2014‎ > ‎

Hemantha Gaana ಹೇಮಂತ ಗಾನ

Namaskara,

Thank you all for making the HKK Hemantha Gaana a grand success! Once started as an informal gathering , this program on Saturday had over 70 participants come up on stage and showcase their talent and the love towards Kannada Music. Melodious songs and music were on continuously  for over 4 hours ! 

Thanks to all the participants, volunteers, members, supporters, friends and families for making this possible.

Enjoy the Pictures , Videos and also an article from our Media Coverage Team - Memory makers :) none other than Dinesh Haryadi, Amruth Kumar & Nagaraj Maheswarappa.

Photos

Hemanthagana Photos from Dinesh Haryadi

Photos from Nagaraj

Videos
1Sharanam Ayappahttp://youtu.be/kIkUGD5Yhlc
2Naada Geethehttp://youtu.be/iRmNlSTY0Yw
3Ninnidale Kanasondu http://youtu.be/eQww33yBfYc
4Lambodhara Lagumikarahttp://youtu.be/8tRRm8RhsiA
5Aache Maneya Subbamange- Varsha Kulkarnihttp://youtu.be/HeY9VV-9v-g
6Jayathu Jaya Vittalaahttp://youtu.be/bklmuiJc3kM
7Fench Horn Performance -Anish Aithahttp://youtu.be/xh8iepBWufs
8Piano Performance -Abhi Aithahttp://youtu.be/QlIC6ujthFE
9Hotel California - Prithivi Gudderahttp://youtu.be/IMso0wcwm1Y
10Keyboard - Onde Matharamhttp://youtu.be/xtQd4rHRHHw
11Performance by Shreyahttp://youtu.be/yReJ9NpKC58
12Jeenina Holeyoo - Anilhttp://youtu.be/T_ivKLe2U_A
13Moodala Maneyaahttp://youtu.be/OncpceqgkQI
14Amma Beke Bekuhttp://youtu.be/VTTUB7EmFKM
15Bahala Valleyavaru Namma Miss - Akhilhttp://youtu.be/TpdAc3sdcBo
16Saare Jahase Aachahttp://youtu.be/ZUICVY-YES0
17Tappu maadadouru Yaarhttp://youtu.be/6BDvlvFBHm8
18Karunaada Thaayehttp://youtu.be/TRpbcsAPXH0
19Ee Sumbhashane Namma - Somanath and Anjuhttp://youtu.be/v8NEsMZa5QU
20Aaseya Bhavaahttp://youtu.be/7GOkbjLWzSE
21Naguva Nayanahttp://youtu.be/haC2zfHz-SU
22Chamundi Thaaye Aaane - Sachin Gowdahttp://youtu.be/Fx1hf11ekUQ
23Hegide Nam Deshaa - Resham & Vishwa http://youtu.be/LukwORUTQ-Y
24Rolling in the Deep - Shreyahttp://youtu.be/n8A5UROJxxY
