2014‎ > ‎

Ugadhi - ಯುಗಾದಿ

ಉಗಾದಿ-೨೦೧೪ !

ಸಾಕಪ್ಪ ಸಾಕು ಅನ್ನಿಸಿ ..
ಇನ್ನೇನು ನಾ ಹೋಗಿ ಬರಲೇ ಅಂತಾ ಕೇಳ್ತಾ ಇರೋ ಚಳಿರಾಯ ..
ಹಿಂದಿನ ದಿನ ಸಣ್ಣಗೆ ಸುರಿದು ಹೋಗಿದ್ದ ಮಳೆರಾಯ, 
ನಾ ಬಂದಿರುವೆ ಎಂದು ಎಲ್ಲೆಡೆ ಸಾರಲು ತಯಾರಿದ್ದ ವಸಂತರಾಯ ...

ಹೊರಗಡೆ ಎಲ್ಲೆಡೆ ಗಿಡಮರಗಳ ಮೇಲೆ ಎಲೆಗಳು ಚಿಗುರಿ, ಬಣ್ಣ ಬಣ್ಣದ ಹೂವುಗಳು ಅರಳುವುದನ್ನೇ ಕಾಯುತ್ತಿರುವ ಧುಂಬಿಗಳ ಝೇಂಕಾರ, ಪಕ್ಷಿಗಳ ಚಿಲಿಪಿಲಿ ಇಂಚರ..ಉಸ್ಸ್ ಎಂದು ಎದ್ದು ಹತ್ತಿರದಲ್ಲೇ ಇದ್ದ ಸ್ಟಾಪ್ ಅಂಡ್ ಶಾಪ್ ಗೆ ಹೋಗುವಾಗ " ತರಕಾರಿ ತರಕಾರಿ ....ಯಾರಿಗೆ ಬೇಕು ಬದನೇಕಾಯಿ , ಸೌತೆಕಾಯಿ , ಸೊಪ್ಪು , ನುಗ್ಗೆಕಾಯಿ " ಅಂತಾ ಜೋರಾಗಿ ಯಾರೋ ಕೂಗಿದ್ದು ಕೇಳಿ ...ಒಮ್ಮೆಲೇ, ನಮ್ಮೂರಲ್ಲಿ ಬೆಳಿಗ್ಗೆನೆ ತರಕಾರಿ ಮಾರಲು ಬರುತ್ತಿದ್ದ ತಿಮ್ಮಣ್ಣನ ನೆನಪು ಬಂದು ...ಅವಾ ಇಲ್ಲಿ ಅಮೆರಿಕಾಕ್ಕೂ ಬಂದು ಬಿಟ್ನಾ? ಅಂತಾ ಒಮ್ಮೆಲೇ ನೋಡಿದರೆ ..."ತರಕಾರಿ ಬುಟ್ಟಿ ಹಿಡಿದು ಒಂದು ಮುದ್ದಾದ ಪುಟಾಣಿ" ನಡೆದು ಬಂದದ್ದು...ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ನಡೆಸಿಕೊಟ್ಟ ಉಗಾದಿ-೨೦೧೪  ಮಕ್ಕಳ ವೇಷ ವೈಖರಿ ಕಾರ್ಯಕ್ರಮದಲ್ಲಿ.  :)

ಏಪ್ರಿಲ್ ೫ ರಂದು ಶನಿವಾರದಂದು ಕನೆಕ್ಟಿಕಟ್ನ Newington ನಲ್ಲಿರುವ ಶ್ರೀ.ವಲ್ಲಬ್ಧಂ ಆಡಿಟೋರಿಯಮ್ನಲ್ಲಿ ಹೊಯ್ಸಳ ಕನ್ನಡ ಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಯುಗಾದಿ-೨೦೧೩ ಕಾರ್ಯಕ್ರಮಕ್ಕೆ, ಗಿಡ-ಮರ, ಹಕ್ಕಿ-ಪಕ್ಷಿಗಳಂತೆ ವಸಂತನ ಆಗಮನವನ್ನೇ ಎದುರು ನೋಡುತ್ತಿದ್ದ ಹೊರನಾಡ ಕನ್ನಡಿಗರು ಸಡಗರ,ಸಂಭ್ರಮದಿಂದ ಭಾಗವಹಿಸಿ ...ಉಲ್ಲಾಸ-ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು!

ಈ ಬಾರಿಯ ಹೆಚ್ಚಿನ ಚಳಿಗಾಲದಿಂದ ಬೇಸರಿಸಿದ್ದ ನನಗೆ ... ಮಕ್ಕಳ ನಾನಾ ವೇಷ ವೈಖರಿ , ಫ್ಯೂಶನ್ ಡಾನ್ಸ್ , ಗೂಗ್ಲಿ ಹಿಪ್-ಹಾಪ್ ಡಾನ್ಸ್ , ಕೋಲು ಕೋಲನ್ನ ನೃತ್ಯ  , ಜೋಗಯ್ಯ ನೃತ್ಯ ...ಇವೆಲ್ಲದರ ಜೊತೆ ಪೋಷಕರಿಂದ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ  ಭರತ ನಾಟ್ಯ  , ಕೋಲಾಟ ಜನಪದ ನೃತ್ಯ , ಸ್ಯಾಂಡಲ್ ವುಡ್ ನೃತ್ಯ  , ರಸ ಕಾವ್ಯ ಪಚಡಿ ( ಒಂದು ಶೃಂಗಾರ ರಸ ಗೀತೆಗಳ ಕಲಸು) , ವಿಚಿತ್ರ ಪುರಾಣ, ಕಿರು ಹಾಸ್ಯ ನಾಟಕಗಳು ..ಅಬ್ಬ ..ಒಂದೇ ಎರಡೇ ? ಸುಮಾರು ೫ ಗಂಟೆಗಳ ತನಕ  ಕಣ್ಮನಗಳಿಗೆ ರಸದೌತಣ ನೀಡಿ ಉಗಾದಿ- ಹೊಸ ವರ್ಷವನ್ನು ಭರ್ಜರಿಯಾಗೇ ಶುರುವಾಗುವಂತೆ ಮಾಡಿದ್ದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

