HKK Events‎ > ‎2013‎ > ‎

Ugadhi - ಯುಗಾದಿ

Ugadhi 2013 successfully celebrated with HKK members on April 27th 2013 @ Vallabhadham, Newington, CT
 
Enjoy all the photos and videos from our Photo & Video team

Performance on the stage ….1-15  minutes

Dress up time to shine on the stage  ….1-2 hours

Stage & Dress Rehearsals  …1-2 days

Brainstorming -Coordination  -Practice sessions   …. 2-4 weeks

Planning sessions for committee to host the event …. 1-3 months

Waiting time to celebrate UGADHI ….1 Year

Juggling efforts for parents & coordinators from end to end is COUNTLESS

    BUT

During the event, performances on the stage makes you SPEECHLESS...
     Happiness and  Satisfaction you achieved  are PRICELESS

 It is just the beginning…Opportunities are endless ONLY if you choose to Participate

 we are happy to see some new faces on the stage …Kids & Adults ..Welcome to HKK

Come ..Celebrate...Participate….Enjoy

===================================

Updates on  Ugadhi 2013
===================================
Namaskara,

On schedule programs, entertaining talents, opportunities for all ages on stage, homemade and ‘holige’ dinner with ‘harate’ and friends !  This sums up the HKK Ugadi 2013. Thanks to the EC members and volunteers who helped starting from setting up the venue till cleaning. Special thanks to all the ladies who prepared and served us the delicious homemade food.

Thank you all for attending the Ugadi celebration and making it a very successful event. HKK is able to bring these events year after year because of your continued help and support….thank you ! To all the newly joined families, warm welcome to HKK.

Our event was covered by several photographers & Videographers including Dileep Mangsuli, Dinesh Haryadi, Nagaraja  Maheswarappa and Amruth Kumar. Our heartfelt thanks to these 'MEN BEHIND MEMORIES'.
 
 
======================================================
 
Articles on HKK Ugadi-2013
 
 
======================================================
 ಅಮೇರಿಕಾದ ಕನೆಕ್ಟಿಕಟ್ನಲ್ಲಿ ಆಗಮಿಸಿದ ವಸಂತ !

ಕೊನೆಗೂ ಕಾಡಿಸಿ ಓಡಿಹೋದ ಚಳಿರಾಯ ,
...
ಹಿಂದಿನ ದಿನ ಸಣ್ಣಗೆ ಸುರಿದು ಹೋಗಿದ್ದ ಮಳೆರಾಯ,
ನಾ ಬಂದಿರುವೆ ಎಂದು ಎಲ್ಲೆಡೆ ಸಾರುತ್ತಿದ್ದ ವಸಂತರಾಯ ...

ಹೊರಗಡೆ ಎಲ್ಲೆಡೆ ಗಿಡಮರಗಳ ಮೇಲೆ ಎಲೆಗಳು ಚಿಗುರಿ, ಬಣ್ಣ ಬಣ್ಣದ ಹೂವುಗಳು ಅರಳುವುದನ್ನೇ ಕಾಯುತ್ತಿರುವ ಧುಂಬಿಗಳ ಝೇಂಕಾರ, ಪಕ್ಷಿಗಳ ಚಿಲಿಪಿಲಿ ಇಂಚರ...ಇವೆಲ್ಲದರ ಮಧ್ಯೆ ಒಳಗಡೆ ..ನಮ್ಮ ಕನ್ನಡ ಹೀರೋ ರಾಂಬೊ,ಅಣ್ಣಾಬಾಂಡ್ ಪವರ್ ಸ್ಟಾರ್ ಪುನೀತ್ , ಒಳಗೆ ಸೇರಿದರೆ ಗುಂಡು-ಹುಡುಗಿ ಆಗುವಳು ಗಂಡು ಪ್ರಖ್ಯಾತಿಯ ಮಾಲಾಶ್ರೀ, ಕರಾಟೆಕಿಂಗ್ - ಆಟೋರಾಜ ಶಂಕರ್ ನಾಗ್ ಎಲ್ಲಾ ಒಮ್ಮೆಲೇ ಸ್ಟೇಜ್ ಮೇಲೆ ಬಂದು ವಸಂತನ (ಯುಗಾದಿ) ಸ್ವಾಗತ ಮಾಡಿದಾಗ ಹೇಗಾಗಿರಬೇಡ ? ದೂರದ ಅಮೆರಿಕಾದ ಕನೆಕ್ಟಿಕಟ್ನಲ್ಲಿರುವ ನಮ್ಮ ಕನ್ನಡದ ಅಭಿಮಾನಿಗಳಿಗೆ ! :)

