2014‎ > ‎

Deepavali - ದೀಪಾವಳಿ

Deepavali and Kannada Rajyothsava 2014 Celeberations.

ಅಮೇರಿಕಾದ ಕನೆಕ್ಟಿಕಟ್ನಲ್ಲಿದೀಪಾವಳಿ-ಕನ್ನಡ ರಾಜ್ಯೋತ್ಸವ ೨೦೧೪ ಸಂಭ್ರಮ...!

ಗಾಳಿಯ ಬಿರುಸಿಗೆ ರಸ್ತೆಯಲ್ಲೆಲ್ಲ ಹಾರಿಬಿದ್ದ ಬಣ್ಣ ಬಣ್ಣದ (ಫಾಲ್ ಕಲರ್) ಮರಗಿಡಗಳ ಎಲೆಗಳು, ಆಗಲೇ ಚಳಿರಾಯನ ಆಗಮನದ ಮುನ್ಸೂಚನೆಯಂತೆ ಜೋರಾಗಿ ಬೀಸುತ್ತಿರುವ ಚಳಿಗಾಳಿ ...ಅಬ್ಬ ಮತ್ತೆ ಬಂತಲ್ಲಪ್ಪ ಚಳಿಗಾಲ ಎನ್ನುತ್ತಾ ಕೋಟು ಏರಿಸಿಕೊಂಡು ಸಂಸಾರದೊಂದಿಗೆ ಕಾರ್ ನಲ್ಲಿ ಹೋಗ್ತಾ, ರೇಡಿಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ PITBULL ನ ವೆಸ್ಟೆರ್ನ್ RAP ಮ್ಯೂಸಿಕ್ ...ಅದಕ್ಕೆ ಸರಿಯಾಗಿ ಹಿಂದೆ ಕೂತು ತಲೆ ತೂಗುತ್ತಿರೋ ಮಗರಾಯ ...ಅಂತು ಇಂತೂ ಕಾರ್ ಪಾರ್ಕ್ ಮಾಡಿ ಒಳಗೆ ಹೋದ ತಕ್ಷಣವೇ ...ಹಾ ಹಾ ..ಸುಮಧುರವಾಗಿ ಕೇಳಿ ಬರುತ್ತಿರುವ ಕನ್ನಡದ ಸುಗಮ ಸಂಗೀತದ ಅಲೆಗಳು "ಹಿಂದುಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ....ಕನ್ನಡ ಹಿರಿಮೆಯ ಮಗನಾಗು , ಕನ್ನಡ ನುಡಿಯ ಸಿರಿಯಾಗು ..." ,"ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರಿಗೆ ...", "ಜೊತೆ - ಜೊತೆಯಲಿ ಇರುವೆನು ಎಂದು ನಾನು..ಹೊ ಹೊ "
ಓಹ್ ..ಇವೆಲ್ಲ ಕೇಳಿ ಎಲ್ಲೋ ಬೆಂಗಳೂರಿನಲ್ಲಿರುವ ಪುಟ್ಟಣ್ಣ ಕಲಾ ಮಂದಿರದೊಳಗೆ ಬಂದಿರೋ ತರಹ ಅನ್ನಿಸುವಂತೆ ಮಾಡಿದ್ದು .. ಈ ದೂರದ ಅಮೆರಿಕಾದಲ್ಲಿನ ಕನ್ನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ(HKK) ವತಿಯಿಂದ ನಡೆದ "ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ೨೦೧೪" ಕಾರ್ಯಕ್ರಮ !

ನವೆಂಬರ್ ೯ ರವಿವಾರ , ಕನ್ನೆಕ್ಟಿಕಟ್ನ ನ್ಯೂವಿಂಗ್ಟನ್ ನಲ್ಲಿರುವ ಶ್ರೀ.ವಲ್ಲಭ್ಧಂ ಟೆಂಪಲ್ ಆಡಿಟೋರಿಯಂನಲ್ಲಿ ದೀಪಾವಳಿ-ಕನ್ನಡ ರಾಜ್ಯೋತ್ಸವದ ಆಚರಣೆ ಶ್ರೀಮತಿ ಪ್ರೇರಣ , ಶ್ರೀ ದೀಪಕ್ ಮೂರ್ತಿ ರವರ ಸುಂದರ ನಿರೂಪಣೆಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಸರಿಯಾಗಿ ಮಧ್ಯಾನ್ಹ ೧-೩೦ ಗಂಟೆಗೆ ಶ್ರೀಮತಿ.ಲತಾ ಅವರ "ಆನಂದ ಲಕ್ಷ್ಮೀ ಬಾರಮ್ಮಾ " ಪ್ರಾರ್ಥನೆಯೊಂದಿಗೆ ಆರಂಭವಾದನಂತರ ಶ್ರೀ ವಿಶ್ವನಾಥ್ ಮತ್ತು ತಂಡದವರಿಂದ ಕನ್ನಡದ ನಾಡಗೀತೆ ಶುರುವಾದ ತಕ್ಷಣ ಎಲ್ಲ ಹಿರಿಯರು, ಕಿರಿಯರು ಎದ್ದು ನಿಂತು ತಾವೂ ಧ್ವನಿಗೂಡಿಸಿದ್ದು ತುಂಬಾ ವಿಶೇಷವಾಗಿತ್ತು!