25Chinnada - Ruhihttp://youtu.be/zkH29lSggI8
26Santoshake Haadu Santoshakehttp://youtu.be/MJ4orkjisHk
27Baghyada Balegarahttp://youtu.be/sGCgyPo1RQc
28Bangara Neera Kadalache  - Pradeep Dolinhttp://youtu.be/g_09RAlfhlg
29Nalivaa Gulaabi Hoove - Raghu Sosalehttp://youtu.be/kFqD08UKtYk
30Belli Moodutho Kooli - Sundareshhttp://youtu.be/GnqwDNIuxZE
31Yalliruve Manava Kaadiva - Shashihttp://youtu.be/vqYMlC5qJ_0
32Sankranthi Bantu -Swarna & Krishnahttp://youtu.be/3-M3EWNE00A
33Ne Bandu Ninthaga -Priya & Dineshhttp://youtu.be/5j-qsRI42Eg
34Twinkle Twinkle on Violin - Siddarth Masarurhttp://youtu.be/b_Nd3TmwDHk
35US States Song- Siddarth & Samarth Masarurhttp://youtu.be/Yb-DSckkK0Y
36Little Girl singinghttp://youtu.be/zeIQpE2uqlo
37Nannaseyaa Hoove -Amruth Kumarhttp://youtu.be/gAV71v2tWGk
38Gudiyaliruva Shilegallela - Inchara Gaddihttp://youtu.be/-mKCNVIzIDA
39O Papad Wale-Nishitahttp://youtu.be/bLsYQEWXdgo
40Ee Kanasinolago - KM and Meghahttp://youtu.be/GRDaqrAHMTg
41Bahala Valleyavaru Namma Misshttp://youtu.be/3AcnhuNNHFg
42Yenu Shiva Yak hingadehttp://youtu.be/D3dZcT_D2TY
43Bahala Valleyavaru Namma Misshttp://youtu.be/3AcnhuNNHFg
44Nanna Munna Raahi Huhttp://youtu.be/-kQIV8h_nwk
45Dasana Maadiko Yenna -Srikanth Iyerhttp://youtu.be/gRfHQztVg04
46Adult Violinhttp://youtu.be/68Md4cXFPP0
47Yellelo Ooduva Manase -Anithahttp://youtu.be/2NmetA80LsQ
48Violin kidshttp://youtu.be/0rJSvy-Jco4
49Pada Pada Kannadahttp://youtu.be/8vKUTPxHbmY
50Ade Belaku Ade Gaalihttp://youtu.be/XTOi5UaQZI4
51Summane Summane iddaruhttp://youtu.be/kByfYhZgS8Q
52Theredide Mane O Baa Athithihttp://youtu.be/gUms-rirKZA
53Baanigondu elle - Vijayahttp://youtu.be/9tyjamqycpg
54Keyboardhttp://youtu.be/LMwIzPc3zXQ
55Ullasada Hoo Malehttp://youtu.be/kOx2RQtR65g
56Yellelo Ooduva Manase -Prashant Sahttp://youtu.be/hp6JAwRtUjI
57Dekhana Haire Sochanahttp://youtu.be/pGCLJKhbRVc
58Hosadeno Tallana -Aruna Chabbihttp://youtu.be/RPvdHi5Ky_I
        59  Ello Oduva Manase - Harsha                       http://youtu.be/Efzvq9uB_g8