ಏಪ್ರಿಲ್ ೨೭ , ಶನಿವಾರದಂದು ಕನೆಕ್ಟಿಕಟ್ನ Newington ನಲ್ಲಿರುವ ಶ್ರೀ.ವಲ್ಲಬ್ಧಂ ಆಡಿಟೋರಿಯಮ್ನಲ್ಲಿ ಹೊಯ್ಸಳ ಕನ್ನಡ ಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಯುಗಾದಿ-೨೦೧೩ ಕಾರ್ಯಕ್ರಮಕ್ಕೆ, ಗಿಡ-ಮರ, ಹಕ್ಕಿ-ಪಕ್ಷಿಗಳಂತೆ ವಸಂತನ ಆಗಮನವನ್ನೇ ಎದುರು ನೋಡುತ್ತಿದ್ದ ಹೊರನಾಡ ಕನ್ನಡಿಗರು ಸಡಗರ,ಸಂಭ್ರಮದಿಂದ ಭಾಗವಹಿಸಿ ...ಉಲ್ಲಾಸ-ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು!

ಶ್ರೀಮತಿ ವ್ರಂದ ಐತ್ಹಲ್ ಮತ್ತು ಶ್ರೀಮತಿ ಶ್ರುತಿ ನಾಗರಾಜ್ ಅವರು ಹಾಡಿದ ಶ್ರೀಗಣೇಶ ಸ್ತುತಿಯೊಂದಿಗೆ ಈ ಯುಗಾದಿ ಕಾರ್ಯಕ್ರಮ ಸರಿಯಾಗಿ ಮಧ್ಯಾನ್ಹ ೩-೩೦ ಕ್ಕೆ ಪ್ರಾರಂಭವಾದ ಮೇಲೆ, ಕನ್ನಡ ಕೂಟದ ಹೊಸ ಅಧ್ಯಕ್ಷರಾದ ಶ್ರೀ ದಿನೇಶ್ ಹರ್ಯಾಡಿ ಎಲ್ಲರನ್ನು ಸ್ವಾಗತಿಸಿದ ನಂತರ... ಶ್ರೀ ಯಶವಂತ್ ಗಡ್ಡಿ,ರಘು ಸೋಸಲೆ ,ಸುಂದರೇಶ್ ರವರು ಹಾಡಿದ ಕನ್ನಡ ನಾಡ ಗೀತೆ "ಜೈ ಭಾರತ ಜನನಿಯ ತನುಜಾತೆ ! ಜಯಹೇ ಕರ್ನಾಟಕ ಮಾತೆ ! " ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು.

ನಂತರ P.G ಬೆಂಗಳೂರವರ ನಿರೂಪಣೆಯಲ್ಲಿ ನಡೆದ "ಸ್ಯಾಂಡಲ್ ವುಡ್ ಸ್ಟಾರ್ - ಮಕ್ಕಳ ಫ್ಯಾಷನ್ ಶೋ" ನಲ್ಲಿ ೭ ತಿಂಗಳ ಪುಟಾಣಿ ಆರುಶ್ ನಾಗರಾಜ್ "ರಾಂಬೊ ರಾಂಬೊ" ಅಂತಾ ಸ್ಟೈಲ್ ನಲ್ಲಿ , ಪ್ರಿಥ್ವಿ ಸೋಸಲೆ "ಅಣ್ಣಾ ಬಾಂಡ್ ಅಣ್ಣಾ ಬಾಂಡ್" ಅಂತಾ ಸೂಪರ್ ಬೈಕಲ್ಲಿ , ಸಚಿತ್ ಹುಲಿಕೆರೆ "ಶಂಕರ್ ನಾಗ್" ಆಗಿ,, ಮತ್ತೆ ಕೆಲವರು ಪುರಂದರ ದಾಸರಾಗಿ , ತಂದೆ-ತಾಯಿಯರ ಸೇವೆಯೇ ದೇವರ ಸೇವೆ ಎಂದು ಕಣ್ಣು ಕಾಣದ ತಂದೆತಾಯಿಯರನ್ನು ತನ್ನ ಹೆಗಲು ಮೇಲೆ ಹೊತ್ತು ಹೊಯ್ದ ಶ್ರವಣ ಕುಮಾರನಾಗಿ...ವಿಧ ವಿಧದ ಬಟ್ಟೆಗಳನ್ನು ಧರಿಸಿ ಸೊಗಸಾಗಿ ಸ್ಟೇಜ್ ಮೇಲೆ ಸಂಗೀತಕ್ಕೆ ಸರಿಯಾಗಿ ಹೆಜ್ಜೆ ಹಾಕಿದ್ದು ಎಲ್ಲರ ಮನ ಸೆಳೆಯಿತು.