HKK ಅಧ್ಯಕ್ಷರಾದ ಶ್ರೀ ದಿನೇಶ್ - ಪ್ರಿಯಾ ಹರ್ಯಾಡಿ ಅವರಿಂದ ಸ್ವಾಗತ ಭಾಷಣವಾದ ಮೇಲೆ ಶ್ರೀಮತಿ ಪದ್ಮ ಮತ್ತು ಶ್ರೀ. ಪಶುಪತಿ ಅವರ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿಯಲ್ಲಿ ಸಣ್ಣ ಸಣ್ಣ ಮುದ್ದಾದ ಮಕ್ಕಳು - ಬೇಟೆಗಾರ, ವರಕವಿ ದಾರಾ ಬೇಂದ್ರೆ , ಶಿವ - ಶ್ರೀ ಕೃಷ್ಣ-ರಾಧೆ , ಮಿಸ್ ಇಂಡಿಯಾ CT , ರಾಜಕುಮಾರಿ, ಏಕಲವ್ಯ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಫೋಷಕರ ಕಂಗಳಲ್ಲಿ ಆನಂದಭಾಷ್ಪ ಬರಿಸಿದ್ದರೆ , ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲು ಚಿಣ್ಣರ-ಕಿನ್ನರ ಬಣ್ಣದ ಲೋಕಕ್ಕೆ ಕರೆದೊಯ್ದಂತಾಗಿತ್ತು !

ಇದಾದ ನಂತರ ಈ ಕೆಳಕಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ನೆರೆದ್ದಿದ್ದವರನ್ನು ರಂಜಿಸಿದವು ...

* ತಾರೆಗಳ ತೋಟ - ಶ್ರೀಮತಿ ಪ್ರಿಯ ಹರ್ಯಾಡಿ ಅವರ ಸಂಯೋಜನೆಯಲ್ಲಿ ಮಕ್ಕಳಿಂದ ಒಂದು ಸುಂದರ ನೃತ್ಯ
* ಅಷ್ಟ ಲಕ್ಷ್ಮೀ ನೃತ್ಯ - ನಿತಾಂತ ಅವರ ಸಂಯೋಜನೆಯಲ್ಲಿ ಮಕ್ಕಳಿಂದ ಒಂದು ಸುಂದರ ನೃತ್ಯ
* ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ - ಶ್ರೀಮತಿ ಶಾರದ ನೂರಿ ಅವರ ಸಂಯೋಜನೆಯಲ್ಲಿ ಸುಂದರ ಕೂಚುಪುಡಿ ನೃತ್ಯ
* ತೆನಾಲಿ ರಾಮ - ಶ್ರೀಮತಿ ಅಂಜು ಸೋಮನಾಥ್ ಅವರ ನಿರ್ದೇಶನದಲ್ಲಿ ಮಕ್ಕಳ ನಾಟಕ
* ನಾಡ ಗೀತೆ ನೃತ್ಯ - ಶ್ರೀಮತಿ ಪ್ರಿಯಾ ಹರ್ಯಾಡಿ ಮತ್ತು ತಂಡದವರಿಂದ.