ಅಮೇರಿಕಾದ ಕನೆಕ್ಟಿಕಟ್ನಲ್ಲಿ ಹೇಮಂತ ಗಾನ ! 2014
-ನಾಗರಾಜ್.ಎಂ

ಎತ್ತ ನೋಡಿದರೂ ಬಿಳಿ ಹಿಮದ ಗುಡ್ಡೆಗಳು, ಮೈ ಕೊರೆಯುತ್ತಿರುವ ಚಳಿಗಾಳಿ, ಬಿಳಿ ಹಿಮದ ಮೇಲೆ ಬಿದ್ದು ಕಣ್ಣು ಕೋರೈಸುತ್ತಿರುವ ಸೂರ್ಯನ ಕಿರಣಗಳು ...ಎಲೆಗಳ ಹೊದಿಕೆಯಿಲ್ಲದೆ ಚಳಿಗೆ ಮೈಯೊಡ್ಡಿ ನಿಂತು ನಡುಗುತ್ತಿರುವ ಗಿಡ-ಮರಗಳು ..ಅಬ್ಬಾ ..ಯಾವಾಗ ಮುಗಿಯುತ್ತೋ ಈ ಚಳಿಗಾಲ ಎನ್ನುತ್ತಾ ದಪ್ಪನೆಯ ಕೋಟು ಏರಿಸಿಕೊಂಡು ಸಂಸಾರದೊಂದಿಗೆ ಕಾರ್ ನಲ್ಲಿ ಹೋಗ್ತಾ ರೇಡಿ...ಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ PITBULL ನ ವೆಸ್ಟೆರ್ನ್ RAP ಮ್ಯೂಸಿಕ್ ...ಅದಕ್ಕೆ ಸರಿಯಾಗಿ ಹಿಂದೆ ಕೂತು ತಲೆ ತೂಗುತ್ತಿರೋ ಮಗರಾಯ ...ಅಂತು ಇಂತೂ ಕಾರ್ ಪಾರ್ಕ್ ಮಾಡಿ ಒಳಗೆ ಹೋದ ತಕ್ಷಣವೇ ...ಹಾ ಹಾ ..
"ಎಲ್ಲಿರುವೇ ಮನವ ಕಾಡುವ ರೂಪಸಿಯೇ ? ಬಯಕೆಯ, ಬಳ್ಳಿಯ ನಗುವ ಹೂವಾದ ಪ್ರೇಯಸಿ ನೀನು ..ಎಲ್ಲಿರುವೇ ನಲ್ಲೆ , ಎಲ್ಲಿರುವೇ?" ಎಂಬ ಧ್ವನಿ ಸುರಳಿ ಕೇಳಿ...ಯಾರಪ್ಪ ಇದು ...ಈ ದೂರದ ಅಮೆರಿಕಾದಲ್ಲಿ ಅದರಲ್ಲೂ ಈ ನಡುಗುವ ಚಳಿಯಲ್ಲಿ, ವಿರಹ ವೇದನೆಯಲ್ಲಿ ಹಾಡುತ್ತಾ ತನ್ನ ಪ್ರೇಯಸಿಯನ್ನು ಹುಡುಕುತ್ತಾ ಇರೋದು ? ಅಂತ ಯೋಚಿಸುತ್ತಾ ನೋಡಿದರೆ ..ಈ ಹಾಡು ಕೇಳಿ ಬಂದಿದ್ದು ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಆಯೋಜಿಸಿದ್ದ "ಹೇಮಂತ ಗಾನ" ಸಂಗೀತ ಸಂಜೆಯಲ್ಲಿ !

ಜನವರಿ ೧೮ , ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್ನಲ್ಲಿ ನಡೆದ ಈ ಗಾನ ಸಂಜೆಗೆ ನೂರಾರು ಹೊರನಾಡ ಕನ್ನಡಿಗರು ತಮ್ಮ ಪರಿವಾರ ಸಮೇತಾ ತೀವ್ರ ಚಳಿಯಲ್ಲೂ ( 0 ಡಿಗ್ರಿ ಸೆಲ್ಸಿಯಸ್ ) ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು!

ಹೊಯ್ಸಳ ಕನ್ನಡ ಕೂಟದ ಅಧ್ಯಕ್ಷ ಶ್ರೀ ದಿನೇಶ್ ಹರ್ಯಾಡಿ ಹೇಮಂತ ಗಾನದ ಬಗ್ಗೆ ವಿವರಣೆ ಕೊಡುತ್ತ ಎಲ್ಲರನ್ನು ಸ್ವಾಗತಿಸಿದ ಮೇಲೆ ..ಪುಟಾಣಿ ಆದಿತ್ಯ ಹಾಡಿದ "ಶ್ರೀ ಅಯ್ಯಪ್ಪ ಸ್ವಾಮಿ ಸ್ತುತಿ"ಯೊಂದಿಗೆ ಈ ಗಾನ ಸಂಜೆ ಸರಿಯಾಗಿ 3 ಗಂಟೆಗೆ ಪ್ರಾರಂಭವಾಯಿತು. ನಂತರ ಶ್ರೀ ರಘು ಸೋಸಲೆ ಮತ್ತು ಸಂಗಡಿಗರು ಹಾಡಿದ ಕನ್ನಡ ನಾಡ ಗೀತೆ "ಜೈ ಭಾರತ ಜನನಿಯ ತನುಜಾತೆ ! ಜಯಹೇ ಕರ್ನಾಟಕ ಮಾತೆ ! " ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು.