ನಂತರ ಈ ಕೆಳಕಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ನೆರೆದ್ದಿದ್ದವರನ್ನು ರಂಜಿಸಿದವು.
* ಶ್ರೀ ವಿಘ್ನರಾಜಂ ಭಜೆ - ಶ್ರೀಮತಿ ಶಾರದಾ ನೋರಿ ನಿರೂಪಣೆಯಲ್ಲಿ ಮಕ್ಕಳಿಂದ ಕುಚುಪುಡಿ ನೃತ್ಯ
* ಶ್ರಮದ ಬೆಲೆ - ಶ್ರೀ.ರಘು ಸೋಸಲೆಯವರ ನಿರೂಪಣೆಯಲ್ಲಿ ಅಮೆರಿಕನ್ನಡ ಶಾಲೆಯ ಮಕ್ಕಳಿಂದ ಕಿರುನಾಟಕ
* ಮಾಮವತು ಶ್ರೀ ಸರಸ್ವತಿ - ಶ್ರೀಮತಿ ಶಾರದಾ ನೋರಿ ನಿರೂಪಣೆಯಲ್ಲಿ ಮಕ್ಕಳಿಂದ ಕುಚುಪುಡಿ ನೃತ್ಯ
* ಕು.ಮೇಘ ರಾವ್ ನೃತ್ಯ ನಿರ್ದೇಶನದಲ್ಲಿ ಸುಂದರವಾಗಿ ಮೂಡಿಬಂದ ಮಕ್ಕಳ ಕೋಲಾಟ ನೃತ್ಯ
* "೧ ೨ ೩ ವಿಷ್ಣುವರ್ಧನ" ಅಂತಾ ನಮ್ಮನ್ನೆಲ್ಲ ಅಗಲಿದರೂ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಸಾಹಸಸಿಂಹ ಡಾ|ವಿಷ್ಣು ವರ್ಧನ್ ನೆನಪಿಗಾಗಿ "ವಿಷ್ಣು ದಾದ - ಒಂದು ಕಿರುನೋಟ". ಶ್ರೀಮತಿ.ಸರಿತಾ ಸದಾನಂದ್ ಮತ್ತು ಶ್ರೀಮತಿ.ಅನು ಗೌಡ ಅವರ ನಿರೂಪಣೆಯಲ್ಲಿ ಮೂಡಿಬಂದ ಈ ಸುಂದರ ಮಕ್ಕಳ ನೃತ್ಯ ಕಾರ್ಯಕ್ರಮ ಭರ್ಜರಿ ಕರತಾಡನಗಳಿಸಿತ್ತು.
* ಮಿಮಿಕ್ರಿ ಕಾರ್ಯಕ್ರಮ - ಶ್ರೀ ಪ್ರಶಾಂತ್ ರವರಿಂದ
* ವರಪ್ರದ ನಮನ - ಶ್ರೀಮತಿ ರಶ್ಮಿ ವಿಶ್ವನಾಥ್ ನಿರೂಪಣೆಯಲ್ಲಿ ಮಕ್ಕಳಿಂದ ಯೋಗ ನೃತ್ಯ
* "ತೆನಾಲಿ ರಾಮ ಮತ್ತು ಚಿನ್ನದ ಮಾವಿನ ಹಣ್ಣು" - ಶ್ರೀಮತಿ ಅಂಜು ಸೋಮನಾಥ್ ನಿರೂಪಣೆಯಲ್ಲಿ ಮಕ್ಕಳಿಂದ ನಾಟಕ
