HKK Events‎ > ‎2013‎ > ‎

Deepavali - ದೀಪಾವಳಿ

Deepavali 2013 Celebrations

Hoysala Kannada Koota celebrated its Deepavali 2013 with its members and many new families at Sri Sathyanarayana Swamy Temple (CVHTS), Middletown, CT  on November 16th, 2013, Saturday , it was a huge success , enjoy videos and photos.

Executive committee of HKK like to thank you all for your support in making HKK Deepavali 2013 a grand success ! It would not have been possible without the tireless efforts of the EC, joined by many volunteers, supporters and every one.

We also had many new families join us during this Deepavali. We like to welcome you all to Hoysala Kannada Koota of CT. 

As we celebrate our culture and these special occasions from home away from home, it is the company of fellow Kannadigas and the togetherness that makes it even special. Thanks to HKK for creating such occasions where Kannadigas from all over CT can come together and celebrate the festival. Thank you all for joining.  

 -EC Committee

 

ದೀಪಾವಳಿ ೨೦೧೩ 
-ಸ್ವರ್ಣ 
 ದೀಪಾವಳಿ ಅಂದರೆ ಯಾರಿಗಾದರೂ ನೆನಪಾಗುವುದು ಚಳಿಗಾಲದ ಸಂಜೆಯಲ್ಲಿ ಮಿನುಗುವ ದೀಪಗಳು , ಪಟ ಪಟ ಪಟಾಕಿಗಳು , ಸುರ  ಸುರ ಎನ್ನುವ ಸುರುಸುರು ಬತ್ತಿಗಳು , ಜೂಮ್ ಎಂದು ಆಕಾಶಕ್ಕೆ ಎಗರಿ ನಾಸಾ ರಾಕೆಟ್ ಗೂ ಪೈಪೋಟಿ ಮಾಡುವ ರಾಕೆಟ್ ಗಳು , ದೀಪಾವಳಿ ಸಡಗರ ತೋರುವ ವಿಶೇಷ ಅಲಂಕರಿತ ಅಗಂಡಿ ಗಳಲ್ಲಿ ಕಾಣುವ ಬಣ್ಣ ಬಣ್ಣದ ರುಚಿ ರುಚಿಯಾದ ಸಿಹಿ ತಿಂಡಿಗಳು , ಆದರೆ ಕನೆಕ್ಟಿಕಟ್ ಕನ್ನಡಿಗರಿಗೆ ಇದರೊಂದಿಗೆ ಮತ್ತೊಂದು ಸಡಗರ ಎಂದರೆ ಹೊಯ್ಸಳ ಕನ್ನಡ ಕೂಟದ ದೀಪಾವಳಿ ಸಾಮೂಹಿಕ ಸಮಾರಂಭ . ಇದರ ಸಿದ್ದತೆಗಳು ದಸರಾ ಹಬ್ಬದಿಂದಲೇ ಪ್ರಾರಂಭ  , EC ಕಮಿಟಿ ಯವರಿಗೆ ಸಿದ್ದತೆಗಳ ಯೋಚನೆ ಆದರೆ coordinators ಗೆ ಈಸಾರಿ  ಯಾವ ಮನರಂಜನಾ ಕಾರ್ಯಕ್ರಾಮ  ಕೊಡುವುದು ಎಂಬ ಯೋಚನೆ . 
ನವೆಂಬರ್ ತಿಂಗಳ ೧೬ನೆ ತಾರೀಕು ದೀಪಾವಳಿ ಕಾರ್ಯಕ್ರಮ ನಿಶ್ಚಯ ಆಗಿದ್ದರೂ , ಸಿದ್ದತೆಗಳು ಪ್ರಾರಂಭವಾಗಿದ್ದರೂ ಪ್ರಕೃತಿ ಮಾತೆಯ ಕೃಪೆ ಇರಲಿ ಎಂದು ಬೇಡಿದವರೂ ಇದ್ದಾರೆ  , ಇಲ್ಲದೆ ಏನು ನೀವೇ ಹೇಳಿ ... ಹಿಮ ಬಿದ್ದು , ಎಲೆಕ್ಟಿಸಿಟಿ ಕಳಿದು  ಕೊಂಡು ಪಟ್ಟ ಪಾಡು ಯಾರಿಗೆ ಬೇಕು ಹೇಳಿ ?
ಕೊನೆಗೂ ಒಳ್ಳೆಯ ಹವಾಮಾನ ಇದ್ದು ದೀಪಾವಳಿ ಆಚರಿಸಲು ಅವಕಾಶ ಮಾಡಿಕೊಟ್ಟ ಪ್ರಕೃತಿ ಮಾತೆಗೆ ನಮ್ಮ ಮೊದಲ ಧನ್ಯವಾದಗಳು . ನಮ್ಮ ನಿಮ್ಮೆಲ್ಲರಿಗಾಗಿ ತಮ್ಮ ಹತ್ತಾರು ಗಂಟೆಗಳನ್ನು ಈ ಸಮಾರಂಭದ ಸಿದ್ದತೆಗಳಿಗೆ ಮೀಸಲಿಟ್ಟ ಕಮಿಟಿ ಸದಸ್ಯರಿಗೂ ಹಾಗೂ ಹಲವಾರು ಕಾರ್ಯಗಳಲ್ಲಿ ಕೈ ಜೋಡಿಸಿದ ಕಾರ್ಯಕರ್ತರಿಗೂ ನಮ್ಮ ಎರಡನೇ ಧನ್ಯವಾದಗಳು , ಇಸ್ಟಿದ್ದರೆ ಸಾಕೇ  ? ಬಂದವರ ಮನರಂಜನೆಗೆ ಹಲವಾರು ವಾರಗಳಿಂದ ತಾಲೀಮು ನಡಿಸಿ ಸಿದ್ದರಾದ ಕಲಾವಿದರನ್ನು ಮರೆಯಲು ಸಾದ್ಯವೇ ?? ಅವರಿಂದಲೇ ದೀಪಾವಳಿ ಸಂಭ್ರಮ, ಹಬ್ಬದ ಸಡಗರ ಎಲ್ಲವೂ . 
 
