e-PATA(Kannada)‎ > ‎

Class 7: Yogakaraka, Grahagala Drusti ..etc

Class 7


ತ್ರಿಕೋಣಸ್ಥಾನ:-
ಇದನ್ನೇ ಲಕ್ಷ್ಮೀಸ್ಥಾನವೆನ್ನುತ್ತಾರೆ. ಲಗ್ನ-ಪಂಚಮ-ನವಮ ಸ್ಥಾನಗಳನ್ನು ತ್ರಿಕೋಣಸ್ಥಾನವೆನ್ನುತ್ತಾರೆ. ಇವು ಪೂರ್ವಜನ್ಮಪುಣ್ಯಸ್ಥಾನಗಳು. ಮನುಷ್ಯಮಾಡಿದ ಫಲಾಪೇಕ್ಷರಹಿತ ಕರ್ಮಗಳಿಗೆ ಫಲವನ್ನು ಸೂಚಿಸುತ್ತದೆ. ತ್ರಿಕೋಣಸ್ಥಾನಗಳು ಮತ್ತು ತ್ರಿಕೋಣಾಧಿಪಥಿಗಳು ಬಲವಾಗಿದ್ದಲ್ಲಿ ಮನುಷ್ಯ ತೃಪ್ತಿಯನ್ನು ಮತ್ತು ಶಾಂತಿಯನ್ನು ಹೊಂದುತ್ತಾನೆ.

ಕೇಂದ್ರಸ್ಥಾನಗಳು:-
ಇದನ್ನೆ ವಿಷ್ಣುಸ್ಥಾನಗಳೆನ್ನುತ್ತಾರೆ. ಲಗ್ನ-ಚತುರ್ಥ-ಸಪ್ತಮ-ದಶಮಸ್ಥಾನಗಳನ್ನು ಕೇಂದ್ರಸ್ಥಾನಗಳು. ಜನ್ಮಾಂತರದಲ್ಲಿ ಫಲವನ್ನು ಬಯಸಿ ಮಾಡಿದ ಕರ್ಮಗಳಿಗೆ ಫಲವನ್ನು ಸೂಚಿಸುತ್ತದೆ. ಇವು ಕೂಡಾ ಪೂರ್ವಜನ್ಮದ ಪುಣ್ಯಸ್ಥಾನಗಳು. ಕೇಂದ್ರಸ್ಥಾನಗಳು ಬಲವಾಗಿದ್ದಲ್ಲಿ ಮನುಷ್ಯನಿಗೆ ಸುಖ-ಕೀರ್ತಿ-ಭೋಗವು ವುಂಟಾಗುತ್ತದೆ. 

ದುಷ್ಠಸ್ಥಾನಗಳು:-
ಇವನ್ನು ಪೂರ್ವಜನ್ಮ ಪಾಪಸ್ಥಾನಗಳೆನ್ನುತ್ತಾರೆ. ಷಷ್ಟ-ಅಷ್ಟi-ದ್ವಾದಶಸ್ಥಾನಗಳನ್ನು ದುಷ್ಟಸ್ಥಾನಗಳು. ಪೂರ್ವಜನ್ಮದ ಪಾಪವನ್ನು ಈ ಭಾವಗಳು ಸೂಚಿಸುತ್ತದೆ. ದುಷ್ಟಸ್ಥಾನಗಳು ಭಲವಾಗಿದ್ದಲ್ಲಿ ರೋಗ-ನಷ್ಠ-ಅತೃಪ್ತಿ-ಶೋಕ-ದುಃಖ ವುಂಟಾಗುತ್ತದೆ. ಮನುಷ್ಯತೊಂದರೆಗೆ ವೊಳಗಾಗುತ್ತಾನೆ.

ಯೋಗಕಾರಕ:-
ಯಾವ ಗ್ರಹ ಒಂದು ಕೇಂದ್ರಾಧಿಪತ್ಯ ಮತ್ತು ಒಂದು ತ್ರಿಕೋಣಾಧಿಪಥ್ಯವನ್ನು ಹೊಂದುತ್ತದೋ ಆಗ್ರಹವನ್ನು ಯೋಗಕಾರಕ ಗ್ರಹವೆನ್ನುತ್ತಾರೆ. ಯೋಗಕಾರಕನಾದ ಗ್ರಹ ಹೆಚ್ಚಿನ ಶುಭವನ್ನುಂಟುಮಾಡುತ್ತಾನೆ.
ಯೋಗಕಾರಕ ಪಾಪಗ್ರಹವಾದರೂ ಶುಭಫಲವನ್ನೇ ಸೂಚಿಸುತ್ತಾನೆ. 