* "ನಾವಾಡುವ ನುಡಿಯೇ ಕನ್ನಡ ನುಡಿ , ನಾವಿರುವ ತಾಣವೇ ಗಂಧದ ಗುಡಿ" ಹಾಡು ಯಾರಿಗೆ ಗೊತ್ತಿಲ್ಲಾ ? ಗಂಧದ ಗುಡಿ ಚಿತ್ರದಲ್ಲಿ ಡಾ| ರಾಜ್ ಗೆ ತಮ್ಮ ಸಿರಿಕಂಠದಲ್ಲಿ ಹಾಡು ಹಾಡಿ ಎಲ್ಲ ಕನ್ನಡಿಗರ ಮನದಲ್ಲಿ ನೆಲೆಸಿದ್ದು ಡಾ|PBS (ಶ್ರೀನಿವಾಸ್). ಇತ್ತೀಚಿಗೆ ಅವರು ನಮ್ಮನ್ನು ಅಗಲಿದರೂ, ಅವರು ಹಾಡಿದ ಅನೇಕ ಸುಂದರ ಭಾವಪೂರ್ಣವಾದ ಕನ್ನಡ ಗೀತೆಗಳು ಎಂದಿಗೂ ಕನ್ನಡಿಗರ ಮನದಲ್ಲಿ ಚಿರವಾಗಿ ಉಳಿಯುವುದರಲ್ಲಿ ಸಂಶಯವೇ ಇಲ್ಲ ! ಅವರಿಗಾಗಿ "PBS - ಒಂದು ಸವಿ ನೆನಪು" ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ಶ್ರೀಮತಿ.ಇಂದು ದೊಡ್ಡಮನೆ , ಶ್ರೀ.ಯಶವಂತ್ ಗಡ್ಡಿ ,ಶ್ರೀ.ಪ್ರದೀಪ್ ಹಾಗು ಶ್ರೀ.ರಘು ಸೋಸಲೆ.
* ಅರ್ಜುನನ ಅವಾಂತರ - ಶ್ರೀ.ರಘು ಸೋಸಲೆ ಮತ್ತು ಸಂಗಡಿಗರಿಂದ ಒಂದು ಕಿರು ನಗೆ ಪ್ರಹಸನ
* ಕೇವಲ ನಾಲ್ಕು ವರುಷಗಳ ಹಿಂದೆ ಜನ್ಮ ತಾಳಿದ "ನಾವಿಕ(ನಾವು ವಿಶ್ವ ಕನ್ನಡಿಗರು)" ತಂಡ, ನಮ್ಮ ಕನ್ನಡ ನಾಡಿನ ಶ್ರೀಮಂತ ಕಲೆ-ಸಾಹಿತ್ಯ-ಸಂಸ್ಕೃತಿ, ಭವ್ಯ ಪರಂಪರೆಯ ದಿವ್ಯ ದರ್ಶನ ಮಾಡಿಸಲು, ವಿಶ್ವದ ಎಲ್ಲೆಡೆ ಇರುವ ಕನ್ನಡಿಗರನ್ನು ಒಗ್ಗೂಡಿಸಿ..ಕನ್ನಡದ ಕಂಪನ್ನು ಎಲ್ಲೆಡೆ ಹರಡಲು, ಈ ಬಾರಿ ಆಗಸ್ಟ್ ೩೦ - ಸೆಪ್ಟೆಂಬರ್ ೧ , ೨೦೧೩ ರಂದು ಅಮೆರಿಕಾದ ಬಾಸ್ಟನ್ ನಗರದಲ್ಲಿ ಆಯೋಜಿಸಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಒಂದು ವರದಿ - ನಾವಿಕ ತಂಡದ ಶ್ರೀ.ರಾಜೂರ್,ಕೃಪಾ ರಾಜುರ್,ನಾಗರಾಜ್,ಸದಾನಂದ್,ವಿಜಯ್,ಪ್ರಿಯಾ ಹರ್ಯಾಡಿ,ಚಂದ್ರ ಭಟ್,ಶೈಲೇಂದ್ರ ರಿಂದ.