ಶ್ರೀ ಗುರುರಾಜ್ "ನಿನ್ನಿಂದಲೇ ನಿನ್ನಿಂದಲೇ" ಎಂದು ರಾಗವಾಗಿ ಹಾಡಿದ ಮೇಲೆ ಪ್ರದೀಪ್ ಕುಮಾರ್ ದಾರಾ ಬೇಂದ್ರೆ ರಚಿತ ಒಂದು ಭಾವಗೀತೆ ಹಾಡಿದರು. ಕುಮಾರಿ ವರ್ಷಾ ಕುಲಕರ್ಣಿ ಹಾಡಿದ "ಆಚೆ ಮನೆ ಸುಬ್ಬಮ್ಮ"ನ ಉಪವಾಸ ವ್ರತದ ಭಾವಗೀತೆ ಹಾಡಿ ಎಲ್ಲರ ಮನ ಮೆಚ್ಚಿಸಿದರೆ , ವಿಜಯ್ ಮತ್ತು ಸೀಮಾ ಕುಲಕರ್ಣಿ "ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ " ಅಂತಾ ಹಾಡಿದಾಗ ನೆರೆದಿದ್ದ ಹೆಂಗಳೆಯರಲ್ಲಿ ಕೆಲವರಿಗಾದರೂ ದೂರದಲ್ಲಿರುವ ತಮ್ಮ ತಮ್ಮ ತೌರಿನ ನೆನಪು ಮಾಡಿದ್ದರಲ್ಲಿ ಅಚ್ಚರಿಯೇನಿಲ್ಲ !

ಅನಿಲ್ ಹುಲಿಕಲ್ " ಜೇನಿನ ಹೊಳೆಯೋ , ಹಾಲಿನ ಮಳೆಯೋ " ಅಂತಾ ಡಾ|ರಾಜ್ ಹಾಡು ಹಾಡಿದರೆ , ಸೂರಜ್ "ಸಂತೋಷಕೆ ಹಾಡು ನೀ ಸಂತೋಷಕೆ " ಅಂತಾ ಭರ್ಜರಿಯಾಗಿ ಹಾಡಿ ಕರಾಟೆ ಕಿಂಗ್ ಶಂಕರ್ ನಾಗ್ ಅವರ ನೆನಪಾಗುವಂತೆ ಮಾಡಿದರು. ಅಂಜು-ಸೋಮನಾಥ್ " ಈ ಸಂಭಾಷಣೆ " , ವಿಶ್ವನಾಥ್ ಗೌಡ " ಆಶಯ ಭಾವ , ಒಲವಿನ ಜೀವ " , ಹರ್ಷವರ್ಧನ್ " ಎಲ್ಲೆಲ್ಲೊ ಓಡುವ ಮನಸೇ " , ರಘು ಸೋಸಲೆ " ನಲಿವ ಗುಲಾಬಿ ಹೂವೆ " ಅಂತಾ ಶುಶ್ರಾವ್ಯವಾಗಿ ಹಾಡಿದರೆ ಕು.ಸಚಿನ್ ಗೌಡ "ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೊನೆ , ಸಿಂಹಾ ಸಿಂಹಾ " ಅಂತ ಭರ್ಜರಿಯಾಗಿ ಹಾಡಿ ಸಾಹಸಸಿಂಹ ಡಾ|ವಿಷ್ಣುವರ್ಧನ್ ನೆನಪಾಗುವಂತೆ ಮಾಡಿದನು.