ಮಧ್ಯೆ ಚಿಕ್ಕ ವಿರಾಮದ ನಂತರ ಕನ್ನಡ ಕೂಟದ ಅಜೀವ ಸದಸ್ಯರಿಂದ ಪುಟಾಣಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಮುಗಿದಮೇಲೆ ಶ್ರೀಮತಿ ಪದ್ಮಾ ಹರ್ಷವರ್ಧನ ಮತ್ತು ತಂಡದವರು ಅಭಿನಯಿಸಿದ "ಮಾತಾಡ್ ಮಾತಾಡ್ ಮಲ್ಲಿಗೆ" ಹಾಗು ಶ್ರೀ ಯಶವಂತ್ ಗಡ್ಡಿ , ಸದಾನಂದ್ ಮತ್ತು ತಂಡದವರು ಅಭಿನಯಿಸಿದ "ವರ್ಕ್ ಫ್ರಮ್ ಮನೆಯು , ಫೇಸ್ಬುಕ್ ಪ್ರಪಂಚವು " ನಗೆನಾಟಕ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುವುದರ ಜೊತೆ "ಗಾಂಚಲಿ ಬಿಡಿ ಕನ್ನಡ ಮಾತಾಡಿ" , ಈಗಿನ ಫೇಸ್ಬುಕ್ ಹಾವಳಿಯ ಬಗ್ಗೆ ಎಲ್ಲರಲ್ಲೂ ಉತ್ತಮ ಸಂದೇಶ ಸಾರಿದ್ದವು.

ನಂತರ "ಹಿಂದುಸ್ತಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ....ಕನ್ನಡ ಹಿರಿಮೆಯ ಮಗನಾಗು , ಕನ್ನಡ ನುಡಿಯ ಸಿರಿಯಾಗು ..." ಹಾಡಿನೊಂದಿಗೆ ಸುಪ್ರಸಿದ್ದ "ಕರ್ನಾಟಕದ ಗಾನ ಕೋಗಿಲೆ" ಶ್ರೀಮತಿ.ಬಿ.ಆರ್.ಛಾಯ ಅವರ ಸಂಗೀತ ಸಂಜೆ ಕಾರ್ಯಕ್ರಮ ಸುಮಾರು ಒಂದೂವರೆ ಗಂಟೆಗಳ ತನಕ ಎಲ್ಲಾ ಹೊರನಾಡ ಕನ್ನಡಿಗರನ್ನು ಸಂಗೀತ ಸುಧೆಯಲ್ಲಿ ಮುಳುಗುವಂತೆ ಮಾಡಿತ್ತು. ಚಲನ ಚಿತ್ರ ಗೀತೆಗಳು, ಭಾವ ಗೀತೆಗಳು , ಜನಪದ ಗೀತೆಗಳ ರಸದೌತಣ ನೀಡಿದ ಈ ಸಂಗೀತ ಸಂಜೆಯಲ್ಲಿ ಶ್ರೀಮತಿ.ಬಿ.ಆರ್.ಛಾಯ ಅವರ ಜೊತೆ ಸರಿಸಾಟಿಯಾಗಿ ಹಾಡಿದ್ದು ಹೊಯ್ಸಳ ಕನ್ನಡ ಕೂಟದ ಸಿರಿಕಂಠದ ಶ್ರೀ ರಘು ಸೋಸಲೆ. ಜೊತೆಗೆ ಹೊಸ ಪ್ರತಿಭೆಯಾದ ಕಾರ್ತಿಕ್ ಅವರಿಂದ " ನಿನ್ನಿಂದಲೇ , ನಿನ್ನಿಂದಲೇ " "ಹುಟ್ಟಿದರೆ ಕನ್ನಡ ನಾಡ ನಲ್ಲಿ ಹುಟ್ಟಬೇಕು- ಡಾ|ರಾಜ್ ಅವರ ಎವರ್ ಗ್ರೀನ್ ಹಾಡಿಗೆ" ಎಲ್ಲರು ಸೇರಿ ಹೆಜ್ಜೆ ಹಾಕುವುದರೊಂದಿಗೆ ಈ ಸಂಗೀತ ಕಾರ್ಯಕ್ರಮ ಮುಗಿದಿತ್ತು.

ಹೀಗೆ ಸರಿಸುಮಾರು ರಾತ್ರಿ ೮ ರತನಕ ನಡೆದ ಈ ದೀಪಾವಳಿ ಕಾರ್ಯಕ್ರಮ ಕೊನೆಗೊಂಡಿದ್ದು ಶ್ರೀ ಚಂದ್ರಭಟ್ ರವರ ವಂದನಾರ್ಪಣೆಯೊಂದಿಗೆ.