ಆ ದಿನ ಅಂತೂ ಇಂತೂ ಮಗಳಿಗೆ ರಮಿಸಿ ಮುದ್ದಿಸಿ ಒಪ್ಪಿಸಿ ಭಾರತೀಯ ಉಡುಗೆ ತೊಡಿಸಿ , ಮೆಚ್ಚಿದ ಒಡವೆ ತೊಡಿಸಿ , ನಾವೂ ಸಿದ್ದರಾಗಿ ಹೊರಟು  CVHTS 
ದೇವಾಸ್ಥಾನ  ತಲುಪುವುದು , ಅಲ್ಲಿ ಕಾರ್ಯಕ್ರಮ ಪ್ರಾರಂಭ ಆಗಿದ್ದು ಒಂದೇ ಆಯಿತು ನೋಡಿ , ಪಳ ಪಳ ಹೊಳೆಯುವ ಗಣೇಶನ ಮೂರ್ತಿ,ಕೆಂಪು ಹಳದಿ ಹೂವಿನಿಂದ ಆವರಿತ ಕನ್ನಡಾಂಬೆಯ ಮುದ್ದಾದ ಚಿತ್ರ ,ಸುಂದರವಾದ ದೀಪಗಳಿಂದ ಅಲಂಕೃತವಾದ ಸ್ಟೇಜ್ ನೋಡುತ್ತಾ , ರುಚಿಯಾದ ಕಾಫಿ ಸವಿಯುತ್ತಾ  ಒಂದು ಕಡೆಯಿಂದ ಸಿಕ್ಕಿದ ಸ್ನೇಹಿತರನ್ನು ಮಾತನಾಡಿಸುವ ಹೊತ್ತಿಗೆ ಪ್ರಾಥನೆ ಪ್ರಾರಂಭ  ಆಗಿಯೇ ಹೋಯಿತು  . ಮೊದಲ ಕಾರ್ಯಕ್ರಮ - ಮಕ್ಕಳ ವೇಷ ವೈಖರಿ - ಫ್ಯಾನ್ಸಿ ಡ್ರೆಸ್  - ಬಂದಿದ್ದು ಪುಟ್ಟ ಪುಟ್ಟ ಮಕ್ಕಳಾದರೂ ಸವಾಲು ಹಾಕಿದ್ದು ಫೋಟೋ ತೆಗಿಯುವುದರಲ್ಲಿ ಅತಿರಥ ಮಹಾರಥರಾದ ದಿನೇಶ್ ಮತ್ತು ನಾಗರಾಜ್ ಅವರಿಗೆ ... ಇಂದಿನ ಅಳುವ ಮಕ್ಕಳೇ ನಾಳಿನ ಕಲಾವಿದರು ಅಲ್ಲವೇ  , ಮುದ್ದಿನ ಮಕ್ಕಳ ಮುನಿಸಿಗೆ , ನಗುವಿಗೆ,ಸಂತೋಷಕ್ಕೆ , ಭಾವ ವೈಭವಕ್ಕೆ ಕಾರಣ ಬೇಕೇ ?? ಒಂದೇ ..ಎರೆಡೇ ಅವರ ರೂಪ ತಾಪ ಬರೆಯಲು ... ಅಯ್ಯೋ ಬಿಡ್ರೀ ಯಾಕೆ ನನಿಗೆ ಬರೆಯೋ ಕಷ್ಟ ನಿಮಗೆ ಓದೋ ಕಷ್ಟ ... ಹೇಗೊ ಸವಾಲು
ಸ್ವೀಕರಿಸಿ ದಿನೇಶ್, ಅಮೃತ್ ಕುಮಾರ್ & ನಾಗರಾಜ್ ತುಂಬಾ ಚೆನ್ನಾಗಿ ಮಕ್ಕಳ ಮುದ್ದು ವೇಷ ವೈಖರಿ ಹಾಗೂ ಎಲ್ಲಾ ಕಾರ್ಯಕ್ರಮಗಳನ್ನು ನಿಮಗಾಗಿ ಡಿಜಿಟಲ್ ಮೀಡಿಯಾ ನಲ್ಲಿ ಸೆರೆ ಹಿಡಿದಿದ್ದಾರೆ ನೋಡಿ , ಆನಂದಿಸಿ . ನಮ್ಮ ನಾಗರಾಜ್ ಅವರಿಗೆ ಬರಿ ಡಿಜಿಟಲ್ ಮೀಡಿಯಾ ನಲ್ಲಿ ಸೆರೆ ಹಿಡಿದರೆ ಸಾಲದು ನಮ್ಮ ಪ್ರೀತಿಯ ಕನ್ನಡ ಭಾಷೆಯಲ್ಲೂ ದೀಪಾವಳಿ ವೈಭವ ಸೆರೆ ಹಿಡೀಬೇಕು ಅಂತ  ಒಂದು ಲೇಖನ ಬರಿದಿದ್ದಾರೆ ... ಓದಿ ಮೆಲಕು ಹಾಕಿ ಆನಂದಿಸಿ .
====================================================
 ದೀಪಾವಳಿ ೨೦೧೩ ಕಾರ್ಯಕ್ರಮ - ಕನ್ನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ -
-ನಾಗರಾಜ್ . ಎಂ
 
