e-PATA(Kannada)‎ > ‎

Class 5: Grahagalu - Karakatwagalu

ಗ್ರಗಳ ಸಹಜ ಕಾರಕತ್ವ ಮತ್ತು ಆಧಿಪಥ್ಯ ಕಾರಕತ್ವಗಳ ಬಗ್ಗೆ

Day 5


          ಜಾತಕ ಫಲವನ್ನು ತಿಳಿಯುವುದಕ್ಕಾಗಿ ಭಗವಂತ ಗ್ರಹಗಳಮೂಲಕ ಸೂಚನೆಗಳನ್ನು ಕೊಡುತ್ತಾನೆ. ಪ್ರತಿಯೊಂದು ಗ್ರಹ ಮನುಷ್ಯ ಜೀವನಕ್ಕೆ ಬೇಕಾದ ವಿಷಯಗಳನ್ನು ಸೂಚನೆಮಾಡುತ್ತದೆ. ಇದನ್ನೆ ಕಾರಕತ್ವಯೆನ್ನುತ್ತಾರೆ. ಎಲ್ಲಗ್ರಹಗಳಿಗು ಎರಡುತರ ಕಾರಕತ್ವಗಳು ಇರುತ್ತವೆ.

          1. ಸಹಜ ಕಾರಕತ್ವ

          2. ಆಧಿಪತ್ಯ ಕಾರಕತ್ವ

ಸಹಜ ಕಾರಕ(ತ್ವ):-

          ಸಹಜ ಕಾರಕತ್ವ ಸಂಸ್ಕಾರವನ್ನು, ಅಂತರ್ಮುಖಾನುಭುತಿಯನ್ನು, ತೃಪ್ತಿಯನ್ನು ಸೂಚನೆಮಾಡುತ್ತದೆ. ಇದು ಶಾಶ್ವತ ಕಾರಕತ್ವ. ಗ್ರಹಗಳಿಗೆ ಈ ಕಾರಕತ್ವ ಬದಲಾಗುವುದಿಲ್ಲ. ಗ್ರಹಗಳು ಸೂಚಿಸುವ ಕೆಲವು ಮುಖ್ಯಕಾರಕತ್ವಗಳನ್ನು ನೋಡೋಣ.

ಸೂರ್ಯ:-

    ಆತ್ಮಕಾರಕ, ಪಿತ್ರುಕಾರಕ, ತನು (ಶರೀರ), ರಾಜ್ಯ, ನೇತ್ರಕಾರಕ, ಹೃದಯಕ್ಕೆ ಕಾರಕ, ಮನುಷ್ಯನ ಸ್ವಭಾವ, ಧೈರ್ಯ. ಅಧಿಕಾರ, ಪಿತ್ತಪ್ರಕೃತಿ, ಸತ್ಯಗಳಿಗೆ ಕಾರಕ

ಚಂದ್ರ:-

    ಮಾತೃಕಾರಕ, ಮನೋಕಾರಕ, ಸೌಂದರ್ಯ, ಜಲ, ಸೌಖ್ಯ, ಬಲ, ಸತ್ಯ, ಭಂದನ, ಬಲ ಪ್ರೀತಿ-ವಾತ್ಸಲ್ಯಗಳಿಗೆ ಕಾರಕ.

ಕುಜ:- 

    ಬ್ರಾತುಕಾರಕ(ಸೋದರಸೋದರೀಯರು), ಭೂಮಿ, ಪರಾಕ್ರಮ, ಧೈರ್ಯ, ಕೋಪ, ಅಹಂಕಾರ, ತರ್ಕಶಾಸ್ತ್ರ, ಶಸ್ತ್ರವಿದ್ಯೆಗಳು, ಶತ್ರು ವೃದ್ಧಿ, ಉಷ್ಣ, ಸ್ಪೋಟಕ, ಅಪಘಾತಗಳಿಗೆ ಕಾರಕ

ಬುಧ:- 

    ಬುದ್ಧಿಕಾರಕ, ಗಣಿತ, ಜ್ಯೀತಿಷ, ವಾಕ್ಕು, ವ್ಯವಹಾರ, ವರ್ತಕ, ಜ್ಞಾತರು, ತಂತ್ರಜ್ಞಾನ, ವಿಷ್ಣುಭಕ್ತಿ, ಆಯುರ್ವೇದ, ಹಾಸ್ಯ ಮೊದಲಾದ ವಿಷಯಗಳಿಗೆ ಕಾರಕ.

