e-PATA(Kannada)‎ > ‎

Class 3: Astronomy relevant to Astrology

Day 3

    ಜ್ಯೋತಿಷಶಾಸ್ತ್ರದ ಫಲಭಾಗವನ್ನು ಅಧ್ಯಯನವನ್ನು ಮಾಡುವುದಕ್ಕೆ ಮುನ್ನ ಕಾಲವನ್ನು ಗುರ್ತಿಸುವುದು, ಕಾಲದ ಬಲವನ್ನು ತಿಳಿದುಕೊಳ್ಳುವ ಪ್ರಯತ್ನಮಾಡಬೇಕಾಗುತ್ತದೆ. ಈಗಿನ ಕಾಲದಲ್ಲಿ ಕಾಲವನ್ನು ತಿಳಿದುಕೊಳ್ಳುವುದಕ್ಕೆ ಗಡಿಯಾರವನ್ನು ಬಳಿಸುತ್ತೇವೆ. ಗಡಿಯಾರದ ಸಹಾಯದಿಂದ ಕಳೆದ ಗಂಟೆಗಳು, ನಿಮಿಷಗಳು ಮತ್ತು ಸೆಕೆಂಡುಗಳನ್ನು ತಿಳಿದುಕೊಳ್ಳುತ್ತೇವೆ. ನಾವು ಬಳಿಸುವ ಕೇಲೆಂಡರ್ ಸಹಾಯದಿಂದ ದಿನ, ವಾರ, ಆಂಗ್ಲ ಮಾಸವನ್ನು, ವರ್ಷದ ಸಂಖ್ಯೆಯನ್ನು ತಿಳಿದುಕೊಳ್ಳುತ್ತೇವೆ. ಇದು ಪಾಶ್ಚಾತ್ಯರಿಂದ ಪಡೆದು ಅನುಸರಿಸುತ್ತಿರುವ ಪದ್ಧತಿ. ಪಾಶ್ಚಾತ್ಯರ ಸಮಯ ಸೂಚೆನೆ ಮಾಡುವ ಪದ್ಧತಿಯಲ್ಲಿ ಬಲಾಬಲಗಳ ನಿರ್ಣಯಮಾಡುವ ಪದ್ಧತಿ ಇಲ್ಲ. ಉದಾಹರಣೆಗೆ ಪಾಶ್ಚಾತ್ಯ ಪದ್ಧತಿಗೆ ಅನುಗುಣವಾಗಿ ಕೆಲಸಮಾಡುವ ಗಡಿಯಾರದಲ್ಲಿ ಸೂಚಿಸುವ ಗಂಟೆಗಳಲ್ಲಿ ಯಾವ ಸಮಯ ಬಲವಿದೆ. 2 ಗಂಟೆ ಬಲವೋ 5 ಗಂಟೆ ಬಲವೋ? ವಿವಾಹಾದಿ ಶುಭಕಾರ್ಯಗಳಿಗೆ ಜನವರಿ ಮಾಸ ವೊಳ್ಳೇದೋ ಏಪ್ರಿಲ್ ಮಾಸ ವೊಳ್ಳೆಯದೋ? ಇದರಬಗ್ಗೆ ಯಾವ ಉಲ್ಲೇಕವಿಲ್ಲ. ಹಾಗಾಗಿ ವಿವಾಹಾದಿ ಶುಭಕಾರ್ಯಗಳಿಗೆ, ಹಬ್ಬಗಳ ನಿರ್ಣಯಕ್ಕೆ, ಶ್ರಾದ್ದಾದಿ ತಿಥಿಗಳ ನಿರ್ಣಯಮಾಡುವುದಕ್ಕೆ ಪಾಶ್ಚಾತ್ಯ ಸಾಂಪ್ರದಾಯದಲ್ಲಿರುವ ಸಮಯ ಪದ್ಧತಿ ಉಪಯೋಗಕಾರಿಯಾಗುವುದಿಲ್ಲ.

