e-PATA(Kannada)‎ > ‎

Class 4: Planetary Strenght

ಕಾಲಭಲ:-

Day 4

            ಭಗವಂತ ಮನುಷ್ಯಜೀವನಕ್ಕೆ ಸಂಭಂದಪಟ್ಟ ಫಲ ವಿಷಯಗಳನ್ನು, ಫಲಗಳು ಅನುಭವಕ್ಕೆ ಬರುವ ಕಾಲವನ್ನು ಗ್ರಹಗಳ ಸಹಾಯದಿಂದ ತಿಳಿಯುವ ವ್ಯವಸ್ಥೆಯನ್ನು ಮಾಡಿದ್ದಾನೆ. ಗ್ರಹಗಳ ಬಲದಿಂದ ಅವು ತಿಳಿಸುವ ವಿಷಯಗಳನ್ನು ತಿಳಿಯಬಹುದು. ಹಾಗಾಗಿ ಗ್ರಹಗಳ ಬಲವನ್ನು ತಿಳಿಯಲು ಅವಶ್ಯವಾಗಿದೆ.

            ಎಲ್ಲ ಗ್ರಹಗಳು ಧೀರ್ಘವೃತ್ತಾಕಾರ ಕಕ್ಷ್ಯೆಯಲ್ಲಿ ಸಂಚರಿಸುತ್ತವೆ ಅಂತ ಖಗೋಳ ಶಾಸ್ತ್ರವು ತಿಳಿಸುತ್ತದೆ. ಸಂಚರಿಸುತ್ತಿರುವ ಗ್ರಹಗಳ ಬಲಾಬಲಗಳನ್ನು ಜ್ಯೋತಿಷಶಾಸ್ತ್ರವು ತಿಳಿಸುತ್ತದೆ.


ಅಜೋ ವೃಷೋ ಮೃಗಶ್ಚೈವ ಕನ್ಯಾಕರ್ಕೋ ಝಷಸ್ತುಲಾ |

ಸೂರ್ಯಾದೀನಾಂ ಕ್ರಮಾದೇತೇ ಗದಿತಾಸ್ತುಂಗರಾ ಶಯಃ ||

ದಶಾಗ್ನಿ ಮನುಯುಕ್ತಿ ಥ್ಯಕ್ಷ ನಕ್ಷತ್ರ ನಖಾಃ ಕ್ರಮಾತ್ |

ಭಾಗಾಃ ಸಪ್ತಮಭಂ ತೇದ್ಯೋ ನೀಚಂ ತೈರೇವ ಭಾಗಕೈಃ ||

 

            ಗ್ರಹಗಳೆಲ್ಲವು ಧೀರ್ಗವೃತ್ತಾಕಾರ ಕಕ್ಷ್ಯೆಯಲ್ಲಿ ಸಂಚರಿಸುತ್ತವೆ. ಹೀಗೆ ಸಂಚರಿಸುವ ಗ್ರಹಗಳು ಒಂದು ನಿರ್ದಿಷ್ಟವಾದ ರಾಶಿಗೆ ಬಂದಾಗ ಹೆಚ್ಚಿನ ಬಲವುಳ್ಳದ್ದು ಆಗುತ್ತವೆ. ಇದನ್ನೇ ಉಚ್ಚಸ್ಥಿತಿ(Exaltation)ಯೆನ್ನುತ್ತೇವೆ. ಸ್ಥಿತಿಯಲ್ಲಿ ಉಚ್ಚವನ್ನು ಹೊಂದಿದಂತಹ ಗ್ರಹ ಹೆಚ್ಚಿನ ಬಲವುಳ್ಳದ್ದು ಆಗುತ್ತದೆ. ಗ್ರಹಗಳು ಎಲ್ಲಿ ಉಚ್ಚಸ್ಥಾನವನ್ನು ಹೊಂದಿರುತ್ತವೆಯೊ ರಾಶಿಗೆ ಸರಿಯ್ಗಿ ಏಳನೆಯ ರಾಶಿಯು ನೀಚರಾಶಿಯಾಗುತ್ತದೆ (Debilitation). ಸಂಸ್ಕೃತವಾಜ್ಞ್ಮಯದಲ್ಲಿ ನೀಚ ಯೆಂದರೆ ಬಲಹೀನ ಅಂತ ತಿಳಿಯತಕ್ಕದ್ದು.  ಗ್ರಹಗಳು - ಸಂಚಾರ ಕಾಲ

        ಧೀರ್ಘವೃತ್ತಾಕಾರ ಕಕ್ಷ್ಯೆಯಲ್ಲಿ ಸಂಚರಿಸುವ ಗ್ರಹಗಳು ಒಂದು ರಾಶಿಯಿಂದ ಇನ್ನೊಂದುರಾಶಿಗೆ ಸಂಚರಿಸುವುದಕ್ಕೆ ಹಿಡಿಯುವ ಕಾಲ  ರೀತಿಯಾಗಿದೆ.

 

                                    ರಾಶಿàರಾಶಿ                         12 ರಾಶಿಗಳು

1.     ಚಂದ್ರ   -        2 ½ ದಿನ                             27 ದಿನ (ಸುಮಾರು)

2.     ಬುಧ    -        23 ದಿನ (ಸುಮಾರು)               

3.     ಶುಕ್ರ    -        27 ದಿನ (ಸುಮಾರು)                1 ವರ್ಷ

4.     ಸೂರ್ಯ -      30 ದಿನ                                1 ವರ್ಷ

5.     ಕುಜ     -        45 ದಿನ                              687 ದಿನಗಳು

6.     ಗುರು    -        1 ವರ್ಷ                              12 ವರ್ಷಗಳು

7.     ರಾಹು   -        1 ½ ವರ್ಷ                           18 ವರ್ಷಗಳು

8.     ಕೇತು   -        1 ½ ವರ್ಷ                           18 ವರ್ಷಗಳು

9.     ಶನಿ     -        2 ½ ವರ್ಷ                           30 ವರ್ಷಗಳು

** ಗ್ರಹಗಳು ಮತ್ತು ಅವುಗಳ ಸಂಚಾರವನ್ನು ಜ್ಯೋತಿಷಶಾಸ್ತ್ರವನ್ನು ಅಧ್ಯಯನಮಾಡುವವರು ಪಂಚಾಂಗದ ಮೂಲಕ ಅಥವ ಕಂಪ್ಯೂಟರ್, ಸ್ಮಾರ್ಟ್ ಫೋನ್ ಸಹಾಯದಿಂದ ಅನುನಿತ್ಯ ತಿಳಿಯತಕ್ಕದ್ದುComments