"ಏನ್ ಮಾಡ್ಲಿ ನಮ್ಮ ಮಿಸ್ಸು ಬಹಳ ಸ್ಟ್ರಿಕ್ಟು" ಅಂತಾ ಪುಟಾಣಿ ಅಖಿಲ್ ಹಾಡಿ ಕಂಪ್ಲೈಂಟ್ ಮಾಡಿದರೆ , ಸುಂದರೇಶ್ "ಬೆಳ್ಳಿ ಮಾಡಿತೋ , ಕೋಳಿ ಕೂಗಿತೋ", ಕು.ಇಂಚರ "ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ", ಕು.ರಿತ್ವಿಕ್ "ಜಯತು ಜಯ ವಿಟ್ಟಲ" , ವಿಜಯ " ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆ ಕೊನೆಯು ಎಲ್ಲಿದೆ" , ಸ್ವರ್ಣ-ಕೃಷ್ಣ "ಸಂಕ್ರಾಂತಿ ಬಂತು ರಥೊ ರಥೊ ", ಪ್ರಿಯಾ-ದಿನೇಶ್ "ನೀ ಬಂದು ನಿಂತಾಗ", ಶಶಿ ತಿರುಮಲೆ "ಎಲ್ಲಿರುವೇ ಮನವ ಕಾಡುವ ರೂಪಸಿಯೇ" , ಶ್ರೀ ಲೇಖ "ಸುಮ್ಮನೆ ಸುಮ್ಮನೆ " ಅಂತಾ ಅರ್ಥಗರ್ಭಿತವಾಗಿ ಭಾವಪೂರ್ಣವಾಗಿ ಹಾಡಿ ಮನರಂಜಿಸಿದರು.

ಹೀಗೆ ಸಾಲು ಸಾಲಾಗಿ ಹಳೆಯ ಹಾಗು ಹೊಸ ಕನ್ನಡಗೀತೆಗಳ ಜೊತೆಗೆ ಇನ್ನೂ ಹಲವರು ದೇವರ ಶ್ಲೋಕಗಳನ್ನು , ಭಾವಗೀತೆಗಳನ್ನು ಹಾಡಿದರೆ , ಕೆಲವರು ಗಿಟಾರ್ , ಪಿಯಾನೋ , ವಯೊಲಿನ್ , ಕೀ ಬೋರ್ಡ್ ನುಡಿಸಿ ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿದರು.

ಈ ಹೇಮಂತ ಗಾನದ ವಿಶೇಷವೇನೆಂದರೆ ಹಾಡು ಹೇಳಲು ಮಕ್ಕಳಿಗೂ , ದೊಡ್ಡವರಿಗೂ ಹಾಗೂ ಹೊಸಬರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು ! ಮಕ್ಕಳ ಹಾಡು ಆದ ಮೇಲೆ ದೊಡ್ಡವರ ಹಾಡು ..ಹೀಗೆ ಸರಿಸಮನಾಗಿ ನಡೆದ ಈ ಸಮಾರಂಭದಲ್ಲಿ ಮಕ್ಕಳೂ ನಾವೇನೂ ಕಡಿಮಯಿಲ್ಲಎಂಬಂತೆ ಅಚ್ಚ ಕನ್ನಡದಲ್ಲಿ ಶುಶ್ರಾವ್ಯವಾಗಿ ಹಾಡಿದ್ದು ಎಲ್ಲರ ಮನಸೆಳೆಯಿತು.!

ಒಮ್ಮೆಲೇ ಇಷ್ಟೊಂದು ಸವಿಗನ್ನಡದ ಹಾಡುಗಳನ್ನು ಕಿವಿಗಳಿಗೆ ಇಂಪಾಗುವಂತೆ ಕೇಳಿಸಿ , ನಾಲಿಗೆಗೆ ರುಚಿಯಾದ ಊಟ ಬಡಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟ ಹೊಯ್ಸಳ ಕನ್ನಡ ಕೂಟದವರಿಗೆ ಧನ್ಯವಾದಗಳನ್ನು ಹೇಳಿ ಮನೆ ಕಡೆ ಹೊರಟಾಗ ರಾತ್ರಿ ೯ ರ ಮೇಲಾಗಿತ್ತು !