ನಮ್ಮ ವೈಧೀಕ ಸಾಂಪ್ರದಾಯದಲ್ಲಿರುವ ಪ್ರಾಚೀನ ಸಮಯ ಸೂಚನ್ ಮಾಡುವ ಪದ್ಧತಿಯಲ್ಲಿ ಸಮಯವನ್ನು ತಿಳಿಸುವುದು ಮಾತ್ರವಲ್ಲದೇ ಸಮಯದ ಬಲಾಬಲಗಳನ್ನು ಕೂಡ ನಿರ್ಣಯಮಾಡುವ ಪದ್ಧತಿಯಿದೆ. ಉದಾಹರಣೆಗೆ ವಿವಾಹಾದಿ ಕಾರ್ಯಗಳಿಗೆ ವೈಶಾಖಮಾಸ ವೊಳ್ಳೆಯದೋ ಅಥವಾ ಆಷಾಡಮಾಸ ವೊಳ್ಳೆಯದೋ ನಿರ್ಣಯವಿದೆ. ಮಂಗಳವಾರ ವೊಳ್ಳೆಯದೋ ಗುರುವಾರ ವೊಳ್ಲೆಯದೋ ಕ್ರಮವಿದೆ. ವಿವಾಹಾದಿ ಮುಹೂರ್ತಗಳಿಗೆ, ಜಾತಕದ ಮತ್ತು ಪ್ರಶ್ನೆಬಲವನ್ನು ತಿಳಿದುಕೊಳ್ಳುವುದಕ್ಕೆ ನಮ್ಮ ಪ್ರಾಚೀನರು ಅನುಸರಿಸುತ್ತಿದ್ದಂತ ಸಮಯ ಪದ್ಧತಿಯು ಪ್ರಯೋಜನಕಾರಿಯಾಗುತ್ತದೆ. ಹಾಗಾಗಿ ಕಾಲಬಲವನ್ನು ತಿಳಿಯುವುದಕ್ಕೆ ಪ್ರಾಚೀನ ಪದ್ಧತಿಯನ್ನು ಅಧ್ಯಯನಮಾಡುವುದು ಅವಶ್ಯವಾಗಿದೆಈಗಿನ ನಮ್ಮ ಜೀವನ ಕ್ರಮ ಗಡಿಯಾರಗ ಮತ್ತು ಕೇಲೆಂಡರ್ ಮೇಲೆ ಆಧಾರಪಟ್ಟಿರುವುದರಿಂದ ನಮ್ಮ ಪ್ರಾಚೀನ ಪದ್ಧತಿಯನ್ನು ತಿಳಿದು ಆಚರಣೆಯಲ್ಲಿಡುವುದು ಕಷ್ಟತರವಾದ ಕೆಲಸ. ಹಾಗಾಗಿ ಕಾಲಬಲವನ್ನು ತಿಳಿದುಕೊಳ್ಳುವ ಅಗತ್ಯವಿದ್ದಲ್ಲಿ ಮಾತ್ರ ಪ್ರಾಚೀನಪದ್ಧತಿಯನ್ನು ಬಳಿಸುವುದು ಉತ್ತಮ.

ಕಾಲಬಲವನ್ನು ತಿಳಿದುಕೊಳ್ಳುವುದಕ್ಕೆ ಮುನ್ನ ಕಾಲವನ್ನು ಗುರ್ತಿಸುವು ಕ್ರಮದಬಗ್ಗೆ ತಿಳಿದುಕೊಳ್ಳೋಣ. ಸಮಯವನ್ನು ತಿಳಿಯುವುದಕ್ಕೆ ನಾವು ಗಡಿಯಾರವನ್ನು ಬಳಿಸಿದಂತೆ ನಮ್ಮ ಪ್ರಾಚೀನರ ಗ್ರಹಗಡಿಯಾರವನ್ನು ಬಳಿಸುತ್ತಿದ್ದರು ಅಂದರೇ ಸೂರ್ಯ ಮತ್ತು ಸೂರ್ಯನ ಸುತ್ತು ಚಲಿಸುವ ಗ್ರಹಗಳ ಗಡಿಯಾರ. ಭಗವಂತ ಆಳುವ ಹದಿನಾರುಲೋಕಗಳಿಗೂ ಸಮಯವನ್ನು ಗುರ್ತಿಸುವುದಕ್ಕೆ ಗ್ರಹ ಗಡಿಯಾರವೇ ಪ್ರಮಾಣ. ನಾವು ಅನುಸರಿಸುತ್ತಿರುವ ಪಾಶ್ಚಾತ್ಯರ ಸಮಯ ಪದ್ಧತಿಗು ನಮ್ಮ ಪ್ರಾಚೀನರು ಬಳಿಸುತಿದ್ದ ಗ್ರಹಗಡಿಯಾರ ಪದ್ಧತಿಗೂ ಕೆಲವಿನ ಹತ್ತರ ಸಂಭಂದವಿದೆ. ಅದರಬಗ್ಗೆ ತಿಳಿಯೋಣ.

