ಥಿರಾಸ್ಥಿ, ಗೃಹ, ಮುಖ, ಕೂಪ(ಬಾವಿ), ಬೇಸಾಯ, ಪಶುವೃದ್ಧಿ, ಭಂದುಗಳು ಮೊದಲಾದ ವಿಷಯಗಳನ್ನು ಸೂಚಿಸುತ್ತದೆ.    

5. ಪಂಚಮ ಭಾವ:- 

    ಪುತ್ರಸ್ಥಾನ, ಪೂರ್ವಪುಣ್ಯಸ್ಥಾನ, ವಿವೇಕಪ್ರಜ್ಞೆ, ಉನ್ನತ ವಿದ್ಯೆ, ಪಾಂಡಿತ್ಯ, ಬುದ್ಧಿ, ಪ್ರಜ್ಞೆ, ಇಷ್ಟಾರ್ಥಸಿದ್ಧಿ, ಸಂಚಿತಕರ್ಮ.

6. ಷಷ್ಠ ಭಾವ:- 

    ಋಣ, ರೋಗ, ರಿಪು(ಶತು)ಸ್ಥಾನ, ಜ್ಞಾತರು, ಸೇವೆ, ಪೂರ್ವಪಾಪಸ್ಥಾನ, ನರಕಸ್ಥಾನ.

7. ಸಪ್ತಮಭಾವ:- 

    ಕಳತ್ರಸ್ಥಾನ, ವಿವಾಹ, ಪ್ರಯಾಣ, ಕಾi, ಭೋಗ, ವ್ಯಭಿಚಾರ, ಮಾರಕ, ವರ್ಕಕ, ಪೂರ್ವಪುಣ್ಯಸ್ಥಾನ.

8. ಅಷ್ಠಮಭಾವ:- 

    ವಿಯೋಗಸ್ಥಾನ, ಆಯುಃಸ್ಥಾನ, ನಷ್ಠ, ಪೂರ್ವಜನ್ಮಪಾಪ, ನರಕ, ಮ್ರುತ್ಯು, ದುಃಖ,ಅಪಘಾತ, ದರಿದ್ರಜೀವನ, ಜೂದ ಮೊದಲಾದವು.

9. ನವಮಭಾವ:- 

    ಭಾತ್ಯಸ್ಥಾನ, ಪಿತೃಸ್ಥಾನ, ವಂಶ, ಪೂರ್ವಪುಣ್ಯ, ಪ್ರಾರಬ್ಧಕರ್ಮ, ತಪಸ್ಸು, ಭಕ್ತಿ, ಯಜ್ಞ, ದಯೆ, ತೀರ್ಥಯಾತ್ರೆ, ವೈದೀಕ ವಿದ್ಯೆ, ಸಂತೃಪ್ತಿ.

10. ದಶಮಭಾವ:- 

    ಕರ್ಮಸ್ಥಾನ, ಉದ್ಯೋಗಸ್ಥಾನ, ರಾಜ್ಯ, ಆಗಾಮಿ ಕರ್ಮ, ಜೀವನ, ಧನಾರ್ಜನೆ, ಕೀರ್ತಿ, ಅಧಿಕಾರ, ರಾಜಸನ್ಮಾನ.

11. ಏಕಾದಶ ಭಾವ:- 

    ಲಾಭ, ಜೇಷ್ಠಬ್ರಾತುಃಸ್ಥಾನ (ಅಣ್ಣ/ಅಕ್ಕ), ಮಿತ್ರರು, ಧನಾರ್ಜನೆ, ಜಯ.

12. ದ್ವಾದಶಭಾವ:- 

    ವ್ಯಯ, ಐಷಾರಾಮಜೀವನ, ಗುಪ್ತಸುಖ, ಮೋಕ್ಷ, ಜನ್ಮಾಂತರ, ನಾಶ, ದುರ್ವ್ಯಯ, ದುಷ್ಕಾರ್ಯ, ಪಾಪ, ನರಕ ಮೊದಲಾದವು.

            ಲಗ್ನಬದಲಾದಲ್ಲಿ ಗ್ರಹಗಳಿಗೆ ಮೇಲಿನ ಕಾರಕತ್ವಗಳು ಕೂಡಾ ಬದಲಾಗುತ್ತದೆ. ಉದಾಹರಣೆಗೆ ಜನ್ಮಲಗ್ನ ವೃಶ್ಚಿಕರಾಶಿಯಾದಲ್ಲಿ ಲಗ್ನಾಧಿಪಥಿ ಕುಜ ಆಗುತ್ತಾನೆ ಅಂದರೆ ಲಗ್ನಭಾವ ತಿಳಿಸುವ ವಿಷಯಗಳನ್ನು ಕುಜ ಸೂಚನೆಮಾಡುತ್ತಾನೆ. ವೃಶ್ಚಿಕಲಗ್ನಕ್ಕೆ ಸಪ್ತಮಸ್ಥಾನ ವೃಷಭರಾಶಿಯಾಗುತ್ತದೆ. ವೃಷಭರಾಶ್ಯಾಧಿಪಥಿ ಶುಕ್ರ ಅಂದರೆ ಸಪ್ತಮಭಾವಕ್ಕೆ ತಿಳಿಸಿರುವ ವಿಷಯಗಳನ್ನು ಶುಕ್ರ ಸೂಚಿಸುತ್ತಾನೆ. ಲಗ್ನ ಬದಲಾದಲ್ಲಿ ಅಂದರೆ ಲಗ್ನ ಧನುಸ್ಸು ಆದಲ್ಲಿ ಲಗ್ನಾಧಿಪಥಿ ಗುರು, ಸಪ್ತಮಾಧಿಪಥಿ ಬುಧ. ಮೇಲಿನ ವಿಚಾರಗಲನ್ನು ಗುರು-ಬುಧರು ಸೂಚಿಸುತ್ತಾರೆ.

 

Comments