ಹೀಗೆ ಸರಿಸುಮಾರು ೬ ಗಂಟೆಗಳ ತನಕ ನಡೆದ ಈ ಗಾನ ಸಂಜೆ ಎಲ್ಲರ ಕಿವಿ , ಮನ ತಣಿಸಿದ್ದಲ್ಲದೆ ಎಲ್ಲರಲ್ಲೂ ಗುಪ್ತವಾಗಿ ಅಡಗಿದ್ದ ಹಾಡುವ ಕಲೆಯನ್ನು ಹೊರಹೊಮ್ಮಿಸಿದ್ದಂತು ಅಕ್ಷರಶ: ನಿಜ !

ಕಾರಲ್ಲಿ ಕುಳಿತಾಗ ಮತ್ತೆ ರೇಡಿಯೋದಲ್ಲಿ ಕೇಳಿ ಬಂದ , ನೋಡಲು ಕೊಮಲಾಂಗಿಯಾದ " ಕೇಟಿ ಪೆರಿ" ವ್ಯಾಘ್ರಿಣಿಯಂತೆ "ರೋರ್" ಅಂತಾ ಘರ್ಜಿಸೊ ಹಾಡನ್ನು ಪಟ್ ಅಂತಾ ಬಂದ್ ಮಾಡಿ, ಪಕ್ಕದಲ್ಲೇ ಯಾಕೋ ಗರಂ ಆಗಿ ಕೂತಿದ್ದ ನಲ್ಲೆಯನ್ನು ನೋಡಿ " ನೀ ಬಂದು ಕುಂತಾಗ (ನಿಂತಾಗ ಅಲ್ಲ ) , ಕುಂತು ನೀ ನಕ್ಕಾಗ , ಸೋತೆ ನಾನಾಗ " ಅಂತಾ ನನ್ನದೇ ರಾಗದಲಿ ನಾ ..ಹಾಡಿದರೆ , ವೆಸ್ಟೆರ್ನ್ RAP ಮ್ಯೂಸಿಕ್ ಪ್ರೇಮಿಯಾದ ಮಗರಾಯ ಹಿಂದಿನ ಸೀಟಲ್ಲಿ ಕೂತು "ಪದ ಪದ ಕನ್ನಡ ಪದನೆ , ನಾ ರತ್ನನ ಪದ ಕೇಳ್ಕೊಂಡು ಬೆಳೆದವ್ನೆ " ಅಂತಾ ಗುನುಗುತ್ತಿದ್ದ.

- ಸಿರಿಗನ್ನಡಂ ಗೆಲ್ಗೆ -

-ನಾಗರಾಜ್.ಎಂ

===========================
ಕನ್ನಡ ಅಭಿಮಾನಿಗಳಿಗೆ ಸಂಕ್ರಾಂತಿ ಶುಭಾಶಯಗಳು . 
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ 
ಸ್ನೇಹಿತರ ಒಡಗೂಡಿ ಸಂಕ್ರಾಂತಿ ಆಚರಿಸಿ 
೨೦೧೪ ರ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿ ಕೊಳ್ಳಿ !

ಹೇಮಂತ ಗಾನ ಸಂಗೀತ ಸಂಜೆಗೆ ಬನ್ನಿ 
ಎಳ್ಳು ಬೆಲ್ಲ ತಿಂದು ಒಳ್ಳೆ ಹಾಡು ಹೇಳಿ ! Ellarigu Namaskara,

Hoysala Kannada Koota is cordially inviting you all for  "Hemantha Gana 2014"  A Musical Evening.

Hemantha Gana is a Music Based program  with following format:

- Open for both Vocal and Instrumental Music performance
- Solo Performances are allowed
- 3 Min time slot will be given for each performer/group
- one performance per participant( 2nd chance will be given based on availability of time)
- All Amateur and Stage singers are welcome

Please register by sending email to: Raghu Sosale <raghusosale@gmail.com>.

Event Fee: $10 per  family for Non Members.

Light dinner will be served

 - EC, HKK