Image result for wall clock                  Image result for solar system watch 

    ನಾವು ಬಳಿಸುವ ಗಡಿಯಾರದಲ್ಲಿ ಗಂಟೆಗಳನ್ನು ತಿಳಿಸುವುದಕ್ಕೆ 1, 2, 3..12 ವರಿಗು ಸಂಖ್ಯೆಗಳು ಇರುತ್ತವೆ, ಅದೇ ತರಹ ಗ್ರಹಗಡಿಯಾರದಲ್ಲಿ ಸಂಖ್ಯಗಳ ಸ್ಥಾನಗಳಲ್ಲಿ ಹೆಸರುಗಳನ್ನು ಬಳಿಸುತ್ತಿದ್ದರು (ಮೇಷ, ವೃಷಭ, ಮಿಥುನ.....ಮೀನ). ನಮ್ಮ ಗಡಿಯಾರದಲ್ಲಿ ನಿಮಿಷಗಳನ್ನು ಸೂಚನೆ ಮಾಡುವುದಕ್ಕೆ ಬಳಿಕೆಯಲ್ಲಿರುವ ರೇಕೆಗಳ ಸ್ಥಾನದಲ್ಲಿ ರಾಶಿಗು-ರಾಶಿಗು ಅಂತರ ನಕ್ಷತ್ರಗಳು-ಪಾದಗಳು ಬಳಿಕೆಯಲ್ಲಿದ್ದವು. ಗಡಿಯಾರದಲ್ಲಿರುವ ಸೂಚಿಕೆಗಳಿಂದ ನಾವು ಹೇಗೆ ಸಮಯವನ್ನು ಗಂಟಿಗಳು ನಿಮಿಷಗಳು ಗುರ್ತಿಸುತಿದ್ದವೋ ಅದೇರೀತಿ ರಾಶಿಗಳಲ್ಲಿ, ನಕ್ಷತ್ರಗಳಲ್ಲಿ ಸಂಚರಿಸುವ ಗ್ರಹಗಳಿಂದ ಸಮಯವನ್ನು ಗುರ್ತಿಸುತಿದ್ದರು ನಮ್ಮ ಪ್ರಾಚೀನರು. ಈಗ ನಾವು ಕೇವಲ ಜಾತಕ, ಪ್ರಶ್ನೆ ಮತ್ತು ಮುಹೂರ್ತಗಳ ವಿಚಾರದಲ್ಲಿ ಮಾತ್ರ ಪ್ರಾಚೀನಪದ್ಧತಿಯನ್ನು ಬಳಿಸುತ್ತಿದ್ದೇವೆ ವಿಶ್ವಗಡಿಯಾರವನ್ನು ಅರ್ಥಮಾಡಿಕೊಳ್ಳೊವುದಕ್ಕಿಂತಲು ಮುಂಚಿತವಾಗಿ ಖಗೋಳಶಾಸ್ತ್ರವನ್ನು ಸ್ಪರ್ಶೆಮಾಡಬೇಕಾಗುತ್ತದೆ. ನಾವು ಸಣ್ಣವಯಸ್ಸಿನ್ನಲ್ಲಿ ವಿಜ್ಞಾನಶಾಸ್ತ್ರದಲ್ಲಿ ಕಲಿತಂತ ಸೌರಕುಟುಂಬದಬಗ್ಗೆ (Solar System) ಬಗ್ಗೆ ಮನವರಿಕೆ ಮಾಡಿಕೊಳ್ಳೋಣ.