"ಒನ್ಸ್ ಮೋರ್ ..ಒನ್ಸ್ ಮೋರ್ " ಅಂತಾ ಎಲ್ಲರೂ ಕೂಗಿದಾಗ , ಅಬ್ಬಾ ಯಾವ ಹಾಡಿಗೆ ಇರಬಹುದು ? ಅಥವಾ  ಯಾವ ಹಿಪ್ ಹಾಪ್ , ಬ್ರೇಕ್ ಡಾನ್ಸ್ ಗೆ  ಇರಬಹುದಾ ಅಂತಾ ಯೋಚನೆ ಬರೋದು ಈ ಫಾಸ್ಟ್ ಯುಗದಲ್ಲಿ ಸಹಜವೆ ! ಆದರೆ ಈ "ಒನ್ಸ್ ಮೋರ್ ..ಒನ್ಸ್ ಮೋರ್ " ಕೂಗು ಕೇಳಿ ಬಂದಿದ್ದು ನಮ್ಮ ಭರತಖಂಡದ ಸಂಸ್ಕೃತಿಯ ಪ್ರತೀಕವಾದ ಶಾಸ್ತ್ರೀಯ ನೃತ್ಯ ಭರತನಾಟ್ಯಕ್ಕೆ ! ಅದೂ ಪಿಟ್ ಬುಲ್ , ಲೇಡಿ ಗಾಗ ಅಂದ್ರೆ ಹುಚ್ಚೆದ್ದು ಕುಣಿವ ಅಮೇರಿಕಾದಲ್ಲಿ ! ಯಾಕೆ ಪರಮಾಶ್ಹರ್ಯವೇ ? ಇಂದಿಗೂ ಸಹಾ ನಮ್ಮ ಶಾಸ್ತ್ರೀಯ ನೃತ್ಯ ಭರತನಾಟ್ಯ , ಜನಪದ ನೃತ್ಯಗಳಿಗೆ ಜೀವಂತಿಕೆ ಇದೆ , ಪ್ರೇಕ್ಷಕರಲ್ಲಿ ಮಾಸದ ಅಭಿರುಚಿ ಇದೆ ಎಂದು ನಿರೂಪಿಸಿದ ಈ ಘಟನೆ .. ನಿಜಕ್ಕೂ ನಡೆದದ್ದು ದೂರದ ಅಮೆರಿಕಾದಲ್ಲಿನ ಕನ್ನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ನಡೆಸಿಕೊಟ್ಟ ದೀಪಾವಳಿ ೨೦೧೩ ಸುಂದರ ಕಾರ್ಯಕ್ರಮದಲ್ಲಿ !
 