ಕೊನೆಗೆ ಭರ್ಜರಿ ಊಟ ಮಾಡಿ ಎಲ್ಲರಿಗೂ ಧನ್ಯವಾದ ಹೇಳಿ , ಕಾರಲ್ಲಿ ಕುಳಿತಾಗ ಮತ್ತೆ ರೇಡಿಯೋದಲ್ಲಿ ಕೇಳಿ ಬಂದ ಅಬ್ಬರದ ಪಾಶ್ಚಾತ್ಯ RAP ಮ್ಯೂಸಿಕ್ ಅನ್ನು ಬಂದ್ ಮಾಡಿ, ಪಕ್ಕದಲ್ಲೇ ಕಲರ್ಫುಲ್ ಡ್ರೆಸ್ ನಲ್ಲಿ ಸುಂದರವಾಗಿ ಕಾಣುತ್ತಿದ್ದ ಮಡದಿಯ ಕಡೆ ನೋಡಿ " ಯಾಕಿ ಅಂತರಾ?- ಏನೋ ಒಂಥರಾ..ನೀನಿದ್ದರೆ ಈ ಜಗವೇ ಬಲು ಸುಂದರ " ಅಂತಾ.. ನಾ ಗುನುಗಿದಾಗ...ಹಿಂದಿನ ಸೀಟಲ್ಲಿ "ಜೊತೆ - ಜೊತೆಯಲಿ ಇರುವೆನು ಎಂದು ನಾನು..ಹೊ ಹೊ " ಅಂತಾ ಮಗರಾಯ ಹಾಡನ್ನು ಗುನುಗಿದ್ದ ಕೇಳಿ ...ಯಾರ ಜೊತೆ ಮಗನೆ ? ಅಂತಾ ಮಡದಿ ಅವನತ್ತ ತಿರುಗಿ ಕೇಳಿ ... "ಅಪ್ಪನಿಗೆ ಸರಿಯಾದ ಮಗ.." ಅಂತಾ ಗೊಣಗಿ ..ರ್ರೀ , ಮುಂದೆ ನೋಡಿಕೊಂಡು ಗಾಡಿ ಓಡಿಸಿ ಅಂತಾ ಮನೆಯಾಕೆ ಹೇಳಿದ ಮಾತನ್ನು ಕೇಳಿಸಿಕೊಂಡ ಕಾರು ಬರ್ರಂತ ಮನೆ ಕಡೆ ಹೊರಟಾಗ ರಾತ್ರಿ ಒಂಬತ್ತು ದಾಟಿತ್ತು !

-ನಾಗರಾಜ್ . ಎಂ
"ಕನ್ನಡ ಬಳಸಿ , ಕಲಿಸಿ , ಉಳಿಸಿ ...."

Once again Hoysala Kannada Koota of CT had a wonderful celeberation of Deepavali and Kannada Rajyothsava on Nov 9th Sunday at Vallabhadham Haveli, 26 Church St. Newington, CT.  

Enjoy the Photos and Videos from our Memory makers.

 
Choreography & co-ordination: Priya Haryadi
For additional photos & to download:
https://www.dropbox.com/sh/fbwx81ixjn2kt95/AADSiE3ZspWNH9rKvKBawnuQa?dl=0
 
 

 
From Deepak Murthy's Lens:
From M.Nagaraja's Lens:


 
 
From Vishwa Gowda's Lens: HKK Deepavali 2014

Videos from HKK Team :
Naada Geethehttp://youtu.be/QccEIl3rOHA
Fancy Dress Part 1http://youtu.be/Aah3PtL5Uq0
Fancy Dress Part 2http://youtu.be/TJE8JoY_qys
Fancy Dress Part 3             http://youtu.be/FdSkAn0NhaQ
Mathmaathadu Mallige-Short skithttp://youtu.be/sQnvhvkE5NM
Swaagatam Krishna http://youtu.be/CSHlpZLb6LM
Taaregala Thotahttp://youtu.be/uSbJw0jdV5k
Tenali Rama Part 1http://youtu.be/ejENf0eKAYw
Tenali Rama Part 2http://youtu.be/QUKw5duZlas
Welcome Speechhttp://youtu.be/QIui2jKeGNk
Working from Home - Facebookhttp://youtu.be/oNqnyaPB2OA
Ashtalakshmi Dancehttp://youtu.be/4mMT4bQkmBY
Naada Geethe Dance               http://youtu.be/YFJ_IyGmwWQ

Mini Drama presented and link shared by Yashavanth Raja :
"Work from maneyU...Facebook parpaMchavU.."
 
 Program Poster from Sundresh Banavara
Deepavali_Flyer_3.0.png (984×1279)


 

 
Comments