    ಖಗೋಳದಲ್ಲಿ ಸೂರ್ಯ ಮತ್ತು ಸೂರ್ಯನ ಸುತ್ತಲೂ ಬುಧ, ಶುಕ್ರ, ಭೂಮಿ, ಕುಜ, ಗುರು, ಶನಿ, ಇಂದ್ರ, ವರುಣ ಮತ್ತು ಯಮ ಗ್ರಹಗಳು ಕ್ರಮವಾಗಿ ಧೀರ್ಘವೃತ್ತಾಕಾರ ಕಕ್ಷೆಯಲ್ಲಿ ಸಂಚರಿಸುತ್ತಿವೆ. ಧೀರ್ಗವೃತ್ತಾಕಾರ ಕಕ್ಷೆಯನ್ನು 12 ರಾಶಿಗಳನ್ನಾಗಿ ವಿಭಾಗಮಾಡಲಾಗಿದೆ. ಒನ್ನೊಂದು ರಾಶಿಯನ್ನು 30 ಭಾಗಗಳನ್ನಾಗಿ ಮಾಡಲಾಗಿದೆ (30 ಡಿಗ್ರೀಗಳು). ರಾಶಿಗಳ ಅಂತರದಲ್ಲಿ 27 ನಕ್ಷತ್ರಗಳು ಹೊಂದಾಣಿಕೆ ಆಗಿವೆ. ಒನ್ನೊಂದು ನಕ್ಷತ್ರವನ್ನು ನಾಕು ಭಾಗಮಾಡಲಾಗಿದೆ ಇದನ್ನೆ ಪಾದಗಳು ಯೆನ್ನುತ್ತಾರೆ. ಒನ್ನೊಂದು ನಕ್ಷತ್ರಕ್ಕು ನಾಕು ಪಾದಗಳು ಇದ್ದಲ್ಲಿ 27 ನಕ್ಷತ್ರಗಳಿಗೂ 108 ಪಾದಗಳು ಇರುತ್ತವೆ (27 x 4 = 108). 12 ರಾಶಿಗಳ ಅಂತರದಲ್ಲಿ 27 ನಕ್ಷತ್ರಗಳು ಅಂದರೇ 108 ಪಾದಗಳು ಇದ್ದಲ್ಲಿ ಒನ್ನೊಂದು ರಾಶಿಗೂ 9 ಪಾದ (108/12) ಅಥವಾ 2 ನಕ್ಷತ್ರ 1 ಪಾದ ಇರುತ್ತದೆ.

ಕಾಲಚಕ್ರ = 360° = 12 ರಾಶಿಗಳು  = 27  ನಕ್ಷತ್ರಗಳು = 108 ಪಾದಗಳು

ಒನ್ನೊಂದು ರಾಶಿ = 30°

ಒನ್ನೊಂದು ನಕ್ಷತ್ರ= 13°20’

ಒನ್ನೊಂದು ಪಾದ = 3°20’


ರಾಶಿಗಳು

ಮೇಷೋ ವೃಷಶ್ಚಮಿಥುನಃ ಕರ್ಕಃ ಸಿಂಹಶ್ಚ ಕನ್ಯಕಾ |

ತುಲಾಲಿಧನುರ್ನಕ್ರಃ ಘಟಮೀನಾಶ್ಚ ರಾಶಯಃ ||

 

- ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ ಎಂಬುದಾಗಿ 12 ರಾಶಿಗಳ ಹೆಸರುಗಳು.


