HKK Events‎ > ‎

2012

Hemantha Gaana 2012
 
Hemantha Gaana was held on Jan 22nd 2012 at CVHTS Temple , New hall
 
Hemantha Gaana 2012
 
 
Videos

 Ugadi 2012
 
Thanks to Nagaraj for Photos and article about the event.
 

Ugadi 2012 - Photos

ಅಮೇರಿಕಾದ ಕನೆಕ್ಟಿಕಟ್ನಲ್ಲಿ ಯುಗಾದಿ-೨೦೧೨

 

ಕೊನೆಗೂ ಕಾಡಿಸಿ ಓಡಿಹೋದ ಚಳಿರಾಯ , ಹಿಂದಿನ ದಿನ ಸಣ್ಣಗೆ ಸುರಿದು ಹೋಗಿದ್ದ ಮಳೆರಾಯ, ನಾ ಬಂದಿರುವೆ ಎಂದು ಎಲ್ಲೆಡೆ ಸಾರುತ್ತಿದ್ದ ವಸಂತರಾಯ ... ಎಲ್ಲೆಡೆ ಗಿಡಮರಗಳ ಮೇಲೆ ಎಲೆಗಳು ಚಿಗುರಿ, ಬಣ್ಣ ಬಣ್ಣದ ಹೂವುಗಳು ಅರಳುವುದನ್ನೇ ಕಾಯುತ್ತಿರುವ ಧುಂಬಿಗಳ ಝೇಂಕಾರ, ಪಕ್ಷಿಗಳ ಚಿಲಿಪಿಲಿ ಇಂಚರ ...ಇವೆಲ್ಲದರ ಮಧ್ಯೆ ಬಣ್ಣ ಬಣ್ಣದ ವೇಷ ಭೂಷಣಗಳಲ್ಲಿ ಬಂದ ಪುಟಾಣಿಗಳಿಂದ ಕನ್ನಡದ ಗೀತೆಗಳಿಗೆ ಸೊಗಸಾದ ನೃತ್ಯ .....ಹೀಗೆ ವಸಂತನ (ಯುಗಾದಿ) ಸ್ವಾಗತ ಮಾಡಿದ್ದು ಕನೆಕ್ಟಿಕಟ್ನಲ್ಲಿರುವ ನಮ್ಮ ಕನ್ನಡಿಗರು !

ಗಿಡ-ಮರ, ಹಕ್ಕಿ-ಪಕ್ಷಿಗಳಂತೆ ವಸಂತನ ಆಗಮನವನ್ನೇ ಎದುರು ನೋಡುತ್ತಿದ್ದ ಹೊರನಾಡ ಕನ್ನಡಿಗರು ಸಡಗರ , ಸಂಭ್ರಮದಿಂದ ಏಪ್ರಿಲ್ ೨೮ , ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್ನಲ್ಲಿ ಹೊಯ್ಸಳ ಕನ್ನಡ ಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಯುಗಾದಿ-೨೦೧೨ ಕಾರ್ಯಕ್ರಮಕ್ಕೆ , ಗಿಡ-ಮರ, ಹಕ್ಕಿ-ಪಕ್ಷಿಗಳಂತೆ ವಸಂತನ ಆಗಮನವನ್ನೇ ಎದುರು ನೋಡುತ್ತಿದ್ದ ಹೊರನಾಡ ಕನ್ನಡಿಗರು ಸಡಗರ,ಸಂಭ್ರಮದಿಂದ ಭಾಗವಹಿಸಿ ...ಉಲ್ಲಾಸ-ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು!