ಸರಿಯಾಗಿ ಮಧ್ಯಾನ್ಹ ೩-೩೦ ಕ್ಕೆ ಕನ್ನೆಕ್ಟಿಕಟ್ನ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾದ ನಂತರ,  ಶ್ರೀ ರಘು ಸೋಸಲೆ , ಸುಂದರೇಶ್ , ಆಶಾ ಮತ್ತು ಅನಿತಾ ಅವರ ನೇತೃತ್ವದಲ್ಲಿ ಕನ್ನಡದ ನಾಡಗೀತೆ ಶುರುವಾದ ತಕ್ಷಣ ಎಲ್ಲ ಹಿರಿಯರು, ಕಿರಿಯರು ಎದ್ದು ನಿಂತು ತಾವೂ ಧ್ವನಿಗೂಡಿಸಿದ್ದು ತುಂಬಾ ವಿಶೇಷವಾಗಿತ್ತು!
 
HKK ಅಧ್ಯಕ್ಷರಾದ ಶ್ರೀ ದಿನೇಶ್ ರವರಿಂದ ಸ್ವಾಗತ ಭಾಷಣವಾದ ಮೇಲೆ ಕುಮಾರಿ ಮೇಘಳ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿಯಲ್ಲಿ  ೯ ತಿಂಗಳ  ಪ್ರಮಥ್ ಬಾಲ ಹನುಮನಾಗಿ , ೧ ವರ್ಷದ ಆರುಷ್ ಮುದ್ದಿನ ಮೋಗ್ಲಿ ಯಾಗಿ, ಸಮರ್ಥ್ ಸ್ವಾಮಿ ವಿವೇಕಾನಂದನಾಗಿ , ಮತ್ತೆ ಕೆಲವು ಪುಟಾಣಿಗಳು ಹಳ್ಳಿ ಹುಡುಗಿ , ಶಿವ - ಪಾರ್ವತಿ  , ಷಣ್ಮುಖನಾಗಿ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಫೋಷಕರ ಕಂಗಳಲ್ಲಿ ಆನಂದಭಾಷ್ಪ ಬರಿಸಿದ್ದರೆ , ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲು ಚಿಣ್ಣರ-ಕಿನ್ನರ ಲೋಕಕ್ಕೆ ಕರೆದೊಯ್ದಂತಾಗಿತ್ತು !
ನಂತರ ಈ ಕೆಳಕಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ನೆರೆದ್ದಿದ್ದವರನ್ನು ರಂಜಿಸಿದವು ...
 