ನಕ್ಷತ್ರಗಳು

ಅಶ್ವಿನೀಭರಣೀಚೈವ ಕೃತ್ತಿಕಾ ರೋಹಿಣಮೃಗಃ|

ಆರ್ದ್ರಾಪುನರ್ವಸುಃಪುಷ್ಯಸ್ತತೋಶ್ಲೇಷಾ ಮಘಾ ತಥಾ||36||

ಪೂರ್ವಾಫಲ್ಗುನೀಕಾ ತಸ್ಮಾದುತ್ತರಾಫಾಲ್ಗುನೀ ತತಃ|

ಹಸ್ತಶ್ಚಿತ್ರಾ ತಥಾ ಸ್ವಾತಿ ವಿಶಾಖಾ ತದನಂತರಮ್||37||

ಅನೂರಾಧಾ ತತೋ ಜ್ಯೇಷ್ಠಾ ತತೋ ಮೂಲಂ ನಿಗದ್ಯತೇ|

ಪೂರ್ವಾಷಾಢೋತ್ತರಾಷಾಢಸ್ತ್ವಭಿಜಿಚ್ಛ್ರವಣಸ್ತಥಾ||38||

ಧನಿಷ್ಠಾ ಶತತಾರಾಖ್ಯಂ ಪೂರ್ವಾಭಾದ್ರಪದಾ ತತಃ|

ಉತ್ತರಾಭಾದ್ರಕಂ ಚೈವ ರೇವತ್ಯಾತಾನಿ ಭಾನಿಚ||39||

ಸಪ್ತವಿಂಶತಿ ಭಾನಾಂ ನವಭಿರ್ನವಭೀ ಪದೈಃ|

ಅಶ್ವಿನೀ ಪ್ರಮುಖಾನಾಂ ಮೇಷಾದ್ಯಾ ರಾಶಯಃ ಸ್ಮೃತಾಃ||

 

    - 12 ರಾಶಿಗಳಲ್ಲಿ 27 ನಕ್ಷತ್ರಗಳು ಅಥವಾ 108 ಪಾದಗಳು ಹೊಂದಾಣಿಗೆ ಆಗಿರುತ್ತವೆ ಅಂತ ಹಿಂದೆ ತಿಳಿಸಲಾಗಿದೆ. ಅವುಗಳ ವಿಚಾರ ಹೀಗಿದೆ.


ರಾಶಿಗಳಲ್ಲಿ ನಕ್ಷತ್ರಗಳು

ಅಶ್ವಿನೀ ಭರಣೀಕೃತ್ತಿಕಾ ಪಾದಂ ಮೇಷಃ|

ಕೃತ್ತಿಕಾಸ್ತ್ರಯಃ ಪಾದಾ ರೋಹಿಣೀ ಮೃಗಶಿರಾರ್ಧ ವೃಷಭಃ||54||

ಮೃಗಶಿರಾರ್ಧ ಆರ್ದ್ರಾ ಪುನರ್ವಸುಪಾದತ್ರಯಂ ಮಿಥುನಃ||

ಪುನರ್ವಸು ಪಾದಂ ಪುಷ್ಯ ಅಶ್ಲೇಷಾಂತಂ ಕರ್ಕಾಟಕಃ||55||

ಮಘಾ ಪೂರ್ವಾ ಉತ್ತರಾಫಲ್ಗುನೀಪಾದ ಮೇಕಂ ಸಿಂಹಃ|

ಉತ್ತರಾಫಲ್ಗುನೀತ್ರಯಃ ಪಾದಾಃ ಹಸ್ತಶ್ಚಿತ್ರಾರ್ಧಂ ಕನ್ಯಾ||56||

ಚಿತ್ರಾರ್ಧಂ ಸ್ವಾದಿ ವಿಶಾಖಾಪಾದತ್ರಯಂ ತುಲಾ|

ವಿಶಾಖಪಾದ ಮೇಕಮನುರಾಧಾ ಜ್ಯೇಷ್ಠಾಂತಂ ವೃಶ್ಚಿಕಃ||57||

ಮೂಲಂಚ ಪೂರ್ವಾಷಾಢೋತ್ತ ರಾಷಾಢಾಪಾದಮೇಕಂ ಧನುಃ|

ಉತ್ತರಾಷಾಢಾತ್ರಯಃ ಶ್ರವಣಧನಿಷ್ಠಾರ್ಧಂ ಮಕರಃ||58||

ಧನಿಷ್ಠಾರ್ಧಂ ಶತಭಿಷಾ ಪೂರ್ವಾಭಾದ್ರಾಸ್ತ್ರಯಃ ಕುಂಭಃ|

ಪೂರ್ವಾಭಾದ್ರಪಾದಂ ಉತ್ತರಾಭಾದ್ರ ರೇವತ್ಯಾಂತಂ ಮೀನಃ||59||

 