ಅದ್ದೂರಿಯಾಗಿ , ಅಚ್ಚುಕಟ್ಟಾಗಿ ನಡೆಸಿಕೊಟ್ಟು ...ಬಾಯಲ್ಲಿ ನೀರೂರಿಸುವಂಥಹ ಭರ್ಜರಿ ಹೋಳಿಗೆ ಊಟ ಬಡಿಸಿದ ಹೊಯ್ಸಳ ಕನ್ನಡ ಕೂಟದವರಿಗೆ,ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿ .... ಬಾಯಲ್ಲಿ ರಸಭರಿತ ಸ್ವೀಟ್ ಬೀಡ ಮೆಲ್ಲುತ್ತಾ ..ಕಾರು ಸ್ಟಾರ್ಟ್ ಮಾಡಿದಾಗ ರಾತ್ರಿ ಹತ್ತಾಗಿತ್ತು.

ನೋಡಿದರೆ ಆಗಲೇ ಕಾರಲ್ಲಿ ಬಂದು ಪವಡಿಸಿದ್ದಳು ಗೆಳತಿ.  
ಲಂಗ ದಾವಣಿಯಲ್ಲಿ ಇನ್ನೂ ಹೆಚ್ಚಾಗಿ ಸುಂದರವಾಗಿ ಕಾಣುತ್ತಿದ್ದ ಮೊಗ್ಗಿನ ಮನಸಿನ ಅವಳು 

" ಯಾಕಿಂಗೆ ಹಾಡ್ತಾರೋ ಈ ಹುಡುಗರು ? 
 ಯಾಕಿಂಗೆ ಹಾಡ್ತಾರೋ ಈ ಹುಡುಗರು ? 
ಹುಡುಗಿಯ ಮನಸಲಿ ಏನಿದೆ ಎಂದು ನೋಡದೆ ...ನೋಡದೆ " 

ಮೆಲ್ಲನೆ ಹಾಡಿ, ನನ್ನೆದೆ ಕುಡಿನೋಟ ಬೀರಿದಾಗ   ...ಆಗಿತ್ತು ಇನ್ನಷ್ಟು "ಹಿಗ್ಗಿನ ಮನ" ನನ್ನದು.   :)

ಯುಗಾದಿ ಹಬ್ಬದ ಶುಭಾಶಯಗಳು ನಿಮ್ಮೆಲ್ಲರಿಗೂ !

ಯುಗಾದಿ -ಕಾರ್ಯಕ್ರಮದ ಕೆಲವೊಂದು ಚಿತ್ರಗಳು - ಕ್ಯಾಮೆರಾ ಕಂಡಂತೆ , ಇಲ್ಲಿವೆ .  ನೋಡಿ ಆನಂದಿಸಿ , ಹಂಚಿಕೊಳ್ಳಿ  ನಿಮ್ಮ ಸ್ನೇಹಿತರೊಂದಿಗೂ ಸಹಾ ಈ ಉಗಾದಿ ಹಬ್ಬದ ಸವಿಯನ್ನು .

-ನಾಗರಾಜ್.ಎಂ 

Photos & Video's of UGADI 2014

Photos from Nagaraj

Photos links of Ugadi 2014 from HKK " Memory Makers" :)Misc Photos  Ugadi 2014 (112 photos)

Nataka - Oggarane Baandle - Ugadi 2014 (44 photos) By South Windsor LLC.


Samskriti - Ugadi 2014 (300 photos) Dances from Karnataka

Concept, Choreography, Co-ordination by Priya HaryadiVideos links of Ugadi 2014 from HKK " Memory Makers" :)

All programs videos are added into playlist.

Video Links from Krishna Kondavadi

Nagarahole - Tribal Dance @ HKK Ugadi 2014  http://youtu.be/ISg3PSNownQ
Lambani Dance @ HKK Ugadi 2014                   http://youtu.be/4MOvGSqe0sc

===================================================

Program Flyer from Sundaresh Banavara

Namaskara,

The Executive Committee of Hoysala Kannada Koota has decided to celebrate HKK Ugadhi on Saturday  April 5th 2014 at Vallabhdham Community Hall, 26 Church Street, Newington CT.   

While the Cultural committee is getting ready to put up a grand show, various other committees have started working hard to bring another great event at HKK.

Please join us - Let us celebrate the Kannada New Year and Kannada Culture together. And yes, special traditional dinner is being planned to end the evening. 

Please stay tuned for evite and more details.  

-EC, HKK
Ċ
Swarna modi,
May 30, 2014, 2:08 PM
Comments