ಶ್ರೀಮತಿ ಗಾಯತ್ರಿ ಭಟ್ ಮತ್ತು ಶ್ರೀಮತಿ ಭಾಗ್ಯ ಕೊಮರ್ಲಾ ಅವರು ಹಾಡಿದ ಶ್ರೀಗಣೇಶ ಸ್ತುತಿಯೊಂದಿಗೆ ಯುಗಾದಿ ಕಾರ್ಯಕ್ರಮ ಸರಿಯಾಗಿ ಮಧ್ಯಾನ್ಹ -೩೦ ಕ್ಕೆ ಪ್ರಾರಂಭವಾದ ಮೇಲೆ, ಕನ್ನಡ ಕೂಟದ ಅಧ್ಯಕ್ಷರಾದ ಶ್ರೀ ವೇಣು ಗುಡ್ದೆರ ಎಲ್ಲರನ್ನು ಸ್ವಾಗತಿಸಿದ ನಂತರ... ಶ್ರೀ ಯಶವಂತ್ ಗಡ್ಡಿಯವರು ಹಾಡಿದ ಕನ್ನಡ ನಾಡ ಗೀತೆ "ಜೈ ಭಾರತ ಜನನಿಯ ತನುಜಾತೆ ! ಜಯಹೇ ಕರ್ನಾಟಕ ಮಾತೆ ! " ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು.

ನಂತರ ಪ್ರಿಯ ಹರ್ಯಾಡಿ ನಿರೂಪಣೆಯಲ್ಲಿ ನಡೆದ "ಹಲೋ ನಮಸ್ತೆ - ಮಕ್ಕಳ ಫ್ಯಾಷನ್ ಶೋ" ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ನಾವೇನು ದೊಡ್ದವರಿಗಿಂತ ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ವಿಧ ವಿಧದ ಬಟ್ಟೆಗಳನ್ನು ಧರಿಸಿ ಸೊಗಸಾಗಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದು, ಶ್ರೀಮತಿ ಶಾರದಾ ಭಟ್ ನಿರೂಪಣೆಯಲ್ಲಿ ಚಿಕ್ಕ ಪುಟಾಣಿಗಳು ಫ್ಯಾನ್ಸಿ ಡ್ರೆಸ್ ಹಾಕಿ ಬಂದಿದ್ದು ಎಲ್ಲರ ಮನ ಸೆಳೆಯಿತು.

ನಂತರ ಕೆಳಕಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ನೆರೆದ್ದಿದ್ದವರನ್ನು ರಂಜಿಸಿದವು.

* ಜಾಣ ಪುಟಾಣಿಗಳು - ದೊಡ್ಡವರೆಲ್ಲ ಜಾಣರಲ್ಲ , ಚಿಕ್ಕವರೆಲ್ಲ ಕೋಣರಲ್ಲ ಎಂಬ ಪ್ರಸಿದ್ದ ಗುರುಶಿಷ್ಯರು ಚಲನ ಚಿತ್ರದ ಹಾಡಿಗೆ ಮಕ್ಕಳ ನೃತ್ಯ - ನಿರೂಪಣೆ ಸರಿತಾ ಸದಾನಂದ್ ಮತ್ತು ಸೌಮ್ಯ ಸುಂದರೇಶ್

* ನಿಂಬೀಯ ಬನಾದ ಮ್ಯಾಗಲ - ಕೋಲಾಟ ನೃತ್ಯ - ನಿರೂಪಣೆ ಸ್ನೇಹ ಸೋಸಲೆ

* ಶಾಂತಿ ಮಂತ್ರಂ - ಯೋಗ ನೃತ್ಯ - ನಿರೂಪಣೆ ಶ್ರೀಮತಿರಶ್ಮಿ ರಾಮಲಿಂಗಯ್ಯ

* ಪ್ರಚಂಡ ಪುಟಾಣಿಗಳಿಂದ ಕರಾಟೆ ನೃತ್ಯ - ನಿರೂಪಣೆ ಸ್ವರ್ಣ ಮೋದಿ ಮತ್ತು ವಿಶಾಖ್ ತಲಂಕಿ

* ಹೊಸ ವರುಷಕ್ಕೆ ಹೊಸ ಹರುಷ - ಫಿಲಂ ಡಾನ್ಸ್ - ನಿರೂಪಣೆ ಪ್ರಿಯ ಹರ್ಯಾಡಿ ಮತ್ತು ರೂಪ ಕುಮಾರ್

ಲಘು ವಿರಾಮದಲ್ಲಿ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿದ ಮೇಲೆ ...