ಮೇಷ : ಅಶ್ವಿನಿ 1 2 3 4 ಪಾದಗಳು - ಭರಣಿ 1 2 3 4 ಪಾದಗಳು - ಕೃತ್ತಿಕ 1ನೆಯ ಪಾದ

ವೃಷಭ : ಕೃತ್ತಿಕ 2 3 4 ಪಾದಗಳು - ರೋಹಿಣಿ 1 2 3 4 ಪಾದಗಳು - ಮೃಗಶಿರ 1 2 ಪಾದಗಳು

ಮಿಥುನ : ಮೃಗಶಿರ 3 4 ಪಾದಗಳು - ಆರುದ್ರ 1 2 3 4 ಪಾದಗಳು - ಪುನರ್ವಸು 1 2 3 ಪಾದಗಳು

ಕರ್ಕ : ಪುನರ್ವಸು 4 ನೆಯ ಪಾದ - ಪುಷ್ಯಮಿ 1 2 3 4 ಪಾದಗಳು - ಆಶ್ಲೇಷ 1 2 3 4

ಸಿಂಹ : ಮಖ 1 2 3 4 ಪಾದಗಳು - ಪುಬ್ಬ 1 2 3 4 ಪಾದಗಳು - ಉತ್ತರ 1 ನೆಯ ಪಾದ

ಕನ್ಯ : ಉತ್ತರ 2 3 4 ಪಾದಗಳು - ಹಸ್ತ 1 2 3 4 ಪಾದಗಳು - ಚಿತ್ತ 1 2 ಪಾದಗಳು

ತುಲ : ಚಿತ್ತ 3 4 ಪಾದಗಳು - ಸ್ವಾತಿ 1 2 3 4 ಪಾದಗಳು - ವಿಶಾಖ 1 2 3 ಪಾದಗಳು

ವೃಶ್ಚಿಕ : ವಿಶಾಖ 4 ನೆಯ ಪಾದ - ಅನೂರಾಧ 1 2 3 4 ಪಾದಗಳು - ಜ್ಯೇಷ್ಟ 1 2 3 4

ಧನುಸ್ಸು : ಮೂಲ 1 2 3 4 ಪಾದಗಳು ಪೂ.ಷಾಡ 1 2 3 4 ಪಾದಗಳು .ಷಾಡ 1 ನೆಯ ಪಾದ

ಮಖರ : .ಷಾಡ 2 3 4 ಪಾದಗಳು - ಶ್ರವಣ 1 2 3 4 ಪಾದಗಳು - ಢನಿಷ್ಟ 1 2 ಪಾದಗಳು

ಕುಂಭ : ಧನಿಷ್ಟ 3 4 ಪಾದಗಳು - ಶತಭಿಷ 1 2 3 4 ಪಾದಗಳು ಪೂ.ಭಾದ್ರ 1 2 3 ಪಾದಗಳು

ಮೀನ : ಪೂ.ಭಾದ್ರ 4 ನೆಯ ಪಾದ - .ಭಾದ್ರ 1 2 3 4 ಪಾದಗಳು - ರೇವತಿ 1 2 3 4

 