1) ವೃಷಭಲಗ್ನ : ನವಮ-ದಶಮಾಧಿಪಥಿ ಶನಿ ಯೋಗಕಾರಕ.
2) ತುಲ ಲಗ್ನ : ಚತುರ್ಥ-ಪಂಚಮಾಧಿಪಥಿ ಶನಿ ಯೋಗಕಾರಕ.
3) ಮಕರ ಲಗ್ನ : ಪಂಚಮ-ದಶಮಾಧಿಪಥಿ ಶುಕ್ರ ಯೋಗಕಾರಕ.
4) ಕುಂಭ ಲಗ್ನ : ಚತುರ್ಥ-ನವಮಾಧಿಪಥಿ ಶುಕ್ರ ಯೋಗಕಾರಕ
5) ಕರ್ಕ ಲಗ್ನ : ಪಂಚಮ-ದಶಮಾಧಿಪಥಿ ಕುಜ ಯೋಗಕಾರಕ
6) ಸಿಂಹ ಲಗ್ನ : ಚತುರ್ಥ-ನವಮಾಧಿಪಥಿ ಕುಜ ಯೋಗಕಾರಕ

* ಉಳದ ಲಗ್ನಗಳಿಗೆ ಯೋಗಕಾರಕ ಗ್ರಹಗಳು ಇಲ್ಲ.

ಕೇಂದ್ರಾಧಿಪತ್ಯ ದೋಷ:-
ಒಂದು ಶುಭಗ್ರಹ ಎರಡು ಕೇಂದ್ರಾಧಿಪತ್ಯವನ್ನು ಹೊಂದಿದರೆ ಆ ಗ್ರಹ ಬಲಹೀನವಾಗುತ್ತದೆ. ಇದನ್ನೇ ಕೇಂದ್ರಾಧಿಪತ್ಯ ದೋಷವೆನ್ನುತ್ತಾರೆ. ಕೇಂದ್ರಾಧಿಪತ್ಯವನ್ನು ಹೊಂದಿದ ಶುಭಗ್ರಹ ಶುಭಫಲವನ್ನಾಗಲಿ ಅಥವ ಪಾಪಫಲವನ್ನಾಗಲಿ ಸೂಚಿಸುವುದಿಲ್ಲ.

1) ಮಿಥುನ ಲಗ್ನ : ಸಪ್ತಮ-ದಶಮಾಧಿಪಥಿ ಗುರು ಗ್ರಹಕ್ಕೆ ಕೇಂದ್ರಾಧಿಪಥ್ಯದೋಷ.
2) ಕನ್ಯ ಲಗ್ಯ : ಚತುರ್ಥ-ಸಪ್ತಮಾಧಿಪಥಿ ಗುರು
3) ಧನುರ್ಲಗ್ನ : ಸಪ್ತಮ-ದಶಮಾಧಿಪಥಿ ಬುಧ
4) ಮೀನ ಲಗ್ನ : ಚರುಥ-ಸಪ್ತಮಾಧಿಪಥಿ ಬುಧ

* ಉಳದ ಲಗ್ನಗಳಿಗೆ ಕೇಂದ್ರಾಧಿಪಥ್ಯದೋಷವು ಬರುವುದಿಲ್ಲ.

ಶುಭಗ್ರಹಗಳು - ಪಾಪ ಗ್ರಹಗಳು

ತಾರತಮ್ಯದಲ್ಲಿ ಗ್ರಹಗಳು ಮನುಷ್ಯರಿಗಿಂತಲು ಬಹಳ ಎತ್ತರದಲ್ಲಿ ಇರುವ ದೇವತೆಗಳು. ಅವರಲ್ಲಿ ಶುಭ-ಪಾಪ ಲಕ್ಷಣಗಳು ಇರುವುದಿಲ್ಲ. ಶಾಸ್ತ್ರದ ಪ್ರಕಾರ ಶುಭಸೂಚನೆಯನ್ನು ಮಾಡುವ ಗ್ರಹಗಳನ್ನು ಶುಭಗ್ರಹಗಳೆನ್ನುತ್ತಾರೆ. ಪಾಪಸೂಚನೆ ಮಾಡುವ ಗ್ರಹಗಳನ್ನು ಪಾಪಗ್ರಹಗಳೆನ್ನುತ್ತಾರೆ. 