ಹೀಗೆ ಸುಮಾರು ೫ ಗಂಟೆಗಳ ಕಾಲ ಅಪ್ಪಟ ಮನರಂಜನೆ , ಕನ್ನಡದ ಶ್ರೀಮಂತ ಸಾಂಸ್ಕೃತಿಕತೆಯನ್ನು ಎತ್ತಿಹಿಡಿದ ಈ ಯುಗಾದಿ-೨೦೧೩ ಕಾರ್ಯಕ್ರಮ ನೋಡಲು ನ್ಯೂಯಾರ್ಕ್, ಬೋಸ್ಟನ್ ಎಲ್ಲೆಡೆಯಿಂದ ಬಂದಿದ್ದ ನೂರಾರು ಹೊರನಾಡ ಕನ್ನಡಿಗರಿಗೆ ಒಳ್ಳೆ ಹೋಳಿಗೆ ಊಟದಂತಹ ರಸದೌತಣ ನೀಡಿದ್ದರಲ್ಲಿ ಎರಡು ಮಾತಿಲ್ಲ.

ಕೊನೆಗೆ ಶ್ರೀ ಅರುಣ್ ಪಾಲಾಕ್ಷಪ್ಪನವರ ವಂದನಾರ್ಪಣೆಯೊಂದಿಗೆ ಮುಗಿದ ಈ ಯುಗಾದಿಯ ಕಾರ್ಯಕ್ರಮದಲ್ಲಿ ಭರ್ಜರಿ ಹೋಳಿಗೆ ಊಟ ಮಾಡಿ, ಇನ್ನು ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಲಿ ಎಂದು ಹೊಯ್ಸಳ ಕನ್ನಡ ಕೂಟದ ಹೊಸ ಕಮಿಟಿಯವರಿಗೆ ಧನ್ಯವಾದ ಹೇಳಿ ಮನೆಕಡೆಗೆ ಹೊರಟಾಗ ರಾತ್ರಿ ಹತ್ತಾಗಿತ್ತು !
ಹಾಗೆ ಕಾರಲ್ಲಿ ...Dr | ರಾಜ್ ಹಾಡಿದ "ವಸಂತ ಕಾಲ ಬಂದಾಗ, ಮಾವು ಚಿಗುರಲೇ ಬೇಕು...." ಅಂತ ನಾನು ಗುನುಗಿದರೆ , ಹಿಂದಿನ ಸೀಟಿನಿಂದ "ಕಂಕಣ ಕೂಡಿ ಬಂದಾಗ,ಮದುವೆ ಆಗಲೇ ಬೇಕು" ಅಂತಾ ೭ ರ ಮಗ ಗುನುಗಿದ್ದ ಕೇಳಿ.."ಹೂಂ ಆಯಿತಪ್ಪ ಮಾಡೋಣಾ" ಅಂತಾ ಪಕ್ಕದಲ್ಲಿ ಕೂತಿದ್ದ ಶ್ರೀಮತಿ ಗೊಣಗಿದ್ದು ಕೇಳಿಸಿತ್ತು !

ಕನ್ನಡಿಗ ,
-ನಾಗರಾಜ್.ಎಂ
==================================================
from  Rajaram.S (Retired Prinicipal of College from Bangalore)
 
==========================================
 
ಪ್ರಿಯ HKK ತಂಡದವರೇ,

ಇದರೊಂದಿಗೆ ನನ್ನ HKK ಉಗಾದಿಯ ಸವಿನೆನಪುಗಳು ಹಾಗು ನನ್ನ ಅನಿಸಿಕೆಗಳನ್ನು ಲಗತ್ತಿಸಿದ್ದೇನೆ. ನಿಮ್ಮ ಕಾರ್ಯಕ್ರಮಕ್ಕೆ ನಮ್ಮನ್ನು ಅಹ್ವಾನಿಸಿದಕ್ಕೆ ಧನ್ಯವಾದಗಳು. HKK ಹೀಗೆ ಬೆಳೆದು ಅಭಿವೃದ್ಡಿಯಾಗಿ ಕನ್ನಡವನ್ನು ಬೆಳೆಸಲಿ ಎಂದು ಆಶಿಸುವ
 