    ರಾಶಿಗಳು, ನಕ್ಷತ್ರಗಳು, ಪಾದಗಳು ಸ್ಥಿರವಾಗಿರುತ್ತವೆ. ಗ್ರಹಗಳು ರಾಶಿಗಳ-ನಕ್ಷತ್ರಗಳ-ಪಾದಗಳ ಅಂತರದಲ್ಲಿ ಸಂಚರಿಸುತ್ತದೆ. ಕಾಲವನ್ನು ಗುರ್ತಿಸಬೇಕದಾಗ ಗ್ರಹಗಳು ಯಾವ ರಾಶಿಯಲ್ಲಿ-ಯಾವ ನಕ್ಷತ್ರದಲ್ಲಿ- ಯಾವ ಪಾದದಲ್ಲಿ ಸಂಚರಿಸುತ್ತದೆ ಅಂತ ತಿಳಿಯಬೇಕಾಗುತ್ತದೆಗ್ರಹಗಳ ಸಂಚಾರವನ್ನು ತಿಳಿಯಲು ಪಂಚಾಂಗ ಅಥವಾ ನಾವು ಬಳಿಸುತ್ತಿರುವ ಕಂಪ್ಯೋಟರ್ ಅಥವಾ ಸ್ಮಾರ್ಟ್-ಫೋನ್ ಮುಖಾಂತರವಾಗಿ ಗ್ರಹಗಳ ಗತಿಯನ್ನು(ಕಾಲವನ್ನು) ತಿಳಿಯತಕ್ಕದ್ದು.


ಗ್ರಹಗಳ ವಕ್ರಗಮನ

ವಕ್ರಿಯೆಂದರೆ ಗ್ರಹಗಳು ಹಿಂದಿರುಗಿ ಪ್ರಯಾಣಮಾಡುವುದು ಅಂತ ಅರ್ಥ. ಗ್ರಹಗಳು ಕೆಲವೊಮ್ಮೆ ಹಿಂದಿರುಗಿ ಪ್ರಯಾಣಮಾಡುವದು ಆಗುತ್ತದೆ. ಖಗೋಳಶಾಸ್ತ್ರದ ಪ್ರಕಾರ ಗ್ರಹಗಳು ಸವ್ಯದಿಶೆಯಲ್ಲಿ ಮಾತ್ರ ಸಂಚರಿಸುತ್ತವೆ. ಹಿಂದಿರುಗಿ (ಅಪಸವ್ಯ ದಿಶೆಯಲ್ಲಿ) ಸಂಚರಿಸುವುದಿಲ್ಲ. ಒಂದು ಲೌಖಿಕ ದುಷ್ಟಾಂತವನ್ನು ನೋಡೋಣ.

            ನಾವು ಒಂದು ಕಾರಿನಲ್ಲಿ ಪ್ರಯಾಣಮಾಡುತಿದ್ದೇವೆ ಅಂದುಕೊಳ್ಳೋಣ. ಪ್ರಯಾಣಿಸುವ ಕಾರಿನ ಮುಂದೆ ಒಂದು ದೊಡ್ಡ ಬಸ್ಸು ಪ್ರಯಾಣಿಸುತಿದೆ. ಈಗ ಕಾರಿನ ವೇಗವನ್ನು ಹೆಚ್ಚು ಮಾಡಿದರೆ ಏನಾಗುತ್ತದೆ? ಕಾರು ಮುಂದೆ ಹೋಗುತ್ತಿರುವ ಬಸ್ಸನ್ನು ದಾಟಿತ್ತಾ ಮುಂದೆವರಿಯುತ್ತದೆ. ಮುಂದೆವರೆಯುವ್ ಸಮಯದಲ್ಲಿ ಕಾರಿನಲ್ಲಿ ಪ್ರಯಾಣಿಸುವರಿಗೆ ಬಸ್ಸು ಹಿಂದಕ್ಕೆ ಹೋಗುತ್ತಿದ್ದಂತೆ ಕಾಣುತ್ತದೆ ಆದರೆ ಬಸ್ಸು ಮುಂದಕ್ಕೆ ಚಲಿಸುತ್ತದೆ. ಹಿಂದಕ್ಕೆ ಹೋಗುತ್ತಿದ್ದಂತೆ ಕಾಣಿಸಿಕೊಳ್ಳುವುದನ್ನೆ ಇಲ್ಲಿ ವಕ್ರಿಯೆನ್ನುತ್ತೇವೆ. ಗ್ರಹಗಳ ವಿಷಯಕ್ಕೆ ಬಂದಾಗ ನಾವು ಆಶ್ರಯವಿರುವ ಭೂಮಿ ಗ್ರಹ ಬೇರೆ ಗ್ರಹದ ವೇಗವನ್ನು ಅಧಿಗಮಿಸಿ ಮುಂದೆವರದಾಗ ನಮಗೆ ಗ್ರಹ ಹಿಂದಕ್ಕೆ ಹೋದಂತೆ ಕಾಣುತ್ತದೆ. ಕಾಣಿಸಿಕೊಳ್ಳುವ ಸಮಯದವರಗು ಗ್ರಹ ವಕ್ರಗಮನದಲ್ಲಿದೆ ಅಂತ ತಿಳಿಯುತ್ತೇವೆ. ರಾಹು-ಕೇತುಗಳು ಗ್ರಹಗಳು ಅಲ್ಲ ಅದುಕೇವಲ ಬಿಂದುಗಳು. ರಾಹು-ಕೇತುಗಳು ಯಾವಾಗಲೂ ವಕ್ರಗಮನದಲ್ಲೇ ಸಂಚರಿಸುತ್ತದೆ. ಸೂರ್ಯ-ಚಂದ್ರಾದಿಗಳು ವಕ್ರಿಯಾಗುವುದಿಲ್ಲ. ಜ್ಯೋತಿಷಶಾಸ್ತ್ರದಲ್ಲಿ ವಕ್ರಿಯಾದ ಗ್ರಹದ ಪ್ರಭಾವ ಅಧಿಕವಾಗಿರುತ್ತದೆ.