* ಶ್ರೀಮತಿ ವಾಣಿ ಮತ್ತು ಆಶಾ ಅವರ ಸಂಯೋಜನೆಯಲ್ಲಿ "ಭೋ ಶಿವ ಶಂಭೋ" ಹಾಡಿಗೆ ಮಕ್ಕಳ ನೃತ್ಯ 
* ಶ್ರೀಮತಿ ಪಾರ್ವತಿ ಅವರ ನಿರ್ದೇಶನದಲ್ಲಿ ಮಕ್ಕಳಿಂದ " ಕರುನಾಡ ಗೀತೆ "
* "ಡಾನ್ಸ್ ವಿಥ್ ಅಣ್ಣಾವ್ರ ಫ್ಯಾನ್ಸ್" ಮಕ್ಕಳಿಂದ ಲುಂಗಿ ಡಾನ್ಸ್ - ದಿವ್ಯ ಅವರ ಸಂಯೋಜನೆಯಲ್ಲಿ 
* ಶ್ರೀಮತಿ ಪ್ರಿಯ ಮತ್ತು ಸರಿತಾ ಅವರ ಸಂಯೋಜನೆಯಲ್ಲಿ ಮಕ್ಕಳಿಂದ "ಚಲನಚಿತ್ರದ ಚುಟುಕುಗಳು - ವೈವಿದ್ಯ ಕಾರ್ಯಕ್ರಮ" 
* ಶ್ರೀಮತಿ ಶಾರದಾ ನೂರಿ ಅವರ ನೃತ್ಯ ಸಂಯೋಜನೆಯಲ್ಲಿ ಮಕ್ಕಳಿಂದ "ತ್ರಿಪುರ ಸುಂದರಿ ಅಷ್ಟಕಂ" ಭರತ ನಾಟ್ಯ 
* ಶ್ರೀಮತಿ ವಾಣಿ ಅವರ ನೃತ್ಯ ಸಂಯೋಜನೆಯಲ್ಲಿ "ಅನ್ನಮಾಚಾರ್ಯ ಕೀರ್ತನ ಮತ್ತು ಜತಿಸ್ವರಂ" ಭರತ ನಾಟ್ಯ 
* ಶ್ರೀ ಜಿತೇಂದ್ರ ಕಿಶೋರ್ ಮತ್ತು ತಂಡದವರಿಂದ "ಪಿಟೀಲು ವಾದನ "
* ಶ್ರೀನಿ ವೆಂಕಟ್ ಅವರಿಂದ ಏಕಪಾತ್ರಾಭಿನಯ 
* ಶ್ರೀಮತಿ ವಾಣಿ ಅವರ ನೃತ್ಯ ಸಂಯೋಜನೆಯಲ್ಲಿ "ಜನಪದ ನೃತ್ಯ"
* ದಿನೇಶ್ ,ಪಶುಪತಿ ಮತ್ತು ತಂಡದವರಿಂದ ನಗೆ ನಾಟಕ " ಬಜೆಟ್ ೨ ಏರ್ ಲೈನ್ಸ್ "
 
ಹೀಗೆ ಸರಿಸುಮಾರು ರಾತ್ರಿ 9 ರತನಕ ನಡೆದ ಈ ದೀಪಾವಳಿ ಕಾರ್ಯಕ್ರಮ ಕೊನೆಗೊಂಡಿದ್ದು ಪಶುಪತಿ ಅವರಿಂದ  ವಂದನಾರ್ಪಣೆಯಾದ ಮೇಲೆ, ಕನ್ನಡ DJ ಹಾಡುಗಳಿಗೆ ಮಕ್ಕಳ ಕುಣಿತದೊಂದಿಗೆ. ಕೊನೆಗೆ ದೀಪಾವಳಿ ಹಬ್ಬದ ಭರ್ಜರಿ ಊಟ ಮಾಡಿ ಕಾರಲ್ಲಿ ಕುಳಿತು ಲಾಡು ಉಂಡೆ ತಿನ್ನುವಾಗ ಸಂದರ್ಭಕ್ಕೆ ಸಮಯೋಚಿತವಾಗಿ ಸೀಡಿ ಪ್ಲೇಯರ್ ನಲ್ಲಿ ಮೂಡಿಬಂದಿತ್ತು ... ಅಂದು ಘಂಟಸಾಲರವರು ಹಾಡಿದ್ದ "ವಿವಾಹ ಭೋಜನವಿದು , ವಿಚಿತ್ರ ಭಕ್ಷ್ಯವಿದು , ಓಹ್ ಓಹ್" ಘಟೋದ್ಗಜ ಲಾಡು ಉಂಡೆಯನ್ನು ಗುಳಂ  ಮಾಡಿದ ಆಗೇ  , ನಾನು ಸಹಾ ಮಾಡಿದ್ದೆ ಮತ್ತೊಂದು ಲಾಡು ಉಂಡೆಯನ್ನು ಗುಳಂ !
- ಸಿರಿ ಗನ್ನಡಂ ಗೆಲ್ಗೆ- 
 
 
 
 
 
Video Links from Deepavali 2013 Celebrations
 
Photos by Dinesh Haryadi

HKK Deepavali 2013
 
 
 
Fancy dress is one of the most challenging programs; both for kids & their parents (& the paparazzi)!
Thank you Megha Rao for hosting this program.
 
Coordinators - Priya Haryadi & Saritha Masarur
 
 
 
Deepavali 2013 Photos from Reshma & Roshan Rao .
 
 
 
 
Comments