* ಶ್ರೀ ಮೇಲ್ಕೋಟೆ ರಾಮಸ್ವಾಮಿ ರವರಿಂದ ಸೊಗಸಾದ ಭಕ್ತಿಗೀತೆಗಳು

* ವಿಚಿತ್ರ ಮಂಜರಿ - ವೈವಿದ್ಯಮಯ ಶೋ - ದಿನೇಶ್ ಹರ್ಯಾಡಿ ಮತ್ತು ತಂಡದವರಿಂದ

* ಮಕ್ಕಳಿಂದ "ಆಲಸಿ ತೆನಾಲಿ ರಾಮನಲ್ಲಿ ಆದ ಪರಿವರ್ತನೆ" ಒಂದು ಚಿಕ್ಕ ನಾಟಕ - ನಿರೂಪಣೆ ಶ್ರೀಮತಿ ಅಂಜು ಸೋಮನಾಥ್

* ಲೈಫು ಇಷ್ಟೇನೆ - ಹೇಗೆ ಪ್ರಕೃತಿಯಲ್ಲಿ ಪ್ರತಿವರ್ಷವೂ ಲೈಫ್ ಸೈಕಲ್ ಬರುವುದೋ ..ಅದೇ ರೀತಿ ನಮ್ಮ ಮನುಜರ ಬಾಳಲ್ಲೂ ...ಎಂಬ ಸುಂದರ ಸಾರಾಂಶವನ್ನು ಸಾರುವ "ಲೈಫು ಇಷ್ಟೇನೆ" ನೃತ್ಯ ಭರಿತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು ಎಲ್ಲರ ಮನ ಗೆದ್ದಿದ್ದು ಸುಂದರೇಶ್ ,ಸದಾನಂದ್ , ರಘು , ಸಂತೋಷ್, ಶಶಿ ಹಾಗು ಅವರ ತಂಡದಿಂದ

* ಹೃದಯಾಸೆ ಭಾಷೆ ಕನ್ನಡ - ಸಿನೆಮಾ ಸಾಹಿತ್ಯದಿಂದ ಶಿಲಾ ಶಾಸನದವರೆಗೆ ...ಪ್ರೇಕ್ಷಕರೊಂದಿಗೆ ಒಂದು ಪ್ರಶ್ನಾ-ಉತ್ತರಗಳ ಸಂವಾದ ...ನಿರೂಪಣೆ ಇಂದು ದೊಡ್ಡಮನೆ ಮತ್ತು ಯಶವಂತ್ ಗಡ್ಡಿಯವರಿಂದ

* ನಾವು ಬಳ್ಳಾರಿ ಬಿಗ್ ಪೀಪಲ್ , ನಾವು ಗಂಡೆದೆ ನಾಡು ಹುಬ್ಬಳ್ಳಿ ಮಂದಿ , ನಾವು ಬಿಜಾಪುರ ಮಂದಿ , ನಾವು ಬೆಂಗಳೂರು ಜನ , ನಾವು ಮಂಡ್ಯದ ಗಂಡುಗಳು ....ಪ್ರಾತಿನಿಧ್ಯ ನಮಗೆ ಹೆಚ್ಚಿಗೆ ಕೊಡಬೇಕು ಅಂತಾ ನಡೆಯೋ ಒಳಜಗಳಗಳಲ್ಲಿ ..ಬಡವಾಗುತ್ತಿದೆ ಇಂದು ನಮ್ಮ ಕಸ್ತೂರಿ ಕನ್ನಡ ...