 

ಗ್ರಹಗಳ ಅಸ್ಥಂಗತ:-

            ಸೂರ್ಯನಿಗೆ ಸಮೀಪದಲ್ಲಿ ಸಂಚರಿಸುವ ಗ್ರಹವು ಅಸ್ಥಂಗತಕ್ಕೆ ವೊಳಗಾಗುತ್ತದೆ ಅಂದರೆ ಸೂರ್ಯನ ಪ್ರಕಾಶದ ಮುಂದೆ ಗ್ರಹಗಳ ಪ್ರಕಾಶ ಕಳೆದುಕೊಳ್ಳುತ್ತವೆ(ಕಾಣದಂತೆ ಆಗುತ್ತದೆ). ಚಂದ್ರ ಸೂರ್ಯನ ಹತ್ತರ ಬಂದಾಗ ತನ್ನ ಪ್ರಕಾಶವನ್ನು ಕಳೆದುಕೊಳ್ಳುತ್ತಾನೆ. ಚಂದ್ರ ಅಸ್ಥಂಗತವಾಗುವದನ್ನೆ ನಾವು ಅಮಾವಾಶ್ಯೆ ಯೆನ್ನಬಹುದು. ಚಾಯಗ್ರಹಗಳಾದ ರಾಹು-ಕೇತುಗಳನ್ನು ಬಿಟ್ಟು ಎಲ್ಲಾ ಗ್ರಹಗಳು ಅಸ್ಥಂಗತಕ್ಕೆ ವೊಳಗಾಗುತ್ತವೆ. ಕೆಳಗೆ ಗ್ರಹಗಳು ಮತ್ತು ಅವು ಅಸ್ಥಂಗತವಾಗುವ ಡಿಗ್ರೀಗಳನ್ನು ತಿಳಿಸಲಾಗಿದೆ. ಇದರ ಪ್ರಕಾರ ಗ್ರಹಗಳ ಅಸ್ತದ ವಿಚಾರವನ್ನು ತಿಳಿಯಬೇಕು.

            ಸೂರ್ಯನಿಂದ ಕುಜ 17 ಡಿಗ್ರೀಗಳ ಅಂತರದಲ್ಲಿ ಅಸ್ಥವನ್ನು ಹೊಂದುತ್ತಾನೆ. ಗುರು 11°, ಶುಕ್ರ , ಶನಿ 15°, ಬುಧ 14° (ವಕ್ರಿಯಾದಾಗ 12°)

Comments