೧. ಸಹಜ ಶುಭಗ್ರಹಗಳು :
ಗುರು. ಶುಕ್ರ, ಶುಭಗ್ರಹಗಳ ಜೊತೆ ಇರುವ ಬುಧ, ಪೂರ್ಣಚಂದ್ರ ಶುಭಗ್ರಹಗಳು.
೨. ಸಹಜ ಪಾಪಗ್ರಹಗಳು :
ಶನಿ, ಕುಜ, ರಾಹು, ಕೇತು, ಪಾಪಗ್ರಹಗಳ ಜೊತೆ ಇರುವ ಬುಧ, ಕ್ಷೀಣ ಚಂದ್ರ.

* ಸೂರ್ಯ ಶುಭಗ್ರಹ ಅಥವ ಪಾಪಗ್ರಹವಲ್ಲ. ಕೄರಗ್ರಹವೆನ್ನುತ್ತಾರೆ.
* ಬುಧ ರಾಶಿಯಲ್ಲಿ ಒಬ್ಬನೆ ಇದ್ದಲ್ಲಿಕೂಡಾ ಪಾಪಗ್ರವೇ ಆಗುತ್ತದೆ. ಒಂದು ಶುಭಗ್ರಹ ಮತ್ತು ಒಂದು ಪಾಪಗ್ರಹ ಜೊತೆ ಯಿದ್ದಲ್ಲಿ ಶುಭಗ್ರಹವೇ ಆಗುತ್ತದೆ.
* ಫಲವನ್ನು ಹೇಳುವಾಗ ಶುಭ-ಪಾಪ ಗ್ರಹಗಳ ಸಂಭಂದವನ್ನು ತಪ್ಪದೇ ಪರಿಶೀಲನೆಮಾಡಬೇಕು.

ಗ್ರಹಗಳ ದೃಷ್ಠಿ:- 
ಗ್ರಹಗಳ ಮದ್ಯ ಇರುವ ಸಂಭಂದದಲ್ಲಿ ದೃಷ್ಟಿ ಸಂಭಂದ ಒಂದು. ಪ್ರತಿ ಒಂದು ಗ್ರಹ ತಾನಿರುವರಾಶಿಯಿಂದ ಏಳನೆಯ ರಾಶಿಯನ್ನು ಮತ್ತು ಏಳನೆಯ ರಾಶೊಯಲ್ಲಿರುವ ಗ್ರಹಗಳ ಮೇಲೆ ದೃಷ್ಠಿ ಇರುತ್ತದೆ. ಗುರು, ಕುಜ ಮತ್ತು ಶನಿ ಗ್ರಹಗಳಿಗೆ ವಿಶೇಷ ದೃಷ್ಠಿ ಇರುತ್ತದೆ.

ಸೂರ್ಯ, ಚಂದ್ರ, ಬುಧ, 
ಶುಕ್ರ, ರಾಹು, ಕೇತುಷ್ಠ್ - 7 ದೃಷ್ಠಿ
ಗುರು - 5, 7, 9 ದೃಷ್ಠಿ
ಕುಜ - 4, 7, 8 ದೃಷ್ಠಿ
ಶನಿ - 3, 7, 10 ದೃಷ್ಠಿ

ಗ್ರಹಗಳ ದೃಷ್ಠಿ ಸಂಭಂದದಿಂದ ಫಲ, ಮತ್ತು ಫಲಾನುಭವ ಕಾಲ ಬದಲಾಗುತ್ತದೆ. ಹಾಗಾಗಿ ದೃಷ್ಟಿ ಸಂಭಂದವನ್ನು ಖಂಡಿತವಾಗಿ ನೋಡತಕ್ಕದ್ದು.

ಗ್ರಹಗಳ ಸಂಭಂದ ಬಗ್ಗೆ..
ಗ್ರಹಗಳಿಗೆ ಮೂರುತರ ಸಂಭಂದವಿರುತ್ತದೆ

೧. ಸ್ಥಾನ ಸಂಭಂದ - ಒಂದು ಗ್ರಹ ಒಂದು ಭಾವ ಸ್ಥಾನದಲ್ಲಿರುವುದು
೨. ಸಂಯೋಗ ಸಂಭಂದ - ಒಂದು ಗ್ರಹ ಮತ್ತೊಂದು ಗ್ರಹದ ಜೊತೆ ಇರುವುದು.
೩. ದೃಷ್ಠಿ ಸಂಭಂದ - ಒಂದು ಗ್ರಹ ಮತ್ತೊಂದು ಗ್ರಹವನ್ನು ಅಥವ ಭಾವವನ್ನು ನೋಡುವುದು.
* ಮೇಲೆ ತಿಳಿಸಿದ ಯಾವುದಾದರು ಒಂದು ಸಂಭಂದವಿರುತ್ತದೆ.

Comments