Kannada Links & Articles

Here are some useful Kannada website links and articles for your enjoyment.


Recently our Ameri Kannada Shale completed its 4 th year, this news was also published in famous Kannada news paper Prajavani. 
We are happy to share the link and actual article for your enjoyment.  As Ameri Kannada Shale follows CT School Calender, parents are welcome to join their kids to learn Kannada Language. 

 
ಅಮೇರಿಕಾದಲ್ಲಿ ಕನ್ನಡ ಶಾಲೆಯ ನಾಲ್ಕನೇ ವಾರ್ಷಿಕ ಘಟಿಕೋತ್ಸವ ..!

ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಅಪರೂಪವಾಗಿ ದುರ್ಬೀನ್ ಇಡ್ಕೊಂಡು ಹುಡುಕಾಡೋ ಈ ಕಾಲದಲ್ಲಿ, ಇದ್ದರೂ ಮಕ್ಕಳೇ ಕನ್ನಡ ಶಾಲೆಗೆ ಬಾರದಂತಹ ಈ ಕಾಲದಲ್ಲಿ ..ದೂರದ ಅಮೇರಿಕಾದ ಕನೆಕ್ಟಿಕಟ್ನಲ್ಲಿ ಇರುವ ಅಮೇರಿಕನ್ನಡ ಶಾಲೆ ಯಶಸ್ವಿಯಾಗಿ ತನ್ನ ೪ ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಜೂನ್ ೧೫ ರಂದು ಕನೆಕ್ಟಿಕಟ್ನ ಸೌತ್ ವಿಂಡ್ಸರ್ ನಲ್ಲಿ ಏರ್ಪಡಿಸಿತ್ತು!

ಎಲ್ಲ ಮಕ್ಕಳು ತಮ್ಮ ಪೋಷಕರೊಂದಿಗೆ ಮತ್ತು ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ಪದಾದಿಕಾರಿಗಳು ಸಂಭ್ರಮದಿಂದ ಭಾಗವಹಿಸಿದ್ದ ಈ ೨೦೧೩ ವಾರ್ಷಿಕ ಘಟಿಕೋತ್ಸವ ಕು|ಸಾನ್ವಿಯ ಪ್ರಾರ್ಥನೆಯೊಂದಿಗೆ ಶುರುವಾದ ಮೇಲೆ, ಶ್ರೀಮತಿ ಅನಿತಾ ಜೋಯಿಸ್ ರವರಿಂದ ಸ್ವಾಗತ ಸಮಾರಂಭ ನಡೆಯಿತು. ಪ್ರತೀ ವಾರ ಒಂದೊಂದು ಉತ್ತಮ ಕನ್ನಡ ನೀತಿಕಥೆ ಹೇಳಿ ಮಕ್ಕಳಿಗೆ ರಂಜಿಸುತ್ತಿದ್ದ ರಘು ಸೋಸಲೆಯವರು ಕನ್ನಡ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನಂತರ ಕನೆಕ್ಟಿಕಟ್ನ ಕನ್ನಡ ಕೂಟ ಅದ್ಯಕ್ಷರಾದ ಶ್ರೀ. ದಿನೇಶ್ ಹರ್ಯಾಡಿಯವರಿಂದ ಒಂದು ಪುಟ್ಟ ಭಾಷಣ. ಆಮೇಲೆ ಎಲ್ಲ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲೇ ಎಲ್ಲರೊಂದಿಗೆ ಹಂಚಿಕೊಂಡ ಬಳಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಿಗೂ ಸರ್ಟಿಫಿಕೇಟ್ ನೀಡಲಾಯಿತು.

ವಂದನಾರ್ಪಣೆಯಾದಮೇಲೆ ಲಘು ಉಪಹಾರದೊಂದಿಗೆ ಈ ಚಿಕ್ಕ ಹಾಗು ಚೊಕ್ಕ ಕನ್ನಡ ಕಾರ್ಯಕ್ರಮಕ್ಕೆ ಪೋಷಕರೊಂದಿಗೆ ಇಂಡಿಯಾದಿಂದ ಆಗಮಿಸಿದ್ದ ಅಜ್ಜ-ಅಜ್ಜಿಯರು ಮಕ್ಕಳ-ಮೊಮ್ಮಕ್ಕಳ ಕನ್ನಡದ ಕಲಿಕೆ , ಅಭಿಮಾನ ನೋಡಿ ಸಂತೋಷಗೊಂಡರೆ ಅಕ್ಷರ ಕಲಿಸಿದ ಶ್ರೀಮತಿ ಅನಿತಾ ಜೋಯಿಸ್ ಹಾಗು ತಂಡದವರಿಗೆ ಏನೋ ಒಂದು ರೀತಿಯ ಸಂತೃಪ್ತಿ , ಸಮಾಧಾನ ...

ಹೀಗೆಯೇ ಈ ಕನ್ನಡ ಶಾಲೆ ಮುಂದೆಯೂ ಯಶಸ್ವಿಯಾಗಿ ನಡೆಯಲಿ ...ಕನ್ನಡದ ಕಂಪನ್ನು ಎಲ್ಲೆಡೆ ಹರಡಲಿ ಎಂದು ಆಶಿಸುವ ...

ಎಲ್ಲೇ ಇರು , ಹೇಗೆ ಇರು , ನೀ ಕನ್ನಡ ಕಲಿ-ನಲಿ ..!

- ನಾಗರಾಜ್.ಎಂ

 

 
 
Ċ
Swarna modi,
Mar 31, 2013, 8:23 PM
Comments