ಗುರು:- 

    ಸಂತಾನ ಕಾರಕ, ಜ್ಞಾನ ಕಾರಕ, ಧನ(ಹಣ), ವೇದವಿದ್ಯೆ, ಜ್ಯೋತಿಷ, ವೇದಶಾಸ್ತ್ರಗಳು, ವಿವೇಕಪ್ರಜ್ಞೆಮ್ ಸ್ವರ್ಣ, ಆಚಾರ, ಸತ್ಕರ್ಮ, ಪೂರ್ವಪುಣ್ಯ, ಶುಭಕಾರ್ಯಗಳು, ಶಾಂತಿ, ಧರ್ಮ, ದೈವಭಕ್ತಿ, ಸತ್ಯ ಮೊದಲಾದ ವಿಷಯಗಳಿಗೆ ಕಾರಕ.

ಶುಕ್ರ:- 

    ಕಳತ್ರಕಾರಕ, ವಿವಾಹ, ಸಾಹಿತ್ಯ, ಸ್ತ್ರೀ ಸೌಖ್ಯ, ಕಾಮ, ಭೋಗ, ವ್ಯಭಿಚಾರ, ವಾಹನ ಸೌಖ್ಯ, ನೃತ್ಯಮೊದಲಾದ ಕಲೆಗಳು, ಹಾಸ್ಯ.

ಶನಿ:- 

    ಕರ್ಮಕಾರಕ, ಆಯುರ್ದಾಯ, ಅಧಮವಿದ್ಯೆ, ಮೃತ್ಯು, ಅಧರ್ಮ, ದುಃಖ, ಬಂಧನ, ಸ್ಪೋಟಕ, ದುಷ್ಪ್ರವರ್ತನೆ, ಶಿಕ್ಷಣೆ/ಶಿಕ್ಷೆ, ಪಾಪ, ನರಕ, ಅಧಮಜೀವನ, ವೈರಾಗ್ಯ ಮೊದಲಾದ ವಿಷಯಗಳಿಗೆ ಕಾರಕ.

ರಾಹು:- 

    ಮೋಹಕಾರಕ, ಮಾತಾಮಹಚಿಂತೆ, ಕಾಮ, ವಿಷವೈದ್ಯ, ಚೋರಕಲೆ, ಅಧಾರ್ಮಿಕ ಜೀವನ.

ಕೇತು:- 

    ಮೋಕ್ಷಕಾರಕ, ಪಿತಾಮಹ ಚಿಂತೆ, ವೇದಾಂತ ವಿಚಾರ, ದೈವಭಕ್ತಿ, ವೈರಾಗ್ಯ, ಜ್ಞಾನ, ಭಾಷೆ ಮೊದಲಾದ ವಿಚಾರಗಳಿಗೆ ಕಾರಕ


ಮುಖ್ಯಾಂಶಗಳು:-

1. ವಿದ್ಯೆ            -    ಬುಧ

2. ಉದ್ಯೋಗ      -    ಶನಿ/ಸೂರ್ಯ

3. ವಿವಾಹ          -    ಶುಕ್ರ

4. ಸಂತಾನ        -    ಗುರು


5. ಗೃಹ            -    ಕುಜ

6. ವಾಹನ         -    ಶುಕ್ರ

7. ರೋಗ          -    ಶನಿ/ಕುಜ

8. ಶತ್ರು            -    ಕುಜ


Comments