ನಿಮ್ಮಯ,
ರಾಜಾರಾಂ. ಎಸ್
 
ರಾಜಾರಾಮ್ ರವರು ಈ ಲೇಖನವನ್ನು "ಅಚ್ಚ ಕನ್ನಡ ಹಾಗೂ ಗ್ರಂಥ ಭಾಷೆಯಲ್ಲಿ" ಬರೆದಿದ್ದಾರೆ. ಈ ದಿನಗಳಲ್ಲಿ ತಿಳಿ ಕನ್ನಡ ಹಾಗೂ ಆಡು ಭಾಷೆ ಲೇಖನಗಳು ಹೆಚ್ಚಾಗಿವೆ ಹಾಗಾಗಿ ನಮಲ್ಲಿ ಬಹಳಷ್ಟು ಜನ ಅಚ್ಹ ಕನ್ನಡದ ಸವಿ ಮರೆತಿದ್ದೇವೆ , ಈ ಲೇಖನ ಓದುವಲ್ಲಿ ಸ್ವಲ್ಪ ಕಷ್ಟ ಆದರೆ ಅದು ಸ್ವಾಭಾವಿಕ , ತಾಳ್ಮೆ ಇಟ್ಟು ಓದಿ ಆನಂದಿಸಿ .

As many of us live in micro families here , having parents around the house and during any special events are very special for us , it becomes even special when we hear from their prospective about our programs. We were lucky to receive a response from Rajaram.S , a retired principal from Bangalore.
Also you can be surprised to know that it is handwritten and written at once no chance for editing !!
Please see the file attachments below. 
 
 =============================
Ugadhi 2013 Pictures  
===========================

from  Dinesh Haryadi

 from  Dileep Mangsuli

 
 from  Nagaraja Maheswarappa
 
 

 

Ugadhi 2013 Photos Slide Show

===================================================
Ugadhi 2013 Videos Links from Amruth Kumar
===============================================
 
TAGS: HKK Ugadi 2013 Hoysala Kannada Koota of CT
Sundresh MC Intro - http://youtu.be/GUGSg2R0vCw

Invocation
http://youtu.be/8C1kV4dTQtw

Welcome speech
http://youtu.be/nndXsdRfgT4

Naada Geethe -
http://youtu.be/NHCKBGPGtEE

Saraswathi Kuchupudi Dance http://youtu.be/j1zrcZSw9_w

Shramada bele – skit
http://youtu.be/nea8pNKU09U

Vigneshwara Kuchupudi Dance
http://youtu.be/_6NKHCVLV-Q

Kolata Dance http://youtu.be/c6IQkgC8wAs


 
 =====================
Welcome to Ugadhi 2013
=====================
Namaskara,
HKK is celebrating this year's Ugadhi on 27th April 2013 at Vallabhdham Mandir, Newington CT. We are seeking entries for your participation in the cultural activities. If you are interested in either participating or coordinating a program for this event, please contact Raghu Sosale, HKK Cultural Activities Coordinator at Raghu.Sosale@gmail.com (phone: 860-794-3901).
 
Rules for Participation:
1. Entry deadline for programs : March 30th.
2. Entry deadline for adult & child participants - to participate in a variety of cultural activities coordinated by HKK cultural committee please enroll on or before - March  30th. This would help the committee co-ordinate and plan activities for all those interested.
3. No solo performances unless it's exceptional talent or unique item- like stand-up show/ magic act etc. Only a group performance of 4 or more is allowed.
4. To encourage more participation as well as add variety -we're limiting the participation to 2 programs per child participant and only 1 per adult participant.
 
Fancy Dress:
The fancy dress event is one of the most popular events in HKK's cultural programs. This year’s fancy dress theme will be based Film Personalities from Kannada movie industry.  Though it’s not compulsory to stick to the theme, we encourage all participants to dress for the theme.
To provide a fair opportunity for everyone to participate, we have introduced the following rules for participation in Fancy Dress:
(1) Event is open for all children from age 6 Months - 5 Years.
(2) If a child above 5 years would like to participate, then he/she would be unable to participate in more than one another HKK cultural activity (Since the limit is 2 programs per participant).
(3) In order to avoid last minute changes, we encourage you to send in your child’s name ASAP even if you have not decided on your kids character.
The last date to send in your entries is March 30th to Raghu.Sosale@gmail.com (phone: 860-794-3901).
Here is the required information:
(1) Name of the child– (First & Last Names)
(2) Parents name and contact info.
(3) Child's Age
(4) Character name, with introduction that needs to be narrated. (limit to maximum of 3 sentences)
(5) Background music clip if any.
The HKK Executive Committee is looking forward to hosting another successful event with your participation and cooperation.
Thank you.
 
ą
Swarna modi,
Jun 24, 2013, 7:44 PM
ą
Swarna modi,
Jun 24, 2013, 7:44 PM
Ċ
Swarna modi,
Apr 28, 2013, 11:14 PM
Comments