ಎಲ್ಲ ಒಳಜಗಳ, ಪ್ರತಿಷ್ಠೆ , ಬಿಗುಮಾನ ಬಿಟ್ಟು , ಎಲ್ಲ ಕನ್ನಡಿಗರು ಒಗ್ಗೂಡಿ ಕನ್ನಡಕ್ಕಾಗಿ ದುಡಿದರೆ ...ಆಗ "ಆಗುವುದು ನಮ್ಮ ಕನ್ನಡ ನಾಡು ..ಸಿರಿಗಂಧದ ಬೀಡು" ಎಂಬ ಸುಂದರ ಸಾರಾಂಶವುಳ್ಳ ಶ್ರೀ.ಮಲ್ಲಿ ಸಣ್ಣಪ್ಪನವರ ನಿರ್ದೇಶನದಲ್ಲಿ "ಅಮೇರಿಕಾದಲ್ಲಿ 3D ಕನ್ನಡ ಕೂಟ" ನಾಟಕ ಭರ್ಜರಿಯಾಗಿ ಪ್ರದರ್ಶನಗೊಂಡಿತು.

ಹೀಗೆ ಸುಮಾರು ಗಂಟೆಗಳ ಕಾಲ ಅಪ್ಪಟ ಮನರಂಜನೆ , ಕನ್ನಡದ ಶ್ರೀಮಂತ ಸಾಂಸ್ಕೃತಿಕತೆಯನ್ನು ಎತ್ತಿಹಿಡಿದ ಯುಗಾದಿ-೨೦೧೨ ಕಾರ್ಯಕ್ರಮ , ನೋಡಲು ನ್ಯೂಯಾರ್ಕ್, ಬೋಸ್ಟನ್ ಎಲ್ಲೆಡೆಯಿಂದ ಬಂದಿದ್ದ ನೂರಾರು ಹೊರನಾಡ ಕನ್ನಡಿಗರಿಗೆ ಒಳ್ಳೆ ಹೋಳಿಗೆ ಊಟದಂತಹ ರಸದೌತಣ ನೀಡಿದ್ದರಲ್ಲಿ ಎರಡು ಮಾತಿಲ್ಲ.

ಕೊನೆಗೆ ಯುಗಾದಿಯ ಭರ್ಜರಿ ಹೋಳಿಗೆ ಊಟ ಮಾಡಿ, ಇನ್ನು ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಲಿ ಎಂದು ಹೊಯ್ಸಳ ಕನ್ನಡ ಕೂಟದ ಕಮಿಟಿಯವರಿಗೆ ಧನ್ಯವಾದ ಹೇಳಿ....Dr | ರಾಜ್ ಹಾಡಿದ ಕುವೆಂಪು ರಚಿತ "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಅಂತ ಗುನುಗುತ್ತ ಮನೆಕಡೆಗೆ ಹೊರಟಾಗ ರಾತ್ರಿ ಹತ್ತಾಗಿತ್ತು !

 

More Photos...

 

Summer Picnic 2012
 

September 8, 2012 at 4:00pm in EDT
CVHTS, 11 Training Hill Rd, Middletown, CT
Musical Evening by Sri Y M Muddukrishna & Troupe
 

 "Hasya Sanje"  - Comedy by Humorist Sudha Baragur 
 
Event: "Hasya Sanje", Harate - Comedy by Humorist Sudha Baragur
Date: Monday 8th October,2012
Place: Middletown Temple (CVHTS)
Time: 5:30 PM 
 

Sudha Baragur Hasya Sanje


Deepavali 2012
 HKK - Deepavali 2012 Celebrations
Date: Saturday, Nov 17, 2012
Time: 2:30 pm
Venue: Silas Deane Middle School, 551 Silas Deane Highway, Wethersfield, CT 06109
 
 
 

Invocation - Deepavali 2012 - Hoysala Kannada Koota

 

AmeriKannada Presents Kannada Patriotic Dance - Hoysala Kannada Koota Deepavali 2012

 

Janapada Nrithya - Hoysala Kannada Koota Deepavali 2012

 
 

GaaDegalu Sir GaaDegalu - Hoysala Kannada Koota Deepavali 2012

 
 
 
 
 
Comments